ಷರ್ಲಾಕ್‌ ಹೋಮ್ಸ್‌

Sherlock Holmes
Sherlock Holmes (Sidney Paget, 1904)
ಮೊದಲು ಚಿತ್ರಣ 1887
ಕೊನೆಯ ಚಿತ್ರಣ To be determined
ಕರ್ತೃ Sir Arthur Conan Doyle
Information
ಲಿಂಗMale
ವೃತ್ತಿConsulting detective
ಕುಟುಂಬMycroft Holmes (brother)
ರಾಷ್ಟ್ರೀಯತೆEnglish

ಷರ್ಲಾಕ್‌ ಹೋಮ್ಸ್‌ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಮತ್ತು ಇಪ್ಪತನೆಯ ಶತಮಾನದ ಆರಂಭದಲ್ಲಿ ಹೊರಹೊಮ್ಮಿದ ಒಂದು ಕಾಲ್ಪನಿಕ ಪಾತ್ರ. ಈ ಪಾತ್ರವು ಮೊದಲು ಪ್ರತ್ಯಕ್ಷವಾದದ್ದು 1887ರ ಪ್ರಕಟಣೆಯಲ್ಲಿಬ್ರಿಟಿಷ್‌ ಲೇಖಕ ಮತ್ತು ವೈದ್ಯ ಸರ್‌ ಆರ್ಥರ್‌ ಕಾನನ್‌ ಡಾಯ್ಲ್‌ ಈತನು ಸೃಷ್ಟಿಕರ್ತ. ಷರ್ಲಾಕ್‌ ಹೋಮ್ಸ್‌ ಲಂಡನ್‌ನಲ್ಲಿ ವಾಸಿಸುತ್ತಿದ ಒಬ್ಬ " ಪತ್ತೆದಾರಿ ಸಲಹೆಗಾರ." ಈತ ಕುಶಾಗ್ರ ಮತಿ.ಪ್ರತಿಯೊಂದು ಸಂಗತಿಯನ್ನೂ ಚಾಣಾಕ್ಷತೆಯಿಂದ ಗಮನಿಸಿ,ತಾರ್ಕಿಕವಾಗಿ ಯೋಚಿಸಿ ತೀರ್ಮಾನಕ್ಕೆ ಬರುವುದರ ಮೂಲಕ ಕಷ್ಟಕರವಾದ ತನಿಖಾ ಪ್ರಕರಣಗಳನ್ನು ಪರಿಹರಿಸುತ್ತಿದ್ದ.ಸೂಕ್ಷ್ಮ ಗ್ರಹಿಕೆ ಮತ್ತು ಕುಶಲ ಚಿಂತನೆಗಾಗಿ ಖ್ಯಾತನಾಗಿದ್ದ.

ಕಾನನ್‌ ಡಾಯ್ಲ್‌ ರಚಿಸಿದ ನಾಲ್ಕು ಕಾದಂಬರಿ ಮತ್ತು ಐವತ್ತಾರು ಕಿರುಕಥೆಗಳಲ್ಲಿ ಷರ್ಲಾಕ್‌ ಹೋಮ್ಸ್‌ ಪಾತ್ರವಿದೆ.1887ರ ಬೀಟನ್ಸ್‌ ಕ್ರಿಸ್ಮಸ್‌ ಆನ್ಯುಯಲ್‌ ಸಂಚಿಕೆಯಲ್ಲಿ ಒಂದು ಮತ್ತು 1890ರಲ್ಲಿ ಲಿಪಿನ್ಕಾಟ್ಸ್‌ ಮಂತ್ಲಿ ಮ್ಯಾಗಜೀನ್ ‌ನಲ್ಲಿ ಇನ್ನೊಂದು- ಹೀಗೆ ಮೊದಲ ಎರಡು ಕಥೆಗಳು (ಕಿರು ಕಾದಂಬರಿಗಳು)ಪ್ರಕಟಗೊಂಡವು. 1891ರಲ್ಲಿ ಸ್ಟ್ರ್ಯಾಂಡ್‌ ಮ್ಯಾಗಜೀನ್‌ನಲ್ಲಿ ಕಿರುಕಥೆಗಳ ಮೊದಲ ಸರಣಿಯ ಪ್ರಕಟಣೆಯೊಂದಿಗೆ ಷರ್ಲಾಕ್‌ ಹೋಮ್ಸ್‌ನ ಪಾತ್ರ ಅಪಾರ ಜನಪ್ರಿಯತೆ ಗಳಿಸಿತು. ಮುಂದಿನ ಕಿರುಗತೆಗಳ ಸರಣಿ ಮತ್ತು ಎರಡು ಕಾದಂಬರಿಗಳ ಧಾರಾವಾಹಿ 1927ರತನಕ ಹರಿದು ಬಂತು.ಈ ಕಥೆಗಳು 1875ರಿಂದ 1907ರ ವರೆಗಿನಕಾಲ ಘಟ್ಟವನ್ನು ಒಳಗೊಂಡಿದೆ. ತನಿಖೆಯ ಕೊನೆಯ ಪ್ರಕರಣ 1914ರಲ್ಲಿ ಪ್ರಕಟವಾತಿಯಿತು.

ನಾಲ್ಕು ಕಥೆಗಳನ್ನು ಹೊರತುಪಡಿಸಿ ಉಳಿದದ್ದೆಲ್ಲವನ್ನೂ ಷರ್ಲಾಕ್‌ ಹೋಮ್ಸ್‌ನ ಸ್ನೇಹಿತ ಮತ್ತು ಜೀವನಚರಿತ್ರೆಕಾರ ಡಾ. ಜಾನ್‌ ಹೆಚ್‌‌. ವ್ಯಾಟ್ಸನ್‌ನಿಂದ ನಿರೂಪಣೆಗೊಂಡಿವೆ. ಇವುಗಳಲ್ಲಿ ಎರಡನ್ನು ಸ್ವತಃ ಷರ್ಲಾಕ್ ಹೋಮ್ಸ್‌ ನಿರೂಪಿಸಿದ್ದಾನೆ, ಇನ್ನೆರಡು ಕೃತಿಗಳನ್ನು ಪ್ರಥಮ ಪುರುಷದಲ್ಲಿ ಬರೆಯಲಾಗಿವೆ. "ದಿ ಮಸ್ಗ್ರೇವ್‌ ರಿಚುಯಲ್‌" ಮತ್ತು "ದಿ ಅಡ್ವೆಂಚರ್‌ ಆಫ್‌ ದಿ ಗ್ಲೊರಿಯಾ ಸ್ಕಾಟ್‌" - ಇವೆರಡು ಕಥೆಗಳಲ್ಲಿ ಷರ್ಲಾಕ್‌ ಹೋಮ್ಸ್‌ ಕಥೆಯ ಜೀವಾಳವನ್ನು ತನ್ನ ನೆನಪಿನಾಳದಿಂದ ತೆಗೆದು ತಿಳಿಸುತ್ತಾನೆ. ವ್ಯಾಟ್ಸನ್‌ ಕಥಾ ಹಂದರದ ಜೋಡಣೆಯ ನಿರೂಪಕನಾಗುತ್ತಾನೆ.

ಷರ್ಲಾಕ್‌ ಹೋಮ್ಸ್‌ನ ಪಾತ್ರ ಚಿತ್ರಣಕ್ಕೆ ಡಾ|ಜೋಸೆಫ್‌ ಬೆಲ್‌ ಎಂಬುವರೇ ಪ್ರೇರಣೆ ಎಂದು ಸರ್‌ ಆರ್ಥರ್‌ ಕಾನನ್‌ ಡಾಯ್ಲ್‌ ಹೇಳುತ್ತಾರೆ.ಎಡಿನ್ಬರ್ಗ್‌ ರಾಯಲ್‌ ಇನ್ಫರ್ಮರಿಯಲ್ಲಿ ಡಾ| ಬೆಲ್‌ರ ಗುಮಾಸ್ತನಾಗಿ ಕಾನನ್ ಸೇವೆ ಸಲ್ಲಿಸಿದ್ದರು.ಷರ್ಲಾಕ್ ಹೋಮ್ಸ್‌ನಂತೆಯೇ ಡಾ|ಬೆಲ್‌ ಅತಿ ಸಣ್ಣ ಅಂಶವನ್ನೂ ಸಹ ಕೂಲಂಕಷವಾಗಿ ಗಮನಿಸಿ ದೃಢ ನಿರ್ಣಯಗಳಿಗೆ ಬರುವುದಕ್ಕೆ ಹೆಸರಾಗಿದ್ದ ವ್ಯಕ್ತಿ.[4]‌ 1882ರಲ್ಲಿ ಇಂಗ್ಲೆಂಡ್ ದೇಶದ ದೈನಿಕಗಳಲ್ಲಿ ಸಾಕಷ್ಟು ಪ್ರಕಟಗೊಂಡ ಒಂದು ಕೊಲೆಯ ತನಿಖೆ ನಡೆಸಿದ ವೆಂಡಲ್ ಸ್ಕೆರರ್‌ ಎಂಬ " ಪತ್ತೆದಾರಿ ಸಲಹೆಗಾರ"ನನ್ನು ಷರ್ಲಾಕ್‌ ಹೋಮ್ಸ್‌ನ ಪಾತ್ರವು ಆಧರಿಸಿದೆ ಎಂದು 1971ರಲ್ಲಿ ಅಲೆರಿ ಕ್ವೀನ್ಸ್‌ ಮಿಸ್ಟರಿ ಮ್ಯಾಗಜೀನ್‌ನಲ್ಲಿ ಪ್ರಕಟಗೊಂಡ ಒಂದು ಲೇಖನದಲ್ಲಿ, ಮೈಕಲ್‌ ಹ್ಯಾರಿಸನ್‌ ಪ್ರಸ್ತಾಪಿಸಿದ್ದಾರೆ.[5]

ಜೀವನ ಚರಿತ್ರೆ

ಆರಂಭಿಕ ಜೀವನ

ನೋಟವನ್ನು ವರ್ಧಿಸುವ ಕನ್ನಡಕ, ಕ್ಯಾಲಬ್ಯಾಷ್‌ ಮರದಿಂದ ಮಾಡಲಾದ ಕೊಳವೆ ಮತ್ತು ಇಮ್ಮೂತಿಯುಳ್ಳ ಟೋಪಿಗಳನ್ನೂ ಒಳಗೊಂಡಂತೆ "ಹೋಮ್ಸ್‌'ಗೆ ಸೇರಿದ ವಸ್ತುಗಳು" ಲಂಡನ್‌ನ ಷರ್ಲಾಕ್‌ ಹೋಮ್ಸ್‌ ವಸ್ತುಸಂಗ್ರಹಾಲಯದಲ್ಲಿ,

ಡಾ. ವ್ಯಾಟ್ಸನ್‌ ದಾಖಲಿಸಿದ ಸಾಹಸಗಳನ್ನು ಹೊರತುಪಡಿಸಿ ಷರ್ಲಾಕ್‌ ಹೋಮ್ಸ್‌ನ ಜೀವನದ ಬಗೆಗಿನ ಸುಸ್ಪಷ್ಟ ವಿವರಗಳು ಆರ್ಥರ್‌ ಕಾನನ್‌ರ ಮೂಲ ಕಥೆಗಳಲ್ಲಿ ಲಭಿಸುವುದು ಬಹಳ ಕಡಿಮೆ. ಆದಾಗ್ಯೂ, ಷರ್ಲಾಕ್‌ ಹೋಮ್ಸ್‌ನ ಆರಂಭಿಕ ಜೀವನ ಮತ್ತು ಆತನ ವಿಸ್ತೃತ ಕುಟುಂಬದ ಬಗೆಗಿನ ಸಾಂದರ್ಭಿಕ ವಿವರಗಳು ಖಂಡಿತವಾಗಿಯೂ ಈ ಪತ್ತೆದಾರಿಯ ಜೀವನ ಚಿತ್ರಣವನ್ನು ಅಸ್ಪಷ್ಟ ರೂಪದಲ್ಲಿ ಕಟ್ಟಿ ಕೊಡುತ್ತದೆ.

"ಹಿಸ್‌ ಲಾಸ್ಟ್‌ ಬೋ" ಕಥೆಯಲ್ಲಿ ಷರ್ಲಾಕ್‌ ಹೋಮ್ಸ್‌ನ ಹುಟ್ಟಿದ ಇಸವಿಯನ್ನು 1854ಎಂದು ಅಂದಾಜು ಮಾಡಲಾಗಿದ್ದು, ಹುಟ್ಟಿದ ದಿನಾಂಕವನ್ನು ಜನವರಿ 6 ಎಂದು ಉಲ್ಲೇಖಿಸಲಾಗಿದೆ.[7]

ಸ್ನಾತಕಪೂರ್ವ ವ್ಯಾಸಂಗದಲ್ಲಿದ್ದಾಗಲೇ ತಾನು ಅನುಮಾನಗಳ ಬೆನ್ನು ಹತ್ತುವ ಕ್ರಮವನ್ನು ಮೊದಲು ಬೆಳೆಸಿಕೊಂಡೆನೆಂದು ಷರ್ಲಾಕ್‌ ಹೋಮ್ಸ್ ಹೇಳಿತ್ತಾನೆ. ಆತನ ಸಾಹಸಗಳ ಪೈಕಿ ಎರಡರ ವಿವರ ಕಂಡ ಲೇಖಕಿ ಡೊರೊಥಿ ಎಲ್‌. ಸೆಯರ್ಸ್‌ "ಷರ್ಲಾಕ್‌ ಹೋಮ್ಸ್‌ ಆಕ್ಸ್‌ಪರ್ಡ್‌ ಬದಲಾಗಿ ಕೇಂಬ್ರಿಡ್ಜ್‌ನಲ್ಲಿ ಇರಬೇಕಿತ್ತು. ಏಕೆಂದರೆ,ಎಲ್ಲಾ ಕೇಂಬ್ರಿಡ್ಜ್‌ ಕಾಲೇಜ್‌ಗಳ ಪೈಕಿ ಬಹುಶಃ ಸಿಡ್ನಿ ಸಸೆಕ್ಸ್‌ ಕಾಲೇಜ್ ಷರ್ಲಾಕ್‌ ಹೋಮ್ಸ್‌ನಂತಹ ವ್ಯಕ್ತಿಗೆ ಅತಿ ಹೆಚ್ಚು ಅನುಕೂಲಗಳನ್ನು ಒದಗಿಸುವ ಸಾಧ್ಯತೆಯಿತ್ತು. ನಿಖರ ಮಾಹಿತಿಯ ಕೊರತೆ ಇರುವುದರಿಂದ ನಾವು ಆತನನ್ನು ತಾತ್ಕಾಲಿಕವಾಗಿ ಕೇಂಬ್ರಿಡ್ಜ್‌ನವನು ಎಂದು ಪರಿಗಣಿಸೋಣ" ಎಂದು ಅಭಿಪ್ರಯಾಪಟ್ಟಿದ್ದಾರೆ. ವಿಶ್ವವಿದ್ಯಾಲಯದಲ್ಲಿನ ತನ್ನ ಸಹಪಾಠಿಗಳಿಂದ ಬಂದ ಪ್ರಕರಣಗಳೇ ಹವ್ಯಾಸಿಯಾಗಿ ಈತನಡೆಸಿದ ಆರಂಭಿಕ ತನಿಖೆಗಳು .ಪತ್ತೆಮಾಡುವುದನ್ನೇ ವೃತ್ತಿಯಾಗಿ[10] ರೂಪಿಸಿಕೊಳ್ಳಲು ತನ್ನ ಸಹಪಾಠಿಯೊಬ್ಬನ ತಂದೆಯೊಂದಿಗಿನ ಕಲಹವೇ ಕಾರಣ ಎನ್ನುತ್ತಾನೆ ಷೆರ್ಲಾಕ್ಸ್. ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮುಗಿಸಿ, ನಂತರದ ಆರು ವರ್ಷಗಳ ಕಾಲ ಪತ್ತೆದಾರಿ ಸಲಹೆಗಾರನಗಿ ನೌಕರಿ ಮಾಡುತ್ತಾನೆ. ಆರ್ಥಿಕ ಸಂಕಷ್ಟ ಎದುರಾದ ಕಾರಣ, ಷರ್ಲಾಕ್‌ ಹೋಮ್ಸ್‌ ಡಾ|ವ್ಯಾಟ್ಸನ್‌ ನನ್ನು ತನ್ನ ಕೊಠಡಿ ಸಹವಾಸಿಯಾಗಿ ಸೇರಿಸಿಕೊಂಡನು. ಈ ಹಂತದಲ್ಲಿ ಕಥೆಯ ನಿರೂಪಣೆ ಆರಂಭವಾಗುವುದು.

221B, ಬೇಕರ್‌ ಸ್ಟ್ರೀಟ್‌, ಲಂಡನ್‌ -ಇಲ್ಲಿ 1881ರಿಂದ ವಾಸ್ತವ್ಯ ಹೂಡಿದ ಷರ್ಲಾಕ್‌ ಹೋಮ್ಸ್‌ ಅಲ್ಲಿಂದಲೇ ತನ್ನ ಖಾಸಗಿ ಪತ್ತೆದಾರಿ ಏಜೆನ್ಸಿಯನ್ನು ನಡೆಸಲಾರಂಭಿಸಿದ ಎಂದು ವಿವರಿಸಲಾಗಿದೆ.221B ಎಂಬುದು ರಸ್ತೆಯ ಮೇಲಿನ ಕೊನೆಯಲ್ಲಿರುವ, ಹದಿನೇಳು ಮೆಟ್ಟಿಲುಗಳುಳ್ಳ ಒಂದು ವಸತಿಗೃಹ ಎಂದು ಹಸ್ತಪ್ರತಿಯೊಂದು ಹೇಳುತ್ತದೆ. ಡಾ|ವ್ಯಾಟ್ಸನ್‌ ಆಗಮನದ ತನಕ ಷರ್ಲಾಕ್‌ ಹೋಮ್ಸ್‌ ಏಕಾಂಗಿಯಾಗಿಯೇ ಕಾರ್ಯನಿರ್ವಹಿಸುತ್ತಾನೆ. ಕೆಲವೊಮ್ಮೆ, ಸುದ್ದಿಗಾರರ ಹಾಗೂ 'ಬೇಕರ್‌ ಸ್ಟ್ರೀಟ್‌ ಇರೆಗ್ಯುಲರ್ಸ್‌' ಎನ್ನಲಾದ ಬೀದಿ ಮಕ್ಕಳ ದೊಡ್ಡ ತಂಡವೊಂದನ್ನು ಹಾಗೂ ಕೆಳವರ್ಗದ ಕೆಲವು ಸುದ್ದಿ ಆಯುವವರನ್ನೂ ನೇಮಿಸಿಕೊಳ್ಳುತ್ತಾನೆ. "ದಿ ಸೈನ್‌ ಆಫ್‌ ದಿ ಫೋರ್‌," "ಎ ಸ್ಟಡಿ ಇನ್‌ ಸ್ಕಾರ್ಲೆಟ್‌" ಮತ್ತು "ದಿ ಅಡ್ವೆಂಚರ್‌ ಆಫ್‌ ದಿ ಕ್ರುಕೆಡ್‌ ಮ್ಯಾನ್‌" - ಈ ಮೂರು ಕಥೆಗಳಲ್ಲಿ ಇರೆಗ್ಯುಲರ್ಸ್‌ ತಂಡ ಕಾಣಿಸಿಕೊಳ್ಳುತ್ತದೆ.

ಹೋಮ್ಸ್‌ನ ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿಯೇ ಇಲ್ಲ ಎನ್ನಬಹುದು. ಆತನ ಪೂರ್ವಜರು "ಗ್ರಾಮೀಣ ಜಮೀನುದಾರ"ರೆಂದು ಷರ್ಲಾಕ್‌ ಹೋಮ್ಸ್‌ ಹೇಳಿರುವುದನ್ನು ಬಿಟ್ಟರೆ ಕಥೆಗಳಲ್ಲಿ ಆತನ ತಂದೆ ತಾಯಿಯ ಬಗ್ಗೆ ಪ್ರಸ್ತಾಪವೇ ಇಲ್ಲ. "ದಿ ಅಡ್ವೆಂಚರ್‌ ಆಫ್‌ ದಿ ಗ್ರೀಕ್‌ ಇಂಟರ್ಪ್ರಿಟರ್‌" ಕಥೆಯಲ್ಲಿ ಫ್ರೆಂಚ್‌ ಕಲಾವಿದ ವರ್ನೆಟ್‌ ತನ್ನ ಪೂರ್ವಜ ಸಂಬಂಧಿಯಲ್ಲೊಬ್ಬನಂದು ಹೇಳಿಕೊಂಡಿದ್ದಾನೆ. ಸರ್ಕಾರಿ ಅಧಿಕಾರಿಯಾಗಿದ್ದ ಮೈಕ್ರಾಫ್ಟ್ ಈತನ ಅಣ್ಣ.ಮೂರು ಕಥೆಗಳಲ್ಲಿ[11]ಇವನು ಕಾಣಿಸಿಕೊಳ್ಳುತ್ತಾನೆ. ಇನ್ನೂ ಹಲವಾರು ಕಥೆಗಳಲ್ಲಿ ಆತನನ್ನು ಉಲ್ಲೇಖಿಸಲಾಗಿದೆ.[12] ವಿಶಿಷ್ಟವಾದ ಪೌರ ಸೇವಾ ಹುದ್ದೆಯಲ್ಲಿದ್ದ ಮೈಕ್ರಾಫ್ಟ್‌ಗೆ ಸರ್ಕಾರೀ ನೀತಿನಿಯಮಾವಳಿಗಳ ಬಗ್ಗೆ ನೆನಪಿನ ಶಕ್ತಿ ಅಗಾಧ.ಅಂಕಿ ಅಂಶಗಳೆಲ್ಲ ನಾಲಗೆಯ ತುದಿಯಲ್ಲಿ.ಹೀಗಾಗಿ ಈತ ನಡೆದಾಡುವ ಅಂಕಿ ಅಂಶಗಳ ಭಂಡಾರ. ಕೂಲಂಕಷವಾಗಿ ಪರಿಶೀಲಿಸಿ ನಿರ್ಣಯಕ್ಕೆ ಬರುವ ವಿಚಾರದಲ್ಲಿ ಮೈಕ್ರಾಫ್ಟ್‌ ಷರ್ಲಾಕ್‌ ಹೋಮ್ಸ್‌ಗಿಂತಲೂ ಹೆಚ್ಚು ಪ್ರತಿಭಾಶಾಲಿಯಾಗಿದ್ದನೆಂದು ಬಿಂಬಿಸಲಾಗಿದೆ. ಗುರಿ ಸಾಧಿಸಲು ಬೇಕಿರುವ ಪ್ರಚೋದನೆ ಮತ್ತು ಬಲವೆಂಬ ಗುಣಗಳು ಷರ್ಲಾಕ್‌ನಲ್ಲಿ ಇರುವಷ್ಟು ಮೈಕ್ರಾಫ್ಟ್‌ನಲ್ಲಿ ಕಾಣೋಲ್ಲ.'ಡಯೊಜೀನ್ಸ್‌ ಕ್ಲಬ್‌'ನಲ್ಲಿ ಮೈಕ್ರಾಫ್ಟ್‌ ತನ್ನ ಸಮಯವನ್ನು ‌ಆರಾಮವಾಗಿ ಕಳೆಯಲು ಇಚ್ಛಸುತ್ತಾನೆ. "ಲಂಡನ್‌ನಲ್ಲಿ ಸಮಾಜಕ್ಕೆ ಹೊಂದಿಕೊಳ್ಳದೆ ಇರುವವರಿಗಾಗಿಯೇ ಅಸ್ತಿತ್ವದಲ್ಲಿದೆ" ಎಂದು ಈ ಕ್ಲಬ್‌ಗೆ ಇರುವ ವಿವರ.

ಇನ್ನು ಯಾರಾದರೂ ಒಡಹುಟ್ಟಿದವರು ಇದ್ದಾರೆಯೇ ಎಂಬುದು ಅಸ್ಪಷ್ಟ. "ದಿ ಅಡ್ವೆಂಚರ್ಸ್‌ ಆಫ್‌ ದಿ ಕಾಪರ್‌ ಬೀಚಸ್‌"ನಲ್ಲಿ, "ನನ್ನ ಸಹೋದರಿಯು ಇಂತ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವುದನ್ನು ನಾನು ಬಯಸಲಾರೆ" ಎಂದು ಹೋಮ್ಸ್‌ ಹೇಳುತ್ತಾನೆ. ಈ ಉದ್ಗಾರ ಆತನಿಗೆ ಸಹೋದರಿ(ಯರು) ಇದ್ದಿರಬಹುದೇ ಎಂಬ ಊಹಾಪೋಹಕ್ಕೆ ಎಡೆಮಾಡಿದಿ. ಆದಾಗ್ಯೂ, ಒಂದು ತನಿಖೆ ವಿಷಯದಲ್ಲಿ ಮಹಿಳೆಯೊಬ್ಬಳನ್ನು ಸಹೋದರಿಯೆಂದು ಭಾವಿಸಿ, ಆಕೆಯನ್ನು ಅಚ್ವರಿಸಲು ಹೀಗೆ ಹೇಳಿದ್ದು ಎಂದೂ ಸ್ಪಷ್ಟಪಡಿಸಿದ್ದಾನೆ. ಹಾಗಾಗಿ ಇದೊಂದು ಅಲಂಕಾರಿಕ ಉದ್ಗಾರ ಇರಬಹುದು ಎನಿಸುತ್ತೆ.

ಸ್ಟ್ರ್ಯಾಂಡ್ ನಿಯತಕಾಲಿಕದಲ್ಲಿ ಸಿಡ್ನಿ ಪ್ಯಾಜೆಟ್‌ ಬರೆದ ಷರ್ಲಾಕ್‌ ಹೋಮ್ಸ್ ನುಡಿಚಿತ್ರ, "ದಿ ಮ್ಯಾನ್‌ ವಿತ್‌ ದಿ ಟ್ವಿಸ್ಟೆಡ್‌ ಲಿಪ್‌" 1891ರ ಕೃತಿಯಲ್ಲಿ

ಡಾ|ವ್ಯಾಟ್ಸನ್‌ ಜೊತೆಗಿನ ಜೀವನ

ತನ್ನ ಆಪ್ತ ಸ್ನೇಹಿತ ಮತ್ತು ಚರಿತ್ರಕಾರ ಡಾ|ವ್ಯಾಟ್ಸನ್‌ಜೊತೆ ತನ್ನ ವೃತ್ತಿ ಜೀವನವನ್ನು ಕಳೆಯುತ್ತಾನೆ. 1887ರಲ್ಲಿ ತನ್ನ ವಿವಾಹವಾಗುವ ವರೆಗೂ ಷರ್ಲಾಕ್‌ ವ್ಯಾಟ್ಸನ್‌ ಜೊತೆ ಇರುತ್ತಾನೆ,ಹಾಗೂ ತನ್ನ ಪತ್ನಿಯ ಮರಣಾ ನಂತರ, ವ್ಯಾಟ್ಸನ್‌ ಷರ್ಲಾಕ್‌ ಹೋಮ್ಸ್‌ನೊಂದಿಗಿರುತ್ತಾನೆ. ಮನೆಯೊಡತಿಯಾದ ಶ್ರೀಮತಿ ಹಡ್ಸನ್‌ ಆತನ ಮನೆಯನ್ನು ನಿರ್ವಹಿಸುತ್ತಾರೆ.

ಷರ್ಲಾಕ್‌ ಹೋಮ್ಸ್‌ನ ಜೀವನದಲ್ಲಿ ವ್ಯಾಟ್ಸನ್‌ ನದು ಎರಡು ಪಾತ್ರ. ತನಿಖೆಯನ್ನು ಮಾಡುವುದರಲ್ಲಿ ಷರ್ಲಾಕ್‌ ಹೋಮ್ಸ್‌ಗೆ ಪ್ರಾಯೋಗಿಕ ನೆರವು ನೀಡುವುದು ವ್ಯಾಟ್ಸನ್‌ ಈ ಪತ್ತೆದಾರಿಯ ಬಲಗೈ ಬಂಟನಾಗಿದ್ದು, ವಿವಿಧ ರೀತಿಯಲ್ಲಿ ಕಾವಲಿದ್ದು, ಸಹಚರನಾಗಿ, ಶಾಮೀಲುದಾರ ಮತ್ತು ಸುದ್ದಿವಾಹಕನಾಗಿ ಷರ್ಲಾಕ್‌ ಹೋಮ್ಸ್‌ಗೆ ಸಮರ್ಪಕವಾದ ನೆರವು ನೀಡುವುದು ಒಂದು.ವ್ಯಾಟ್ಸನ್‌ ಷರ್ಲಾಕ್‌ ಹೋಮ್ಸ್‌ನ ಚರಿತ್ರೆ ಲೇಖಕನಾಗಿರುವುದು (ಷರ್ಲಾಕ್‌ ಹೋಮ್ಸ್‌ ವ್ಯಾಟ್ಸನ್‌ನನ್ನು ತನ್ನ "ಬಾಸ್ವೆಲ್‌" ಎಂದು ಕರೆಯುತ್ತಾನೆ)ಇನ್ನೊಂದು. ಹೋಮ್ಸ್‌ನ ಬಹುಪಾಲು ಕಥೆಗಳು ವ್ಯಾಟ್ಸನ್‌ ದೃಷ್ಟಿಯಿಂದ, ಅತಿ ಕುತೂಹಲಕಾರಿ ಪತ್ತೆದಾರೀ ತನಿಖೆಗಳ ತಾತ್ಪರ್ಯದ ಜೋಡಿಸಿ ನಿರೂಪಿಸಬಹುದಾದಚೌಕಟ್ಟುಗಳಲ್ಲಿ ಅಡಗಿದೆ. ವ್ಯಾಟ್ಸನ್‌ನ ಬರಹಗಳು ಪ್ರಚೋದಕವಾಗಿದ್ದು ಮತ್ತು ಜನಸಾಮಾನ್ಯರ ರುಚಿಗೆ ತಕ್ಕಂತೆ ಹೆಣೆಯಲಾಗಿರುತ್ತವೆ ಎಂದು ಹೋಮ್ಸ್‌ ಆಗಾಗ ಟೀಕಿಸಿದ್ದಾನೆ. ಈ ಕಥೆಗಳು ಷರ್ಲಾಕ್‌ ಹೋಮ್ಸ್‌ನ ಶುದ್ಧ 'ವಿಜ್ಞಾನ'ಲೆಕ್ಕಾಚಾರಗಳ ಚಾತುರ್ಯವನ್ನು ನಿಖರವಾಗಿ ಮತ್ತು ವಸ್ತುನಿಷ್ಠವಾಗಿ ನಿರೂಪಿಸುವುದತ್ತ ಲಕ್ಷ್ಯ ತೋರಿಲ್ಲ ಎಂಬುದನ್ನು ಸೂಚಿಸುತ್ತವೆ ಎಂದು ಹೇಳುತ್ತಾನೆ.

