ಜಿಎಸ್ಎಮ್
ಜಿಎಸ್ಎಮ್ (ಸಂಚಾರಿ-ದೂರವಾಣಿ ಸಂಪರ್ಕಕ್ಕಾಗಿ ಜಾಗತಿಕ ವ್ಯವಸ್ಥೆ: ಮೂಲತ: ಗ್ರೂಪ್ ಸ್ಪೆಷಲ್ ಮೊಬೈಲ್ ) ವಿಶ್ವದ ಸಂಚಾರಿ ದೂರವಾಣಿಗಳಲ್ಲೇ ಅತ್ಯಂತ ಜನಪ್ರಿಯ ಗುಣಮಟ್ಟದ ತಂತ್ರಜ್ಞಾನ.ಇದರ ಉತ್ತೇಜಕ GSM ಸಂಘದ ಅಂದಾಜಿನ ಪ್ರಕಾರ, ಜಾಗತಿಕ ಸಂಚಾರಿ ದೂರವಾಣಿ ಮಾರುಕಟ್ಟೆಯ ಸುಮಾರು 80% ಈ ತಂತ್ರಜ್ಞಾನವನ್ನು ಬಳಸುತ್ತದೆ.[೧] 212ಕ್ಕೂ ಹೆಚ್ಚು ದೇಶ-ಪ್ರಾಂತ್ಯಗಳಲ್ಲಿ 3 ಶತಕೋಟಿಗೂ ಹೆಚ್ಚು ಜನರು GSM ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ.[೨][೩] ಇದರ ಸರ್ವತ್ರ ಅಸ್ತಿತ್ವ ಸಂಚಾರಿ ದೂರವಾಣಿ ನಿರ್ವಾಹಕರುಗಳ ನಡುವೆ ಅಂತರರಾಷ್ಟ್ರೀಯ ತಿರುಗಾಟವನ್ನು ಸರ್ವೇಸಾಮಾನ್ಯವಾಗಿಸಿದೆ, ಹಾಗಾಗಿ ಚಂದಾದಾರರು ತಮ್ಮ ದೂರವಾಣಿಗಳನ್ನು ವಿಶ್ವದ ಹಲವೆಡೆ ಬಳಸಬಹುದಾಗಿದೆ. ತನ್ನ ಸಂಕೇತಗಳು ಹಾಗೂ ವಾಕ್-ತರಂಗಪಟ್ಟಿಗಳು ಡಿಜಿಟಲ್ ರೂಪದಲ್ಲಿರುವುದರಿಂದ GSM ತನ್ನ ಹಿಂದಿನವುಗಳಿಂದ ಭಿನ್ನವಾಗಿದೆ, ಹಾಗಾಗಿ, ಇದನ್ನು ಎರಡನೆಯ ತಲೆಮಾರು (2G) ಸಂಚಾರಿ ದೂರವಾಣಿ ವ್ಯವಸ್ಥೆಯಾಗಿ ಪರಿಗಣಿಸಲಾಗಿದೆ. ಇದರ ಅರ್ಥ, ಮಾಹಿತಿಯ ವಿನಿಮಯವನ್ನು ಸಹ ಈ ವ್ಯವಸ್ಥೆಯೊಳಗೆ ಸುಲಭವಾಗಿ ನಿರ್ವಹಿಸಬಹುದಾಗಿದೆ.