ಇದೇನೇ ಇದ್ದರೂ, ವ್ಯಾಟ್ಸನ್‌ ಜೊತೆಯ ಸ್ನೇಹವು ಹೋಮ್ಸ್‌ ಪಾಲಿಗೆ ಅತಿನಿಸ್ಸಂಶಯವಾಗಿ ಗಮನಾರ್ಹ ಸಂಬಂಧ. ತನ್ನ ಭೌದ್ಧಿಕ, ಭಾವಶೂನ್ಯ ಬಾಹ್ಯರೂಪದ ಅಡಿ, ಷರ್ಲಾಕ್‌ ಹೋಮ್ಸ್‌ ವ್ಯಾಟ್ಸನ್‌ಗಾಗಿ ಹಪಹಪಿಸುವ ಪರಿ ಹಲವಾರು ಕಥೆಗಳಲ್ಲಿ ಸುವ್ಯಕ್ತ. "ದಿ ಅಡ್ವೆಂಚರ್ಸ್‌ ಆಫ್‌ ದಿ ಥ್ರೀ ಗ್ಯಾರಿಡೆಬ್ಸ್‌"ನಲ್ಲಿ, ಒಬ್ಬ ಖಳನೊಂದಿಗೆ ಘರ್ಷಣೆಯಲ್ಲಿ ವ್ಯಾಟ್ಸನ್‌ಗೆ ಗಾಯವಾಗುತ್ತದೆ. ಗುಂಡಿನ ಗಾಯವು ಮೇಲ್ಮೈ ಮಟ್ಟಕ್ಕೆ ಮಾತ್ರವಾಗಿದ್ದರೂ, ಹೋಮ್ಸ್‌ನ ಪ್ರತಿಕ್ರಿಯೆಯಿಂದ ವ್ಯಾಟ್ಸನ್‌ನ ಮನ ಕರಗುತ್ತದೆ:

It was worth a wound; it was worth many wounds; to know the depth of loyalty and love which lay behind that cold mask. The clear, hard eyes were dimmed for a moment, and the firm lips were shaking. For the one and only time I caught a glimpse of a great heart as well as of a great brain. All my years of humble but single-minded service culminated in that moment of revelation.

ಹೋಮ್ಸ್‌ ತನ್ನ ವೃತ್ತಿಯಲ್ಲಿ ಇಪ್ಪತ್ಮೂರು ವರ್ಷ ಕಾರ್ಯನಿರತನಾಗಿದ್ದ; ಇದರಲ್ಲಿ ವ್ಯಾಟ್ಸನ್‌ ಹದಿನೇಳು ತನಿಖಾ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ನಿವೃತ್ತ ಜೀವನ

ಷರ್ಲಾಕ್‌ ಹೋಮ್ಸ್‌ 1903-04ರಲ್ಲಿ ನಿವೃತ್ತಿ ಹೊಂದಿ ಸಸೆಕ್ಸ್‌ ಡೌನ್ಸ್‌ನಲ್ಲಿರುವ ಒಂದು ಜೇನುಹುಳು ಸಾಕಣಾ ಕೇಂದ್ರದಲ್ಲಿ ವಾಸ್ತವ್ಯ ಹೂಡುತ್ತಾನೆ.ಅಲ್ಲಿ ಆತನು ಜೇನು ಸಾಕಣೆಯನ್ನು ಹವ್ಯಾಸವಾಗಿ ರೂಢಿಸಿಕೊಳ್ಳುತ್ತಾನೆ. ಅಂತಿಮವಾಗಿ ಆತನು "ರಾಣಿಜೇನನ್ನು ಪ್ರತ್ಯೇಕಿಸಿ ಗಮನಿಸಿದ ಅಂಶಗಳನ್ನು ಒಳಗೊಂಡ ಜೇನು ಸಾಕಣೆಯ ಪ್ರಾಯೋಗಿಕ ಕೈಪಿಡಿ"[] ಯೊಂದನ್ನು ರಚಿಸುತ್ತಾನೆ. ತಾನು ಹವ್ಯಾಸಿಯಾಗಿ ಪ್ರಕರಣದ ಬೆನ್ನು ಹತ್ತಿದ, ತಾನೇ ಸ್ವತಃ ನಿರೂಪಿಸುವ ಸಾಹಸವೊಂದು, ಹೋಮ್ಸ್‌ನ ನಿವೃತ್ತ ಜೀವನದಲ್ಲಿ ನಡೆಯುತ್ತದೆ.[]

ಹವ್ಯಾಸ ಮತ್ತು ವ್ಯಕ್ತಿತ್ವ

ಲಂಡನಲ್ಲಿ ಷರ್ಲಾಕ್‌ ಹೋಮ್ಸ್‌ ಸ್ಮಾರಕ

ಅಭ್ಯಾಸ ಮತ್ತು ಜೀವನ ವಿಧಾನದ ವಿಷಯ ಬಂದಾಗ 'ತಾನೊಬ್ಬ ಸ್ವೇಚ್ಛಾಚಾರಿ'ಎಂದು ಷರ್ಲಾಕ್‌ ಹೋಮ್ಸ್‌ ತನ್ನನ್ನು ತಾನು ಬಣ್ಣಿಸಿಕಜೊಂಡಿದ್ದಾನೆ.ವ್ಯಾಟ್ಸನ್‌ನ ಪ್ರಕಾರ, ಷರ್ಲಾಕ್‌ ಹೋಮ್ಸ್‌ ಸಮಕಾಲೀನ ಮಟ್ಟದ ಒಪ್ಪಓರಣ, ಸುವ್ಯವಸ್ಥೆಗಳತ್ತ ಗಮನ ಹರಿಸದ ಒಬ್ಬ ವಿಲಕ್ಷಣ ವ್ಯಕ್ತಿ. ಆರಂಭಿಕ ಕಥೆಯೊಂದರಲ್ಲಿ, ವ್ಯಾಟ್ಸನ್‌ ಷರ್ಲಾಕ್‌ ಹೋಮ್ಸ್‌ನನ್ನು ಹೀಗೆ ವಿವರಿಸುತ್ತಾನೆ:

The worst tenant in London...[he] keeps his cigars in the coal-scuttle, his tobacco in the toe end of a Persian slipper, and his unanswered correspondence transfixed by a jack-knife into the very centre of his wooden mantelpiece... He had a horror of destroying documents...Thus month after month his papers accumulated, until every corner of the room was stacked with bundles of manuscript which were on no account to be burned, and which could not be put away save by their owner.[]

ಇತರರಿಗೆ ಅಸ್ತವ್ಯಸ್ತವಾಗಿ ಕಂಡುಬರುವುದು, ಷರ್ಲಾಕ್‌ ಹೋಮ್ಸ್‌ಗೆ ಉಪಯುಕ್ತ ಮಾಹಿತಿಯ ಭಂಡಾರ.ಕಥೆಗಳುದ್ದಕ್ಕೂ, ಷರ್ಲಾಕ್‌ ಹೋಮ್ಸ್‌ ತಾನು ತನಿಖೆಗಾಗಿ ಸಂಗ್ರಹಿಸಿದ್ದ ಅಸ್ತವ್ಯಸ್ತ ಸ್ಥಿತಿಯಲ್ಲಿರುವ (ಸಾಕ್ಷ್ಯಾಧಾರ) ಪತ್ರ-ವಸ್ತುಗಳ ಗೊಂದಲದ ಗೂಡಲ್ಲಿ ಹೊಕ್ಕು ತನಗೆ ಬೇಕಿದ್ದ ಪತ್ರವನ್ನಾಗಲಿ ಅಥವಾ ವಸ್ತುವನ್ನಾಗಲಿ ಹೊರತೆಗೆಯುವನಂತೆ.

ತದ್ವಿರುದ್ಧವಾಗಿ, ತನ್ನ ವೈಯಕ್ತಿಕ ನೈರ್ಮಲ್ಯದ ವಿಚಾರಕ್ಕೆ ಬಂದಾಗ, ಹೋಮ್ಸ್‌ ಬಹಳಷ್ಟು ಕಾಳಜಿ ವಹಿಸುವನೆಂದು "ದಿ ಹೌಂಡ್‌ ಆಫ್‌ ದಿ ಬ್ಯಾಸ್ಕರ್ವಿಲ್ಸ್‌" ಕಥೆಯಲ್ಲಿ ಉಲ್ಲೇಖಿಸಲಾಗಿದೆ. ಇದು ತೀವ್ರ ಮಟ್ಟದಲ್ಲಿ ಪ್ರಾಯೋಗಿಕವಾಗಿರುವ ತನ್ನ ವೃತ್ತಿಯಲ್ಲಿ ಯಾವುದೇ ರೀತಿಯಲ್ಲಿ ಅಡ್ಡಿಪಡಿಸದು. ಹೋಮ್ಸ್‌ನ ಮೊದಲ ಕಥೆಯಾದ "ಅ ಸ್ಟಡಿ ಇನ್‌ ಸ್ಕಾರ್ಲೆಟ್‌"ನಲ್ಲಿ ಆತನ ಕೈಗಳು ಆಮ್ಲ ಕಲೆಗಳಿಂದ ಬಣ್ಣಗೆಟ್ಟಿದ್ದವು.ನಂತರ ರಾಸಾಯನಿಕ ಪ್ರಯೋಗಗಳನ್ನು ನಡೆಸಲು ಹೋಮ್ಸ್‌ ತನ್ನ ರಕ್ತದ ಕೆಲ ತೊಟ್ಟುಗಳನ್ನೇ ಬಳಸುತ್ತಾನೆ.

ಷರ್ಲಾಕ್‌ ಹೋಮ್ಸ್‌ನ ಬೇಕಾಬಿಟ್ಟಿ ಆಹಾರ ಸೇವನೆಯನ್ನು ವ್ಯಾಟ್ಸನ್‌ ಆಗಾಗ್ಗೆ ದಾಖಲಿಸಿಕೊಳ್ಳುತ್ತಾನೆ. ಗಾಢವಾದ ಬೌದ್ಧಿಕ ಚಟುವಟಿಕೆಗಳ ಸಮಯಗಳಲ್ಲಿ ಪತ್ತೇದಾರಿಯು ಹಸಿವಿನಿಂದಿದ್ದದ್ದುಂಟು. ಉದಾಹರಣೆಗೆ, "ದಿ ಅಡ್ವೆಂಚರ್‌ ಆಫ್‌ ದಿ ನಾರ್ವುಡ್‌ ಬಿಲ್ಡರ್" ಕಥೆಯಲ್ಲಿ, ವ್ಯಾಟ್ಸನ್‌ನ ಪ್ರಕಾರ:

[Holmes] had no breakfast for himself, for it was one of his peculiarities that in his more intense moments he would permit himself no food, and I have known him to presume upon his iron strength until he has fainted from pure inanition.[]

ಷರ್ಲಾಕ್‌ ಹೋಮ್ಸ್‌ ಪದೇಪದೇ ಪೈಪ್‌ ಅಥವಾ ಕೆಲವೊಮ್ಮೆ ಸಿಗರೆಟ್‌ ಮತ್ತು ಸಿಗಾರ್‌ ಬಳಸುವ ಅಭ್ಯಾಸವನ್ನು ಈತನ ಜೀವನ ಶೈಲಿಯ ನಿರೂಪಕನು ದಃಶ್ಚಟವೆಂದು ಪರಿಗಣಿಸುವುದಿಲ್ಲ. ಇದಲ್ಲದೆ, ನೈತಿಕವಾಗಿ ಸಮರ್ಥಿಸಬಹುದಾದ ಸಂದರ್ಭದಲ್ಲಿ, ತನ್ನ ಕಕ್ಷಿಗಾರನ ಹಿತ ರಕ್ಷಣೆಗಾಗಿ ಸತ್ಯ ತಿರುಚುವ,ನಿಯಮಗಳನ್ನು ಉಲ್ಲಂಘಿಸುವ ಹೋಮ್ಸ್‌ನ ಸ್ವಭಾವವನ್ನು (ಉದಾ: ಪೊಲೀಸರಿಗೆ ಸುಳ್ಳು ಹೇಳುವುದು, ಸಾಕ್ಷ್ಯಗಳನ್ನು ಅವಿತಿಡುವುದು, ಅಥವಾ ಮನೆಗಳೊಳಗೆ ನುಗ್ಗುವುದು) ವ್ಯಾಟ್ಸನ್‌ ಖಂಡಿಸುವುದಿಲ್ಲ.

ಹೋಮ್ಸ್‌‌ನ ಮೊದಲ ಪ್ರದರ್ಶನ, 1887

ರಾಷ್ಟ್ರದ ಭದ್ರತೆಯ ವಿಚಾರಗಳಲ್ಲಿ, ಷರ್ಲಾಕ್‌ ಹೋಮ್ಸ್‌ ಸರ್ಕಾರದ ಪರವಾಗಿ ಕಾರ್ಯ ನಿರ್ವಹಿಸುವ ದೇಶಭಕ್ತನಾಗಿ ಹಲವಾರು ಕಥೆಗಳಲ್ಲಿ ಬಿಂಬಿತನಾದ್ದಾನೆ.[20] ಮೊದಲನೆಯ ವಿಶ್ವ ಯುದ್ಧದ ಆರಂಭಕಾಲದಲ್ಲಿ ಹೆಣೆಯಲಾದ ಹಿಸ್‌ ಲಾಸ್ಟ್ ಬೋ ಕಥೆಯಲ್ಲಿ ಆತನು ಪ್ರತಿಬೇಹುಗಾರಿಕೆ ಕಾರ್ಯವನ್ನು ನಡೆಸುತ್ತಾನೆ. ಗುಂಡು ಹಾರಿಸುವ ಅಭ್ಯಾಸ ನಡೆಸುವ ಸಮಯ, ಈ ಪತ್ತೆದಾರಿಯು ತನ್ನ ಬೇಕರ್‌ ಸ್ಟ್ರೀಟ್‌ ವಸತಿಗೃಹದ ಗೋಡೆಯತ್ತ ಗುಂಡು ಹಾರಿಸಿ, ಗುಂಡುಗಳ ಬೊಕ್ಕೆಗಳ ಮೂಲಕ "VR" (ವಿಕ್ಟೊರಿಯಾ ರೆಜಿನಾ )ಎಂಬ ಆರಂಭಾಕ್ಷರಗಳ ಗುರುತನ್ನು ಮಾಡಿದ್ದ.[]

ಅಹಂ ಭಾವನೆಯನ್ನುಳ್ಳ ಈತ ಕೆಲವೊಮ್ಮೆ ಮುಂಗೋಪಿಯೂ ಹೌದು.ತನ್ನ ಅತ್ಯುತ್ತಮ ನಿರ್ಣಯಗಳಿಂದ ಪೊಲೀಸರನ್ನು ಬೆರಗಾಗಿಸುತ್ತಾನೆ.ಇದರಿಂದ ಮಜಾ ಪಡೆಯುತ್ತಾನೆ. ಇಷ್ಟಾಗಿಯೂ ಆತ ಖ್ಯಾತಿಗಾಗಿ ಹಂಬಲಿಸಲಿಲ್ಲ. ಕೆಲಸ ಮಾಡುವುದು ತಾನಾದರೂ ಸಾರ್ವಜನಿಕ ಪ್ರಶಂಸೆಯನ್ನು ಪಡೆಯಲು ಪೊಲೀಸರಿಗೆ ಅನುವು ಮಾಡಿ ತೃಪ್ತಿಪಟ್ಟುಕೊಳ್ಳುವ ಗುಣ ಈತನದು. ಷರ್ಲಾಕ್‌ ಹೋಮ್ಸ್‌ನ ಪಾತ್ರವು ತನಿಖೆಯ ಪ್ರಕರಣಗಳಲ್ಲಿ ಸುಸ್ಪಷ್ಟವಾಗಿ ಗೋಚರಿಸುತ್ತದೆ ಎನ್ನುವ ಸಂದರ್ಭದಲ್ಲೇ ವ್ಯಾಟ್ಸನ್‌ ತನ್ನ ಕಥೆಗಳನ್ನು ಪ್ರಕಟಿಸುತ್ತಾನೆ.[]

ವರ್ತನೆಯಲ್ಲಿ ಹೋಮ್ಸ್‌ ನಿರುದ್ವಿಗ್ನ ಹಾಗೂ ನಿರ್ಲಿಪ್ತ. ಸಾಹಸದ ಸನ್ನಿವೇಶಗಳಲ್ಲಿ, ಷರ್ಲಾಕ್‌ ಗಮನಾರ್ಹವಾದ ಆವೇಶ ಉದ್ವೇಗಳಿಂದ ಮಿಂಚುತ್ತಾನೆ. ತೋರಿಕೆಯ ಕಲೆ ಈತನಿಗೆ ಕರಗತ. ತಪ್ಪಿತಸ್ಥರನ್ನು ಹಿಡಿಯಲು ಸುದೀರ್ಘ ಯೋಜನೆಗಳನ್ನು ರೂಪಿಸುತ್ತಾನೆ.ಅನೇಕ ಸಲ [] ವ್ಯಾಟ್ಸನ್‌ ಅಥವಾ ಸ್ಕಾಟ್ಲೆಂಡ್‌ ಯಾರ್ಡ್‌ ಇನ್ಸ್ಪೆಕ್ಟರ್ಗಳನ್ನು ಮೆಚ್ಚಿಸಲೆಂದೇ ಇಂಥ ಯೋಜನೆಗಳಿಗೆ ಕೈ ಹಾಕುತ್ತಾನೆ.

ಮಾದಕ ವಸ್ತು ಸೇವನೆ

ತನಿಖೆ ಪ್ರಕರಣಗಳಲ್ಲಿ ಪ್ರಚೋದಕ ಅಂಶಗಳ ಕೊರತೆ ಉಂಟಾದಾಗ ಹೋಮ್ಸ್ ಮಾದಕ ವಸ್ತು ಸೇವನೆಯ ಮೊರೆ ಹೋಗುತ್ತಾನೆ. ಕೊಕೇನ್ ಈತನು ಬಳಸುವ ಮಾದಕ ವಸ್ತು. ಇದನ್ನು ಶೇಕಡಾ ಏಳರ ದ್ರಾವಣದಲ್ಲಿ ಬೆರೆಸಿ ಚುಚ್ಚಿಕೊಳ್ಳುವುದು ಈತನ ರೂಢಿ.ಇದಕ್ಕಾಗಿ ಸಿರಿಂಜ್ ಒಂದನ್ನು ಚರ್ಮದ ಚೀಲದಲ್ಲಿ ಹಾಕಿ ತನ್ನ ಬಳಿ ಇಟ್ಟುಕೊಂಡಿರುತ್ತಾನೆ.ಷರ್ಲಾಕ್‌ ಹೋಮ್ಸ್‌ ಕೆಲವೊಮ್ಮೆ ಮಾರ್ಫೀನ್‌ ಬಳಸುತ್ತಾನಾದರೂ, ಅಫೀಮು ಅಡ್ಡೆಗೆ ಭೇಟಿ ನೀಡಿದ ಮೇಲೆ ಇದರ ಬಳಕೆಯನ್ನು ಸುತರಾಮ್ ಒಪ್ಪುವುದಿಲ್ಲ. 19ನೆಯ ಶತಮಾನದ ಉತ್ತರಾರ್ಧದ ಇಂಗ್ಲೆಂಡ್‌ನಲ್ಲಿ ಈ ಮೂರೂ ಮಾದಕಗಳ ಬಳಕೆಗೆ ಕಾನೂನಿನ ಸಮ್ಮತಿ ಇತ್ತು.

ಹೋಮ್ಸ್‌ ಮಾದಕ ವಸ್ತು ಬಳಸುವುದನ್ನು ವೈದ್ಯಕೀಯವಾಗಿಯೂ ಡಾ|ವ್ಯಾಟ್ಸನ್‌ ಆಕ್ಷೇಪಿಸದಿರುವುದು ಆತ ವಿಕ್ಟೋರಿಯನ್‌ ' ವೈದ್ಯಕೀಯ ಸಂಪ್ರದಾಯಸ್ಥನೆಂಬುದನ್ನು ಬಿಂಬಿಸುತ್ತದೆ. ತನ್ನ ಸ್ನೇಹಿತನ ಮಾದಕ ವ್ಯಸನದ ದುಶ್ಚಟವನ್ನು ನೈತಿಕ ನೆಲೆಯಲ್ಲಿ ವ್ಯಾಟ್ಸನ್ ಒಪ್ಪುವುದಿಲ್ಲ.ಇದೊಂದೇ 'ಆತನ ದುಃಶ್ಚಟ'ಎಂದು ಹೇಳುತ್ತಾನಾದರೂ ಹೋಮ್ಸ್‌ನ ಮಾನಸಿಕ ಆರೋಗ್ಯ ಮತ್ತು ಅಮೋಘ ಬುದ್ಧಿಶಕ್ತಿಯ ಮೇಲೆ ದುಃಷ್ಪರಿಣಾಮ ಬೀರಬಹುದೆಂಬುದು ವ್ಯಾಟ್ಸನ್‌ನ ತಳಮಳ [25][26] ಹೋಮ್ಸ್‌ ಮಾದಕಗಳ ಬಳಕೆಯನ್ನು ನಿಲ್ಲಿಸುವಂತೆ ಮಾಡಿದೆನೆಂದು ನಂತರದ ಕಥೆಗಳಲ್ಲಿ, ತಾನೇ ಹೇಳಿಕೊಳ್ಳುತ್ತಾನೆ. ಆದರೂ ಆತನ ವೈದ್ಯ ಮಿತ್ರನೊಬ್ಬನ ಪ್ರಕಾರ, ಷರ್ಲಾಕ್‌ ಹೋಮ್ಸ್‌ ವ್ಯಸನಿಯಾಗಿಯೇ ಉಳಿಯುತ್ತಾನೆ, ಆತನ ಚಟ " ಕೇವಲ ನಿದ್ರಿಸುತ್ತಿದೆಯೇ ಹೊರತು ಅಳಿದು ಹೋಗಿಲ್ಲ"[]

ಹಣಕಾಸು ವ್ಯವಹಾರ

ಮೊದಲಿಗೆ, ಷರ್ಲಾಕ್‌ ಹೋಮ್ಸ್‌ ತನ್ನ 221B ಬೇಕರ್‌ ಸ್ಟ್ರೀಟ್ ನಲ್ಲಿ ಇದ್ದ ನಿವಾಸದ ಬಾಡಿಗೆಯನ್ನು ಹಂಚಿಕೊಳ್ಳಲು ವ್ಯಾಟ್ಸನ್‌ನ ಅಗತ್ಯವಿತ್ತು. "ದಿ ಅಡ್ವೆಂಚರ್‌ ಆಫ್‌ ದಿ ಡಯಿಂಗ್‌ ಡಿಟೆಕ್ಟಿವ್‌" ಕಥೆಯಲ್ಲಿ, ಹೋಮ್ಸ್‌ ಒಬ್ಬನೇ ವಾಸಿಸುತ್ತಿದ್ದುದರ ಬಗ್ಗೆ ವ್ಯಾಟ್ಸನ್‌ ಹೀಗೆ ಅಭಿಪ್ರಾಯ ಪಟ್ಟಿದ್ದಾನೆ: "ಹೋಮ್ಸ್‌ ಕೋಣೆಗೆ ನೀಡಿದ ಬಾಡಿಗೆಯ ದುಡ್ಡಿನಲ್ಲಿ ಈ ಮನೆಯನ್ನೇ ಕೊಳ್ಳಬಹುದಾಗಿತ್ತು ಎಂಬುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ." ಆರ್ಥಾತ್‌, ತನ್ನ ಪತ್ತೆದಾರಿ ವೃತ್ತಿಯಿಂದ ಷರ್ಲಾಕ್‌ ಹೋಮ್ಸ್‌ ಒಳ್ಳೆಯ ಹಣ ಸಂಪಾದಿಸಿದ್ದಾನೆ; ಆದರೆ ತನ್ದ ಪತ್ತೆದಾರಿ ಸೇವೆಗೆ ಎಷ್ಟು ಶುಲ್ಕವನ್ನು ವಿಧಿಸುತ್ತಿದ್ದನೆಂಬುದನ್ನು ಎಲ್ಲಿಯೂ ಹೊರಗೆಡವಿಲ್ಲ. "ನನ್ನ ವೃತ್ತಿ ಸೇವಾ ಶುಲ್ಕವು ನಿಶ್ಚಿತ ಪ್ರಮಾಣದಲ್ಲಿದೆ ಎಂದು "ದಿ ಪ್ರಾಬ್ಲೆಮ್‌ ಆಫ್‌ ಥೊರ್‌ ಬ್ರಿಡ್ಜ್‌" ಕಥೆಯಲ್ಲಿ ಷರ್ಲಾಕ್‌ ಹೋಮ್ಸ್‌ ಹೇಳುತ್ತಾನೆ. ನಾನು ಅವುಗಳನ್ನು ವ್ಯತ್ಯಾಸ ಮಾಡುವುದಿಲ್ಲ, ಒಟ್ಟಿಗೆ ರವಾನಿಸುವ ಸಮಯದ ಹೊರತು ನಾನು ಅವನ್ನು ವ್ಯತ್ಯಾಸ ಮಾಡುವುದಿಲ್ಲ..."

ಒಬ್ಬ ಕಕ್ಷಿಗಾರನು ಷರ್ಲಾಕ್‌ ಹೋಮ್ಸ್‌ನ ಶುಲ್ಕದ ದ್ವಿಗುಣದಷ್ಟು ಮೊತ್ತವನ್ನು ನೀಡಲು ಮುಂದಾದಾಗ ಇದನ್ನು ಹೇಳಲಾಗಿದೆ. ಶ್ರೀಮಂತ ಕಕ್ಷಿಗಾರರು ಹೋಮ್ಸ್‌ಗೆ ತನ್ನ ನಿಗದಿತ ಶುಲ್ಕಕ್ಕಿಂತಲು ಹೆಚ್ಚು ನೀಡುತ್ತಿದ್ದ ಸಾಧ್ಯತೆ ಇದೆ: "ದಿ ಅಡ್ವೆಂಚರ್‌ ಆಫ್‌ ದಿ ಫೈನಲ್ ಪ್ರಾಬ್ಲಮ್‌" ಕಥೆಯಲ್ಲಿ ಫ್ರಾನ್ಸ್‌ ಸರ್ಕಾರ ಮತ್ತು ಸ್ಕಾಂಡಿನಾವಿಯಾ ರಾಜಮನೆತನಕ್ಕಾಗಿ ಸಲ್ಲಿಸಿದ ಸೇವೆಯಿಂದ ತನಗೆ ಸಾಕಷ್ಟು ಹಣ ಸಂಪಾದನೆಯಾಗಿ; ತಾನು ಆರಾಮವಾಗಿ ನಿವೃತ್ತನಾಗುವಷ್ಟು ಹಣ ಗಳಿಸಿದ್ದನಂತೆ. ಇನ್ನೊಮ್ಮೆ "ದಿ ಅಡ್ವೆಂಚರ್‌ ಆಫ್‌ ಬ್ಲ್ಯಾಕ್‌ ಪೀಟರ್‌" ಕಥೆಯಲ್ಲಿ,ತನಗೆ ಇಷ್ಟವಾಗದ ತನಿಖಾ ವಿಷಯವು ಬಂದಾಗ ಹೋಮ್ಸ್‌ ಶ್ರೀಮಂತರಿರಲಿ ಮತ್ತು ಪ್ರಭಾವೀ ವ್ಯಕ್ತಿಗಳಿರಲಿ ಅವರಿಗೆ ತನಿಖಾ ನೆರವನ್ನು ನಿರಾಕರಿಸುವುದನ್ನೂ, ಅತಿ ದೀನ ಕಕ್ಷಿಗಾರರ ನೆರವಿಗಾಗಿ ಧಾವಿಸಿ ಹೋಮ್ಸ್‌ ಒಮ್ಮೆಗೆ ವಾರಗಳ ಕಾಲ ಮಗ್ನನಾಗುವುದನ್ನೂ ವ್ಯಾಟ್ಸನ್‌ ಗಮನಿಸಿದ್ದಾನೆ. "ಎ ಸ್ಕ್ಯಾಂಡಲ್‌ ಇನ್‌ ಬೊಹೆಮಿಯಾ" ಕಥೆಯ ನಂತರ ತಾನು ಬೊಹೆಮಿಯಾ ರಾಜನಿಂದ ಒಂದು ಚಿನ್ನದ ನಶ್ಯ ಡಬ್ಬಿಯೊಂದನ್ನು ಮತ್ತು "ದಿ ಅಡ್ವೆಂಚರ್‌ ಆಫ್‌ ದಿ ಬ್ರೂಸ್‌-ಪಾರ್ಟಿಂಗ್ಟನ್‌ ಪ್ಲ್ಯಾನ್ಸ್‌" ಕಥೆಯಲ್ಲಿ ಮಹಾರಾಣಿ ವಿಕ್ಟೋರಿಯಾಳಿಂದ ಒಂದು ಪಚ್ಚೆ ಟೈ-ಪಿನ್‌ ಸ್ವೀಕರಿಸಿದ್ದನ್ನು ಷರ್ಲಾಕ್‌ ಹೋಮ್ಸ್‌ "ಎ ಕೇಸ್‌ ಆಫ್‌ ಐಡೆಂಟಿಟಿ"ಯಲ್ಲಿ ವ್ಯಾಟ್ಸನ್‌ಗೆ ತಿಳಿಸುತ್ತಾನೆ. ಹೋಮ್ಸ್‌ನ ತನಿಖಾ ವಿಷಯಗಳ ಇತರೆ ಕಾಣಿಕೆಗಳ ಪೈಕಿ ಇರೆನ್‌ ಆಡ್ಲರ್‌ಳಿಂದ ಸ್ವೀಕರಿಸಿದ ಒಂದು ಚಿನ್ನದ ಸವರನ್ನು ("ಅ ಸ್ಕ್ಯಾಂಡಲ್‌ ಇನ್‌ ಬೊಹೆಮಿಯಾ"); ಹಾಗೂ "ದಿ ಅಡ್ವೆಂಚರ್‌ ಆಫ್‌ ದಿ ಗೊಲ್ಡೆನ್‌ ಪಿನ್ಸ್‌-ನೆಜ್‌" ಕಥೆಯಲ್ಲಿ ಹುರೆಟ್‌ ಎಂಬ ಕೊಲೆಗಾರನನ್ನು ಪತ್ತೆ ಹಿಡಿದಿದ್ದಕ್ಕಾಗಿ, ಫ್ರಾನ್ಸ್‌ ರಾಷ್ಟ್ರಪತಿಯಿಂದ ಧನ್ಯವಾದ ಪತ್ರ ಮತ್ತು ಲೀಜನ್‌ ಆಫ್‌ ಆನರ್‌ ಪ್ರಶಸ್ತಿಯು ಸೇರಿವೆ. "ದಿ ಅಡ್ವೆಂಚರ್‌ ಆಫ್‌ ದಿ ಪ್ರಯಾರಿಟಿ ಸ್ಕೂಲ್‌" ಕಥೆಯಲ್ಲಿ, ಡ್ಯೂಕ್‌ ಆಫ್‌ ಹೊಲ್ಡರ್ನೆಸ್‌ ಹಣದ ಮೊತ್ತವನ್ನು ಸೂಚಿಸಿದಾಗ, ಷರ್ಲಾಕ್‌ ಹೋಮ್ಸ್‌ (ವ್ಯಾಟ್ಸನ್‌ನನ್ನೂ ಬೆರಗುಗೊಳಿಸುವಂತೆ) ಹರ್ಷದಿಂದ ತನ್ನ ಕೈಗಳನ್ನು ಉಜ್ಜಿ, ಚೆಕ್ಕನ್ನು ತಟ್ಟುತ್ತ, "ನಾನು ಬಡವ" ಅನ್ನುತ್ತಾನೆ. ಈ ಪ್ರಸಂಗವನ್ನು ಷರ್ಲಾಕ್‌ ಹೋಮ್ಸ್‌ನ ಹಾಸ್ಯದ ವಿಪರ್ಯಾಸ ಎಂದು ತಳ್ಳಿಬಿಡಬಹುದು.ಒಂದೆಡೆ ಶ್ರೀಮಂತರಾದ ಪ್ರಬಲ ಅರಸೊತ್ತಿಗೆಗಳು ಮತ್ತು (ತನ್ನ ದೇಶದ ಸರ್ಕಾರವೂ ಸೇರಿದಂತೆ) ಯೂರೊಪಿನಾದ್ಯಂತ ಸರ್ಕಾರಗಳು,ಹಣಬಲವುಳ್ಳ ಕುಲೀನರು ಮತ್ತು ಉದ್ಯಮಿಗಳು ಇದ್ದರೆ, ಇನ್ನೊಂದೆಡೆ ಬಡತನದಲ್ಲಿರುವ ಗಿರಿವಿ ವ್ಯಾಪಾರಿಗಳು ಮತ್ತು ಸಮಾಜದ ಕೆಳ ಸ್ತರದಲ್ಲಿರುವ ನಮ್ರ ಗೃಹ ಶಿಕ್ಷಕಿಯರು ಹೋಮ್ಸ್‌ನ ವೃತ್ತಿ ಜೀವನದ ಕಕ್ಷಿಗಾರರಲ್ಲಿ ಸೇರಿದ್ದಾರೆ.

ತನ್ನ ಖರ್ಚುಗಳಿಗಾಗಿ ಷರ್ಲಾಕ್‌ ಹೋಮ್ಸ್‌ ತನ್ನ ಕಕ್ಷಿಗಾರರಿಂದ ಶುಲ್ಕ ಪಡೆಯುತ್ತಾನೆ, ಸಮಸ್ಯೆಯನ್ನು ಪರಿಹರಿಸಿದ್ದಕ್ಕಾಗಿ ಪ್ರತಿಫಲವನ್ನೂ ತನ್ನದಾಗಿಸಿಕೊಳ್ಳುತ್ತಾನೆ. "ದಿ ಅಡ್ವೆಂಚರ್‌ ಆಫ್‌ ದಿ ಸ್ಪೆಕ್‌‌ಲ್ಡ್ ಬ್ಯಾಂಡ್‌" ಕಥೆಯಲ್ಲಿ, ತನಿಖಾ ಖರ್ಚುಗಳನ್ನು ಮಿಸ್ ಸ್ಟೋನರ್‌ ಪಾವತಿ ಮಾಡುತ್ತಾರೆ, ತನಿಖೆ ನಡೆಸಲು ತನ್ನ ಖರ್ಚುಗಳನ್ನು "ದಿ ರೆಡ್‌-ಹೆಡೆಡ್‌ ಲೀಗ್‌"-ನಲ್ಲಿರುವ ಬ್ಯಾಂಕ್‌ ಸೂಕ್ತ ಸಂಭಾವನೆ ನೀಡಬೇಕೆಂದು ಕೋರುತ್ತಾನೆ. ಕದಿಯಲಾಗಿದ್ದ ವಜ್ರಗಳನ್ನು ಪತ್ತೆಹಚ್ಚಲು ತಗುಲಿದ ಖರ್ಚುಗಳನ್ನು ತನ್ನ ಕಕ್ಷಿಗಾರ ಶ್ರೀಮಂತ ಬ್ಯಾಂಕರ್‌ನಿಂದ ಪಡೆದುದ್ದಲ್ಲದೆ, ಅ ವಜ್ರಗಳನ್ನು ಪತ್ತೆ ಹಚ್ಚಲು ಬ್ಯಾಂಕ್ ಘೋಷಿಸಿದ್ದ ಇಡಿಗಂಟನ್ನೂ ಸಹ ತನ್ನದಾಗಿಸಿಕೊಂ ಸಂದರ್ಭ "ದಿ ಅಡ್ವೆಂಚರ್‌ ಆಫ್‌ ದಿ ಬೆರಿಲ್‌ ಕೊರೊನೆಟ್‌" ಕಥೆಯಲ್ಲಿ ಬರುತ್ತದೆ.

ಅಂಗನೆಯರ ಸಂಗ

ಷರ್ಲಾಕ್‌ ಹೋಮ್ಸ್‌ನ ಮನ ಮುಟ್ಟಿದ ಏಕೈಕ ಮಹಿಳೆ ಐರೀನ್‌ ಆಡ್ಲರ್‌. ಹೋಮ್ಸ್‌ ಈಕೆಯನ್ನು ಯಾವಾಗಲೂ "ದಿ ವುಮನ್‌"ಎಂದೇ ಉಲ್ಲೇಖಿಸುತ್ತಾನೆ. ಇತರೆ ತನಿಖಾ ಪ್ರಕರಣಗಳಲ್ಲಿ ಹಲವು ಸಲ ಆಕೆಯ ನೈಜ ಹೆಸರು ಹಿಡಿದು ಕರೆದಿರುವನಾದರೂ, ಸ್ವತಃ ಷರ್ಲಾಕ್‌ ಹೋಮ್ಸ್‌ ಎಂದಿಗೂ ಈ ರೀತಿ ಕರೆಯುತ್ತಿದ್ದುದನ್ನು ನೇರವಾಗಿ ಹೇಳಿಲ್ಲ.ಹೋಮ್ಸ್‌ನ ಹಲವಾರು ಕಥೆಗಳಲ್ಲಿ ಉಲ್ಲೇಖಿತಳಾದ ಕೆಲವೇ ಕಲವು ಮಹಿಳೆಯರ ಪೈಕಿ ಐರೀನ್‌ ಆಡ್ಲರ್‌ ಸಹ ಒಬ್ಬಳು. ಆದರೂ ಈಕೆ ಕಾಣಿಸಿಕೊಂಡಿದ್ದು"ಎ ಸ್ಕ್ಯಾಂಡಲ್‌ ಇನ್‌ ಬೊಹೆಮಿಯಾ" ಎಂಬ ಕಥೆಯಲ್ಲಿ ಮಾತ್ರ .

"ದಿ ಅಡ್ವೆಂಚರ್‌ ಆಫ್‌ ಚಾರ್ಲ್ಸ್‌ ಆಗಸ್ಟಸ್‌ ಮಿಲ್ವರ್ಟನ್‌" ಎಂಬ ಒಂದು ಕಥೆಯಲ್ಲಿ, ಷರ್ಲಾಕ್ ಹೋಮ್ಸ್‌ ವಿವಾಹ ನಿಶ್ಚಿತಾರ್ಥಕ್ಕೆ ಒಳಪಡುತ್ತಾನೆ.ತನಿಖೆಗಾಗಿ ಮಾಹಿತಿಯನ್ನು ಕೆದಕಿ ಬೆದಕುವ ಏಕೈಕ ಉದ್ದೇಶ ಇದರದ್ದು.ಹೋಮ್ಸ್‌ ತನ್ನ ಕಕ್ಷಿಗಾರರಲ್ಲಿ ಸುಂದರ ಅಮಗನೆಯರೊಂದಿಗೆ ವೈಯಕ್ತಿಕ ಆಸಕ್ತಿ ತೋರುತ್ತಾನೆ. (ಅದರಲ್ಲೂ ವಿಶೇಷವಾಗಿ, "ದಿ ಅಡ್ವೆಂಚರ್ ಆಫ್‌ ದಿ ಕಾಪರ್‌ ಬೀಚಸ್‌" ಕಥೆಯಲ್ಲಿನ ವಯೊಲೆಟ್‌ ಹಂಟರ್‌ ಎಂಬ ಚೆಲಿವೆಯಲ್ಲಿ.) ತನ್ನ ಸಮಸ್ಯೆಯೊಂದರ ಕೇಂದ್ರ ವ್ಯಕ್ತಿಯಾಗಲು ಅವಳು ನಿರಾಕರಿಸಿದಾಗ ಅವಳ ಮೇಲಿನ ಮೋಹವನ್ನು ತ್ಯಜಿಸುವುದು ಅವನಿಗೆ ಅನಿವಾರ್ಯವಾಯಿತು.ಅ ಮಹಿಳೆಯರ ಯೌವನ, ಸೌಂದರ್ಯ ಮತ್ತು ಚೈತನ್ಯದ ಚಿಲುಮೆ (ಹಾಗೂ ಅವರು ತನ್ನ ಬಳಿ ತಂದ ತಮ್ಮ ತನಿಖೆ ವಿಷಯಗಳನ್ನೂ ಸಹ) ಈತನನ್ನು (ಪ್ರಣಯಾಸಕ್ತಿಗಿಂತ ಭಿನ್ನವಾಗಿ) ಬಹಳ ಉದ್ದೀಪನಗೊಳಿಸುತ್ತಿತ್ತು. ಒಂದು ರೀತಿಯ ಮೋಹಕ-ಗುಣವಿರುವ ಹೋಮ್ಸ್‌ನನ್ನು ಈ ಕಂತುಗಳು ತೋರಿಸುತ್ತವೆ. ಆದರೂ, ಐರೀನ್‌ ಆಡ್ಲರ್‌ ಹೊರತಾಗಿ ಬೇರಾರಲ್ಲೂ ತುಂಬ ದಿನದ ಪ್ರಣಯ ಪ್ರಸಂಗಗಳು ಕಂಡುಬಂದಿಲ್ಲ."ಮಹಿಳಾ ವಿಮುಖತೆಯ ಧೋರಣೆ" ಹೊಂದಿದ್ದ ಹೋಮ್ಸ್‌ ಒಂದು ರೀತಿಯ "ವಿಚಿತ್ರವಾದ ಕಟಾಕ್ಷಕ್ಕೆ ಪಾತ್ರನಾಗುವನು"ಎಂದು ವ್ಯಾಟ್ಸನ್‌ ಹೇಳುತ್ತಾನೆ. ಷರ್ಲಾಕ್ ಹೋಮ್ಸ್‌ ಹೇಳುವುದು ಹೀಗೆ: "ನಾನು ಸ್ತ್ರೀ-ಜಾತಿಯನ್ನು ಮನಃಪೂರ್ವಕವಾಗಿ ಮೆಚ್ಚುವವನಲ್ಲ." "ಮಹಿಳೆಯರ ಉದ್ದೇಶಗಳು... ಬಹಳ ನಿಗೂಢವಾದದ್ದು..."ಎಂಬುದು ಆತನ ಅನಿಸಿಕೆ. ಇಂಥ ಕಳ್ಳುಸಿಕಿನ ಮೇಲೆ ನಿಲ್ಲುವುದಾದರೂ ಹೇಗೆ?ಅಂತಹ ಉಸುಬಿನ ಮೇಲೆ ಅದು ಹೇಗೆ ಸಾಧ್ಯ? ಅವರ ಇಂಥ ಯಃಕಶ್ಚಿತ್‌ ಕೃತ್ಯ ಅಲ್ಲೋಲಕಲ್ಲೋಲ ಉಂಟುಮಾಡಬಲ್ಲವು... ಅವರ ಇಂಥ ವರ್ತನೆಗೆ ಒಂದು ಸೂಜಿಮೊನೆಯಷ್ಟು ಸಣ್ಣ ಕಾರಣವೂ ಸಾಕು." ತನ್ನ ಕವಿಸ್ಫೂರ್ತಿ , "ಷರ್ಲಾಕ್‌ ಹೋಮ್ಸ್‌ ಚಾರ್ಲ್ಸ್‌ ಬ್ಯಾಬೆಜ್‌ನ ಕ್ಯಾಲುಕಲೇಟರ್‌ನಷ್ಟು ಅಮಾನವೀಯ,ಇನ್ನೇನು ಪ್ರಣಯ ಕೂಪದಲ್ಲಿ ಬೀಲುವುದರಲ್ಲಿದ್ದಾನೆ" ಎಂದು ಜೊಸೆಫ್‌ ಬೆಲ್‌ಗೆ ಡೋಲ್‌ ಹೇಳುತ್ತಾನೆ.

ಮಹಿಳೆಯರು ತಮ್ಮ ಸಂಗತಿಗಳನ್ನು ತನಿಖೆಗಾಗಿ ಇವನಲ್ಲ್ಲಿಗೆ ತಂದು ಪರಿಹಾರ ಕೋರುವಾಗಿನ ಅವರ ಸಂಗದಿಂದಲೇ ಆನಂದ ತುಂದಿಲನಾಗುತ್ತಿದ್ದುದು ಸ್ವಾರಸ್ಯದ ವಿಷಯ. "ದಿ ಸೈನ್‌ ಆಫ್‌ ದಿ ಫೋರ್‌" ನಲ್ಲಿ, ಷರ್ಲಾಕ್‌ ಹೋಮ್ಸ್‌ ಒಂದು ಸ್ವಯಂ ಚಾಲಿತ ಗಣಿಸುವ ಯಂತ್ರದಂತಿರುತ್ತಾನೆ ಎಂದು ವ್ಯಾಟ್ಸನ್ ಹೇಳುತ್ತಾನೆ."ನಿನ್ನ ನಿಷ್ಪಕ್ಷಪಾತ ತೀರ್ಮಾನಕ್ಕೆ ವೈಯಕ್ತಿಕ ಗುಣಾವಗುಣಗಳು ಅಡ್ಡ ಬರದಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ" ಎಂದು ಹೋಮ್ಸ್‌ ಹೇಳುವುದನ್ನು ಉಲ್ಲೇಖಿಸುತ್ತಾನೆ. ಕಕ್ಷಿಗಾರನು ಕೇವಲ ಒಬ್ಬ ವ್ಯಕ್ತಿಯಷ್ಟೆ - ಸಮಸ್ಯೆಯೊಂದರಲ್ಲಿನ ಒಂದು ಅಂಶ. ಭಾವಪರಷತೆ ಎಂಬುದು ಸ್ಪಷ್ಟ ವಿವೇಚನೆಗೆ ಯಾವಾಗಲೂ ವಿರುದ್ಧ. ವಿಮೆಯ ಹಣ ಪಡೆವ ದುರಾಸೆಯಿಂದ ತನ್ನ ಮೂರು ಮಕ್ಕಳನ್ನು ಕೊಂದಿದ್ದಕ್ಕೆ, ನನಗೆ ಗೊತ್ತಿರುವ ಅತ್ಯಾಕರ್ಷಕ ಹೆಣ್ಣೊಬ್ಬಳನ್ನು ನೇಣಿಗೇರಿಸಲಾಯಿತು ಎಂದು ನಾನು ಹೇಳುವೆ..." ಸ್ತ್ರೀ ಸಂಬಂಧದಲ್ಲಿ ವಿಶೇಷವಾಗಿ, ಮಹಿಳಾ ಕಕ್ಷಿಗಾರರೊಂದಿಗಿನ ಸಂಬಂಧಗಳಲ್ಲಿ ಹೋಮ್ಸ್‌ನ ಆಸಕ್ತಿಯ ಕೊರತೆಯನ್ನು ಬಿಂಬಿಸುತ್ತದೆ.ಕೆಲವೊಮ್ಮೆ ಏನಾದರೂ ಒಂದು ಅಮಾನವೀಯ ಗುಣ ತುಂಬಿಕೊಂಡಿರುತ್ತದೆ ಎನ್ನುತ್ತಾನೆ ವ್ಯಾಟ್ಸನ್." "ದಿ ಅಡ್ವೆಂಚರ್‌ ಆಫ್‌ ದಿ ಡೆವಿಲ್ಸ್‌ ಫುಟ್‌" ಕಥೆಯ ಅಂತ್ಯದಲ್ಲಿ, "ವ್ಯಾಟ್ಸನ್‌,ನಾನು ಎಂದಿಗೂ ಪ್ರೇಮ ಪಾಶಕ್ಕೆ ಸಿಕ್ಕಿಲ್ಲ ,ಆದರೆ ಒಂದು ವೇಳೆ ಪ್ರೀತಿಸಿ, ನಾನು ಪ್ರೀತಿಸಿದ ಹೆಣ್ಣು ಈ ರೀತಿಯ ಅಂತ್ಯ ಕಂಡಲ್ಲಿ, ನಾನು ನಮ್ಮ ಕಾನೂನಿಗೊಳಪಡದ ಸಿಂಹದ-ಬೇಟೆಗಾರನಂತೆಯೇ ವರ್ತಿಸ ಬಹುದು" ಎಂದು ಹೋಮ್ಸ್ ಹೇಳುತ್ತಾನೆ. ಈ ಕಥೆಯಲ್ಲಿ, ಪರಿಶೋಧಕನಾದ ಡಾ. ಸ್ಟರ್ನ್‌‌ಡೇಲ್‌ ತನ್ನ ಪ್ರಿಯತಮೆ ಬ್ರೆಂಡಾ ಟ್ರೆಗೆನಿಸ್‌ಳ ಕೊಲೆಗಾರನನ್ನು ಕೊಂದು ಸೇಡು ತೀರಿಸಿಕೊಂಡಿದ್ದ.ಕೊಲೆಗೆ ಕೊಲೆಯೇ ಪ್ರತೀಕಾರ ಎಂಬುದನ್ನು ಕಾನೂನು ಒಪ್ಪದು. ಹೋಮ್ಸ್‌ ಪೀಡಿಸುವ ಒಬ್ಬ ವಿಲಕ್ಷಣ ಬಾಡಿಗೆದಾರನಾಗಿದ್ದರೂ ಸಹ, ಮಹಿಳೆಯರೊಂದಿಗೆ ಷರ್ಲಾಕ್‌ ಹೋಮ್ಸ್‌ ಗಮನಾರ್ಹವಾದ ಸಜ್ಜನಿಕೆ ಮತ್ತು ಸಭ್ಯತೆಯನ್ನು ತೋರುವ ಕಾರಣ ಶ್ರೀಮತಿ ಹಡ್ಸನ್‌ ಆತನನ್ನು ಮೆಚ್ಚುತ್ತಿದ್ದರು ಎಂದು ವ್ಯಾಟ್ಸನ್‌ "ದಿ ಅಡ್ವೆಂಚರ್‌ ಆಫ್‌ ದಿ ಡಯಿಂಗ್‌ ಡಿಟೆಕ್ಡಿವ್‌"ನಲ್ಲಿ ಬರೆಯುತ್ತಾರೆ. ಪುನಃ;" ದಿ ಸೈನ್ ಆಫ್‌ ದಿ ಫೋರ್‌" ನಲ್ಲಿ ಷರ್ಲಾಕ್‌ ಹೋಮ್ಸ್‌ ಹೀಗೆ ಹೇಳಿದಂತೆ ವ್ಯಾಟ್ಸನ್‌ ಉಲ್ಲೇಖಿಸುತ್ತಾನೆ, "ನಾನು ಅವರಿಗೆ ಬಹಳಷ್ಟು ವಿಷಯಗಳನ್ನು ಹೇಳಲಾರೆ.ಅವರಲ್ಲಿ ಅತ್ಯುತ್ತಮರಿದ್ದರೂ ಸಹ ಮಹಿಳೆಯನ್ನು ಸಂಪೂರ್ಣವಾಗಿ ನಂಬಲಾಗದು "- ತಾನು ಮಹಿಳೆಯರನ್ನು ಇಷ್ಟಪಡದಿದ್ದರೂ ಹಾಗೂ ಅವರ ಬಗ್ಗೆ ಅಪನಂಬಿಕೆಯ ಧೋರಣೆ ಹೊಂದಿದ್ದರೂ, ಷರ್ಲಾಕ್ ಹೋಮ್ಸ್‌ ಒಬ್ಬ "ದುರ್ಬಲ ರಕ್ಷಕ ಎದುರಾಳಿ" ಎಂದು ವ್ಯಾಟ್ಸನ್‌ ಗಮನಿಸುತ್ತಾನೆ.

ಪತ್ತೆ ಮಾಡುವ ವಿಧಾನ

ಹೋಮ್ಸೀಯ ನಿರ್ಣಯ

ಅನುಮಾನಗಳನ್ನು ಎಳೆಎಳೆಯಾಗಿ ಬಿಡಿಸಿ ತಾರ್ಕಿಕ ನೆಲೆಗಟ್ಟಿನ ಮೇಲೆ ಅಪರಾಧ ಪ್ರಕರಣಗಳನ್ನು ಭೇದಿಸುವುದೇ ಹೋಮ್ಸ್‌ನ ಪತ್ತೆದಾರಿಕೆಯ ಬುದ್ಧಿ ಶಕ್ತಿಯ ಪ್ರಾಥಮಿಕ ಹಂತ."ತಾರ್ಕಿಕನೊಬ್ಬ ಒಂದು ಹನಿ ನೀರಿನಿಂದ ಅದು ಅಟ್ಲಾಂಟಿಕ್‌ಸಾಗರದ್ದೋ ಅಥವಾ ನಯಾಗರಾ ಜಲಪಾತದ್ದೋಎಂಬ ಸಂಭಾವ್ಯತೆಯನ್ನು, ಇವೆರಡನ್ನೂ ಕಂಡು ಕೇಳರಿಯದೇ ನಿರ್ಣಯಿಸಬಲ್ಲ" ಎಂದು ಆತ ಬರೆಯುತ್ತಾನೆ.[] ಹೋಮ್ಸ್‌ನ ಕಥೆಗಳು ಆಗಾಗ್ಗೆ ಆತನ "ನಿರ್ಣಯ ಪ್ರಕ್ರಿಯೆ"ಯ ಭವ್ಯ ಪ್ರತಿಭೆಯ ಪ್ರದರ್ಶನದೊಂದಿಗೆ ಆರಂಭವಾಗುತ್ತವೆ. ಹೋಮ್ಸ್‌ 'ನಿರ್ಣಯ ಪ್ರಕ್ರಿಯೆ' ನಡೆಸುವಾಗ ಆತನು ಏನು ಮಾಡುವನೆಂಬುದನ್ನು ವಿಶ್ಲೇಷಿಸಲು ಯತ್ನಿಸುವುದು ತರ್ಕಾಕಾರರಿಗೆ ಮತ್ತು ತರ್ಕತರ್ಕಾಸಕ್ತರಿಗೆ ಕೌತುಕ ಹುಟ್ಟಿಸುತ್ತದೆ. ಹೋಮ್ಸೀಯ ನಿರ್ಣಯ ವಿಧಾನ ಪ್ರಾಥಮಿಕವಾಗಿ ಜಾಗರೂಕವಾದ, ಅನುಗಮನದ ಅಧ್ಯಯನ ಗಳ (ಉದಾಹರಣೆಗೆ ಆತ ನಡೆಸಿದ ವಿವಿಧ ರೀತಿಯ ಸಿಗಾರ್‌ ಬೂದಿಗಳ ಅಧ್ಯಯನ) ಪರಿಣಾಮವಾಗಿ ತೆಗೆದುಕೊಂಡ ನೇರ, ಪ್ರಾಯೋಗಿಕ ತತ್ವಗಳನ್ನು ಆಧರಿಸಿದ ನಿರ್ಣಯಗಳಾಗಿವೆ.

ಹೋಮ್ಸ್‌ನ ನೇರ, ಪ್ರಾಯೋಗಿಕ ತತ್ವಗಳು ಸಾಮಾನ್ಯವಾಗಿ ಈ ಪ್ರಮೇಯವನ್ನು ಅನುಸರಿಸುತ್ತವೆ: "'p' ಇದ್ದಲ್ಲಿ 'q'; 'p' ಅನ್ನುವುದು ಸಾಕ್ಷ್ಯ ಮತ್ತು 'q' ಎನ್ನುವುದು ಸಾಕ್ಷ್ಯಸೂಚಿಸುವಂತಹದ್ದು." ಆದರೆ, ಕೆಳಗಿನ ಉದಾಹರಣೆಯಲ್ಲಿ ಗಮನಿಸಿದಂತೆ, ಮಧ್ಯವರ್ತಿ ತತ್ವಗಳಿವೆ. "ಎ ಸ್ಕ್ಯಾಂಡಲ್‌ ಇನ್‌ ಬೊಹೆಮಿಯಾ" ಕಥೆಯಲ್ಲಿ, ವ್ಯಾಟ್ಸನ್‌ ಇತ್ತೀಚೆಗೆ ಬಹಳ ನಂದುಹೋಗಿದ್ದು ಮತ್ತು ಆತನಿಗೊಬ್ಬ "ಬಹಳ ಒಡ್ಡೊಡ್ಡಾದ, ಅಸಡ್ಡೆ ಧೋರಣೆಯುಳ್ಳ ಕೆಲಸದಾಕೆ"ಯಿದ್ದದ್ದನ್ನು ಷರ್ಲಾಕ್‌ ಹೋಮ್ಸ್‌ ಪತ್ತೆ ಹಚ್ಚುತ್ತಾನೆ. ಅಚ್ಚರಿಗೊಂಡ ವ್ಯಾಟ್ಸನ್‌ ಇದು ಹೇಗೆ ಗೊತ್ತೆಂದು ಷರ್ಲಾಕ್‌ ಹೋಮ್ಸ್‌ನನ್ನು ಕೇಳಿದಾಗ, ಷರ್ಲಾಕ್‌ ಹೋಮ್ಸ್‌ ಹೇಳಿದ್ದು ಹೀಗೆ:

It is simplicity itself... My eyes tell me that on the inside of your left shoe, just where the firelight strikes it, the leather is scored by six almost parallel cuts. Obviously they have been caused by someone who has very carelessly scraped round the edges of the sole in order to remove crusted mud from it. Hence, you see, my double deduction that you had been out in vile weather, and that you had a particularly malignant boot-slitting specimen of the London slavey.

ಈ ಪ್ರಕರಣದಲ್ಲಿ, ಷರ್ಲಾಕ್‌ ಹೋಮ್ಸ್‌ ಹಲವು ಸಂಬಂಧಿತ ತತ್ವಗಳನ್ನು ಬಳಸಿದನು:

  • ಪಾದರಕ್ಷೆಯೊಂದರ ಬದಿಯ ಚರ್ಮವು ಹಲವು ಸಮಾನಾಂತರದ ಕೊಯ್ತಕ್ಕೊಳಗಾಗಿದ್ದರೆ, ಅದಕ್ಕೆ ಅಂಟಿಕೊಂಡಿರುವ ಒದ್ದೆ ಮಣ್ಣನ್ನು ತೆಗೆಯಲು ಯಾರೋ ಅದನ್ನು ತರಚಿರಬೇಕು.
  • ಲಂಡನ್‌ ವೈದ್ಯನೊಬ್ಬನ ಪಾದರಕ್ಷೆಗಳಿಗೆ ಮೆತ್ತಿಕೊಂಡ ಮಣ್ಣನ್ನು ತೆಗೆಯುವುದಕ್ಕಾಗಿ ತರಚಿದ್ದೇ ಆದರೆ, ತರಚಿದ ವ್ಯಕ್ತಿಯು ವೈದ್ಯನ ಕೆಲಸದಾಕೆಯೇ.
  • ಪಾದರಕ್ಷೆಯಿಂದ ಮಣ್ಣನ್ನು ಕೆರೆಯುವಾಗ ಪಾದರಕ್ಷೆಯನ್ನು ಕುಯ್ದರೆ, ಆ ವ್ಯಕ್ತಿಯು ಒಡ್ಡನೂ ಮತ್ತು ಅಸಡ್ಡೆಯವನೂ ಆಗಿರುತ್ತಾನೆ.
  • ಯಾರದೋ ಪಾದರಕ್ಷೆಗಳಿಗೆ ಮಣ್ಣು ಅಂಟಿಕೊಂಡಿದ್ದರೆ, ಆ ವ್ಯಕ್ತಿಯು ಇತ್ತೀಚೆಗೆ ಕೆಟ್ಟ ಹವಾಮಾನದಲ್ಲಿ ಹೊರಗೆ ಹೋದ ಕಾರಣ,ಬಹಳ ನಂದುಹೋಗಿರುತ್ತಾನೆ.

ಇಂತಹ ತತ್ವಗಳನ್ನು ಸ್ಪಷ್ಟವಾದ ರೀತಿಯಲ್ಲಿ ('ಮೊಡಸ್‌ ಪೊನೆನ್ಸ್'‌ ಅನ್ವಯಗಳನ್ನು ಪದೇ ಪದೇ ಬಳಸಿ) ಅನ್ವಯಿಸಿದ ಕಾರಣ, ಷರ್ಲಾಕ್‌ ಹೋಮ್ಸ್‌ ಈ ರೀತಿ ನಿರ್ಣಯಿಸಲು ಸಾಧ್ಯವಾಯಿತು:'

ವ್ಯಾಟ್ಸನ್‌ನ ಪಾದರಕ್ಷೆಗಳು ಹಲವು ಸಮಾನಾಂತರದ ಕುಯ್ತಕ್ಕೆ ಒಳಗಾಗಿರುವ ಅಂಶ "ವ್ಯಾಟ್ಸನ್‌ನ ಕೆಲಸದಾಕೆ ಬಹಳ ಒಡ್ಡು ಮತ್ತು ಅಸಡ್ಡೆ"ಯವಳೆಂದೂ; ಮತ್ತು "ವ್ಯಾಟ್ಸನ್‌ ಇತ್ತೀಚೆಗೆ ಬಹಳ ಕೆಟ್ಟ ಹವಾಮಾನದಲ್ಲಿ ಹೊರಗೆ ಹೋಗಿ ತೊಯ್ದುತೊಪ್ಪೆಯಾಗಿರುವುದಕ್ಕೂ ಪರಸ್ಪರ ಸಂಬಂಧವನ್ನು ಹೋಮ್ಸ್‌ ತಾರ್ಕಿಕವಾಗಿ ಕಲ್ಪಿಸುತ್ತಾನೆ.