GSM ತಂತ್ರಜ್ಞಾನದ ಸರ್ವತ್ರ ಅಸ್ತಿತ್ವ ಬಳಕೆದಾರರಿಗೆ (ಸಂಚಾರಿ ದೂರವಾಣಿಗಳನ್ನು ಬದಲಾಯಿಸದೆ ಒಂದು ಜಾಲದಿಂದ ಇನ್ನೊಂದಕ್ಕೆ ಬದಲಾಯಿಸಿ ತಿರುಗಾಡಬಹುದಾದ ಅನುಕೂಲ) ಮತ್ತು ಜಾಲ ನಿರ್ವಾಹಕರಿಗೆ (GSM ಅಳವಡಿಸುತ್ತಿರುವ ಹಲವಾರು ವಿಕ್ರಯಿಗಳ ಪೈಕಿ ಯಾವ ವಿಕ್ರಯಿಯಿಂದಾದರೂ ಉಪಕರಣಗಳನ್ನು ಆಯ್ಕೆ ಮಾಡಬಲ್ಲರು)[೪]) ಅನುಕೂಲಕರವಾಗಿದೆ.ಧ್ವನಿ ಕರೆಗಳಿಗೆ ಪರ್ಯಾಯವಾಗಿ (ಜಾಲ ಸೇವಾಕರ್ತೃವಿಗೆ) ಕಡಿಮೆ ದರದಲ್ಲಿ ಶೀಘ್ರ ಸಂದೇಶ ಸೇವೆ (SMS, "ಪಠ್ಯ ಸಂದೇಶ" ಎಂದೂ ಕರೆಯಲಾಗುತ್ತದೆ)GSM ಹೊಂದಿದೆ, ಇದೀಗ ಇತರೆ ಸಂಚಾರಿ ದೂರವಾಣಿ ತಂತ್ರಜ್ಞಾನಗಳೂ ಇದನ್ನು ಬೆಂಬಲಿಸುತ್ತವೆ. ಇದರ ಇನ್ನೊಂದು ಅನುಕೂಲವೇನೆಂದರೆ ಈ ಗುಣಮಟ್ಟದ ತಂತ್ರಜ್ಞಾನ ವಿಶ್ವಾದ್ಯಂತ ಒಂದೇ ತುರ್ತು ದೂರವಾಣಿ ಸಂಖ್ಯೆ112ಯನ್ನು ಹೊಂದಿದೆ.[೫] ಇದರಿಂದಾಗಿ ಅಂತರರಾಷ್ಟ್ರೀಯ ಪ್ರವಾಸಿಗಳು ಸ್ಥಳೀಯ ತುರ್ತು ದೂರವಾಣಿ ಸಂಖ್ಯೆಯನ್ನು ತಿಳಿದುಕೊಳ್ಳಬೇಕಾಗಿಲ್ಲ, ಬದಲಿಗೆ ನೇರವಾಗಿ ತುರ್ತು ಸೇವೆಗಳನ್ನು ಈ ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದೆ.
ತಂತ್ರಜ್ಞಾನದ ಹೊಸ ಆವೃತ್ತಿಗಳು ಹಳೆಯ ಆವೃತ್ತಿಯ ಮೂಲ GSM ದೂರವಾಣಿಗಳೊಂದಿಗೆ ಹೊಂದಿಕೊಳ್ಳುತ್ತವೆ.ಉದಾಹರಣೆಗೆ, ಪ್ರಮಾಣಿತ ಹೆಚ್ಚಿದ ಗಣನೀಯ ಮಾಹಿತಿ ಕ್ಷಮತೆಗಳ ರಿಲೀಸ್ '97 ಆವೃತ್ತಿ ಜನರಲ್ ಪ್ಯಾಕೆಟ್ ರೇಡಿಯೋ ಸರ್ವಿಸ್ (GPRS). ರಿಲೀಸ್ '99 GSM ವಿಕಸನಕ್ಕಾಗಿ ವರ್ಧಿತ ಮಾಹಿತಿ ಪ್ರಮಾಣ (EDGE) ಬಳಸಿ ಹೆಚ್ಚಿದ ವೇಗದಲ್ಲಿ ಮಾಹಿತಿಯ ರವಾನೆಯ ಸೌಲಭ್ಯವನ್ನು ಪರಿಚಯಿಸಿತು.
ಇತಿಹಾಸ
1982ರಲ್ಲಿ, ಯುರೋಪ್ ಅಂಚೆ ಮತ್ತು ದೂರ ಸಂಪರ್ಕ ಆಡಳಿತ ಮಂಡಳಿಗಳ ಸಮ್ಮೇಳನ (CEPT) ಯುರೋಪಿನಾದ್ಯಂತ ಬಳಸಬಹುದಾದ ಒಂದು ಸಂಚಾರಿ ದೂರವಾಣಿ ವ್ಯವಸ್ಥೆಯ ವಿನ್ಯಾಸ ಅಭಿವೃದ್ಧಿ ಪಡಿಸಲು ಗ್ರೂಪ್ ಸ್ಪೆಷಲ್ ಮೊಬೈಲ್ (GSM)ನ್ನು ರೂಪಿಸಿತು.[೬] 1987ರಲ್ಲಿ, ಯುರೋಪಿನಾದ್ಯಂತ ಒಂದೇ ಸಂಚಾರಿ ದೂರವಾಣಿ ವ್ಯವಸ್ಥೆಯನ್ನು ಸ್ಥಾಪಿಸಲು, 13 ರಾಷ್ಟ್ರಗಳು ಸೇರಿ ಒಂದು ಕರಾರು ದಸ್ತಾವೈಜುಗೆ ಸಹಿ ಹಾಕಿದವು.[೭][೮] ಅಂತಿಮವಾಗಿ, ಟಾರ್ಲೇವ್ ಮ್ಯಾಸೆಂಗ್ ನೇತೃತ್ವದಲ್ಲಿ SINTEF ರೂಪಿಸಿದ ವ್ಯವಸ್ಥೆಯನ್ನು ಆಯ್ಕೆ ಮಾಡಲಾಯಿತು.[೯]
1989ರಲ್ಲಿ, GSM ಜವಾಬ್ದಾರಿಯನ್ನು ಯುರೋಪಿನ ದೂರಸಂಪರ್ಕ ಮಾನಕ ಸಂಸ್ಥೆ (ETSI)ಗೆ ಹಸ್ತಾಂತರಿಸಲಾಯಿತು ಮತ್ತು GSM ವೈಶಿಷ್ಟ್ಯತೆಗಳ ಮೊದಲನೆಯ ಹಂತವನ್ನು 1990ರಲ್ಲಿ ಪ್ರಕಟಿಸಲಾಯಿತು. ಮೊದಲ GSM ಜಾಲವನ್ನು 1991ರಲ್ಲಿ ಫಿನ್ಲೆಂಡ್‌ನಲ್ಲಿ ರೇಡಿಯೊಲಿಂಜಾಸಂಸ್ಥೆ ಎರಿಕ್ಸನ್‌ಜೊತೆ ಸೇರಿ ಜಂಟಿಯಾಗಿ ತಾಂತ್ರಿಕ ಮೂಲಭೂತ ಸೌಕರ್ಯ ನಿರ್ವಹಣೆಯೊಂದಿಗೆ ಜಾರಿಗೊಳಿಸಿತು.[೧೦] 1993ರ ಅಂತ್ಯದಲ್ಲಿ, 48 ದೇಶಗಳಲ್ಲಿ 70 ಸೇವಾಕರ್ತೃಗಳನ್ನು ಒಳಗೊಂಡಿರುವ GSM ದೂರವಾಣಿ ಜಾಲಗಳು ಒಂದು ದಶಲಕ್ಷಕ್ಕಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿತ್ತು.[೧೧]
ತಾಂತ್ರಿಕ ವಿವರಗಳು
ಕೋಶೀಯ ರೇಡಿಯೋ ಜಾಲ
GSM ಕೋಶೀಯ ಜಾಲವಾಗಿದೆ, ಅರ್ಥಾತ್ ಸಂಚಾರಿ ದೂರವಾಣಿಗಳು ನಿಕಟ ವಲಯಗಳಲ್ಲಿರುವ ಕೋಶಗಳನ್ನು ಅರಸಿ ಸಂಪರ್ಕಿಸುತ್ತವೆ.