ಷರ್ಲಾಕ್‌ ಹೋಮ್ಸ್‌ನ ತಾರ್ಕಿಕ ನಿರ್ಣಯ ಅಪರಿಚಿತನ ಉದ್ಯೋಗವನ್ನು ಮನತಟ್ಟುವಂತೆ ಪತ್ತೆ ಮಾಡಲು ನೆರವಾಗುತ್ತದೆ. ಉದಾಹರಣೆಗೆ "ಅ ಸ್ಟಡಿ ಇನ್ ಸ್ಕಾರ್ಲೆಟ್‌" ನಲ್ಲಿ ನಿವೃತ್ತ ಸಾರ್ಜೆಂಟ್‌ ಆಫ್‌ ಮರೈನ್ಸ್‌; "ದಿ ರೆಡ್‌-ಹೆಡೆಡ್‌ ಲೀಗ್‌"ನಲ್ಲಿ ಗಿರವಿ ವ್ಯಾಪಾರಕ್ಕೆ ತಿರುಗಿದ ಹಡಗೊಂದರ ಮಾಜಿ ಬಡಗಿ; ಹಾಗೂ "ದಿ ಅಡ್ವೆಂಚರ್‌ ಆಫ್‌ ದಿ ಗ್ರೀಕ್‌ ಇಂಟರ್ಪ್ರಿಟರ್‌"ನಲ್ಲಿ ಬಿಲಿಯರ್ಡ್ಸ್‌ ಗೆಲ್ಲಂಕದ ಲೆಕ್ಕಗಾರ ಹಾಗೂ ತೋಪುಪಡೆಯ ನಿವೃತ್ತ NCO. ಇದೇ ರೀತಿ, ನಿರ್ಜೀವ ವಸ್ತುಗಳ ಅಧ್ಯಯನದ ಮೂಲಕ, ಷರ್ಲಾಕ್‌ ಹೋಮ್ಸ್‌ ಅವುಗಳ ಮಾಲೀಕರ ಬಗ್ಗೆ ನಿಬ್ಬೆರಗಾಗಿಸುವಂತಹ ವಿಸ್ತೃತ ತೀರ್ಮಾನಗಳನ್ನು ಮಾಡಬಲ್ಲ. ಉದಾಹರಣೆಗೆ, "ದಿ ಸೈನ್‌ ಆಫ್‌ ದಿ ಫೋರ್‌"ನಲ್ಲಿ ವ್ಯಾಟ್ಸನ್‌ನ ಜೇಬಿನ ಗಡಿಯಾರ; ಇನ್ನಿತರ ಕಥೆಗಳಲ್ಲಿ ಒಂದು ಟೋಪಿ,[] ಪೈಪ್‌,[೧೦] ಮತ್ತು ಊರುಗೋಲು ಸಹ ಇವನ ಕೂಲಂಕಷ ತನಿಖೆಗೆ ನೆರವಾಗುತ್ತವೆ.[೧೧]

ಸಾಕ್ಷ್ಯಗಳ ವಿಸ್ತೃತ ಭಂಡಾರವನ್ನೇ ಗಳಿಸಿ, ಸಾಕಷ್ಟು ವಿವರಣೆಗಳ ನಿರ್ಣಯ ಮಾಡಿದ ನಂತರ, ತನಿಖೆ ವಿಷಯದ ಎಲ್ಲಾ ಅಂಶಗಳಿಗೂ ಹಿಡಿಸುವಂತಹ ಒಂದು ವಿವರಣೆಯನ್ನು ಹುಡುಕಲು ಷರ್ಲಾಕ್‌ ಹೋಮ್ಸ್‌ ಮುಂದುವರೆದು ಹೋಗುತ್ತಾನೆ. "ಅಸಾಧ್ಯತೆಗಳನ್ನು ವರ್ಜಿಸಿದ ನಂತರ, ಉಳಿದದ್ದು ಅದೆಷ್ಟೇ ಅಸಮಂಜಸವಿದ್ದರೂ ಅದು ಸತ್ಯವೇ ಆಗಿರಬೇಕು."ಎಂದು ಹೋಮ್ಸ್‌ ವ್ಯಾಟ್ಸನ್‌ಗೆ ವಿವರಿಸುತ್ತಾನೆ.

ಮಾರುವೇಷ

ನಟನೆಯತ್ತ ಮತ್ತು ಮಾರುವೇಷ ಧಾರಣೆಯತ್ತ ಹೋಮ್ಸ್‌ನದು ಸಹಜ ಒಲವು. ಗೂಢಚರ್ಯೆಯಲ್ಲಿರುವಾಗ, ಸಾಕ್ಷ್ಯಗಳನ್ನು ಸಂಗ್ರಹಿಸಲು ಆತನು ಗುರುತಿಸಲಾಗದಂಥ ಮಾರುವೇಷಗಳನ್ನು ಹಲವಾರು ಕಥೆಗಳಲ್ಲಿ ಧರಿಸುತ್ತಾನೆ. "ದಿ ಅಡ್ವೆಂಚರ್‌ ಆಫ್‌ ಚಾರ್ಲ್ಸ್‌ ಆಗಸ್ಟಸ್‌ ಮಿಲ್ವರ್ಟನ್‌", "ದಿ ಮ್ಯಾನ್‌ ವಿತ್ ದಿ ಟ್ವಿಸ್ಟೆಡ್‌ ಲಿಪ್‌" ಮತ್ತು "ಅ ಸ್ಕ್ಯಾಂಡಲ್‌ ಇನ್‌ ಬೊಹೆಮಿಯಾ" ಕಥೆಗಳಲ್ಲಿ ವ್ಯಾಟ್ಸನ್‌ ಸಹ ಮಾರುವೇಷದಲ್ಲಿದ್ದ ಹೋಮ್ಸ್‌ನನ್ನು ಗುರುತಿಸಲಾರ. ಇತರೆ ಸಾಹಸಗಳಲ್ಲಿ, ಉದಾಹರಣೆಗೆ, "ದಿ ಅಡ್ವೆಂಚರ್‌ ಆಫ್‌ ದಿ ಡಯಿಂಗ್‌ ಡಿಟೆಕ್ಟಿವ್‌", ತಾನು ನಡೆಸುತ್ತಿರುವ ತನಿಖೆಗೆ ಪುಷ್ಟಿ ಕೊಡುವ ಉದ್ದೇಶದಿಂದ, ತಪ್ಪಿತಸ್ಥರ ವಿರುದ್ಧ ಆಪಾದನೆ ಸಾಬೀತು ಪಡಿಸಲು, ತಾನು ಗಾಯಗೊಂಡಂತೆ ಅಥವಾ ಅಸ್ವಸ್ಥನಾದಂತೆ ನಟಿಸುವುದುಂಟು.

ಶಸ್ತ್ರಾಸ್ತ್ರ ಮತ್ತು ಕದನ ಕಲೆಗಳು

ಪಿಸ್ತೂಲುಗಳು ಷರ್ಲಾಕ್‌ ಹೋಮ್ಸ್‌ ಮತ್ತು ವ್ಯಾಟ್ಸನ್‌ ತಮ್ಮ ಜೊತೆ ಪಿಸ್ತೂಲುಗಳನ್ನು ಒಯ್ಯುತ್ತಾರೆ; ವ್ಯಾಟ್ಸನ್‌ ಕೆಲವೊಮ್ಮೆ ತನ್ನ ಹಳೆಯ ಸರ್ವಿಸ್‌ ರಿವಾಲ್ವರ್‌ ಒಯ್ಯುತ್ತಾನೆ. ಆದರೆ, ವ್ಯಾಟ್ಸನ್‌ ಈ ಶಸ್ತ್ರಗಳು ಕೇವಳ ಏಳು ಪ್ರಸಂಗಗಳಲ್ಲಿ ಮಾತ್ರ ಬಳಕೆ ಮಾಡಿರುವುದಾಗಿ ವಿವರಿಸುತ್ತಾನೆ.[೧೨]

ಶಸ್ತ್ರಾಸ್ತ್ರವನ್ನು ಝಳಪಿಸುತ್ತಿರುವ ಹೋಮ್ಸ್‌

ಬೆತ್ತ ಷರ್ಲಾಕ್‌ ಹೋಮ್ಸ್‌ ಸಜ್ಜನನಂತೆ ಆಗಾಗ ಕೋಲನ್ನೋ ಅಥವಾ ಬೆತ್ತವನ್ನೋ ತನ್ನ ಜೊತೆ ಒಯ್ಯುವುದುಂಟು. ಆತನು ಏಕದಂಡ (ಸಿಂಗಲ್‌ ಸ್ಟಿಕ್‌) ಪರಿಣತನೆಂದೂ,ಬೆತ್ತವನ್ನು ಎರಡು ಬಾರಿ ಶಸ್ತ್ರದಂತೆ ಬಳಸಿದ್ದಾನೆ ಎಂದೂ ವ್ಯಾಟ್ಸನ್‌ ವಿವರಿಸುತ್ತಾನೆ.[೧೩]

ಕತ್ತಿ "ಎ ಸ್ಡಡಿ ಇನ್ ಸ್ಕಾರ್ಲೆಟ್‌" ಕಥೆಯಲ್ಲಿ, ಷರ್ಲಾಕ್‌ ಹೋಮ್ಸ್‌ ಕತ್ತಿ ವರಸೆಯಲ್ಲಿ ಪರಿಣತನೆಂದು ವ್ಯಾಟ್ಸನ್‌ ಹೇಳುತ್ತಾನೆ. ಆದರೆ, ಯಾವ ಕಥೆಯಲ್ಲಿಯೂ ಸಹ ಹೋಮ್ಸ್‌ ಕತ್ತಿಯನ್ನು ಬಳಸಿರುವುದರ ವಿವರ ಲಭ್ಯವಿಲ್ಲ.[೧೪] ಷರ್ಲಾಕ್‌ ಹೋಮ್ಸ್‌ ಕತ್ತಿ ವರಸೆಯ ಅಭ್ಯಾಸವನ್ನು ನಡೆಸಿದನೆಂದು "ಗ್ಲೋರಿಯಾ ಸ್ಕಾಟ್‌"ನಲ್ಲಿ ಉಲ್ಲೇಖ ಬರುತ್ತದೆ.

ರೈಡಿಂಗ್‌ ಕ್ರಾಪ್‌ ಹಲವು ಕಥೆಗಳಲ್ಲಿ ಷರ್ಲಾಕ್ ಹೋಮ್ಸ್‌ ಒಂದು ರೈಡಿಂಗ್‌ ಕ್ರಾಪ್‌ನೊಂದಿಗೆ ಸಜ್ಜಾಗಿರುವಂತೆ ಕಂಡುಬರುತ್ತಾನೆ. "ದಿ ಅಡ್ವೆಂಚರ್‌ ಆಫ್‌ ದಿ ಸ್ಪೆಕಲ್ಡ್‌ ಬ್ಯಾಂಡ್‌" ಸಾಹಸದಲ್ಲಿ ಒಂದು ವಿಷಪೂರಿತ ಹಾವನ್ನು ಹೊಡೆಯಲು ಅದನ್ನು ಬಳಸುತ್ತಾನೆ ಹಾಗೂ "ಎ ಕೇಸ್‌ ಆಫ್‌ ಐಡೆಂಟಿಟಿ"ಯಲ್ಲಿ ಒಬ್ಬ ಮೋಸಗಾರನನ್ನು ಇದರಿಂದ ಥಳಿಸುವ ಹಂತಕ್ಕೆ ಹೋಗಿರುತ್ತಾನೆ."ದಿ ರೆಡ್‌-ಹೆಡೆಡ್‌ ಲೀಗ್‌"ನಲ್ಲಿ ಷರ್ಲಾಕ್‌ ಹೋಮ್ಸ್‌ ಹಂಟಿಂಗ್‌ ಕ್ರಾಪ್‌ ಬಳಸಿ, ಜಾನ್‌ ಕ್ಲೇ ಕೈಯಿಂದ ಪಿಸ್ತೂಲನ್ನು ಕಳಚಿ ಬೀಳಿಸುತ್ತಾನೆ.

ಮುಷ್ಟಿ ಯುದ್ಧ ಹೋಮ್ಸ್‌ ಒಬ್ಬ ಭಯಂಕರ ಮುಷ್ಟಿ ಯುದ್ಧದ ಕಾದಾಳಿ ಎಂದು ವಿವರಿಸಲ್ಪಟ್ಟಿದ್ದಾನೆ.ದಿ ಸೈನ್‌ ಆಫ್‌ ದಿ ಫೋರ್‌ ಬಹುಮಾನ ಧನಕ್ಕಾಗಿ ಕಾದಾಡುವ ಒಬ್ಬ ಮಲ್ಲನೆಂದು ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಾನೆ:

"The amateur who fought three rounds with you at Alison's rooms on the night of your benefit four years back." McMurdo responds by saying, "Ah, you're one that has wasted your gifts, you have! You might have aimed high, if you had joined the fancy."

ಕಥೆಗಳುದ್ದಕ್ಕೂ, ಕೆಲವೊಮ್ಮೆ ತನ್ನ ಎದುರಾಳಿಗಳೊಡನೆ ಕೈ ಕೈ ಮಿಲಾಯಿಸಿ ಕದನ ಮಾಡುತ್ತಾನೆ ಮತ್ತು ಜಯಶಾಲಿಯಾಗಿಯೇ ಹೊರಹೊಮ್ಮುತ್ತಾನೆ.[೧೫] ಹೋಮ್ಸ್‌ ಒಬ್ಬ ಬಾಕ್ಸರ್‌ ಎಂಬುದನ್ನು "ಗ್ಲೋರಿಯಾ ಸ್ಕಾಟ್‌" ಕಥೆಯಲ್ಲಿ ಪುನರುಚ್ಚರಿಸಲಾಗಿದೆ.

ಕದನ ಕಲೆಗಳು "ದಿ ಅಡ್ವೆಂಚರ್‌ ಆಫ್‌ ದಿ ಎಮ್ಟಿ ಹೌಸ್‌" ಕಥೆಯಲ್ಲಿ, ಪ್ರೊಫೆಸರ್‌ ಮೊರಿಯಾರ್ಟಿಯನ್ನು ಸೋಲಿಸಿ ಅವನನ್ನು ರೀಚೆನ್ಬಾಚ್‌ ಜಲಪಾತದಲ್ಲಿ ಎಸೆದು ಕೊಲ್ಲಲು ತಾನು ಕದನ ಕಲೆಯನ್ನು ಹೇಗೆ ಬಳಸಿದೆ ಎಂದು ಷರ್ಲಾಕ್‌ ಹೋಮ್ಸ್‌ ವ್ಯಾಟ್ಸನ್‌ಗೆ ವಿವರಿಸುತ್ತಾನೆ. ಬರಿತ್ಸು ಅಥವಾ ಜಪಾನೀ ಶೈಲಿಯ ಕುಸ್ತಿಯನ್ನು ನಾನು ಸ್ವಲ್ಪಮಟ್ಟಿಗೆ ಬಲ್ಲೆ. ಒಮ್ಮೆಗಿಂತಲೂ ಹೆಚ್ಚು ಬಾರಿ ಇದು ನನ್ನ ನೆರವಿಗೆ ಬಂದಿದೆ ಎಂದು ಷರ್ಲಾಕ್‌ ಹೋಮ್ಸ್‌ ಹೇಳುತ್ತಾನೆ. "ಬರಿತ್ಸು" ಎಂಬುದು ನೈಜ ಜೀವನದ 'ಬರ್ತಿತ್ಸು' ಕದನ ಕಲೆಯ ಉಲ್ಲೇಖವೆಂಬಂತೆ ಕಾಣುತ್ತದೆ.

ಜ್ಞಾನ ಮತ್ತು ಕುಶಲತೆ

ಷರ್ಲಾಕ್‌ ಹೋಮ್ಸ್‌ (ಬಲ)ಮತ್ತು ಡಾ.ವ್ಯಾಟ್ಸನ್‌, ಸಿಡ್ನಿ ಪೇಜೆಟ್‌ ಅವರಿಂದ.

"ಎ ಸ್ಟಡಿ ಇನ್‌ ಸ್ಕಾರ್ಲೆಟ್‌" ಎಂಬ ಮೊಟ್ಟಮೊದಲ ಕಥೆಯಲ್ಲಿಯೇ ಷರ್ಲಾಕ್‌ ಹೋಮ್ಸ್‌ನ ಹಿನ್ನೆಲೆಯನ್ನು ನೀಡಲಾಗಿದೆ. 1881ರ ಇಸವಿಯ ಆರಂಭದಲ್ಲಿ, ಆತನನ್ನು ರಸಾಯನಶಾಸ್ತ್ರದ ಒಬ್ಬ ಸ್ವತಂತ್ರ ವಿದ್ಯಾರ್ಥಿಯೆಂದು ನಿರೂಪಿಸಲಾಗಿದೆ. ಇದಲ್ಲದೆ ಆತನಿಗೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ-ಹವ್ಯಾಸಗಳಿದ್ದವು. ಬಹುಶಃ ಇವೆಲ್ಲವೂ ಆತನು ತನ್ಮಯತೆಯಿಂದ ಅಪರಾಧ ಪ್ರಕರಣಗಳನ್ನು ಭೇದಿಸುವುದರಲ್ಲಿ ಸರ್ವೋತ್ತಮನಾಗಲು ನೆರವಾದವು. ಷರ್ಲಾಕ್‌ ಹೋಮ್ಸ್‌ ಪತ್ತೆದಾರಿಯಾಗಲು ಏನು ಪ್ರೇರಣೆಯಾಯಿತು ಎಂಬುದರ ಬಗ್ಗೆ ಹಿನ್ನೆಲೆಯನ್ನು ಆರಂಭಿಕ ಕಥೆಯಾದ "ದಿ ಅಡ್ವೆಂಚರ್‌ ಆಫ್‌ ದಿ "ಗ್ಲೋರಿಯಾ ಸ್ಕಾಟ್‌" ತಿಳಿಸುತ್ತದೆ. ಆತನ ಕಾಲೇಜ್‌ ಸ್ನೇಹಿತನ ತಂದೆ ಷರ್ಲಾಕ್‌ ಹೋಮ್ಸ್‌ನುಪ್ರಕರಣಗಳನ್ನು ಎಳೆಎಳೆಯಾಗಿ ಬಿಡಿಸಿ ನೋಡುವ ನೈಪುಣ್ಯತೆಯನ್ನು ಶ್ಲಾಘಿಸಿದ್ದರು. ತನಿಖೆಗಳ ನಿರ್ಣಯವನ್ನು ತರ್ಕ, ಗಮನ ಮತ್ತು ನಿಗಮನಾತ್ಮಕ ಶಕ್ತಿಗಳ ಮೇಲೆ ಕೇಂದ್ರೀಕೃತಗೊಳಿಸುತ್ತಿದ್ದ ಷರ್ಲಾಕ್‌ ವೈಜ್ಞಾನಿಕ ರೀತಿಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ.

"ಎ ಸ್ಟಡಿ ಇನ್ ಸ್ಕಾರ್ಲೆಟ್‌" ಕಥೆಯಲ್ಲಿ, ಭೂಮಿಯು ಸೂರ್ಯನ ಸುತ್ತಲೂ ಸುತ್ತುತ್ತದೆಂಬುದು ನನಗೆ ತಿಳಿದಿರಲಿಲ್ಲ, ಏಕೆಂದರೆ ಅದು ನನ್ನ ಕಾರ್ಯಕ್ಕೆ ಅಪ್ರಸ್ತುತವೆಂದು ಹೋಮ್ಸ್‌ ಹೇಳಿಕೊಳ್ಳುತ್ತಾನೆ. ಈ ವಿಚಾರವನ್ನು ವ್ಯಾಟ್ಸನ್‌ನಿಂದ ತಿಳಿದುಕೊಂಡ ಕೂಡಲೇ, ಅದನ್ನು ಮರೆಯಲು ಯತ್ನಿಸುವೆ ಎಂದು ಷರ್ಲಾಕ್‌ ಹೋಮ್ಸ್‌ ಹೇಳುತ್ತಾನೆ. ಮನಸ್ಸಿಗೆ ಮಾಹಿತಿಯನ್ನು ಶೇಖರಿಸುವ ಸಾಮರ್ಥ್ಯಕ್ಕೊಂದು ಎಲ್ಲೆಯುಂಟು . ಹೀಗಾಗಿ ಬೇಡದ ವಿಚಾರಗಳನ್ನು ತಿಳಿದುಕೊಂಡಲ್ಲಿ ಉಪಯುಕ್ತ ವಿಚಾರಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯ ಕುಗ್ಗುತ್ತದೆ ಎಂದು ಷರ್ಲಾಕ್‌ ಹೋಮ್ಸ್ ಆಭಿಪ್ರಾಯ . ಡಾ|ವ್ಯಾಟ್ಸನ್‌ ಅಂತಿಮವಾಗಿ ಹೋಮ್ಸ್‌ನ ಸಾಮರ್ಥ್ಯಗಳನ್ನು ಈ ರೀತಿ ನಿರ್ಣಯಿಸುತ್ತಾನೆ:

  1. ಸಾಹಿತ್ಯದ ಜ್ಞಾನ—ಇಲ್ಲ.
  2. ತತ್ವಶಾಸ್ತ್ರದ ಜ್ಞಾನ—ಇಲ್ಲ.
  3. ಖಗೋಳ ವಿಜ್ಞಾನದ ಜ್ಞಾನ—ಇಲ್ಲ.
  4. ರಾಜಕೀಯದ ಜ್ಞಾನ—ತೀರಾ ಕಡಿಮೆ.
  5. ಸಸ್ಯವಿಜ್ಞಾನದ ಜ್ಞಾನ—ಸುಮಾರಾಗಿ. ಬೆಲಡೊನ್ನ, ಅಫೀಮು ಮತ್ತು ಸಾಮಾನ್ಯವಾಗಿ ವಿಷಗಳ ವಿಚಾರಗಳನ್ನು ಚೆನ್ನಾಗಿ ಬಲ್ಲನು. ತೋಟಗಾರಿಕೆಯ ಬಗ್ಗೆ ಕಾರ್ಯರೂಪದ ಜ್ಞಾನವಿಲ್ಲ.
  6. ಭೂ ವಿಜ್ಞಾನದ ಜ್ಞಾನ—ಪ್ರಾಯೋಗಿಕ, ಆದರೆ ಸೀಮಿತ. ಬರಿ ಕಣ್ಣನ್ನು ಹಾಯಿಸಿ ವಿವಿಧ ಬಗೆಯ ಮಣ್ಣುಗಳನ್ನು ತಿಳಿಸಬಲ್ಲ. ನಡಿದು ಬಂದ ನಂತರ, ತನ್ನ ಷರಾಯಿಯ ಮೇಲೆ ಹತ್ತಿದ ಕೆಸರನ್ನು ತೋರಿಸಿ, ಅವುಗಳ ಬಣ್ಣದಿಂದ, ಲಂಡನ್‌ ನಗರದ ಯಾವ ಭಾಗದಮಣ್ಣು ಇದು ಎಂದು ಹೇಳಬಲ್ಲ.
  7. ರಸಾಯನಶಾಸ್ತ್ರದ ಜ್ಞಾನ—ಗಹನವಾದದ್ದು
  8. ಅಂಗರಚನಾ ಶಾಸ್ತ್ರ—ನಿಖರವಾಗಿದ್ದರೂ, ಕ್ರಮಬದ್ಧತೆಯ ಕೊರತೆ.
  9. ಪ್ರಚೋದನಕಾರಿ ಸಾಹಿತ್ಯ.—ಅಗಾಧ. ಈ ಶತಮಾನದಲ್ಲಿ ನಡೆದಂತಹ ಪ್ರತಿಯೊಂದು ಕರಾಳ ಘಟನೆಯ ವಿವರಗಳನ್ನು ತಿಳಿದುಕೊಂಡಂತಿದ್ದಾನೆ.
  10. ಪಿಟೀಲು ಚೆನ್ನಾಗಿ ನುಡಿಸಬಲ್ಲ.
  11. ಈತನು ಏಕದಂಡ, ಬಾಕ್ಸಿಂಗ್‌ ಮತ್ತು ಕತ್ತಿವರಸೆಗಳಲ್ಲಿ ಪ್ರವೀಣ.
  12. ಬ್ರಿಟಿಷ್‌ ಕಾನೂನಿನ ವಾಸ್ತವಿಕ ಜ್ಞಾನವಿದೆ.

ಷರ್ಲಾಕ್ ಹೋಮ್ಸ್ ನ ಎಲ್ಲಾ ಸಣ್ಣ ಕಥೆಗಳು ಮತ್ತು ಕಾದಂಬರಿಗಳು ಕನ್ನಡದಲ್ಲಿ ಲಭ್ಯವಿದೆ : ಷರ್ಲಾಕ್ ಹೋಮ್ಸ್ ಸಮಗ್ರ ಕೃತಿಗಳು.[೧೬]

ಅದೇನೇ ಇರಲಿ, "ಎ ಸ್ಟಡಿ ಇನ್‌ ಸ್ಕಾರ್ಲೆಟ್‌" ಕಥೆಯ ಕಟ್ಟಕಡೆಯಲ್ಲಿ, ಹೋಮ್ಸ್‌ ಲ್ಯಾಟಿನ್‌ ಭಾಷೆಯನ್ನು ಬಲ್ಲವನಾಗಿದ್ದು, ರೋಮನ್ ಚಮತ್ಕಾರಿ ಚುಟುಕದ ಅನುವಾದದ ಅಗತ್ಯವೇ ಇರಲಿಲ್ಲ ಎಂದು ಬರುತ್ತದೆ. ಆದರೂ, ಭಾಷಾ ಜ್ಞಾನ ಪತ್ತೆದಾರಿ ಕೆಲಸಕ್ಕೆ ನೇರವಾಗಿ ನರವಿಗೆ ಬರುತ್ತದೆಂಬುದು ಅನುಮಾನ. ಆ ನಂತರದ ಕಥೆಗಳಲ್ಲೂ ಸಹ ಪಟ್ಟಿಯಲ್ಲಿ ಹೇಳಿರುವುದಕ್ಕೆ ವಿರುದ್ಧವಾಗಿವೆ. ರಾಜಕೀಯ ವಿಚಾರಗಳ ಬಗ್ಗೆ ತಿಳಿವಿಲ್ಲವೆಂದು ಊಹಿಸಲಾದರೂ, "ಎ ಸ್ಕ್ಯಾಂಡಲ್‌ ಇನ್ ಬೊಹೆಮಿಯಾ" ಕಥೆಯಲ್ಲಿ ಆತನು "ಕೌಂಟ್‌ ವೊನ್‌ ಕ್ರಾಮ್‌"ನ ನೈಜ ಗುರುತನ್ನು ಕೂಡಲೇ ಕಂಡುಹಿಡಿಯುತ್ತಾನೆ. ಅಪ್ರಚೋದಕ ಸಾಹಿತ್ಯದ ವಿಚಾರದಲ್ಲಿ, ಷರ್ಲಾಕ್‌ ಹೋಮ್ಸ್‌ನ ಭಾಷಣವು ಬೈಬಲ್‌, ಷೇಕ್ಸ್‌ಪಿಯರ್‌ ಮತ್ತು ಗೋಯ್‌ಥೆಯ ಉಲ್ಲೇಖಗಳಿಂದ ತುಂಬಿ ತುಳುಕತ್ತದೆ.

ಇದಕ್ಕಿಂತಲೂ ಹೆಚ್ಚಾಗಿ, "ದಿ ಅಡ್ವೆಂಚರ್‌ ಆಫ್‌ ದಿ ಬ್ರೂಸ್‌-ಪಾರ್ಟಿಂಗ್ಟನ್‌ ಪ್ಲ್ಯಾನ್ಸ್‌" ಕಥೆಯಲ್ಲಿ, ನವೆಂಬರ್‌ 1895ರಲ್ಲಿ "ಪಾಲಿಫೊನಿಕ್‌ ಮೊಟೆಟ್ಸ್‌ ಆಫ್‌ ಲಾಸ್ಸಸ್‌"ಎಂಬ 'ಸಾಮಾನ್ಯರಿಗೆ ಅರ್ಥವೇ ಆಗದ' ಕ್ಷೇತ್ರಕ್ಕೆ ಸಂಬಂಧಿತ ಒಂದು ಏಕವಿಷಯಕ ಪ್ರಬಂಧ (ಮೊನೊಗ್ರಾಫ್‌)ನಲ್ಲಿ ಹೋಮ್ಸ್‌ ಬಹಳ ನಿರತನಾದನಂತೆ. ಇದಕ್ಕಾಗಿ, ಅಪರಾಧ-ತನಿಖೆಯ ಜ್ಞಾನಕ್ಕೆ ಸಂಬಂಧವೇ ಇಲ್ಲದ ಜ್ಞಾನವನ್ನು ಆತನ ಮನದಲ್ಲಿ ತುಂಬಿಸಿಕೊಳ್ಳಬೇಕಾಯಿತು. ಹಾಗಾಗಿ ಅವನ ಮೊನೊಗ್ರಾಫ್‌ ಹೇಳಿರುವುದೇ ಈ ವಿಷಯದಲ್ಲಿ 'ಅಂತಿಮ' ಎಂದು ಪರಿಗಣಿಸಲಾಗಿದೆ.[೧೭] ತನ್ನ ವೃತ್ತಿಗೆ ನೇರವಾದ ಸಂಬಂಧವಿಲ್ಲದ ವಿಚಾರಗಳನ್ನು ತಿಳಿದುಕೊಳ್ಳಲು ಹೋಮ್ಸ್‌ಗೆ ಆಸಕ್ತಿ ಇರಲಿಲ್ಲ ಎಂಬುದು ನಂತರದ ಕಥೆಗಳು ಸುಳ್ಳಾಗಿಸಿದೆ. ಪತ್ತೆದಾರಿಯೊಬ್ಬನಿಗೆ ಎಲ್ಲಾ ಜ್ಞಾನ ಶಾಖೆಯೂ ಉಪಯುಕ್ತ" ಎಂದು "ದಿ ವ್ಯಾಲಿ ಆಫ್‌ ಫಿಯರ್‌" ಕಥೆಯ ಎರಡನೆಯ ಅಧ್ಯಾಯದಲ್ಲಿ " ಹೋಮ್ಸ್‌ ಹೇಳುತ್ತಾನೆ. "ದಿ ಅಡ್ವೆಂಚರ್‌ ಆಫ್‌ ದಿ ಲಯನ್ಸ್‌ ಮೇನ್‌" ಕಥೆಯಲ್ಲಿ ಆತನು ತನ್ನನ್ನು ತಾನು "ದೃಢ ಸ್ಮೃತಿಯುಳ್ಳ ಕಂಡಿದ್ದನ್ನೆಲ್ಲಾ ಓದುವವ" ಎಂದು ಬಣ್ಣಿಸಿಕೊಂಡಿದ್ದಾನೆ.