GSM ಜಾಲದಲ್ಲಿ ಐದು ವಿವಿಧ ಗಾತ್ರಗಳ ಕೋಶಗಳುಂಟು—ಮ್ಯಾಕ್ರೊ, ಮೈಕ್ರೊ, ಪಿಕೊ, ಫೆಮ್ಟೊ ಮತ್ತು ಅಂಬ್ರೆಲಾ ಕೋಶಗಳು. ಪ್ರತಿಯೊಂದು ಕೋಶದ ವ್ಯಾಪ್ತಿ-ವಿಸ್ತೀರ್ಣ ಕಾರ್ಯಗತಗೊಳಿಸುವ ಪರಿಸರದ ಪ್ರಕಾರ ಬದಲಾಗುತ್ತದೆ. ಮ್ಯಾಕ್ರೊ ಕೋಶಗಳು ಒಂದು ಕಟ್ಟಡ ಅಥವಾ ಸ್ಥಾವರದ ಛಾವಣಿಯ ಸರಾಸರಿ ಮಟ್ಟಕ್ಕಿಂತಲೂ ಎತ್ತರದ ಮಟ್ಟದಲ್ಲಿ ಮೂಲ ಕೇಂದ್ರ ಸ್ಪರ್ಶತಂತು ಸ್ಥಾಪಿಸಲಾಗಿರುವಂತಹ ಸ್ಥಳದಲ್ಲಿರುವ ಕೋಶಗಳಾಗಿರುತ್ತವೆ. ಮೈಕ್ರೋ ಕೋಶಗಳು ಒಂದು ಕಟ್ಟಡ ಅಥವಾ ಸ್ಥಾವರದ ಛಾವಣಿಯ ಸರಾಸರಿ ಮಟ್ಟಕ್ಕಿಂತಲೂ ಕೆಳಗಿನ ಮಟ್ಟದಲ್ಲಿರುವ ಸ್ಪರ್ಶತಂತುವನ್ನು ಹೊಂದಿರುವ ಕೋಶಗಳಾಗಿರುತ್ತವೆ, ಇಂತಹವುಗಳು ನಗರ ವಲಯಗಳಲ್ಲಿ ಕಂಡುಬರುತ್ತವೆ. ಪಿಕೊ ಕೋಶಗಳು ಕಡಿಮೆ ಗಾತ್ರದ ಕೋಶಗಳಾಗಿದ್ದು, ಇದರ ವ್ಯಾಪ್ತಿ-ವಿಸ್ತೀರ್ಣವು ಕೇವಲ ಕೆಲವೇ ಡಜನ್ ಮೀಟರುಗಳ ವರೆಗೆ ಸೀಮಿತವಾಗಿರುತ್ತದೆ, ಇವನ್ನು ಪ್ರಮುಖವಾಗಿ ಒಳಾಂಗಣಗಳಲ್ಲಿ ಬಳಸಲಾಗುತ್ತವೆ.ಫೆಮ್ಟೊ ಕೋಶಗಳನ್ನು ಗೃಹ ವಲಯ ಮತ್ತು ಸಣ್ಣ ಪ್ರಮಾಣದ ವ್ಯಾವಹಾರಿಕ ವಾತಾವರಣಗಳಲ್ಲಿ ಬಳಸಲಾಗಿದ್ದು, ಬ್ರಾಡ್‌ಬ್ಯಾಂಡ್ ಅಂತರಜಾಲ ಸಂಪರ್ಕದ ಮೂಲಕ ಸೇವಾ ಪೂರೈಕದಾರರ ಜಾಲದೊಂಡನೆ ಸಂಪರ್ಕ ಮಾಡಬಹುದಾಗಿದೆ.ಅಂಬ್ರೆಲಾ ಕೋಶಗಳನ್ನು ಸಣ್ಣ ಗಾತ್ರದ ಕೋಶಗಳುಳ್ಳ ನೆರಳಿನ ವಲಯಗಳಲ್ಲಿ ಬಳಸಲಾಗಿ, ಅಂತಹ ಕೋಶಗಳ ವ್ಯಾಪ್ತಿಗಳ ನಡುವಿನ ಅಂತರವನ್ನು ಭರಿಸಲು ಬಳಸಲಾಗುತ್ತದೆ.