ಗೂಢಲಿಪಿಯನ್ನು ಸಮರ್ಥವಾಗಿ ಬಿಡಿಸೋದಬಲ್ಲ ವ್ಯಕ್ತಿ ಹೋಮ್ಸ್‌. "ನನಗೆ ಎಲ್ಲಾ ತರಹದ ಗೂಢ ಲಿಪಿಗಳ ಪರಿಜ್ಞಾನವಿದೆ. ಇದಕ್ಕೆ ಸಂಬಂಧಿಸಿದಂತೆ ಸ್ವತಃ ನಾನೇ ಒಂದು ಕೃತಿ ರಚಿಸಿದ್ದೇನೆ. ಇದರಲ್ಲಿ ನಾನು ನೂರ ಅರವತ್ತು ಪ್ರತ್ಯೇಕ ರಹಸ್ಯ ಲಿಪಿಗಳನ್ನು ವಿಶ್ಲೇಷಿಸಿರುವೆ." ಎಂದು ಆತ ವ್ಯಾಟ್ಸನ್‌ಗೆ ಹೇಳುತ್ತಾನೆ. "ದಿ ಅಡ್ವೆಂಚರ್‌ ಆಫ್‌ ದಿ ಡ್ಯಾನ್ಸಿಂಗ್‌ ಮೆನ್‌" ಕಥೆಯಲ್ಲಿ, ಈ ರೀತಿಯ ಒಂದು ಪ್ರಕರಣವನ್ನು ಆವರ್ತನ ವಿಶ್ಲೇಷಣೆಗೆ ಒಳಪಡಿಸಿ ಬಗೆಹರಿಸುತ್ತಾನೆ.

ಹೋಮ್ಸ್‌ನ ಭೌತಿಕ ಸಾಕ್ಷ್ಯಗಳ ವಿಶ್ಲೇಷಣೆಗಳು ವೈಜ್ಞಾನಿಕವೂ ಹೌದು ಮತ್ತು ಕರಾರುವಾಕ್ಕಾದ್ದೂ ಹೌದು. ಎ ಸ್ಟಡಿ ಇನ್‌ ಸ್ಕಾರ್ಲೆಟ್, "ದಿ ಅಡ್ವೆಂಚರ್‌ ಆಫ್‌ ಸಿಲ್ವರ್‌ ಬ್ಲೇಜ್‌," ದಿ ಅಡ್ವೆಂಚರ್‌ ಆಫ್‌ ಪ್ರಯರಿ ಸ್ಕೂಲ್‌, ದಿ ಹೌಂಡ್‌ ಆಫ್‌ ದಿ ಬ್ಯಾಸ್ಕರ್ವಿಲ್ಸ್‌, "ದಿ ಬಾಸ್ಕೊಂಬ್ ವ್ಯಾಲಿ ಮಿಸ್ಟರಿ" ಕಥೆಗಳಲ್ಲಿ, ಅಪರಾಧ ಕೃತ್ಯಗಳನ್ನು ಅದು ಸಂಭವಿಸಿದ ಸ್ಥಳದಲ್ಲೇ ಪತ್ತೆ ಮಾಡಲು ಅಪ್ರಕಟ ಸಾಕ್ಷ್ಯಗಳಾದ ಹೆಜ್ಜೆಗುರುತುಗಳು, ಗೊರಸಿನ ಗುರುತುಗಳು ಮತ್ತು ಸೈಕಲ್‌ ಟೈರ್‌ ಗುರುತುಗಳನ್ನು ಷರ್ಲಾಕ್‌ ಹೋಮ್ಸ್‌ ಬಳಸುತ್ತಾನೆ. "ದಿ ಅಡ್ವೆಂಚರ್‌ ಆಫ್‌ ದಿ ರೆಸಿಡೆಂಟ್‌ ಪೇಷೆಂಟ್‌" ಮತ್ತು "ದಿ ಹೌಂಡ್‌ ಆಫ್‌ ಬ್ಯಾಸ್ಕರ್ವಿಲ್ಸ್‌" ಕಥೆಗಳಲ್ಲಿ ಅಪರಾಧಿಗಳನ್ನು ಪತ್ತೆ ಮಾಡಲು ತಂಬಾಕು ಬೂದಿಗಳು ಮತ್ತು ಸಿಗರೆಟ್‌ ತುಂಡುಗಳನ್ನು ಸಾಕ್ಷ್ಯಾಧಾರವಾಗಿ ಬಳಸುತ್ತಾನೆ. "ಅ ಕೇಸ್‌ ಆಫ್ ಐಡೆಂಟಿಟಿ" ಕಥೆಯಲ್ಲಿ, ಬೆರಳಚ್ಚಾದ ಪತ್ರಗಳನ್ನು ತುಲನಾತ್ಮಕ ಸಾಕ್ಷ್ಯಾಧಾರವಾಗಿ ಬಳಸಿ ವಂಚನೆಯ ಪ್ರಕರಣವೊಂದನ್ನು ಭೇದಿಸುತ್ತಾನೆ. "ದಿ ಅಡ್ವೆಂಚರ್‌ ಆಫ್‌ ದಿ ರೇಗೇಟ್‌ ಸ್ಕ್ವೈರ್‌" ಕಥೆಯಲ್ಲಿ ಕೋವಿಮದ್ದಿನ ಅವಶೇಷಗಳನ್ನು ಆಧಾರದ ನೆರವಿನಿಂದ ಇಬ್ಬರು ಕೊಲೆಗಾರರನ್ನು ಪತ್ತೆ ಹಚ್ಚುತ್ತಾನೆ. "ದಿ ಅಡ್ವೆಂಚರ್ ಆಫ್‌ ದಿ ಎಮ್‌ಟಿ ಹೌಸ್‌" ಕಥೆಯಲ್ಲಿ ಎರಡು ಅಪರಾಧ ನಡೆದ ಸ್ಥಳಗಳಲ್ಲಿ ದೊರೆತ ಗುಂಡುಗಳ ಹೋಲಿಕೆಯಿಂದ ಮತ್ತು "ದಿ ನಾರ್ವುಡ್‌ ಬಿಲ್ಡರ್"‌ ಕಥೆಯಲ್ಲಿ ಬೆರಳಚ್ಚುಗಳ ಸಹಾಯದಿಂದ ತಪ್ಪಿತಸ್ಥರನ್ನು ಹಿಡಿಯುತ್ತಾನೆ. "ಎ ಸ್ಕ್ಯಾಂಡಲ್‌ ಇನ್‌ ಬೊಹೆಮಿಯಾ"ದಲ್ಲಿ ಮನೋವಿಜ್ಞಾನದ ಅರಿವಿರುವುದನ್ನು ತೋರಿಸುತ್ತಾನೆ. ಬೆಂಕಿ ಅಪಘಾತವಾದಲ್ಲಿ ಅವಿವಾಹಿತ ಮಹಿಳೆಯೊಬ್ಬಳು ತನ್ನ ಅತಿ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಳ್ಳಲು ಯತ್ನಿಸುವಳು ಹಾಗೂ ವಿವಾಹಿತೆಯೊಬ್ಬಳು ಐರೆನ್‌ಳ ಮಗುವನ್ನು ಕಸಿದುಕೊಳ್ಳುವಳೆಂದು ಅಚ್ಚರಿಸಿ, ಐರೀನ್‌ ಆಡ್ಲರ್‌ ಅವಿತಿಟ್ಟ ಒಂದು ಭಾವಚಿತ್ರವನ್ನು ತೆಗೆಡು ಕೊಡುವಂತೆ ಪ್ರೇರೇಪಿಸುತ್ತಾನೆ. ಹಳೆಯ ರಕ್ತದ ಕಲೆಗಳನ್ನು ಪತ್ತೆ ಮಾಡಲು ಒಂದು ರಾಸಾಯನಿಕವನ್ನು ಆವಿಷ್ಕರಿಸಿರುವುದಾಗಿ ಷರ್ಲಾಕ್‌ ಹೋಮ್ಸ್‌ ತನ್ನ ಮೊದಲ ಕಥೆಯಾದ "ಎ ಸ್ಟಡಿ ಇನ್‌ ಸ್ಕಾರ್ಲೆಟ್‌" ನಲ್ಲಿ,ಹೇಳಿಕೊಳ್ಳುತ್ತಾನೆ. ಎಷ್ಟೋ ವರ್ಷಗಳ ನಂತರದ ವರೆಗೂ ವಿವಿಧ ರಕ್ತದ ಗುಂಪುಗಳನ್ನು ಗುರುತಿಸಲಾಗುತ್ತಿರಲಿಲ್ಲ ಎಂಬುದು ಬೇರೆ ಮಾತು.

ತನ್ನ (ಪತ್ತೇದಾರಿ) ಜೀವನವು ಸಡಗರದಿಂದ ತುಂಬಿತ್ತಾದರೂ, (ಪ್ರಾಯಃ ಅದನ್ನು ಬಿಟ್ಟು ಮುಂದೆ ಹೋಗಲು) ಸಸೆಕ್ಸ್‌ ಡೌನ್ಸ್‌ನಲ್ಲಿ ನಿವೃತ್ತನಾಗಿ ಜೇನುನೊಣ ಸಾಕಣೆಯಲ್ಲಿ (("ದಿ ಸೆಕೆಂಡ್‌ ಸ್ಟೇನ್‌")) ತೊಡಗುತ್ತಾನೆ. ತಾನು ಈ ವಿಷಯವನ್ನು ಕುರಿತು "ರಾಣಿಜೇನನ್ನು ಪ್ರತ್ಯೇಕಿಸಿ ಗಮನಿಸಿದ ಅಂಶಗಳನ್ನೊಳಗೊಂಡಿರುವ ಜೇನು ಸಾಕಣೆಯ ಪ್ರಾಯೋಗಿಕ ಕೈಪಿಡಿ"ಎಂಬ ಪುಸ್ತಕವೊಂದನ್ನು ಸಹ ಬರೆಯುತ್ತಾನೆ[೧೮] ದುಗುಡ ಕಳೆಯುವ ಸಂದರ್ಭದಲ್ಲಿ ಸಂಗೀತದ ಮೊರೆ ಹೊಕ್ಕು ವಿಶ್ರಾಂತಿ ಪಡೆಯುವ ಮೂಲಕ ಸಂಗೀತಾಸಕ್ತಿಯನ್ನು ತೋರುತ್ತಾನೆ. ಈ ವಿಚಾರವು "ದಿ ರೆಡ್‌ ಹೆಡೆಡ್‌ ಲೀಗ್‌"ಕಥೆಯ ಪ್ರಸಂಗವೊಂದರಲ್ಲಿ,ಹೋಮ್ಸ್‌ ತನ್ನ ತನಿಖೆಯ ನಡುವೆ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಪಾಬ್ಲೊ ಡಿ ಸರಸಟೆನುಡಿಸುವ ಪಿಟೀಲು ವಾದ್ಯವನ್ನು ಆಲಿಸುತ್ತಾನೆ.

ಪ್ರಭಾವ

ಪತ್ತೇದಾರಿ ಕಥೆಯ ಇತಿಹಾಸದಲ್ಲಿ ಪಾತ್ರ

ಷರ್ಲಾಕ್‌ ಹೋಮ್ಸ್‌ ಮೂಲತಃ ಕಾಲ್ಪನಿಕ ಪತ್ತೆದಾರಿಯಲ್ಲದಿದ್ದರೂ, ಆತನ ಹೆಸರು ಪಾತ್ರಕ್ಕೆ ಚಿರಸ್ಥಾಯಿಯಾಯಿತು. (ಆತನು ಅಡ್ಗರ್‌ ಅಲನ್‌ ಪೋ ಸಿ. ಆಗಸ್ಟಿನ್‌ ಡ್ಯುಪಿನ್‌ ಮತ್ತು ಅಮಿಲಿ ಗ್ಯಾಬೊರಿಯುನ ಮಸ್ಯರ್ ಲೆಕಾಕ್‌ರಿಂದ ಪ್ರಭಾವಿತನಾಗಿದ್ದ.) ಆತನ ಕಥೆಗಳು ಹಲವು ಪತ್ತೇದಾರಿ ಕಥೆಗಳಲ್ಲಿ ನಿಷ್ಥ ಆದರೂ ಅರೆಜಾಣ್ಮೆಯುಳ್ಳ ಸಹಾಯಕನಂತಹ ಅಲಂಕಾರಿಕ ಪ್ರಯೋಗಗಳನ್ನೂ ಒಳಗೊಂಡಿವೆ. ಇಂತಹ ಪಾತ್ರಕ್ಕೆ ಡಾ. ವ್ಯಾಟ್ಸನ್‌ ಮೂಲಮಾದರಿ..

ವಿಜ್ಞಾನಿಗಳಿಗೆ ಸ್ಫೂರ್ತಿ

'ಷರ್ಲಾಕ್‌ ಹೋಮ್ಸ್‌'ನನ್ನು ಕೆಲವೊಮ್ಮೆ ವೈಜ್ಞಾನಿಕ ಸಾಹಿತ್ಯಗಳಲ್ಲಿ ಬಳಸಲಾಗಿದೆ. ರಾಡ್‌ಫೋರ್ಡ್‌ (1999) [೧೯] ಆತನ ಬುದ್ಧಿಶಕ್ತಿಯ ಬಗ್ಗೆ ಊಹಾಪೋಹ ಮಾಡುತ್ತಾನೆ. ಸರ್‌ ಆರ್ಥರ್‌ ಕಾನನ್‌ ಡಾಯ್ಲ್‌ನ ಕಥೆಗಳಲ್ಲಿನ ಅಂಶಗಳನ್ನು ಬಳಸಿ, ಅದರ ಆಧಾರದ ಮೇಲೆ ಷರ್ಲಾಕ್‌ ಹೋಮ್ಸ್‌ನ IQ ನಿರ್ಣಯಿಸಲು, ರಾಡ್‌ಫೋರ್ಡ್‌ ಮೂರು ವಿವಿಧ ರೀತಿಗಳನ್ನು ಬಳಸುತ್ತಾನೆ. ಇದರಿಂದ ಹೋಮ್ಸ್‌ನ ಬುದ್ಧಿಶಕ್ತಿಯು ನಿಜಕ್ಕೂ ಬಹಳ ಉನ್ನತ ಮಟ್ಟದ್ದು ಎಂಬ ನಿರ್ಣಯಕ್ಕೆ ಬರುತ್ತಾನೆ. ಸ್ನೈಡರ್‌ (2004)[೨೦] ಹತ್ತೊಂಬತ್ತನೆಯ ಶತಮಾನದ ಮಧ್ಯ ಮತ್ತು ಉತ್ತರಾರ್ಧ ಕಾಲದ ವಿಜ್ಞಾನ ಮತ್ತು ಅಪರಾಧ-ವಿಜ್ಞಾನದ ಬೆಳಕಿನಲ್ಲಿ ಹೋಮ್ಸ್‌ನ ರೀತಿರಿವಾಜುಗಳನ್ನು ಪರಿಶೀಲಿಸುತ್ತಾನೆ. ಕೆಂಪ್ಸ್ಟರ್‌ (2006)[೨೧] ನರವಿಜ್ಞಾನಿಗಳ ನೈಪುಣ್ಯವನ್ನು ಷರ್ಲಾಕ್‌ ಹೋಮ್ಸ್‌ನ ಪರಿಣತಿಯೊಂದಿಗೆ ಹೋಲಿಸಿ ನೋಡುತ್ತಾನೆ. ಅಂತಿಮವಾಗಿ, ಡಿಡಿಯರ್‌ಜೀನ್‌ ಮತ್ತು ಗೊಬೆಟ್‌ (2008) [49] 'ಷರ್ಲಾಕ್‌ ಹೋಮ್ಸ್‌'ಎಂಬ ಕಾಲ್ಪನಿಕ ತಜ್ಞನನ್ನು ಮಾದರಿಯಾಗಿ ಬಳಸಿ ಮನೋವಿಜ್ಞಾನ ಸಾಹಿತ್ಯವನ್ನು ವಿಮರ್ಶಿಸುತ್ತಾರೆ. ತಜ್ಞತೆಗಳೊಂದಿಗೆ, ಅಸಂಭಾವ್ಯ ಅಂಶಗಳೊಂದಿಗೆ ಮತ್ತು ಇನ್ನಷ್ಟು ಸಂಶೋಧನೆ ನಡೆಸತಕ್ಕಂತಹ ಅಂಶಗಳೊಂದಿಗೆ ಸರ್‌ ಅರ್ಥರ್‌ ಕಾನನ್‌ ಡಾಯ್ಲ್‌ರ ಕಾದಂಬರಿಗಳಲ್ಲಿನ ಅಂಶಗಳು ಹೊಂದಿಕೊಳ್ಳುವಂತಹ ವಿಚಾರಗಳನ್ನು ಎತ್ತಿ ತೋರಿಸುತ್ತಾರೆ.

ಪರಂಪರೆ

ಅಭಿಮಾನಿಗಳ ಊಹಾಪೋಹ

ಸರ್‌ ಆರ್ಥರ್‌ ಕಾನನ್‌ ಡಾಯ್ಲ್‌ ಬರೆದ ಐವತ್ತಾರು ಕಿರುಕಥೆಗಳು ಮತ್ತು ನಾಲ್ಕು ಕಾದಂಬರಿಗಳನ್ನು ಹೋಮ್ಸಿಯನ್ನರು 'ಕಾನೋನ್'('ಕೃತಿಚಕ್ರ') ಎಂದಿದ್ದಾರೆ. ಕೃತಿಚಕ್ರದ ಆರಂಭಿಕ ಪಂಡಿತರಲ್ಲಿ ಬ್ರಿಟನ್‌ನ ರೊನಾಲ್ಡ್‌ ನಾಕ್ಸ್‌ ಹಾಗೂ ನ್ಯೂಯಾರ್ಕ್‌ನ ಕ್ರಿಸ್ಟಫರ್‌ ಮೊರ್ಲೆ ಸಹ ಸೇರಿದ್ದಾರೆ.

ಷರ್ಲಾಕ್ ಹೋಮ್ಸ್‌, ಪಾಪ್‌ ಸಂಸ್ಕೃತಿ ಷರ್ಲಾಕ್‌ ಹೋಮ್ಸ್‌ ಆಕರಗಳನ್ನು ಒದಗಿಸುತ್ತದೆಸರ್‌ ಆರ್ಥರ್‌ ಕಾನನ್‌ ಡಾಯ್ಲ್‌ ಅಥವಾ ಕಥೆಯಲ್ಲಿರುವ ಪಾತ್ರಗಳನ್ನು ಉಲ್ಲೇಖಿಸಿ ಪಾಪ್‌ ಸಂಸ್ಕೃತಿಯಲ್ಲಿ ಹೆಚ್ಚೂ ಕಡಿಮೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಈ ರೀತಿಯ ಪ್ರಾಸಂಗಿಕ ಸೂಚನೆಗಳು ಕಥಾವಸ್ತುವಿನ ಅಭಿವೃದ್ಧಿಯ ರಚನೆಗೆ ಕಾರಣವಾಗಿ, ಅದರ ಬೌದ್ಧಿಕ ಮಟ್ಟವನ್ನು ಏರಿಸಬಹುದು .

ಕೆಲವು ಕಣ್ಣಿಗೆ ಕಾಣುವಂತಿವೆ; ಉದಾಹರಣೆಗೆ, ಷರ್ಲಾಕ್ ಹೋಮ್ಸ್‌ನ ಪಾತ್ರವನ್ನು ಹೊಸ ಸಂದರ್ಭಗಳಲ್ಲಿ ಪರಿಚಯಿಸಲಾಗುತ್ತದೆ, ಅಥವಾ ಇನ್ನಷ್ಟು ನವಿರಾದ ಪ್ರಸಂಗಗಳನ್ನು ಹೆಣೆಯಲಾಗಿದೆ. ತರ್ಕಬದ್ಧವಾದ ಒಂದು ಪಾತ್ರ ವಠಾರದ ಮನೆಯಲ್ಲಿ ವಾಸ ಮಾಡಿದರೂ, ಅಲ್ಲಿಯ ಕೊಠಡಿ ಸಂಖ್ಯೆ 221Bಆಗಿರುವಂತೆ ನೋಡಿಕೊಳ್ಳಲಾಗಿದೆ. ಇದಕ್ಕೆ ಒಂದು ಖ್ಯಾತ ಉದಾಹರಣೆಯು ಷೋ ಹೌಸ್‌ ಎಂ. ಡಿ. ಎಂಬ ಸರಣಿಯಲ್ಲಿ ಗ್ರೆಗೊರಿ ಹೌಸ್ ಎಂಬ ಪಾತ್ರವೊಂದಿದೆ. ಇದರ ಹೆಸರು ಮತ್ತು ಅಪಾರ್ಟ್ಮೆಂಟ್‌ ಸಂಖ್ಯೆ-ಎರಡೂ ಷರ್ಲಾಕ್‌ ಹೋಮ್ಸ್‌ ನತ್ತ ಬೆರಳು ಮಾಡುತ್ತವೆ. ಪತ್ತೆದಾರಿ ಕೆಲಸ ಮಾಡುವ ಯಾರಿಗಾದರೂ ಒಂದು ಟೋಪಿ ಮತ್ತು ಮೇಲಂಗಿಯನ್ನು ತೊಡಿಸುವುದು ಹೊಮ್ಸ್‌ನನ್ನು ಸೂಚಿಸುವ ಅತಿ ಸರಳವಾದ ಉಪಾಯ.(ಬಲಕ್ಕೆ ನೋಡಿ) ಷರ್ಲಾಕ್‌ ಹೋಮ್ಸ್‌ನ ವಂಶಪರಂಪರೆ ಮತ್ತು ಪೂರ್ವಜರನ್ನು ಸೂಚಿಸುವ ಇನ್ನೊಂದು ಶ್ರೀಮಂತ ಪಾಪ್‌ ಸಂಸ್ಕೃತಿಯ ಉಲ್ಲೇಖವಿದೆ. ಆದರೂ, ಬರಹಗಾರನ ಕಲ್ಪನೆಯೇ ನಿಜಕ್ಕೂ ಏಕೈಕ ಎಲ್ಲೆಯಾಗಿದೆ. "ಬಹು ಸರಳ, ಪ್ರಿಯ ವ್ಯಾಟ್ಸನ್" ಎಂಬ ಷರ್ಲಾಕ್‌ ಹೋಮ್ಸ್‌ನ ಉಕ್ತಿಯು ಮೂರನೆಯ ಮುಖ್ಯ ಉಲ್ಲೇಖ. (ಆದರೂ ಹೋಮ್ಸ್‌ ಹೀಗೆ ಎಂದೂ ಹೇಳಿರಲಿಲ್ಲವಂತೆ).[೨೨] ಸಾಮಾನ್ಯವಾಗಿ ಹೊರಿಸುವಂತಹ ತಪ್ಪು ಲಕ್ಷಣವೇನೆಂದರೆ, ಕಾದಂಬರಿಯ ಸರಣಿಯುದ್ದಕ್ಕೂ ಷರ್ಲಾಕ್‌ ಹೋಮ್ಸ್‌ ಟೋಪಿ ಧರಿಸುವುದನ್ನು ಎಲ್ಲೂ ಸ್ಪಷ್ಟವಾಗಿ ತಿಳಿಸಿಲ್ಲ. "ದಿ ಅಡ್ವೆಂಚರ್‌ ಆಫ್‌ ಸಿಲ್ವರ್‌ ಬ್ಲೇಜ್‌" ಕಥೆಯಲ್ಲಿ "ಕಿವಿ ಪಟ್ಟಿಯುಳ್ಳ ಪ್ರವಾಸೀ ಟೋಪಿಯನ್ನು ಆತ ಧರಿಸಿರುವುದಂತೂ ಖಚಿತ.ಷರ್ಲಾಕ್ ಹೋಮ್ಸ್‌ ಇಮ್ಮೂತಿ ಟೋಪಿ ಮತ್ತು ಇನ್ವರ್ನೆಸ್‌ ಮೇಲಂಗಿಯನ್ನು ಮೊದಲ ಬಾರಿಗೆ "ದಿ ಬ್ಯಾಸ್ಕೊಂಬ್‌ ವ್ಯಾಲಿ ಮಿಸ್ಟರಿ" ಕಥೆಯಲ್ಲಿ ಧರಿಸಿ, ನಂತರದ ಹಲವು ಕಥೆಗಳಲ್ಲಿ ಧರಿಸಿರುವಂತೆ ಸಿಡ್ನಿ ಪ್ಯಾಜೆಟ್‌ ಚಿತ್ರವನ್ನು ಬಿಡಿಸಿದ್ದನು.

ಮಹಾ ಲೋಪ

ಇಂಗ್ಲೆಂಡ್‌ನ ಹೊರವಲಯದ ಮೀರಿಂಜೆನ್‌ನಲ್ಲಿರುವ ಹೋಮ್ಸ್‌ ವಿಗ್ರಹ

1891ರಿಂದ 1894ರ ವರೆಗಿನ ಅವಧಿಯಲ್ಲಿ, "ದಿ ಅಡ್ವೆಂಚರ್‌ ಆಫ್‌ ದಿ ಫೈನಲ್‌ ಪ್ರಾಬ್ಲೆಮ್‌" ಕಥೆಯಲ್ಲಿ ಹೋಮ್ಸ್‌ನ ಕಣ್ಮರೆಯಾಗುತ್ತಾನೆ ಮತ್ತು ಅವನು ಮೃತಪಟ್ಟನೆಂದು ತಿಳಿಯಲಾಗುತ್ತೆ.ಆದರೆ "ದಿ ಅಡ್ವೆಂಚರ್‌ ಆಫ್‌ ದಿ ಎಮ್‌ಟಿ ಹೌಸ್‌"ನಲ್ಲಿ ಆತನ ಪುನರಾಗಮನ ಆಗುತ್ತದೆ - ಹೋಮ್ಸ್‌ ಆಸಕ್ತರು ಇದನ್ನು "ಮಹಾ ಲೋಪ" ("ದಿ ಗ್ರೇಟ್‌ ಹಯಾಟಸ್‌"[೨೩] ಎನ್ನುತ್ತಾರೆ. ಆದರೂ ಆ ನಂತರದ ಕಥೆ "ದಿ ಅಡ್ವೆಂಚರ್‌ ಆಫ್‌ ವಿಸ್ಟೀರಿಯಾ ಲಾಡ್ಜ್‌" 1892ರಲ್ಲಿ ನಡೆಯುವಂತೆ ವಿವರಿಸಲಾಗಿರುವುದು ಗಮನಾರ್ಹ.

ಸರ್ ಆರ್ಥರ್‌ ಕಾನನ್‌ ಡಾಯ್ಲ್‌ ಮೊದಲ ಕಥಾ ಸಂಗ್ರಹವನ್ನು ಒಂದು ದಶಕದ ಅವಧಿಯಲ್ಲಿ ಬರೆದರು. ತಮ್ಮ ಐತಿಹಾಸಿಕ ಕಾದಂಬರಿಗಳತ್ತ ಗಮನ ಕೊಡಲು ಅವರು 1893ರಲ್ಲಿ ಪ್ರಕಟಗೊಂಡ "ದಿ ಫೈನಲ್‌ ಪ್ರಾಬ್ಲೆಮ್‌"ನಲ್ಲಿ ಷರ್ಲಾಕ್‌ ಹೋಮ್ಸ್‌ನನ್ನು ಕೊಂದುಬಿಟ್ಟರು. ಎಂಟು ವರ್ಷಗಳ ಕಾಲ ಸಾರ್ವಜನಿಕ ಒತ್ತಡವನ್ನು ತಳ್ಳಿಹಾಕುತ್ತಿದ್ದ ಲೇಖಕರು 1901ರಲ್ಲಿ ಪ್ರಕಟಗೊಂಡ "ದಿ ಹೌಂಡ್‌ ಆಫ್‌ ದಿ ಬ್ಯಾಸ್ಕರ್ವಿಲ್ಸ್‌" ಎಂಬ ಕಥೆಯನ್ನು ಬರೆದನು. ಇದನ್ನು 'ಷರ್ಲಾಕ್‌ ಹೋಮ್ಸ್‌ನ ಸಾವಿನ ಮುಂಚೆ' ಎಂದು ಸೂಚ್ಯವಾಗಿ ತಿಳಿಸಿದರು. ಆದರೂ, ವ್ಯಾಟ್ಸನ್‌ ಇದರ ಕುರುಹುಗಳನ್ನು ಮುಂಚಿನ ತಾರೀಖಿನದೆಂದು ತಿಳಿಸಿ, ಇದು ನೈಜವಾಗಿ "ದಿ ರಿಟರ್ನ್‌"ನ ನಂತರ ನಡೆದದ್ದು ಎಂದು ಕೆಲವರ ವಾದ.[೨೪][೨೫] ಸಾರ್ವಜನಿಕರು ಕಥೆಯ ಬಗ್ಗೆ ಸಂತಸಗೊಂಡರೂ, ಮರಣೋತ್ತರ ಹೋಮ್ಸ್‌ ಬಗ್ಗೆ ತೃಪ್ತರಾಗಲಿಲ್ಲ. ಎರಡು ವರ್ಷಗಳ ತರುವಾಯ ಸರ್‌ ಆರ್ಥರ್‌ ಕಾನನ್‌ ಡಾಯ್ಲ್‌ ಷರ್ಲಾಕ್‌ ಹೋಮ್ಸ್‌ಗೆ 'ಪುನರ್ಜನ್ಮ' ನೀಡಿದರು. ಲೇಖಕ-ನಿರ್ದೇಶಕ ನಿಕೊಲಸ್‌ ಮೆಯರ್‌ ಸೇರಿದಂತೆ ಹಲವರು ಷರ್ಲಾಕ್‌ ಹೋಮ್ಸ್‌ಗೆ ಪುನರ್‌ಜನ್ಮ ನೀಡಿದ ಉದ್ದೇಶದ ಬಗ್ಗೆ ತಂತಂಮ ಅಭಿಪ್ರಾಯ ಮುಂದಿಟ್ಟರು. ನಿಕಾಲಸ್‌ ಮೆಯರ್‌ ಈ ವಿಷಯವನ್ನು ಕುರಿತು 1970ರ ದಶಕದಲ್ಲಿ "ದಿ ಗ್ರೇಟ್‌ ಮ್ಯಾನ್‌ ಟೇಕ್ಸ್‌ ಎ ವಾಕ್‌" ಎಂಬ ಪ್ರಬಂಧವನ್ನೇ ಬರೆದ. ಪ್ರಕಾಶಕರು ಕೈ ತುಂಬ ಸಂಭಾವನೆ ನೀಡಲು ಮುಂದಾದರು ಎಂಬುದನ್ನು ಬಿಟ್ಟು ನೈಜ ಕಾರಣ ಏನಿರಬಹುದು ಎಂಬುದು ಇನ್ನೂ ತಿಳಿದಿಲ್ಲ. ಕಾರಣಗಳೇನೇ ಇರಲಿ, ಸರ್‌ ಆರ್ಥರ್‌ ಕಾನನ್‌ ಡಾಯ್ಲ್‌ ಮುಂದೆ ಕಾಲು ಶತಮಾನದಷ್ಟು ಕಾಲ ಹೋಮ್ಸ್‌ ಕಥೆಗಳನ್ನು ಬರೆಯಲು ಮುಂದುವರೆಸಿದರು.