ಸ್ಫರ್ಶ ತಂತುವಿನ ಎತ್ತರ, ಹೆಚ್ಚಳ ಮತ್ತು (ಕೆಲವು ಮೀಟರ್‌ಗಳಿಂದ ಹಿಡಿದು ಹಲವು ಕಿಲೋಮೀಟರ್‌ಗಳ ವರೆಗಿನ) ಪ್ರಸರಣ ಸ್ಥಿತಿಗಳನ್ನು ಅವಲಂಬಿಸಿ, ಕೋಶದ ಅಡ್ಡಲಾದ ತ್ರಿಜ್ಯವು ಬದಲಾಗುತ್ತದೆ.GSM ವೈಶಿಷ್ಟ್ಯವು ಪ್ರಾಯೋಗಿಕ ಬಳಕೆಯಲ್ಲಿ ಸಮರ್ಥಿಸಬಲ್ಲ ಅತಿ ಹೆಚ್ಚು ದೂರವು 35 kilometres (22 mi). ವಿಸ್ತರಿತ ಕೋಶ[೧೨] ವೊಂದರ ಪರಿಕಲ್ಪನೆಯ ಹಲವು ಕಾರ್ಯಗತಗೊಳಿಸುವಿಕೆ, ಕೋಶದ ತ್ರಿಜ್ಯದ ಎರಡರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಇರಬಹುದು, ಸ್ಪರ್ಶತಂತು ವ್ಯವಸ್ಥೆ, ಭೂಪ್ರದೇಶ ಮತ್ತು ಟೈಮಿಂಗ್ ಅಡ್ವಾನ್ಸ್‌ನ್ನು ಅವಲಂಬಿಸಿರುತ್ತದೆ.
ಒಳಾಂಗಣ ವ್ಯಾಪ್ತಿ GSM ಬೆಂಬಲಿತವಾಗಿದ್ದು ಮತ್ತು ಪಿಕೊಸೆಲ್ ಮೂಲ ಕೇಂದ್ರ ಅಥವಾ, ಹೊರಾಂಗಣ ಸ್ಫರ್ಶ ತಂತುಗಳಿಂದ ರೇಡಿಯೊ ತರಂಗಗಳನ್ನು ಪ್ರತ್ಯೇಕ ಒಳಾಂಗಣ ವಿತರಿತ ಸ್ಪರ್ಶತಂತು ವ್ಯವಸ್ಥೆಗೆ ರವಾನಿಸಲು, ಶಕ್ತಿ ವಿಚ್ಛೇದಕಗಳನ್ನು ಹೊಂದಿರುವ ಒಂದು ಒಳಾಂಗಣ ಪುನರಾವರ್ತಕವನ್ನು ಬಳಸಿ ಇದರ ಅನುಕೂಲವನ್ನು ಪಡೆಯಬಹುದಾಗಿದೆ. ಒಳಾಂಗಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರೆ ಕ್ಷಮತೆಯ ಅಗತ್ಯವಿರುವ ಕಾರಣ ಇಂತಹ ವ್ಯವಸ್ಥೆಯನ್ನು ಬಳಸಲಾಗುವುದು. ಉದಾಹರಣೆಗೆ ಮಾರಾಟ ಮಳಿಗೆಗಳು ಅಥವಾ ವಿಮಾನ ನಿಲ್ದಾಣಗಳು.ಆದಾಗ್ಯೂ ಇದು ಒಂದು ಪೂರ್ವಾಪೇಕ್ಷಿತವಲ್ಲ, ಏಕೆಂದರೆ ಒಳಾಂಗಣದ ವ್ಯಾಪ್ತಿಯ ಸೌಲಭ್ಯವನ್ನು ಹತ್ತಿರದಲ್ಲಿರುವ ಕೋಶದಿಂದ ಕಟ್ಟಡದೊಳಗೆ ನುಗ್ಗುವ ರೇಡಿಯೋ ತರಂಗಗಳ ಮೂಲಕ ಒದಗಿಸಲಾಗುತ್ತದೆ.