ಈ ಲೋಪಕ್ಕೆ ಕಾರಣ ಏನಿರಬಹುದೆಂದು ಬೇರೆ ಬೇರೆ ಲೇಖಕರು ತಮ್ಮದೇ ಆದ ವಿವರವನ್ನು ಮಂಡಿಸಿದ್ದಾರೆ. ನಿಕಾಲಸ್‌ ಮೆಯರ್‌ರ ಕಾದಂಬರಿ "ದಿ ಸೆವೆನ್‌ ಪರ್‌-ಸೆಂಟ್‌ ಸಲ್ಯೂಷನ್‌" ನಲ್ಲಿ ಈ 'ಲೋಪ'ವನ್ನು ಷರ್ಲಾಕ್‌ ಹೋಮ್ಸ್‌ ತೆಗೆದುಕೊಂಡ ಒಂದು ರಹಸ್ಯವಾದ 'ವಿಶ್ರಾಂತಿ ರಜೆ'ಎಂದು ಬಣ್ಣಿಸಿದ್ದಾನೆ. ಷರ್ಲಾಕ್‌ ಹೋಮ್ಸ್‌ ತಮಾಷೆಗಾಗಿ, 'ಮೊರಿಯಾರ್ಟಿ ನನ್ನನ್ನು ಕೊಂದನೆಂದು ಬರೆದುಬಿಡು. ಹೇಗಿದ್ದರೂ ಸಾರ್ವಜನಿಕರು ನಿನ್ನನ್ನು ನಂಬಲಾರರು' ಎಂದು ವ್ಯಾಟ್ಸನ್‌ಗೆ ತಿಳಿಸಿ, ಸಿಗ್ಮಂಡ್ ಫ್ರಾಯ್ಡ್‌ ಬಳಿ ಕೊಕೇನ್‌ ವ್ಯಸನದ ಚಿಕಿತ್ಸೆಗಾಗಿ ತೆರಳಿದನು ಎಂದು ನಿರೂಪಿಸಲಾಗಿದೆ.

ಮುಂಚಿನ ಕಥೆಗಳಿಗೆ ಹೋಲಿಸಿದರೆ ನಂತರ ಬಂದ ಕಥೆಗಳು ಕಳಪೆ; ಷರ್ಲಾಕ್‌ ಹೋಮ್ಸ್‌ ರೀಚೆನ್ಬಾಚ್‌ ಜಲಪಾತಕ್ಕೆ ಹೋದಾಗ ಆತನು ಕೊಲೆಯಾಗಿರದಿದ್ದರೂ, ಅತನು ಮುಂಚಿನ ಷರ್ಲಾಕ್‌ ಹೋಮ್ಸ್‌ನಂತಿರಲಿಲ್ಲ ಎಂದು ಒಬ್ಬ ಓದುಗನು ಅಭಿಪ್ರಾಯಪಟ್ಟಿದ್ದನ್ನು ಸರ್‌ ಆರ್ಥರ್‌ ಕಾನನ್‌ ಡಾಯ್ಲ್‌ ತಮ್ಮ ಚರಿತ್ರೆಗಳಲ್ಲಿ ಉಲ್ಲೇಖಿಸಿದ್ದಾನೆ. ಲೋಪಕ್ಕೂ ಮುಂಚೆ ಮತ್ತು ಲೋಪದ ನಂತರದ ಷರ್ಲಾಕ್‌ ಹೋಮ್ಸ್‌ನಲ್ಲಿರುವ ವ್ಯತ್ಯಾಸಗಳು "ದಿ ಗ್ರೇಟ್‌ ಗೇಮ್‌" ಆಟವನ್ನಾಡುವವರಲ್ಲಿ (ಷರ್ಲಾಕ್ ಹೋಮ್ಸ್‌ ಐತಿಹಾಸಿಕ ವ್ಯಕ್ತಿ ಎಂದು ನಂಬುವಂತೆ) ಊಹೆಯನ್ನು ಹುಟ್ಟುಹಾಕಿದೆ. ಕಲ್ಪನಾಮಗ್ನ ಪ್ರಮೇಯಗಳಲ್ಲಿ, ಷರ್ಲಾಕ್ ಹೋಮ್ಸ್‌ ಇನ್ ಆರ್ಬಿಟ್‌ ಎಂಬ ಸಂಕಲನದಲ್ಲಿ ಪ್ರಕಟಗೊಂಡ ಮಾರ್ಕ್‌ ಬೊರ್ನ್‌ರ ಕಥೆ "ದಿ ಕೇಸ್‌ ಆಫ್‌ ದಿ ಡಿಟೆಕ್ಟಿವ್ಸ್‌ ಸ್ಮೈಲ್‌"ನಲ್ಲಿ, ಷರ್ಲಾಕ್‌ ಹೋಮ್ಸ್‌ ವಿರಾಮ ವೇಳೆಯಲ್ಲಿ ಭೇಟಿ ನೀಡಿದ ಸ್ಥಳಗಳ ಪೈಕಿ ಅಲೀಸ್‌ಳ ವಂಡರ್ಲೆಂಡ್‌ ಸಹ ಒಂದು ಎಂದು ನಿರೂಪಿಸಲಾಗಿದೆ. ಅಲ್ಲಿದ್ದಾಗ, ಆತನು ಕಳುವಾದ ಕಡುಬುಗಳ ಬಗ್ಗೆ ತನಿಖೆಯನ್ನು ನಡೆಸಿ, ಅಲ್ಲಿನ ಅನುಭವಗಳು ಅವನಿಗೆ ಕೊಕೇನ್‌ ವ್ಯಸನ ಮುಕ್ತನಾಗಲು ನೆರವಾಯಿತು.

ಸೊಸೈಟಿಗಳು

ಚಿತ್ರ:Sherlock Holmes Scotland.jpg
ಸ್ಕಾಟ್ಲೆಂಡ್‌ನಲ್ಲಿ ಷರ್ಲಾಕ್‌ ಹೋಮ್ಸ್‌
ಲಂಡನ್‌ನಲ್ಲಿ ಷರ್ಲಾಕ್‌ ಹೋಮ್ಸ್‌ ಸೊಸೈಟಿ ಮತ್ತು ನ್ಯೂಯಾರ್ಕ್‌ನಲ್ಲಿ ಬೇಕರ್‌ ಸ್ಟ್ರೀಟ್‌ ಇರ್ರೆಗ್ಯುಲರ್ಸ್‌ಎಂಬ ಸಂಸ್ಥೆಗಳು 1934ರಲ್ಲಿ ಸ್ಠಾಪಿಸಲ್ಪಟ್ಟವು. ಇವೆರಡೂ ಇನ್ನೂ ಕ್ರಿಯಾಶೀಲವಾಗಿವೆ. (ಷರ್ಲಾಕ್‌ ಹೋಮ್ಸ್‌ ಸೊಸೈಟಿ 1937ರಲ್ಲಿ ವಿಸರ್ಜಿತವಾಗಿ ಮತ್ತೆ 1951ರಲ್ಲಿ ಪನರಾರಂಭಗೊಂಡಿತು) 

ಷರ್ಲಾಕ್‌ ಹೋಮ್ಸ್‌ ಸಾಹಸಮಯ ದೃಶ್ಯಗಳನ್ನು ನೋಡಲು ಉದಾಹರಣೆಗೆ ಸ್ವಿಸ್‌ ಆಲ್ಫ್ಸ್‌ ಪರ್ವತದಲ್ಲಿ ಬರುವ ರೀಚೆನ್‌ಬಾಕ್‌ ಜಲಪಾತದಂತಹ ಸ್ಥಳಗಳಿಗೆ ಪ್ರವಾಸ ಏರ್ಪಡಿಸುವ ವಿಶ್ವದ ಹಲವು ಸಂಸ್ಥೆಗಳಲ್ಲಿ ಲಂಡನ್‌ ಮೂಲದ ಸೊಸೈಟಿಯೂ ಒಂದು.

1934ರಲ್ಲಿ ಸ್ಫಾಪನೆಯಾದ ಎರಡು ಆರಂಭಿಕ ಸೊಸೈಟಿಗಳನ್ನು ಹಲವು ಹೋಮ್ಸಿಯನ್ (ಹೋಮ್ಸ್‌ ಅಭಿಮಾನಿಗಳು)ತಂಡಗಳು ನಿರ್ವಹಿಸಿದವು; ಮೊದಲು ಅಮೆರಿಕದಲ್ಲಿ (ಇವುಗಳನ್ನು ಇಲ್ಲಿ "ಸ್ಕಿಯಾನ್‌ ಸೊಸೈಟೀಸ್" -ಆಫ್‌ಶೂಟ್ಸ್-ಆಫ್‌ ದಿ ಬೇಕರ್‌ ಸ್ಟ್ರೀಟ್‌ ಇರ್ರೆಗ್ಯುಲರ್ಸ್‌" ಎಂದು ಕರೆಯಲಾಗುತ್ತದೆ) ನಂತರ ಇಂಗ್ಲೆಂಡ್ ಹಾಗೂ ಡೆನ್‌ಮಾರ್ಕ್‌ನಲ್ಲಿ ಸ್ಥಾಪನೆಯಾದವು. ಇತ್ತೀಚಿನ ದಿನಗಳಲ್ಲಿ, ಹಲವು ದೇಶಗಳಲ್ಲಿ ಷರ್ಲಾಕಿಯನ್‌ ಸೊಸೈಟಿಗಳು ಹುಟ್ಟಿಕೊಂಡಿವೆ. ಅದರಲ್ಲೂ ಇದೇ ರೀತಿ ಚಟವುಟಿಕೆಗಳ ಇತಿಹಾಸವನ್ನು ಹೊಂದಿರುವ ಭಾರತ ಮತ್ತು ಜಪಾನ್‌ನಂತಹ ಪ್ರಮುಖ ದೇಶಗಳಲ್ಲೂ ಈ ಸೊಸೈಟಿಗಳು ರಚನೆಯಾಗಿವೆ.

ವಸ್ತು ಸಂಗ್ರಹಾಲಯಗಳು

1951ರ ಬ್ರಿಟನ್‌ ಉತ್ಸವದ ಸಮಯದಲ್ಲಿ, ಷರ್ಲಾಕ್‌ ಹೋಮ್ಸ್‌ ಕುಳಿತುಕೊಳ್ಳುವ ಕೊಠಡಿ ಷರ್ಲಾಕ್‌ ಹೋಮ್ಸ್ ವಸ್ತುಪ್ರದರ್ಶನದ ಮೇರು ಕೃತಿಯಂತೆ ಮರುನಿರ್ಮಾಣವಾಯಿತು. ಇದರಲ್ಲಿ ಹೋಮ್ಸ್‌ಗೆ ಸಂಬಂಧಿಸಿದ ಮೂಲ ಮತ್ತು ವಿಶಿಷ್ಟ ವಸ್ತುಗಳನ್ನು ಪ್ರದರ್ಶನಕ್ಕಿಡಲಾಯಿತು.

1951ರ ಪ್ರದರ್ಶನ ಮುಗಿದ ನಂತರ, ಲಂಡನ್‌‌ನಲ್ಲಿರುವ ಷರ್ಲಾಕ್‌ ಹೋಮ್ಸ್‌ ಪಬ್‌ಗೂ ಮತ್ತು ಲ್ಯೂಸೆನ್ಸ್‌ನಲ್ಲಿರುವ(ಸ್ವಿಡ್ಜರ್‌ಲೆಂಡ್‌)ಕಾನನ್‌ ಡಾಯ್ಲ್‌ ಅವರ ಸಂಗ್ರಹಾಗಾರಕ್ಕೆ ಅಲ್ಲಿನ ಎಲ್ಲ ವಸ್ತುಗಳನ್ನು ಸ್ಥಳಾಂತರಿಸಲಾಯಿತು.

ಎರಡೂ ಪ್ರದರ್ಶನಗಳು ತಮ್ಮದೇ ಆದ ಸ್ವಂತ ಬೇಕರ್‌ ಸ್ಟ್ರೀಟ್‌ನಲ್ಲಿನ ಕುಳಿತುಕೊಳ್ಳುವ ಕೊಠಡಿಗಳ ಮರುನಿರ್ಮಾಣವನ್ನು ಒಳಗೊಂಡಂತೆ ಇಂದಿಗೂ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿವೆ.

1990ರಲ್ಲಿ, ಷರ್ಲಾಕ್‌ ಹೋಮ್ಸ್‌ ವಸ್ತುಸಂಗ್ರಹಾಲಯ ಲಂಡನ್‌ನ ಬೇಕರ್ ಸ್ಟ್ರೀಟ್‌ನಲ್ಲಿ ತೆರೆಯಲಾಯಿತು. ಅದೇ ವರ್ಷ ಸ್ವಿಡ್ಜರ್‌ಲೆಂಡ್‌ನ ಮೀರಿಂಜೆನ್‌ನಲ್ಲಿ ಮತ್ತೊಂದು ವಸ್ತುಸಂಗ್ರಹಾಲಯ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಯಿತು. ಇವೆರಡರಲ್ಲೂ ಸಹಜವಾಗಿ ಷರ್ಲಾಕ್‌ ಹೊಮ್ಸ್‌ಗಿಂತ ಕಾನನ್ ಡಾಯ್ಡ್‌ಗೆ ಸಂಬಂಧಿಸಿದ ಐತಿಹಾಸಿಕ ವಸ್ತುಗಳು ಕಡಿಮೆ ಇದ್ದವು. ಕಲ್ಪಿತ ಪಾತ್ರವೊಂದಕ್ಕೆ ಅರ್ಪಣೆಯಾದ ವಿಶ್ವದ ಮೊಟ್ಟ ಮೊದಲ ವಸ್ತುಸಂಗ್ರಹಾಲಯವೆಂದರೆ ಅದು ಲಂಡನ್‌ನ ಬೇಕರ್‌ ಸ್ಟ್ರೀಟ್‌ನಲ್ಲಿರುವ ಷರ್ಲಾಕ್‌ ಹೋಮ್ಸ್‌ ವಸ್ತುಸಂಗ್ರಹಾಲಯ.

ರೂಪಾಂತರಗಳು

ವ್ಯಾಸಿಲಿ ಲಿವನೋಫ್‌ ಸೋವಿಯತ್‌ ಟಿವಿ ಸರಣಿಯಲ್ಲಿ ಷರ್ಲಾಕ್‌ ಹೋಮ್ಸ್‌ ನಿರೋಪಣಗಾಗಿ OBE ಪ್ರಶಸ್ತಿಗೆ ಪಾತ್ರರಾದರು.

=

ಮೂಲ ಕಥೆಗಳ ರೂಪಾಂತರಗಳು ===

ಷರ್ಲಾಕ್‌ ಹೋಮ್ಸ್‌ನ ಹೆಚ್ಚುತ್ತಿರುವ ಜನಪ್ರಿಯತೆ ಕಾನನ್‌ ಡಾಯ್ಲ್‌ ಬರಹಕ್ಕೆ ಹಲವು ಹಂತಗಳ ರೂಪಾಂತರ ಮತ್ತು ಸಿನಿಮೀಯ ಪರಿವರ್ತನೆಗೆ ಕಾರಣವಾಯಿತು.

70ಕ್ಕಿಂತ ಹೆಚ್ಚಿನ ನಟರು 200ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಈ ಪಾತ್ರವನ್ನು ವಹಿಸುವುದರೊಂದಿಗೆ ಷರ್ಲಾಕ್‌ ಹೋಮ್ಸ್‌ "ಹೆಚ್ಚು ಚಿತ್ರಿಸಲಾದ ಚಲನಚಿತ್ರದ ಪಾತ್ರ" ಎಂದು ಗಿನ್ನೆಸ್‌ ವರ್ಲ್ಡ್ ರೆಕಾರ್ಡ್ಸ್ (=ಗಿನ್ನೆಸ್‌ ವಿಶ್ವ ದಾಖಲೆ) ಸ್ಷಷ್ಟವಾಗಿ ದಾಖಲಿಸಿದೆ.

ವಿಲಿಯಂ ಗಿಲ್ಲೆಟ್‌ ಅವರ ನಾಟಕ ಷರ್ಲಾಕ್‌ ಹೋಮ್ಸ್‌ ಅಥವಾ ದಿ ಸ್ಟ್ರೇಂಜ್‌ ಕೇಸ್‌ ಆಫ್ ಮಿಸ್‌ ಫೌಲ್ನರ್‌ ಸಾಹಸವೊಂದರ ನಾಟಕ ರೂಪವಲ್ಲ. ಬದಲಿಗೆ ಎ ಸ್ಕ್ಯಾಂಡಲ್‌ ಇನ್‌ ಬೊಹೇಮಿಯ , ದಿ ಫೈನಲ್‌ ಪ್ರಾಬ್ಲಮ್‌ ನಿಂದ ಹೋಮ್ಸ್‌-ಮೋರಿಯಾರಿಟಿ ಎಕ್ಸ್‌ಚೇಂಜ್‌, ತನಕ ಹಾಗೂ ದಿ ಚಾಪರ್‌ ಬೀಚಸ್‌ ಮತ್ತು ಎ ಸ್ಟಡಿ ಇನ್‌ ಸ್ಕಾರ್ಲೆಟ್‌ ನ ಕೆಲವಂಶಗಳನ್ನು ಆಧರಿಸಿದ ಹಲವು ನಾಟಕಗಳ ಸಮನ್ವಯ. ಈ ನಾಟಕ 1916ರಲ್ಲಿ ಗಿಲ್ಲೆಟ್‌ ನಿರ್ಮಿಸಿದ ಷರ್ಲಾಕ್‌ ಹೋಮ್ಸ್‌ ಚಲನಚಿತ್ರಕ್ಕೆ ' ಅಡಿಪಾಯವನ್ನು ಒದಗಿಸಿತು.

ಬ್ಯಾಸಿಲ್‌ ರಾತ್‌ಬೋನ್‌ ಷರ್ಲಾಕ್‌ ಹೋಮ್ಸ್‌ ಪಾತ್ರಧಾರಿಯಾಗಿ ಮತ್ತು ನೈಜೆಲ್‌ ಬ್ರೂಸ್‌ ಡಾ|ವ್ಯಾಟ್ಸನ್‌ ಆಗಿ ಹದಿನಾಲ್ಕು ಚಿತ್ರಗಳಲ್ಲಿ (ಎರಡು 20ಯತ್‌ ಸೆಂಚುರಿ ಫಾಕ್ಸ್‌ ಸಂಸ್ಥೆಗೆ ಮತ್ತು ಒಂದು ಡಜನ್‌ನಷ್ಟು ಯೂನಿವರ್ಸಲ್‌ ಪಿಕ್ಚರ್ಸ್‌ಗೆ).ಇದಲ್ಲದೆ 1939-1946ರತನಕ ಹಲವಾರು ರೇಡಿಯೋ ನಾಟಕಗಳಲ್ಲಿ ಮೆರೆದರು. ಜಾನ್‌ ಹಾಕ್ಸ್‌ವರ್ಥ್‌ ಬ್ರಿಟನ್‌ನ ಗ್ರ್ಯಾನಡ ಟೆಲಿವಿಷನ್‌ಗೆ 1984ರಿಂದ 1994ರವರೆಗೆ ರಚಿಸಿದ "ದಿ ಅಡ್ವೆಂಚರ್ಸ್ ಆಫ್‌ ಷರ್ಲಾಕ್‌ ಹೋಮ್ಸ್‌" ನ ನಾಲ್ಕು ಸರಣಿಗಳು ಮತ್ತು ಹಲವು ನಾಟಕ ಪ್ರದರ್ಶನಗಳಲ್ಲಿ ನಟಿಸಿರುವ ಜೆರ್ಮಿ ಬ್ರೆಟ್‌ ಇತ್ತೀಚಿನ ದಿನಗಳ ನಿರ್ಣಾಯಕ ಹೋಮ್ಸ್ ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಬ್ರೆಟ್‌ ಅವರ ಈ ಸರಣಿಗಳಲ್ಲಿ ಡಾ|ವ್ಯಾಟ್ಸನ್‌ ಪಾತ್ರವನ್ನು ಡೇವಿಡ್‌ ಬ್ರೂಕ್ ಮತ್ತು ಎಡ್ವರ್ಡ್‌ ಹಾರ್ಡ್‌ವಿಕ್‌ನಿರ್ವಹಿಸಿದ್ದಾರೆ.

1979 ಮತ್ತು 1986ರ ನಡುವೆ ಸೋವಿಯತ್‌ ಟೆಲಿವಿಷನ್‌ ದೂರದರ್ಶನಕ್ಕಾಗಿಯೇ ರೂಪಿಸಿದ ದಿ ಅಡ್ವೆಂಚರ್‌ ಆಫ್‌ ಷರ್ಲಾಕ್‌ ಹೋಮ್ಸ್‌ ಮತ್ತು ಡಾ|ವ್ಯಾಟ್ಸನ್‌ ಐದು ಚಿತ್ರ ಸರಣಿಗಳನ್ನು ಪ್ರಸಾರ ಮಾಡಿತು. ಇವುಗಳಲ್ಲಿ ವ್ಯಾಸಿಲಿ ಲಿವನೋಫ್‌ ಹೋಮ್ಸ್‌‌ ಪಾತ್ರಧಾರಿಯಾಗಿಯೂ ಮತ್ತು ವಿಟಲಿ ಸೋಲೋಮಿನ್‌ ವ್ಯಾಟ್ಸನ್‌ ಪಾತ್ರಧಾರಿಯಾಗಿಯೂ ಅಭಿನಯಿಸಿದರು. ಒಟ್ಟು ಹನ್ನೊಂದು ಭಾಗಗಳನ್ನು ಒಳಗೊಂಡಿದ್ದ ಈ ಸರಣಿಗಳು ಲೆನ್‌ಫಿಲ್ಮ್‌ ಮೂವಿ ಸ್ಟುಡಿಯೋದಲ್ಲಿ ನಿರ್ಮಾಣಗೊಂಡವು.

ಲಿಯೋನೆಲ್‌ ವಿಗ್ರಾಮ್ ರಚಿಸಿದ ಕಣ್ಣಿಗೆ ಕಟ್ಟಿಕೊಡುವಂಥ ಕಾದಂಬರಿಯನ್ನು ಆಧರಿಸಿದ ಷರ್ಲಾಕ್‌ ಹೋಮ್ಸ್‌ ಚಿತ್ರ 2009ರಲ್ಲಿ ನಿರ್ಮಾಣವಾಯಿತು.ಗೈ ರಿಚೀ ನಿರ್ದೇಶಿಸಿದ ಈ ಚಿತ್ರದಲ್ಲಿ ಹೆಚ್ಚಿನ ಗಮನವನ್ನುಮಾರ್ಷಲ್‌ ಸಮರಕಲೆಯ ಸಾಮರ್ಥ್ಯದ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಇದರಲ್ಲಿ ಜೂ.ರಾಬರ್ಟ್ ಡೌನಿ ಹೋಮ್ಸ್‌ ಪಾತ್ರವನ್ನು ನಿರ್ವಹಿಸಿದರು.

=

ಅನ್ಯರಿಂದ ಹೋಮ್ಸ್‌ ಪಾತ್ರ ಬಳಕೆ === [[|thumb| ಮಾಸ್ಕೋ, ಸ್ಮೋಲೆನ್ಸ್ಕ್‌ ಕ್ವೇ: ಅ ಸ್ಕಲ್ಪ್ಚರಲ್‌ ಕಾಂಪೋಸಿಷನ್ ಷರ್ಲಾಕ್‌ ಹೋಮ್ಸ್‌ ಮತ್ತು ಡಾಕ್ಟರ್ ವ್ಯಾಟ್ಸನ್‌ ]]

ಷರ್ಲಾಕ್‌ ಹೋಮ್ಸ್‌ಎಂಬ ಕಾಲ್ಪನಿಕ ರಚನೆಯನ್ನು ಕುರಿತು ಮತ್ತಷ್ಟು ಹೇಳುವುದಾದರೆ, ಕಾನನ್‌ ಡಾಯ್ಲ್‌ ಅವರ "ದಿ ಲಾಸ್ಟ್‌ ಸ್ಪೆಷಲ್‌" (1898) ತನ್ನ ಓದುಗರಿಂದ ತಾನು ಹೋಮ್ಸ್‌ ಎಂದು ಗುರ್ತಿಸಿಕೊಳ್ಳಲು ಬಯಸುವ ಅನಾಮಧೇಯ "ಹವ್ಯಾಸಿ ತಾರ್ಕಿಕ"ನನ್ನು ಒಳಗೊಂಡಿದೆ.

ಆತನ ಪ್ರಕಾರ ದಿಗ್ಭ್ರಮೆ ಮೂಡಿಸುವಂತೆ ಅಗೋಚರನಾಗಿಬಡುವುದು ಹೋಮ್ಸ್‌ನ ವಿಶಿಷ್ಟ ಪಾತ್ರ ಶೈಲಿಗೆ ತಕ್ಕುದಾದದ್ದಲ್ಲ.ಕಾನನ್‌ ಡಾಯ್ಲ್‌ ತಾನೇ ಸೃಷ್ಟಿಸಿದ ನಾಯಕನ ವಿಷಯದಲ್ಲಿ ಮೂಗುತೂರಿಸಿ ಮಾತಾಡಲು ಸ್ವತಂತ್ರನಿದ್ದಾನೆ. ಅದೇ ರೀತಿಯ ಕಲ್ಪನೆಯನ್ನು ಅನುಸರಿಸಿ ಕಾನನ್‌ ಡಾಯ್ಲ್‌ ಬರೆದ ಒಂದು ಸಣ್ಣ ಕಥೆ "ದಿ ಮ್ಯಾನ್‌ ವಿತ್‌ ದಿ ವಾಚಸ್‌" "ಹೌ ವ್ಯಾಟ್ಸನ್‌ ಲರ್ನ್‌ಡ್‌ ದಿ ಟ್ರಿಕ್‌" (1924),ಕಥೆಯಲ್ಲಿ ಮತ್ತೆ ಮತ್ತೆ ವ್ಯಾಟ್ಸನ್‌-ಹೋಮ್ಸ್‌ ಅವರ ಉಪಾಹಾರ ಮೇಜಿನ ದೃಶ್ಯಗಳಲ್ಲಿ ಕಂಡು ಬರುವ ವಿಡಂಬನೆ ಕಾನನ್‌ ಡಾಯ್ಲ್‌ರ ಹಾಸ್ಯ ಪ್ರಜ್ಞೆಗೆ ಮತ್ತೊಂದು ಉದಾಹರಣೆ. ಕಾನನ್‌ ಡಾಯ್ಲ್‌ರ ಮುಂದಿನ (ಹಾಗೂ ಆರಂಭಿಕ)ವಿಡಂಬನೆಯಿಂದ ತುಂಬಿದ ಬರಹ "ದಿ ಫೀಲ್ಡ್‌ ಬಜಾರ್‌"ಇವರು ಷರ್ಲಾಕ್‌ ಹೋಮ್ಸ್‌ನನ್ನು ಒಳಗೊಂಡ ಇನ್ನೂ ಹಲವು ಕೃತಿಗಳನ್ನು ವಿಶೇಷವಾಗಿ ನಾಟಕಗಳನ್ನು ಬರೆದಿದ್ದಾರೆ.

ಈ ಲೇಖನಗಳಲ್ಲಿ ಹಲನ್ನು ಜಾಕ್‌ ಟ್ರೇಸಿ ಸಂಪಾದಿಸಿರುವ ಷರ್ಲಾಕ್‌ ಹೋಮ್ಸ್‌: ದಿ ಪಬ್ಲಿಷ್ಡ್‌‌ ಅಪೋಕ್ರಿಫ , ಪೀಟರ್‌ ಹೈನಿಂಗ್‌ ಸಂಪಾದಿಸಿರುವ ದಿ ಫೈನಲ್‌ ಅಡ್ವೆಂಚರ್‌ ಆಫ್‌ ಷರ್ಲಾಕ್‌ ಹೋಮ್ಸ್ ಮತ್ತು ರಿಚರ್ಡ್‌ ಲ್ಯಾನ್ಸೆಲಿನ್‌ ಗ್ರೀನ್‌ ಸಂಪಾದಿಸಿರುವ ದಿ ಅನ್‌ಕಲೆಕ್ಟೆಡ್‌ ಷರ್ಲಾಕ್‌ ಹೋಮ್ಸ್ ಎಂಬ ಸಂಕಲಗಳಲ್ಲಿ ಸೇರಿವೆ.