GSMನಲ್ಲಿ ಬಳಸಲಾಗಿರುವ ಸಮನ್ವಯತೆ ಗಾಸಿಯನ್ ಕನಿಷ್ಟ-ಸೂಚಿಕೆ (GMSK), ಒಂದು ರೀತಿಯ ನಿರಂತರ-ಹಂತ ಆವರ್ತನ ಕದಲು ಸೂಚಿಕೆ. GMSKದಲ್ಲಿ, ವಾಹಕದೊಳಗೆ ಸಮನ್ವಯತೆಗೊಳ್ಳಬೇಕಾದ ಸಂಕೇತವನ್ನು ಆವರ್ತನಾ ತರಂಗಾಂತರಕ್ಕೆ ರವಾನಿಸುವ ಮುಂಚೆ, ಗಾಸಿಯನ್ ಕೆಳಮಟ್ಟದ ಶೋಧಕದ ಮೂಲಕ ನುಣುಪುಗೊಳಿಸಲಾಗುತ್ತದೆ, ಇದು ವ್ಯತಿಕರಣವನ್ನು ನೆರೆಯ ತರಂಗಪಟ್ಟಿಗಳಿಗೆ ಸೀಮಿತಗೊಳಿಸುತ್ತದೆ (ಪಕ್ಕದ ತರಂಗಗಪಟ್ಟಿಯ ವ್ಯತಿಕರಣ).
ಶ್ರಾವ್ಯ ಸಾಧನಗಳೊಂದಿಗೆ ವ್ಯತಿಕರಣ
ಕೆಲವು ಶ್ರಾವ್ಯ ಸಾಧನಗಳು ರೇಡಿಯೋ ತರಂಗಗಳ ವ್ಯತಿಕರಣ (RFI)ಗಳಿಗೆ ಒಳಗಾಗುವ ಸಾಧ್ಯತೆಗಳಿವೆ, ಇವನ್ನು ಕಡಿಮೆಗೊಳಿಸಲು/ವರ್ಜಿಸಲು, ಶ್ರಾವ್ಯ ಸಾಧನಗಳೊಳಗೆ ಹಚ್ಚುವರಿ ರಕ್ಷಣಾ ಮತ್ತು/ಅಥವಾ ಉಪಮಾರ್ಗ ವಿದ್ಯುತ್ಸಂಚಾಯಕವನ್ನು ಅಳವಡಿಸಬಹುದಾಗಿದೆ. ಆದಾಗ್ಯೂ, ಇದನ್ನು ಮಾಡಲು ಹೆಚ್ಚಿನ ವೆಚ್ಚವನ್ನು ಸಮರ್ಥಿಸುವುದು ವಿನ್ಯಾಸಕರಿಗೆ ಸುಲಭದ ಮಾತಲ್ಲ.[೧೩]
ನಿಕಟದಲ್ಲಿರುವ ಒಂದು GSM ದೂರವಾಣಿಯು ಒಂದು ರೀತಿಯ "ಡಿಟ್, ಡಿಟ್ ಡಿ-ಡಿಟ್, ಡಿಟ್ ಡಿ-ಡಿಟ್, ಡಿಟ್ ಡಿ-ಡಿಟ್" ಶಬ್ದವನ್ನು ಹಲವು ಶ್ರಾವ್ಯ ಉಪಕರಣಗಳಾದ PAಗಳು, ನಿಸ್ತಂತು ಧ್ಯನಿಗ್ರಾಹಕಗಳು, ಸ್ಟೀರಿಯೊ ಶ್ರಾವ್ಯ ಉಪಕರಣಗಳು, ದೂರದರ್ಶನಗಳು, ಗಣಕಗಳು, ನಿಸ್ತಂತು ದೂರವಾಣಿಗಳು ಮತ್ತು ವೈಯಕ್ತಿಕ ಸಂಗೀತ ಸಾಧಕಗಳಲ್ಲಿ ಕೇಳಿಬರುವಂತೆ ಮಾಡುತ್ತದೆ.