1907ರಲ್ಲಿ ಜರ್ಮನ್‌ ಕಿರುಹೊತ್ತಿಗೆಯ ಸರಣಿಗಳಲ್ಲಿ ಷರ್ಲಾಕ್‌ ಹೋಮ್ಸ್‌ ಪಾತ್ರ ಕಾಣಿಸಿಕೊಳ್ಳಲು ಆರಂಭಿಸಿತು. ಥಿಯೋ ವ್ಯಾನ್‌ ಬ್ಲ್ಯಾಂಕೆನ್‌ಸೀ ಕೂಡ ಈ ಬರಹಗಾರರಲ್ಲಿ ಒಬ್ಬರು. ಬೇಕರ್‌ ಸ್ಟ್ರೀಟ್‌ ಇರ್ರೆಗ್ಯುಲರ್ಸ್‌ ತಂಡದಲ್ಲಿ ಒಬ್ಬನಾದ 19ರ ಹರೆಯದ ಸಹಾಯಕ ಹ್ಯಾರಿ ಟ್ಯಾಕ್ಸೋನ್‌ ಎಂಬಾತ ವ್ಯಾಟ್ಸನ್‌ ಸ್ಥಾನಕ್ಕೆ ಪ್ರತಿಷ್ಠಾಪಿತನಾದ ಮತ್ತು ಶ್ರೀಮತಿ| ಹಡ್ಸನ್‌ ಅವರ ಸ್ಥಾನವನ್ನು ಶ್ರೀಮತಿ| ಬೋನೆಟ್‌ ಅಲಂಕರಿಸಿದಳು. ನಂ.10ರಿಂದ ಸರಣಿಯ ಹೆಸರು "ಆಸ್‌ ಡೆನ್‌ ಗೆಹೆಇಮಾಕ್ಟೆನ್‌ ಡೆಸ್‌ ವೆಲ್ಟ್‌-ಡಿಟೆಕ್ಟಿವ್ಸ್" ಎಂದು ಬದಲಾಯಿತು. ಫ್ರೆಂಚ್‌ ಆವೃತ್ತಿ ತನ್ನ ಹೆಸರನ್ನು "ಲೆಸ್‌ ಡಾಸ್ಸಿಯರ್ಸ್‌‌ ಸೀಕ್ರೆಟ್ಸ್‌ ಡೆ ಷರ್ಲಾಕ್ ಹೋಮ್ಸ್"ನಿಂದ "ಲೆಸ್‌ ಡಾಸ್ಸಿಯರ್ಸ್‌‌ ಡು ರಾಯ್‌ ಡೆಸ್‌ ಡಿಟೆಕ್ಟಿವ್ಸ್"ಗೆ ಬದಲಿಸಿಕೊಂಡಿತು.[೨೬]

ಷರ್ಲಾಕ್‌ ಹೋಮ್ಸ್‌ಗೆ ಇದ್ದ ಅದ್ಭುತ ಕಾದಾಡಬಲ್ಲ ಸಾಮಥ್ಯ ಮತ್ತು ಶ್ರೇಷ್ಠ ತಾರ್ಕಿಕ ಶಕ್ತಿಯನ್ನು ಹಲವಾರು ಲೇಖಕರು ತಮ್ಮ ಕೃತಿಗಳಲ್ಲಿ ಅನಾಮತ್ತಾಗಿ ಎತ್ತಿ ಬಟ್ಟಿ ಇಳಿಸಿದರು.ತಾವು ರಚಿಸಿದ ಕೃತಿಯ ಕಥಾ ಹಂದರದಲ್ಲಿ ಹೋಮ್ಸ್‌ನ ಸಾಹಸಗಳನ್ನು ದುಡಿಸಿಕೊಂಡರು. ಹೋಮ್ಸ್‌ನ ಕೋಕೇನ್‌ ವ್ಯಸನ, ಮಾಕದವಸ್ತು ಸೇವನೆ ಇವನಲ್ಲಿ ಸೃಷ್ಟಿಸಿದ ಕಲ್ಪನಾ ಲೋಕ, ) ಮುಗ್ಧ ಪ್ರೊಫೆಸರ್‌ ಮೋರಿಯಾರ್ಟಿಯನ್ನು ಮಹಾ ಖಳನಂತೆ ಬಿಂಬಿಸಿ ((ದಿ ಸೆವೆನ್‌-ಪರ್‌-ಸೆಂಟ್‌ ಸಲ್ಯೂಷನ್‌)ನೆಲಕ್ಕುರುಳಿಸುವಂತೆ ಮಾಡಿದ್ದು, ವಿಜ್ಞಾನದ ಕಲ್ಪಿತ ಕಥೆಗಳಲ್ಲಿ ಇವನನ್ನು ಬರಮಾಡಿಕೊಂಡು ಇವನ ಮರಣಾ ನಂತರವೂ ಭವಿಷ್ಯದಲ್ಲಿ (' (22ನೇ ಶತಮಾನದಲ್ಲಿ ಷರ್ಲಾಕ್‌ ಹೋಮ್ಸ್) ‌) ಅಪರಾಧದ ವಿರುದ್ಧ ಹೋರಾಡಲು ಮರುಸೃಷ್ಟಿಸುವಂಥ ಸನ್ನಿವೇಶಗಳನ್ನು ಈ ಸರಣಿಗಲು ದುಡಿಸಿಕೊಂಡವು.

1981ರಲ್ಲಿ ಟೋಕ್ಯೋ ಮೋವಿ ಶಿನ್ಷ ಮತ್ತು ಇಟಾಲಿಯನ್ ಟೆಲಿವಿಷನ್ ಜಾಲ RAI ಹೋಮ್ಸ್‌ನನ್ನು ಆಧರಿಸಿ ಮೀ ಟಾಂಟೀ ಹೋಮುಸು (ದಿ ಫೇಮಸ್‌ ಡಿಟೆಕ್ವಿವ್‌ ಹೋಮ್ಸ್) ಎಂಬ ಆನಿಮೇಟೆಡ್‌ ಜಾಪಾನೀಸ್‌ ಟೆಲಿವಿಷನ್‌ ಸರಣಿಯನ್ನು ನಿರ್ಮಿಸಲು ಒಪ್ಪಿದವು. ಈ ಸರಣಿಯಲ್ಲಿ ಇಲ್ಲಿನ ಪಾತ್ರಗಳನ್ನು ಎಡ್ವರ್ಡ್ ಕಾಲದ ಇಂಗ್ಲೆಂಡ್‌ನ ನಾಯಿಗಳಂತೆ ಮಾಡಿ ಚಿತ್ರಿಸಲಾಯಿತು. ಸರ್‌ ಆರ್ಥರ್‌ ಕಾನನ್‌ ಡಾಯ್ಲ್‌ರ ಹಕ್ಕುಸ್ವಾಮ್ಯದ ವಿಚಾರದಲ್ಲಿ ತಲೆದೋರಿದ ವ್ಯಾಜ್ಯದ ಕಾರಣದಿಂದ ಈ ಸರಣಿಯ ನಿರ್ಮಾಣ 1984ರವರೆಗೆ ಆರಂಭವಾಗಲಿಲ್ಲ. ಸರಣಿಯ ಇಪ್ಪಾತ್ತಾರು ಪ್ರಸಂಗಗಳು ಜಾಪಾನ್‌ನಲ್ಲಿ ನವೆಂಬರ್‌ 6, 1984 ಮತ್ತು ಮೇ 20, 1985ರ ನಡುವೆ ಪ್ರಸಾರವಾದವು. ಕೆಲವು ಪ್ರಸಂಗಗಳು ಕಾನನ್‌ ಡಾಯ್ಲ್‌ ಅವರ ಕಥೆಗಳನ್ನು (ಉದಾಹರಣೆಗೆ, "ದಿ ಅಡ್ವೆಂಚರ್‌ ಆಫ್‌ ದಿ ಬ್ಲೂ ಕಾರ್ಬಂಕಲ್‌" ಮತ್ತು "ಸಿಲ್ವರ್‌ ಬ್ಲೇಜ್‌") ಆಧರಿಸಿದ್ದಾದರೆ ಮತ್ತೆ ಕೆಲವು ಮೂಲ ಕಥೆಗಳನ್ನು ಆಧರಿಸಿ ನಿರ್ಮಾಣಗೊಂಡಿದ್ದವು.

ಆರು ಪ್ರಸಂಗಗಳನ್ನು ಹಯಾವೋ ಮಿಯಸಾಕಿ ನಿರ್ದೇಶಿಸಿದರು. ಇವರು ಮುಂದೆ ಕೆಲವು ಪ್ರಸಂಗಗಳನ್ನೂ ಬರೆದರು. ಸ್ಲ್ಯಾಪ್‌ಸ್ಟಿಕ್‌, ಗುಂಪಿನ ದೃಶ್ಯಗಳು, ಯಾಂತ್ರಿಕ ವಾಹನಗಳನ್ನು ಬೆನ್ನಟ್ಟುವ ದೃಶ್ಯಗಳು ಮತ್ತು ಪ್ರಭಲ ಸ್ತ್ರೀ ಪಾತ್ರಗಳನ್ನು ಒಳಗೊಂಡ ಸರಣಿ ಒಟ್ಟಾರೆ ಮಿಯಸಾಕಿಯವರ ಆ ಕಾಲದ ಆನಿಮೇಷನ್‌ ಅನ್ನು ಪ್ರತಿಬಿಂಬಿಸಿದವು. ಮಿಯಾಸಾಕಿ ನಿರ್ದೇಶಿಸಿದ ಪ್ರಸಂಗಗಳು ಕೆಲವೊಮ್ಮೆ ಮಾರ್ಪಾಟಿಗೆ ಒಳಪಟ್ಟಿವೆ;ಉದಾಹರಣೆಗೆ ಹೋಮ್ಸ್‌ನ ಮನೆಯೊಡತಿ ಶ್ರೀಮತಿ| ಹಡ್ಸನ್‌ ಅನ್ನು ತುಂಬು ಯೌವ್ವನದ ನಾರಿಯನ್ನಾಗಿಯೂ, ರೋಮಾಂಚಕಾರಿ ಮತ್ತು ಕ್ರಿಯಾಶೀಲ ಮುಖ್ಯಪಾತ್ರವನ್ನಾಗಿಯೂ ಚಿತ್ರಿಸಲಾಗಿದೆ. ಹನ್ನೆರಡು ಪ್ರಸಂಗಗಳಲ್ಲಿ ಷರ್ಲಾಕ್‌ ಹೌಂಡ್‌ ಎಂಬ ಹೆಸರಿನಲ್ಲಿ ಇಂಗ್ಷೀಷ್‌ಗೆ ಅನುವಾದ ಮಾಡಲಾಗಿದೆ.

ನಿಸ್ಸಂದೇಹವಾಗಿ, ಜನಪ್ರಿಯ ಕಾರ್ಟೂನ್‌ ಪಾತ್ರಗಳಾದ ಮ್ಯಾಂಗ ಮತ್ತು ಆನಿಮ್‌ ಕಾನನ್‌ ಪತ್ತೆದಾರಿ http://www.detectiveconanworld.com/wiki/Main_Page,ಇದು ಇತ್ತೀಚೆಗೆ ಶ್ರೇಷ್ಠ ಮತ್ತು ಜನಪ್ರಿಯ ಕೃತಿ. ಕಾನನ್‌ ದಿ ಡಿಟೆಕ್ಟಿವ್‌ (名探偵コナン , ಮೀಟಾಂಟೀ ಕೋನನ್‌, ಲಿಟ್‌ ಮಹಾ ಪತ್ತೆದಾರಿ ಕಾನನ್‌?) ಜಪಾನಿನ ಪತ್ತೆದಾರಿ ಮ್ಯಾಂಗ ಸರಣಿಯಾಗಿದ್ದು, ಇದನ್ನು ಗೋಶೋ ಓಯಾಮ ಅವರು ನಿರ್ದೇಶಿಸಿ ಚಿತ್ರೀಕರಿಸಿದ್ದಾರೆ. ಇವು ಶೋನೆನ್‌ ಸಂಡೆಯಲ್ಲಿ 1994ರಿಂದ ಸರಣಿಯಾಗಿ ಪ್ರಕಟವಾಗುತ್ತಿವೆ.

ಇದೊಂದು ಆನಿಮ್‌ ಸರಣಿಯಾಗಿದ್ದು, ಟೋಕ್ಯೋ ಮೋವಿ ಶಿನ್ಷ ಅಂಬ ಆನಿಮೇಷನ್‌ ಸ್ಟುಡಿಯೋ ಇದನ್ನು ನಿರ್ಮಿಸಿದ್ದಾರೆ, ಕೆಂಜಿ ಕೊಡಾಮ ಮತ್ತು ತಾಲಿಚಿರೋ ಯಮಮೋಟೋ ನಿರ್ದೇಶಿಸಿದ್ದಾರೆ. ಇದು ಜಪಾನ್‌ನಲ್ಲಿ ನಿಪ್ಪಾನ್ ಟೆಲಿವಿಷನ್‌, ಯೊಮುರಿ ಟಿವಿ ಮತ್ತು ಆನಿಮ್ಯಾಕ್ಸ್‌ನಲ್ಲಿ ಪ್ರಸಾರವಾಯಿತು. ಈ ಸರಣಿಯ ಮೊದಲ ಪ್ರದರ್ಶನ ಜನವರಿ 8, 1996ರಂದು ಪ್ರಸಾರವಾಯಿತು ಮತ್ತು ಮೇ 9, 2009ರ ವೇಳೆಗೆ 533 ಪ್ರಸಂಗಗಳು ಪ್ರಸಾರವಾಗಿವೆ. ಈ ಸರಣಿಗಳು ಜಪಾನ್‌ನಲ್ಲಿ ಪ್ರಸಾರವಾಗ ತೊಡಗಿದಾಗಿನಿಂದ ಮ್ಯಾಂಗ ಮತ್ತು ಆನಿಮ್‌ ಎಂಬ ಎರಡೂ ಸ್ವರೂಪದಲ್ಲಿ ಅತ್ಯುನ್ನತ ಮಟ್ಟದ ಜನಪ್ರಿಯತೆಯನ್ನು ಗಳಿಸಿವೆ. ಅಲ್ಲದೆ ಏಪ್ರಿಲ್‌ 17, 1997ರಂದು ಮೊದಲು ಬಿಡುಗಡೆಯಾಗುವುದರೊಂದಿಗೆ ಹನ್ನೆರಡು ಗೋಲ್ಡನ್‌ ವೀಕ್‌ ಮೂವೀಗಳಲ್ಲಿ ಅಳವಡಿಕೆಯಾದವು. ಹಾಗೂ ಆಗಿನಿಂದ ಪ್ರತಿ ವರ್ಷ ಒಂದು ಚಿತ್ರ ಬಿಡುಗಡೆಯಾಗುತ್ತದೆ. ಪ್ರದರ್ಶನಗೊಂಡ ವರ್ಷದಲ್ಲೇ ಹತ್ತು ಚಲನಚಿತ್ರಗಳು ಟಾಪ್‌ 10 ಬಾಕ್ಸ್‌ ಆಫೀಸ್‌ ಸ್ಥಾನವನ್ನು ಪಡೆದವು ಇದರ ಜೊತೆಗೆ ಒಂಭತ್ತು ಮೂಲ ವಿಡಿಯೋ ಆನಿಮೇಷನ್‌ಗಳು ಬಿಡುಗಡೆಯಾಗಿವೆ. ಏಪ್ರಿಲ್‌ 2009ರ ವೇಳೆಗೆ ಅರವತ್ತಾರು ಸಂಪುಟಗಳು ಜಪಾನನಲ್ಲಿ ಬಿಡುಗಡೆಯಾಗಿವೆ.

ಮುಖ್ಯ ಪಾತ್ರದ ಹೆಸರು ಕಾನನ್‌.ಇದು ಕಾನನ್‌ ಡಾಯ್ಲ್‌ನಿಂದ ನೇರವಾಗಿ ಎತ್ತಿಕೊಂಡದ್ದೆಂದು ಹೇಳುತ್ತದೆ. ಸಹಿ ಇರುವ ಟೋಪಿ ಹೊಂದಿರುವ ಈ ಹುಡುಗನ ಉಡುಗೆ-ತೊಡುಗೆ ಮತ್ತು ಛಾಯಾಕೃತಿಗಳೆಲ್ಲ ಹೋಮ್ಸ್‌ನ ಪ್ರತಿರೀಪವೇ ಆಗಿವೆ. ಅದೂ ಅಲ್ಲದೆ ಮುಖ್ಯ ಪಾತ್ರಗಳು ಭೇಟಿ ನೀಡುತ್ತಿದ್ದ ಚೈನೀಸ್‌ ರೆಸ್ಟೋರೆಂಟ್‌ಗಳು ಚೀನೀ ಭಾಷೆ ಅಥವಾ ಜಪಾನೊನ ಕಂಜಿ ಭಾಷೆಗಳಲ್ಲಿ [柯南道爾]ಎಂದು ಕರೆಯಲಾಗುತ್ತದೆ. ಇದು ಸ್ಪಷ್ಟವಾಗಿ ಕಾನನ್‌ ಡಾಯ್ಡ್‌ ಹೆಸರಿನ ಜಪಾನಿ ಮತ್ತು ಚೀನಿ ಭಾಷಾಂತರವಾಗಿದೆ. ಇಷ್ಟೇ ಅಲ್ಲದೆ 'ರಿಟರ್ನ್‌ ಆಫ್‌ ಷರ್ಲಾಕ್‌ ಹೋಮ್ಸ್‌'ನಲ್ಲಿರುವ ದಿ ಎಮ್‌ಟಿ ರೂಮ್‌ನಂತೆ ಮುಚ್ಚಿರುವ ಕೋಠಡಿಯಲ್ಲಿರುವಂತೆ ಸಾವು ಮ್ಯಾಂಗ ಸರಣಿಯಲ್ಲಿ ಮೆಚ್ಚಿನ ವಸ್ತುವಾಗಿದೆ ಮತ್ತು ಪದೇ ಪದೇ ಪುನರ್‌ ಬಳಕೆಯಾಗಿದೆ. ಅಲ್ಲದೆ ಜಪಾನಿನ ಇತರೆ ಪತ್ತೆದಾರಿ ಮತ್ತು ತೀವ್ರ ಕುತೂಹಲ ಭರಿತ ಚಿತ್ರಗಳು ಮತ್ತು ಕಿಂಡಾಯ್ಚಿ[金田一少年の事件簿]ಯಂತಹ ಟಿವಿ ಸರಣಿಗಳಲ್ಲೂ ಇದೇ ರೀತಿಯ ತಂತ್ರ ಹೆಚ್ಚು ಜನಪ್ರಿಯ. http://en.wikipedia.or/wiki/Kindaichi_Case_Files

ಅಪ್ರಕಟಿತ ಕೇಸ್‌ಗಳಿಗೆ ಕಾನನ್‌ನಲ್ಲಿ ಪ್ರಸ್ತಾಪವಾಗಿರುವ ಪೀಡಿಸುವ ಸಂಗತಿಗಳಿಗೆ ಕೆಲವು ಲೇಖಕರು ಕಥೆಗಳನ್ನು ಒದಗಿಸಿದ್ದಾರೆ. (ಉದಾ: "

"ದಿ ಅಡ್ವೆಂಚರ್‌ ಆಫ್‌ ದಿ ಸಸ್ಸೆಕ್ಸ್‌ ವ್ಯಾಂಪೈರ್‌" ನಲ್ಲಿ ಬರುವ "ದಿ ಜಿಯಂಟ್‌ ರ್ಯಾಟ್‌ ಆಫ್‌ ಸುಮಾತ್ರಾ, ಅ ಸ್ಟೊರಿ ಫಾರ್‌ ವಿಚ್‌ ದಿ ವರ್ಡ್ಲ್ ಈಸ್‌ ನಾಟ್‌ ಯೆಟ್‌ ಪ್ರಿಪೇರ್ಡ್‌") ಗಮನಾರ್ಹವಾಗಿ, ಕಾನನ್‌ ಡಾಯ್ಲ್‌ ಅವರ ಮಗ ಆಂಡ್ರಿಯನ್‌ ಕಾನನ್‌ ಡಾಯ್ಲ್‌, ಜಾನ್‌ ಡಿಕನ್ಸನ್ ಕಾರ್‌ನೊಂದಿಗೆ ಸೇರಿ ನಿರ್ಮಿಸಿದ ದಿ ಅಕ್ಸ್‌ಪ್ಲಾಯ್ಟ್ಸ್‌ ಆಫ್‌ ಷರ್ಲಾಕ್‌ ಹೋಮ್ಸ್‌ (=ಷರ್ಲಾಕ್‌ ಹೋಮ್ಸ್‌ ಸಾಹಸಗಳು) ಮತ್ತು 1945ರ ಷರ್ಲಾಕ್‌ ಹೋಮ್ಸ್‌ ರೇಡಿಯೊ ಪ್ರದರ್ಶನದ ಅತ್ಯಂದ ನಿಕಟ ಪ್ರಸಂಗಗಳನ್ನು ಆಧರಿಸಿದ ಕೆನ್‌ ಗ್ರಿನ್‌ವಾಲ್ಡ್ ಅವರ ದಿ ಲಾಸ್ಟ್‌ ಅಡ್ವೆಂಚರ್ಸ್ ಆಫ್‌ ಷರ್ಲಾಕ್‌ ಹೋಮ್ಸ್‌ ,ಎ ರೇಡಿಯೋ ಪ್ರದರ್ಶನವನ್ನು ಡೆನ್ನಿಸ್ ಗ್ರೀನ್‌ ಮತ್ತು ಆಂಥೋಣಿ ಬೌಚರ್‌ ಬರೆದಿದ್ದರು ಇದರಲ್ಲಿ ನಟಿಸಿದ ಬ್ಯಾಸಿಲ್‌ ರಾತ್‌ಬೋನ್‌ ಮತ್ತು ನೈಜಿಲ್‌ ಬ್ರೂಸ್‌ ಹೆಚ್ಚು ಜನಪ್ರಿಯತೆ ಗಳಿಸಿದ್ದರು.

ಇತರರು ಈ ಕಥೆಗಳಿಂದ ವಿಭಿನ್ನ ಪಾತ್ರಗಳನ್ನು ಆರಿಸಿಕೊಂಡು ತಮ್ಮದೇ ಪತ್ತೆದಾರಿಕೆಯಂತೆ ಬಳಸಿಕೊಂಡಿದ್ದಾರೆ. ಉದಾಹರಣೆಗೆ, ಮೈಕೇಲ್‌ ಪಿ.ಹೋಡೆಲ್‌ ಮತ್ತು ಸೀನ್‌ ಅಂ.ರೈಟ್‌ ಬರೆದಿರುವ ಎಂಟರ್‌ ದಿ ಲಯನ್‌ ನಲ್ಲಿ ಬರುವ ಮೈಕ್ರಾಫ್ಟ್‌ ಹೋಮ್ಸ್‌, ಅಥವಾ ಗೆರಾರ್ಡ್‌ ವಿಲಿಯಮ್ಸ್‌ ಬರೆದಿರುವ ಪುಸ್ತಕಗಳಲ್ಲಿ ಬರುವ ಡಾ.ಜೇಮ್ಸ್‌ ಮೋರ್ಟಿಮರ್‌ (ದಿ ಹೌಂಡ್‌ ಆಫ್‌ ದಿ ಬ್ಯಾಸ್ಕರ್‌ವಿಲ್ಸ್‌‌ ಕೃತಿಯಿಂದ)

ಲಾರಿ ಆರ್‌.ಕಿಂಗ್‌ ಷರ್ಲಾಕ್‌ ಹೋಮ್ಸ್‌ನನ್ನು ತನ್ನ ಮೇರಿ ರಸ್ಸೆಲ್‌ (ಕಾಲ್ಪನಿಕ) ಸರಣಿಯಲ್ಲಿ (ಜೇನು ಸಕಾಣಿಕೆದಾರನ ಅಭ್ಯಾಸ ದೊಂದಿಗೆ ಆರಂಭವಾಗುತ್ತದೆ.) ಮರುಹುಟ್ಟು ಕೊಡುತ್ತಾಳೆ. ಮೊದಲ ವಿಶ್ವ ಮಹಾಸಮರ ಮತ್ತು 1920ರ ವೇಳೆಯಲ್ಲಿ ಇದನ್ನು ಪ್ರದರ್ಶಿಸಲಾಯಿತು. ಇವಳ ಹೋಮ್ಸ್‌ ತಾನು ಅಕ್ಷರಷಹ ಹದಿಹರೆಯದ ರಸ್ಸೆಲ್‌ ಜೊತೆ ಸಸ್ಸೆಕ್ಸ್‌‌ನಲ್ಲಿ (ಅರೆ)ನಿವೃತ್ತಿ ಹೊಂದಿರುತ್ತಾನೆ,ಕೆಲಸ ಕಾರ್ಯಗಳಲ್ಲಿ ಮುಗ್ಗರಿಸುತ್ತಿರುತ್ತಾನೆ. ಅವಳಲ್ಲಿರುವ ಸ್ಪೂರ್ತಿಯನ್ನು ಗುರ್ತಿಸುತ್ತಾ, ಅವನು ಹಂತ ಹಂತವಾಗಿ ಅವಳಗೆ ತರಬೇತಿ ಕೊಡುತ್ತಾನೆ. 2009ರಂತೆ ಈ ಸರಣಿ ಒಂಭತ್ತು ಪೂರ್ಣ ಪ್ರಮಾಣದ ಕಾದಂಬರಿಗಳನ್ನು ಮತ್ತು ಅವಳ ಕೇಟ್‌ ಮಾರ್ಟಿನೆಲ್‌ ಸರಣಿ 'ದಿ ಆರ್ಟ್‌ ಆಫ್‌ ಡಿಟೆಕ್ಷನ್'‌ ಪುಸ್ತಕದ ಒಂದು ಸಣ್ಣ ಕಥೆಯನ್ನು ಒಳಗೊಂಡಿದೆ.

ಡಾಯ್ಲ್‌ ಅವರ "ಎ ಸ್ಕ್ಯಾಂಡಲ್‌ ಇನ್‌ ಬೊಹೇಮಿಯ"ದಲ್ಲಿ ಬರುವ ಐರೀನ್‌ ಆಡ್ಲರ್‌ ಪಾತ್ರವನ್ನು ಆಧರಿಸಿದ ದಿ ಐರೀನ್‌ ಆಡ್ಲರ್‌ ಅಡ್ವೆಂಚರ್ಸ್‌ ಸರಣಿಯನ್ನು ಕ್ಯಾರೋಲ್‌ ನೆಲ್ಸನ್‌ ಡಗ್ಲಾಸ್‌ ಆರಂಭಿಸಿದ. ಗುಡ್‌ ನೈಟ್‌, ಮಿ.ಹೋಮ್ಸ್‌ ಎಂಬ ಮೊದಲ ಪುಸ್ತಕ "ಎ ಸ್ಕ್ಯಾಂಡಲ್‌ ಇನ್‌ ಬೊಹೇಮಿಯ" ಕಥೆಯ ಐರಿನ್‌ ದೃಷ್ಟಿಕೋನದ ಮರುನಿರೂಪಣೆ. ಆಡ್ಲರ್‌ನ ಜೊತೆಗಾರ ಪೆನೆಲೋಪ್‌ ಹಕ್ಸ್‌ಲೀನ್‌ನಿಂದ ಇಡೀ ಸರಣಿ ನಿರೂಪಿಸಲ್ಪಡುತ್ತದೆ ಮತ್ತು ಇದು ಡಾ|ವ್ಯಾಟ್ಸನ್‌ ಪಾತ್ರಕ್ಕೆ ಅತಿ ಸಮೀಪದಲ್ಲಿ ನಿಲ್ಲುತ್ತದೆ.

1971ರಲ್ಲಿ ಶೃಂಗಾರ ಭರಿತ ಹಾಸ್ಯ ಚಿತ್ರವಾಗಿದ್ದ ದೆ ಮೈಟ್‌ ಬಿ ಜೈಂಟ್ಸ್‌‌ ಎಂಬ ಚಿತ್ರ 1961ರ ಅದೇ ಹೆಸರಿನ ನಾಟಕ (ಎರಡನ್ನೂ ಜೇಮ್ಸ್‌‌ ಗೋಲ್ಡ್‌ಮನ್‌ ಬರೆದಿದ್ದರು)ವನ್ನು ಆಧರಿಸಿತ್ತು. ಇದರಲ್ಲಿ ಜಾರ್ಜ್‌ ಸಿ.ಸ್ಕಾಟ್‌ ನಿರ್ವಹಿಸಿದ್ದ ಜಸ್ಟಿನ್‌ ಪ್ಲೆಫೇರ್‌ ಪಾತ್ರಧಾರಿಗೆ 'ನೀನೇ ಷರ್ಲಾಕ್‌ ಹೋಮ್ಸ್‌' ಎಂದು ಮನವರಿಕೆ ಮಾಡಲಾಗಿತ್ತು ಮತ್ತು ಇದೇ ರೀತಿ ಇನ್ನಿತರ ಪಾತ್ರ ವರ್ಗದವರನ್ನೂ ಒಪ್ಪಿಸುವ ಪ್ರಯತ್ನ ನಡೆಸಲಾಗಿತ್ತು.ಮಾನಸಿಕ ಆರೋಗ್ಯದ ತಪಾಸಣೆ ಮಾಡುವುದನ್ನು ಡಾ|ವ್ಯಾಟ್ಸನ್‌ ಪಾತ್ರವಹಿಸಿದ್ದ ಜಾನ್ನೆ ವುಡ್‌ವರ್ಡ್‌ಗೆ ವಹಿಸಲಾಗಿತ್ತು.

ವಸತಿ ಶಾಲೆಯಲ್ಲಿ ಹೋಮ್ಸ್‌ ಮತ್ತು ಡಾ|ವ್ಯಾಟ್ಸನ್‌ ವಿದ್ಯಾರ್ಥಿಗಳಾಗಿದ್ದಾಗ ಮಾಡಿದ ಅವರ ಯೌವ್ವನದ ಸಾಹಸಗಳನ್ನು ಯಂಗ್‌ ಷರ್ಲಾಕ್‌ ಹೋಮ್ಸ್‌(1985) ಎಂಬ ಚಿತ್ರ ಪರಿಚಯಿಸುತ್ತದೆ.ಕಾನನ್‌ ಡಾಯ್ಲ್‌ ತನ್ನ ಕೃತಿಗಳಲ್ಲಿ ಈ ಸಾಹಸಗಳನ್ನು ಗಣನೆಗೆ ತೆಗೆದುಕೊಂಡಿಲ್ಲ.{1{0} [೨೭]

== ಮೂಲ ಕಥೆಗಳು ==

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಸರ್‌ ಆರ್ಥರ್‌ ಕಾನನ್‌ ಡಾಯ್ಲ್‌ ಬರೆದಿರುವ ಮೂಲ ಷರ್ಲಾಕ್‌ ಹೋಮ್ಸ್‌ ಕಥೆಗಳು ಐವತ್ತಾರು ಸಣ್ಣ ಕಥೆಗಳು ಮತ್ತು ನಾಲ್ಕು ಕಾದಂಬರಿಗಳನ್ನು ಒಳಗೊಂಡಿವೆ.