ಈ ಶ್ರಾವ್ಯ ಸಾಧನಗಳು GSM ದೂರವಾಣಿಯನಿಕಟ ಕ್ಷೇತ್ರದಲ್ಲಿದ್ದಲ್ಲಿ, ರೇಡಿಯೋ ಸಂಕೇತಗಳು ಪ್ರಬಲವಾಗಿದ್ದು ಶ್ರಾವ್ಯ ಸರಪಳಿಯಲ್ಲಿರುವಂತಹ ಘನರೂಪದ ವರ್ಧಕಗಳನ್ನು ವೇದಕಗಳನ್ನಾಗಿ ಮಾಡುತ್ತವೆ. ಕ್ಲಿಕ್ ಶಬ್ದವೇ TDMA ಸಂಕೇತಗಳನ್ನು ಒಯ್ಯುವ ಶಕ್ತಿಯ ಸ್ಫೋಟವನ್ನು ಬಿಂಬಿಸುವುದು. ಈ ಸಂಕೇತಗಳು ಕಾರ್ ಸ್ಟೀರಿಯೋ ಮತ್ತು ಇತರೆ ವಿದ್ಯುನ್ಮಾನ ಉಪಕರಣಗಳೊಂದಿಗೆ ವ್ಯತಿಕರಣ ಮಾಡುವ ಸಾದ್ಯತೆಗಳಿವೆ.ಇದು ಸಂಚಾರಿ ದೂರವಾಣಿಯ ವಿನ್ಯಾಸ ಮತ್ತು USನ ನಿಯೋಗ FCC, ವಿದ್ಯುನ್ಮಾನ ಉಪಕರಣಗಳೊಂದಿಗಿನ ವ್ಯತಿಕರಣದ ಬಗ್ಗೆ ನೀತಿ-ನಿಯಮಗಳ 15ನೆಯ ಭಾಗದೊಂದಿಗೆ ಕಟ್ಟುನಿಟ್ಟಾದ ಪಾಲನೆಯನ್ನೂ ಅವಲಂಬಿಸುತ್ತದೆ.
GSM ತರಂಗಾಂತರಗಳು
GSM ಜಾಲಗಳು ಹಲವು ವಿವಿಧ ತರಂಗಾಂತರಗಳಲ್ಲಿ ತಮ್ಮ ಕಾರ್ಯನಿರ್ವಹಿಸುತ್ತವೆ. (2Gಗಾಗಿ GSM ತರಂಗಾಂತರ ಶ್ರೇಣಿ ಮತ್ತು 3Gಗಾಗಿ UMTS ತರಂಗಾಂತರದ ಬ್ಯಾಂಡ್.ಹಲವು 2G GSM ಜಾಲಗಳು 900 MHz ಅಥವಾ 1800 MHz ಬ್ಯಾಂಡ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಅಮೆರಿಕಾದ ಎರಡೂ ಖಂಡಗಳಲ್ಲಿನ (ಅಮೆರಿಕಾ ದೇಶ ಮತ್ತು ಕೆನಡಾ ಸೇರಿದಂತೆ) ಕೆಲವು ದೇಶಗಳು 850 MHz ಮತ್ತು 1900 MHz ಬ್ಯಾಂಡ್‌ಗಳನ್ನು ಬಳಸುತ್ತವೆ, ಏಕೆಂದರೆ 900 ಮತ್ತು 1800 MHz ತರಂಗಾಂತರದ ಬ್ಯಾಂಡ್‌ಗಳನ್ನು ಮುಂಚೆಯೇ ವಿತರಿಸಲಾಗಿತ್ತು.ಯುರೋಪಿನಲ್ಲಿರುವ ಹಲವು 3G GSM ಜಾಲಗಳು 2100 MHz ತರಂಗಾಂತರದ ಬ್ಯಾಂಡ್‌ನಲ್ಲಿ ಕಾರ್ಯ ನಿರ್ವಹಿಸುತ್ತವೆ.
ಅಪರೂಪದ 400 ಮತ್ತು 450 MHz ತರಂಗಾಂತರದ ಬ್ಯಾಂಡ್‌ಗಳು ಕೆಲವನ್ನು ಮೊದಲ-ತಲೆಮಾರಿನ ವ್ಯವಸ್ಥೆಗಾಗಿ ಬಳಸಲಾಗುತ್ತಿದ್ದ ತರಂಗಾಂತರಗಳಿರುವ ದೇಶಗಳಲ್ಲಿ ಜಾರಿಗೊಳಿಸಲಾಗಿದೆ.