=

ಕಾದಂಬರಿಗಳು ===

ಅ ಸ್ಟಡಿ ಇನ್‌ ಸ್ಕಾರ್ಲೆಟ್‌ (ಪ್ರಕಟಣೆ 1887ರಲ್ಲಿ, ಬೀಟನ್ಸ್‌ ಕ್ರಿಸ್‌ಮಸ್‌ ವಾರ್ಷಿಕ‌ ದಲ್ಲಿ ಪ್ರಕಟಿತ.)

ದಿ ಸೈನ್‌ ಆಫ್‌ ದಿ ಫೋರ್‌ (ಪ್ರಕಟಣೆ 1890ರಲ್ಲಿ, ಲಿಪ್ಪಿನಕಾಟ್ಸ್‌ ಮಾಸ ಪತ್ರಿಕೆ ಯಲ್ಲಿ ಪ್ರಕಟಿತ.)

ದಿ ಹೌಂಡ್ ಆಪ್ ದಿ ಬ್ಯಾಸ್ಕರ್ವಿಲ್ಸ್‌ (1901-1902ರ ನಡುವೆ ದಿ ಸ್ಟ್ರ್ಯಾಂಡ್‌ ನಲ್ಲಿ ಧಾರಾವಾಹಿಯಾಗಿ ಪ್ರಕಟಿತ.)

  • ದಿ ವ್ಯಾಲಿ ಆಫ್‌ ಫಿಯರ್‌ (1914–1915 ರಲ್ಲಿ ದಿ ಸ್ಟ್ರ್ಯಾಂಡ್‌ ನಲ್ಲಿ ಧಾರಾವಾಹಿಯಾಗಿ ಪ್ರಕಟಿತ.)

=

ಸಣ್ಣ ಕಥೆಗಳು ===

ಹೆಚ್ಚಿನ ವಿವರಣೆಗೆ ಕಾನನ್ ಡಾಯ್ಲ್ ಅವರ ಷರ್ಲಾಕ್‌ ಹೋಮ್ಸ್‌ ಸಣ್ಣ ಕಥೆಗಳ ಪಟ್ಟಿಯನ್ನು ನೋಡಿ

ಸಣ್ಣ ಕಥೆಗಳು ಮೊದಲು ನಿಯತಕಾಲಿಕಗಳಲ್ಲಿ ಪ್ರಕಟವಾದವು; ನಂತರ ಇವುಗಳನ್ನು ಸಂಗ್ರಹಿಸಿ ಐದು ಸಂಕಲನಗಳಾಗಿ ಪ್ರಕಟಿಸಲಾಯಿತು.

ದಿ ಅಡ್ವೆಂಚರ್‌ ಆಫ್‌ ಷರ್ಲಾಕ್‌ ಹೋಮ್ಸ್‌ (ಇದು 1891–1892ರ ಅವಧಿಯಲ್ಲಿ ದಿ ಸ್ಟ್ರ್ಯಾಂಡ್ ನಿಯತಕಾಲಿಕದಲ್ಲಿ ಪ್ರಕಟವಾದ ಕಥೆಗಳ ಸಂಕಲನ.)

[[ದಿ ಮೆಮೋರೀಸ್‌ ಆಫ್‌ ಷರ್ಲಾಕ್‌ ಹೋಮ್ಸ್‌|ದಿ ಮೆಮೋರೀಸ್‌ ಆಫ್‌ ಷರ್ಲಾಕ್ ಹೋಮ್ಸ್‌]] (ಇದು 1892–1893ರ ಅವಧಿಯಲ್ಲಿ ದಿ ಸ್ಟ್ರ್ಯಾಂಡ್ ನಿಯತಕಾಲಿಕದಲ್ಲಿ ಸಾಹಸಕಥೆಗಳ ಮುಂದುವರಿದ ಭಾಗವಾಗಿ ಪ್ರಕಟವಾದ ಕಥೆಗಳನ್ನು ಒಳಗೊಂಡಿದೆ.)

ದಿ ರಿಟರ್ನ್‌ ಆಫ್‌ ಷರ್ಲಾಕ್‌ ಹೋಮ್ಸ್‌ (ಇದು 1903–1904ರ ಅವಧಿಯಲ್ಲಿ ದಿ ಸ್ಟ್ರ್ಯಾಂಡ್ ನಿಯತಕಾಲಿಕದಲ್ಲಿ ಪ್ರಕಟವಾದ ಕಥೆಗಳನ್ನು ಒಳಗೊಂಡಿದೆ.)

ಹಿಸ್‌ ಲಾಸ್ಟ್‌ ಬೋ (ಇದು 1908–1913 ಮತ್ತು 1917ರಲ್ಲಿ ಪ್ರಕಟವಾದ ಕಥೆಗಳನ್ನು ಒಳಗೊಂಡಿದೆ)

ದಿ ಕೇಸ್‌ ಬುಕ್‌ ಆಫ್‌ ಷರ್ಲಾಕ್‌ ಹೋಮ್ಸ್‌ (ಇದು 1921–1927ರಲ್ಲಿ ಪ್ರಕಟವಾದ ಕಥೆಗಳನ್ನು ಒಳಗೊಂಡಿದೆ)

=

ಅಚ್ಚುಮೆಚ್ಚಿನ ಕಥೆಗಳ ಪಟ್ಟಿಗಳು ===

ಅಚ್ಚುಮೆಚ್ಚಿನ ಕಥೆಗಳ ಬಗ್ಗೆ ಎರಡು ಜನಪ್ರಿಯ ಪಟ್ಟಿಗಳಿವೆ: ಒಂದು 1927ರಲ್ಲಿ ದಿ ಸ್ಟ್ರ್ಯಾಂಡ್‌ ನಿಯತಕಾಲಿಕದಲ್ಲಿ ಕಾನನ್‌ ಡಾಯ್ಲ್‌ ಪ್ರಕಟಿಸಿದ ಪಟ್ಟಿ ಮತ್ತೊಂದು 1959ರಲ್ಲಿ "ಬೇಕರ್‌ ಸ್ಟ್ರೀಟ್‌ ಜರ್ನಲ್‌" ನಲ್ಲಿ ಪ್ರಕಟವಾದ ಪಟ್ಟಿ.

== ಹೋಮ್ಸ್‌:ಇತರ ಲೇಖಕರು ಕಂಡಂತೆ ==

ನೋಡಿ: ನಾನ್‌-ಕನಾನಿಕಲ್ ಷರ್ಲಾಕ್ ಹೋಮ್ಸ್‌ ಕ್ಋತಿಗಳು , ಷರ್ಲಾಕ್‌ ಹೋಮ್ಸ್‌ ಕಥೆಗಳ ಹೊಸ ಲೇಖಕರ ಪಟ್ಟಿ ಮತ್ತು ಸ್ಟೋರೀಸ್‌ ,ಅಂಡ್‌ ಷರ್ಲಾಕ್‌ ಹೋಮ್ಸ್‌ ಸ್ಪೆಕ್ಯುಲೇಷನ್

ಟಿಪ್ಪಣಿಗಳು

  1. "ಹಿಸ್‌ ಲಾಲ್ಟ್‌ ಬೋ "
  2. "ದಿ ಅಡ್ವೆಂಚರ್ ಆಫ್‌ ಲಯನ್ಸ್‌ ಮೇನ್‌ "
  3. ೩.೦ ೩.೧ Cite warning: <ref> tag with name ReferenceA cannot be previewed because it is defined outside the current section or not defined at all.
  4. Conan Doyle, Arthur (1903). "The Adventure of the Norwood Builder", Strand Magazine.
  5. [22] ^ ದಿ ಅಡ್ವೆಂಚರ್ ಆಫ್‌ ದಿ ನ್ಯಾವಲ್‌ ಟ್ರೀಟಿ ಯಲ್ಲಿ, ಹೊಮ್ಸ್‌ ಹೇಳುವಂತೆ, ಅವನ ಕೊನೆಯ ಐವತ್ಮೂರು ಕೇಸ್‌ಗಳಲ್ಲಿ ನಲವತ್ತೊಂಭತ್ತರಲ್ಲಿ ಪೊಲೀಸ್‌ ಪ್ರಯತ್ನವೇ ಮುಖ್ಯವಾಗಿತ್ತು.
  6. ಉದಾಗಣೆಗೆ ನೋಡಿ, "ದಿ ಅಡ್ವೆಂಚರ್ ಆಫ್‌ ದಿ ನಾರ್ವುಡ್ ಬಿಲ್ಡರ್‌" ಯ ಕೊನೆಯಲ್ಲಿ ಇನ್‌ಸ್ಪೆಕ್ಟರ್‌ ಲೆಸ್‌ಟ್ರೇಡ್‌
  7. "ದಿ ಅಡ್ವೆಂಚರ್‌ ಆಫ್‌ ದಿ ಮಿಸ್ಸಿಂಗ್ ಥ್ರೀ-ಕ್ವಾರ್ಟರ್ "
  8. ದಿ ಸ್ಟಡಿ ಇನ್‌ ಸ್ಕಾರ್ಲೆಟ್‌ .
  9. "ದಿ ಅಡ್ವೆಂಚರ್‌ ಆಫ್‌ ದಿ ಬ್ಲೂ ಕಾರ್ಬಂಕಲ್‌ ".
  10. "ದಿ ಅಡ್ವೆಂಚರ್‌ ಆಫ್‌ ದಿ ಯೆಲ್ಲೋ ಫೇಸ್‌ ".
  11. ದಿ ಹೌಂಡ್‌ ಆಫ್ ದಿ ಬ್ಯಾಸ್ಕರ್‌ವಿಲ್ಸ್‌ .
  12. ದಿ ಸೈನ್ ಆಫ್‌ ದಿ ಫೋರ್‌ , ಇಬ್ಬರೂ ಅಂಡಮಾನ್ ಐಲ್ಯಾಂಡರ್‌ನಲ್ಲಿ ಗುಂಡು ಹಾರಿಸುತ್ತಾರೆ. ಹೌಂಡ್‌ ಆಫ್‌ ದಿ ಬ್ಯಾಸ್ಕರ್‌ವಿಲ್ಸ್‌ನಲ್ಲಿ ಹೋಮ್ಸ್‌ ಮತ್ತು ವ್ಯಾಟ್ಸ್‌ನ್‌ ಇಬ್ಬರೂ ಗುಂಡು ಹಾರಿಸುತ್ತಾರೆ. "ದಿ ಅಡ್ವೆಂಚರ್‌ ಆಫ್‌ ದಿ ಚಾಪರ್‌ ಬೀಚಸ್"ನಲ್ಲಿ ವ್ಯಾಟ್ಸನ್‌ ಗುಂಡು ಹಾರಿಸಿ ಮ್ಯಾಸ್ಟಿಫ್‌ ನಾಯಿಯನ್ನು ಕೊಂದು ಹಾಕುತ್ತಾನೆ. " ದಿ ಅಡ್ವೆಂಚರ್ ಆಫ್‌ ದಿ ಅಮ್‌ಟಿ ಹೌಸ್‌"ನಲ್ಲಿ ವ್ಯಾಟ್ಸನ್‌ ಕಾಲನೆಲ್‌ ಸೆಬಾಸ್ಟಿಯನ್‌ ಮೋರನ್‌ನಿಂದ ಪಿಸ್ತೂಲ್‌ ಕಸಿದುಕೊಳ್ಳುತ್ತಾರೆ. "ದಿ ಅಡ್ವೆಂಚರ್‌ ಆಫ್‌ ದಿ ಥ್ರೀ ಗಾರ್ರಿಡೆಬ್ಸ್‌" ನಲ್ಲಿ ಹೊಮ್ಸ್‌ಗೆ ಗುಂಡು ತಗುಲಿದ ನಂತರ ಕೊಲೆಗಾರ ಇವಾನ್ಸ್‌ನಿಂದ ಹೊಮ್ಸ್‌ ಪಿಸ್ತೂಲ್‌ ಕಸಿದುಕೊಳ್ಳುತ್ತಾನೆ. "ದಿ ಮುಸ್‌ಗ್ರೇವ್ ರಿಚುಯಲ್‌"ನಲ್ಲಿ ಹೊರಗೆಡವಿರುವ ಪ್ರಕಾರ, ಹೋಮ್ಸ್‌ ಅವರ ಪ್ಲ್ಯಾಟ್‌ನ ಗೋಡೆಗಳನ್ನು ಗುಂಡಿನ ಗುರುತುಗಳಿಂದ ಮಾಡಲಾದ ದೇಶಪ್ರೇಮಿ "V.R."ನಿಂದ ಶೃಂಗರಿಸಿದ್ದರು. "ದಿ ಪ್ರಾಬ್ಲಮ್‌ ಆಫ್ ಥಾರ್ ಬ್ರಿಜ್‌", ಹೋಮ್ಸ್ ಅಪರಾಧವನ್ನು ಪುನರ್‌ ರಚಿಸುವಾಗ ವ್ಯಾಟ್ಸನ್‌ನ ರಿವಾಲ್ವರ್‌ ಅನ್ನು ಬಳಸುತ್ತಾನೆ.
  13. ನೋಡಿ "ದಿ ರೆಡ್‌-ಹೆಡೆಡ್‌‌ ಲೀಗ್‌" ಮತ್ತು "ದಿ ಅಡ್ವೆಂಚರ್‌ ಆಫ್‌ ದಿ ಇಲ್ಲಸ್ಟ್ರಿಯಸ್‌ ಕ್ಲೈಂಟ್‌ ".
  14. ಆದರೂ, ದಿ ಅಡ್ವೆಂಚರ್‌ ಆಫ್‌ ದಿ ನ್ಯಾವಲ್‌ ಟ್ರೀಟಿಯ ಗ್ರ್ಯಾನಡ ಟಿವಿ ಆವೃತ್ತಿಯಲ್ಲಿ ಕದಿಯಲಾಗಿರುವ ಟ್ರೀಟಿಯನ್ನು ಬಿಟ್ಟುಬಿಡುವಂತೆ ಜೋಸೆಫ್‌ ಹ್ಯಾರಿಸನ್‌ ಅನ್ನು ಒತ್ತಾಯಿಸಲು ಹೋಮ್ಸ್‌ ಖಡ್ಗದ ಹೊರೆಯನ್ನು ಬಳಸುತ್ತಾನೆ.
  15. "ದಿ ಅಡ್ವೆಂಚರ್‌ ಆಫ್‌ ದಿ ಸಾಲಿಟರಿ ಸೈಕ್ಲಿಸ್ಟ್‌" ಮತ್ತು "ದಿ ಅಡ್ವೆಂಚರ್ ಆಫ್‌ ದಿ ನ್ಯಾವಲ್ ಟ್ರೀಟಿ" ಈ ಅರಡರ ಒಳಗೆ
  16. Sherlock Holmes Full Volume in Kannada. ISBN 978-81-968941-6-0.
  17. Klinger, Leslie (1999). "LOST IN LASSUS: THE MISSING MONOGRAPH". Archived from the original on 2008-07-25. Retrieved 2008-10-20.
  18. ಹಿಸ್ ಲಾಸ್ಟ ಬೋ .
  19. Radford, John (1999). The Intelligence of Sherlock Holmes and Other Three-pipe Problems. Sigma Forlag. ISBN 82-7916-004-3.
  20. Snyder LJ (2004). "Sherlock Holmes: Scientific detective". Endeavour. 28: 104–108. doi:10.1016/j.endeavour.2004.07.007.
  21. Kempster PA (2006). "Looking for clues". Journal of Clinical Neuroscience. 13: 178–180. doi:10.1016/j.jocn.2005.03.021.
  22. ಕಾನನ್‌ ಡಾಯ್ಲ್‌ ಬರೆದ ಕಥೆಗಳಲ್ಲಿ, ಹೋಮ್ಸ್‌ ಹಲವೆಡೆ ಟೀಕಿಸಿರುವಂತೆ, ಅವನ ತಾರ್ಕಿಕ ತೀರ್ಮಾನಗಳು ಸರಳ ಅಥವಾ ಪ್ರಾಥಮಿಕವಾಗಿದ್ದವು, ಅದರಲ್ಲಿ ಅವನು ಅವುಗಳನ್ನು ಸರಳ ಮತ್ತು ಸ್ಪಷ್ಟವಾಗಿರಬೇಕೆಂದು ಪರಿಗಣಿಸುತ್ತಾನೆ. ಅವನು ಸಾಂದರ್ಭಿಕವಾಗಿ ತನ್ನ ಸ್ನೇಹಿತನನ್ನು "ನನ್ನ ಪ್ರೀತಿಯ ವ್ಯಾಟ್ಸನ್‌" ಅಂದೂ ಉಲ್ಲೇಖಿಸುತ್ತಾನೆ. ಆದರೂ, ಕಾನನ್‌ ಡಾಯ್ಲ್‌ ಬರೆದ ಅರವತ್ತು ಹೋಮ್ಸ್‌ ಕಥೆಗಳಲ್ಲಿ "ಸರಳ, ನನ್ನ ಪ್ರೀತಿಯ ವ್ಯಾಟ್ಸನ್‌" ಅಂಬ ಪೂರ್ಣ ಪದಗುಚ್ಛ ಎಲ್ಲೂ ಕಂಡುಬರುವುದಿಲ್ಲ. ಈ ಪದಗುಚ್ಛಕ್ಕೆ ಅತಿ ಸಮೀದ ಉದಾಹರಣೆಗಳಲ್ಲೊಂದು "ದಿ ಅಡ್ವೆಂಚರ್‌ ಆಫ್ ದಿ ಕ್ರುಕೆಡ್‌ ಮ್ಯಾನ್‌"ನಲ್ಲಿ ಕಂಡುಬರುತ್ತದೆ. ಒಂದು ಅನುಮಾನ (=ಕಳೆಯುವಿಕೆ)ಕ್ಕೆ ಹೋಮ್ಸ್‌ ವಿವರಣೆಯ ಮೇಲೆ:
    "Excellent!" I cried.

    "Elementary." said he.

    1929ರಲ್ಲಿ ತಯಾರಾದ ದಿ ರಿಟರ್ನ್ ಆಫ್‌ ಷರ್ಲಾಕ್‌ ಹೋಮ್ಸ್‌ ಚಿತ್ರದ ಕಡೆಯಲ್ಲಿ ಇದು ಕಾಣಿಸುವುದಿಲ್ಲ. ಷರ್ಲಾಕ್‌ ಹೋಮ್ಸ್‌ನ ಮೊದಲ ಧ್ವನಿ ಚಿತ್ರ ಮತ್ತು ಇದಕ್ಕೆ ದೊರಕಿದ ಜನಪ್ರಿಯತೆಯನ್ನು ದಿ ನ್ಯೂ ಅಡ್ವೆಂಚರ್ಸ್‌ ಆಫ್‌ ಷರ್ಲಾಕ್‌ ಹೋಮ್ಸ್ ರೇಡಿಯೋ ಸರಣಿಗಾಗಿ ಅಡಿತ್‌ ಮೀಸರ್‌ ಬರೆದ ಬರಹಗಳಲ್ಲಿ ಇದನ್ನು ಬಳಸಿಕೊಳ್ಳವುದಕ್ಕೆ ಇದರ ಜನಪ್ರಿಯತೆಯನ್ನು ಋಣಿಯಾಗಿಸಿರಬಹುದು. ಈ ಪದಗುಚ್ಛವನ್ನು ಅಮೆರಿಕದ ನಟ ವಿಲಿಯಂ ಗಿಲ್ಲೆಟ್‌ ಮೊದಲು ಬಳಸಿದರು.

  23. Bookreporter.com - ಲೇಖಕ ಪರಿಚಯ: ಲಾರೀ R. ಕಿಂಗ್‌
  24. Dakin, D. Martin (1972). A Sherlock Holmes Commentary. David & Charles, Newton Abbot. ISBN 0-7153-5493-0.
  25. McQueen, Ian (1974). Sherlock Holmes Detected. David & Charles, Newton Abbot. ISBN 0-7153-6453-7.
  26. [[ನಿಲ್ಸ್ ನಾರ್ಡ್‌ಬರ್ಗ್|]]ನಾರ್ದ್‌ಬರ್ಗ್, ನಿಲ್ಸ್‌‌: ಡೋಡೆನ್‌ ಐ ಕಿಯೋಸ್ಕೆನ್‌. ನಟ್‌ ಗ್ರಿಬ್‌ ಓಗ್‌ ಆಂಡ್ರೆ ಹೆಫ್ಟೆಡೆಕ್ಟಿವರ್‌.
  27. "ಆರ್ಕೈವ್ ನಕಲು". Archived from the original on 2009-09-05. Retrieved 2009-11-03.


ಇದನ್ನೂ ನೋಡಿ

  • ಆರ್ಸೆನೆ ಲುಪಿನ್‌
  • ಡಾ.ಜಾರ್ಜರಿ ಹೌಸ್‌
  • ಫಾದರ್‌ ಬ್ರೌನ್
  • ವಿಧಿವಿಜ್ಞಾನ ರಸಾಯನಶಾಸ್ತ್ರ
  • ವಿಧಿವಿಜ್ಞಾನಶಾಸ್ತ್ರ
  • ಹ್ಯಾರಿ ಡಿಕನ್‌ಸನ್‌
  • ಹೋಮ್ಸ್‌ 2 (ಪೊಲೀಸ್‌ ಕಂಪ್ಯೂಟರ್‌ ವ್ಯವಸ್ಥೆ)
  • ಕೊಗೊರೋ ಅಕೆಚಿ

ಷರ್ಲಾಕ್‌ ಹೋಮ್ಸ್‌ ಆಡಿದ ಜನರ ಪಟ್ಟಿ

ಹೋಮ್ಸಿಯನ್‌ ಅಧ್ಯಯನಗಳ ಪಟ್ಟಿ

  • ಮೀರಿಂಜೆನ್‌
  • ಓಲಿವರ್‌ ವೆಂಡೆಲ್‌ ಹೋಮ್ಸ್‌, Sr.

ಪ್ರೊಫೆಸರ್‌ ಚಾಲೆಂಜರ್‌ (ಮತ್ತೊಂದು ಕಾನನ್‌ ಡಾಯ್ಲ್‌ ಪಾತ್ರ)

  • ಪ್ರೊಫೆಸರ್‌ ಮೊರಿಯಾರ್ಟಿ
  • ಸೋಲಾರ್‌ ಪೋನ್ಸ್

ರಾತ್ರಿ ವೇಳೆಯಲ್ಲಿ ನಾಯಿಯ ಕುತೂಹಲಕರ ಘಟನೆ

  • ದಿ ಸ್ಲೂತ್‌ (ಡಿಸ್ನಿ)
  • ವಿಲಿಯಂ ಗಿಲ್ಲೆಟ್‌
  • ಕೇಸ್‌ ಕ್ಲೋಸ್ಡ್‌

ಆಕರಗಳು

  • Accardo, Pasquale J. (1987). Diagnosis and Detection: Medical Iconography of Sherlock Holmes. Madison, NJ: Fairleigh Dickinson University Press. ISBN 0-517-50291-7.
  • Baring-Gould, William (1967). The Annotated Sherlock Holmes. New York: Clarkson N. Potter. ISBN 0-517-50291-7.
  • Baring-Gould, William (1962). Sherlock Holmes of Baker Street: The Life of the World's First Consulting Detective. New York: Clarkson N. Potter. OCLC 63103488.
  • Blakeney, T.S. (1994). Sherlock Holmes: Fact or Fiction?. London: Prentice Hall & IBD. ISBN 1-883402-10-7.
  • Bradley, Alan (2004). Ms Holmes of Baker Street: The Truth About Sherlock. Alberta: University of Alberta Press. ISBN 0-88864-415-9.
  • Campbell, Mark (2007). Sherlock Holmes. London: Pocket Essentials. ISBN 978-0-470-12823-7.
  • Dakin, David (1972). A Sherlock Holmes Commentary. Newton Abbot: David & Charles. ISBN 0-7153-5493-0.
  • Duncan, Alistair (2008). Eliminate the Impossible: An Examination of the World of Sherlock Holmes on Page and Screen. London: MX Publishing. ISBN 978-1-904312-31-4.
  • Duncan, Alistair (2009). Close to Holmes: A Look at the Connections Between Historical London, Sherlock Holmes and Sir Arthur Conan Doyle. London: MX Publishing. ISBN 978-1-904312-50-5.
  • Green, Richard Lancelyn (1987). The Sherlock Holmes Letters. Iowa City: University of Iowa Press. ISBN 0-87745-161-3.
  • Hall, Trevor (1969). Sherlock Holmes: Ten Literary Studies. London: Duckworth. ISBN 0-7156-0469-4.
  • Hammer, David (1995). The Before-Breakfast Pipe of Mr. Sherlock Holmes. London: Wessex Pr. ISBN 0-938501-21-6.
  • Harrison, Michael (1973). The World of Sherlock Holmes. London: Frederick Muller Ltd.
  • Jones, Kelvin (1987). Sherlock Holmes and the Kent Railways. Sittingborne, Kent: Meresborough Books. ISBN 0-948193-25-5.
  • Keating, H. R. F. (2006). Sherlock Holmes: The Man and His World. Edison, NJ: Castle. ISBN 0-7858-2112-0.
  • Kestner, Joseph (1997). Sherlock's Men: Masculinity, Conan Doyle and Cultural History. Farnham: Ashgate. ISBN 1-85928-394-2.
  • King, Joseph A. (1996). Sherlock Holmes: From Victorian Sleuth to Modern Hero. Lanham, US: Scarecrow Press. ISBN 0-8108-3180-5.
  • Klinger, Leslie (2005). The New Annotated Sherlock Holmes. New York: W.W. Norton. ISBN 0-393-05916-2.
  • Klinger, Leslie (1998). The Sherlock Holmes Reference Library. Indianapolis: Gasogene Books. ISBN 0-938501-26-7.
  • Lester, Paul (1992). Sherlock Holmes in the Midlands. Studley, Warwickshire: Brewin Books. ISBN 0-947731-85-7.

ಲೀಬೋ, ಅಲಿ. ಡಾಕ್ಟರ್‌ ಜೋ ಬೆಲ್‌: ಮಾಡೆಲ್‌ ಫಾರ್‌ ಷರ್ಲಾಕ್‌ ಹೋಮ್ಸ್‌ . ಬೌಲಿಂಗ್‌ ಗ್ರೀನ್‌, ಓಹಿಯೋ: ಬೌಲಿಂಗ್‌ ಗ್ರೀನ್‌ ಯೂನಿವರ್ಸಿಟಿ ಪಾಪುಲರ್‌ ಪ್ರೆಸ್‌, 1982; ಮೋದಿಸನ್‌, ವಿಸ್ಕೋನ್‌ಸಿನ್‌: ಯೂನಿವರ್ಸಿಟಿ ಆಫ್‌ ವಿಸ್ಕೋನ್‌‌ಸಿನ್‌ ಪ್ರೆಸ್‌, 2007 ISBN 978-0-87972-198-5

  • Mitchelson, Austin (1994). The Baker Street Irregular: Unauthorised Biography of Sherlock Holmes. Romford: Ian Henry Publications Ltd. ISBN 0-8021-4325-3.
  • Payne, David S. (1992). Myth and Modern Man in Sherlock Holmes: Sir Arthur Conan Doyle and the Uses of Nostalgia. Bloomington, Ind: Gaslight's Publications. ISBN 0-934468-29-X.
  • Redmond, Christopher (1987). In Bed with Sherlock Holmes: Sexual Elements in Conan Doyle's Stories. London: Players Press. ISBN 0-8021-4325-3.
  • Redmond, Donald (1983). Sherlock Holmes: A Study in Sources. Quebec: McGill-Queen's University Press. ISBN 0-7735-0391-9.
  • Rennison, Nick (2007). Sherlock Holmes. The Unauthorized Biography. London: Grove Press. ISBN 978-0-8021-4325-9.
  • Richards, Anthony John (1998). Holmes, Chemistry and the Royal Institution: A Survey of the Scientific Works of Sherlock Holmes and His Relationship with the Royal Institution of Great Britain. London: Irregulars Special Press. ISBN 0-7607-7156-1.
  • Riley, Dick (2005). The Bedside Companion to Sherlock Holmes. New York: Barnes & Noble Books. ISBN 0-7607-7156-1.
  • Riley, Peter (2005). The Highways and Byways of Sherlock Holmes. London: P.&D. Riley. ISBN 978-1-874712-78-7.
  • Roy, Pinaki (Department of English, Malda College) (2008). The Manichean Investigators: A Postcolonial and Cultural Rereading of the Sherlock Holmes and Byomkesh Bakshi Stories. New Delhi: Sarup and Sons. ISBN 978-81-7625-849-4.{cite book}: CS1 maint: multiple names: authors list (link)
  • Shaw, John B. (1995). Encyclopedia of Sherlock Holmes: A Complete Guide to the World of the Great Detective. London: Pavillion Books. ISBN 1-85793-502-0.
  • Starrett, Vincent (1993). The Private Life of Sherlock Holmes. London: Prentice Hall & IBD. ISBN 978-1-883402-05-1.
  • Tracy, Jack (1988). The Sherlock Holmes Encyclopedia: Universal Dictionary of Sherlock Holmes. London: Crescent Books. ISBN 0-517-65444-X.
  • Tracy, Jack (1996). Subcutaneously, My Dear Watson: Sherlock Holmes and the Cocaine Habit. Bloomington, Ind.: Gaslight Publications. ISBN 0-934468-25-7.
  • Wagner, E.J. (2007). La Scienza di Sherlock Holmes. Torino: Bollati Boringheri. ISBN 978-0-470-12823-7.
  • Weller, Philip (1993). The Life and Times of Sherlock Holmes. Simsbury: Bracken Books. ISBN 1-85891-106-0.
  • Wexler, Bruce (2008). The Mysterious World of Sherlock Holmes. London: Running Press. ISBN 978-0-7624-3252-3.

ಹೊರಗಿನ ಕೊಂಡಿಗಳು

ಪುಸ್ತಗಳು, ಚಲನಚಿತ್ರಗಳು ಮತ್ತು ಮಾಧ್ಯಮಗಳಲ್ಲಿ ಬೇಕರ್‌ ಸ್ಟ್ರೀಟ್‌ ಡೋಜೆನ್‌ ಷರ್ಲಾಕ್ ಹೊಮ್ಸ್‌

ಬೆರ್ಟ್‌ ಕೌಲ್ಸ್‌ ವೆಬ್‌ಸೈಟ್‌ (BBC ರೇಡಿಯೋ 4 ಕಾನನಿಕಲ್‌ ಮತ್ತು ಮೂಲ ಕತೆಗಳು, 1989–2004) Archived 2007-09-15 ವೇಬ್ಯಾಕ್ ಮೆಷಿನ್ ನಲ್ಲಿ.

ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಡಿಸ್ಕವರಿಂಗ್‌ ಷರ್ಲಾಕ್‌ ಹೋಮ್ಸ್‌