GSM-900 ಸಂಚಾರಿ ಕೇಂದ್ರದಿಂದ ಮೂಲ ಕೇಂದ್ರಕ್ಕೆ ಮಾಹಿತಿಯನ್ನು ರವಾನಿಸಲು (ಅಪ್ಲಿಂಕ್) 890–915 MHz ಮತ್ತು ವಿರುದ್ಧ ದಿಕ್ಕಿನಲ್ಲಿ (ಡೌನ್ಲಿಂಕ್) 935–960 MHz ತರಂಗಾಂತರಗಳನ್ನು ಬಳಸಿ, 200 kHzಅಂತರದಲ್ಲಿರುವ 125 RF ತರಂಗಪಟ್ಟಿಗಳನ್ನು (ತರಂಗಪಟ್ಟಿಗಳ ಸಂಖ್ಯೆ 0 to 124) ನೀಡುತ್ತದೆ. 45 MHzರ ಡ್ಯೂಪ್ಲೇ ಅಂತರಿಕೆಯನ್ನೂ ಸಹ ಬಳಸಲಾಗಿದೆ.
ಕೆಲವು ದೇಶಗಳಲ್ಲಿ ಹೆಚ್ಚಿನ ತರಂಗಾಂತರ ಶ್ರೇಣಿಯನ್ನು ವ್ಯಾಪ್ತಿಯೊಳಗೆ ತರಲು GSM-900 ಬ್ಯಾಂಡ್‌ನ್ನು ವಿಸ್ತರಿಸಲಾಗಿದೆ. ಈ 'ವಿಸ್ತರಿತ GSM', E-GSM, 880–915 MHz (ಅಪ್ಲಿಂಕ್) ಮತ್ತು 925–960 MHz (ಡೌನ್ಲಿಂಕ್) ಬಳಸಿ, 50 ತರಂಗಪಟ್ಟಿಗಳನ್ನು (ತರಂಗಪಟ್ಟಿ ಸಂಖ್ಯೆ 975 ರಿಂದ 1023 ಮತ್ತು 0) ಮೂಲ GSM-900 ಬ್ಯಾಂಡ್‌ಗೆ ಸೇರಿಸುತ್ತದೆ. ಪ್ರತಿ ರೇಡಿಯೊ ತರಂಗಾಂತರ ಪಟ್ಟಿಗೆ ಎಂಟು ಪೂರ್ಣ-ಪ್ರಮಾಣದ ಅಥವಾ ಹದಿನಾರು ಅರ್ಧ-ಪ್ರಮಾಣದ ವಾಕ್ ತರಂಗಪಟ್ಟಿಗಳಿಗೆ ಅವಕಾಶ ನೀಡಲು ಸಮಯ ವಿಭಾಗೀಯ ಬಹುಘಟಕೀಕರಣವನ್ನು ಬಳಸಲಾಗಿದೆ.ಎಂಟು ರೇಡಿಯೊ ಸಮಯಾವಧಿಗಳುಂಟು, ಇವನ್ನು (ಎಂಟು ಸ್ಫೋಟ ಅವಧಿಗಳ ನೀಡುವಿಕೆ) ಒಂದು TDMA ಕಟ್ಟುವಿನೊಳಗೆ ಗುಂಪಾಗಿರಿಸಲಾಗಿದೆ. ಇದೇ ಕಾಲಾವಧಿಯಲ್ಲಿ ಅರ್ಧ ಪ್ರಮಾಣದ ತರಂಗಪಟ್ಟಿಗಳು ಪರ್ಯಾಯ ಕಟ್ಟುಗಳನ್ನು ಬಳಸುತ್ತವೆ.ಎಲ್ಲಾ ಎಂಟು ತರಂಗಪಟ್ಟಿಗಳಿಗೂ ಮಾಹಿತಿ ಪ್ರಮಾಣವು 270.833 kbit/s ಆಗಿದ್ದು ಕಟ್ಟಿನ ಅವಧಿ 4.615 ms ಆಗಿರುತ್ತದೆ..
ಸಂಚಾರಿ ದೂರವಾಣಿಯಲ್ಲಿರುವ ಪ್ರಸರಣಾ ಶಕ್ತಿಯು GSM850/900ರಲ್ಲಿ ಗರಿಷ್ಠ 2 ವ್ಯಾಟ್‌ಗಳು ಮತ್ತು GSM1800/1900ರಲ್ಲಿ 1 ವ್ಯಾಟ್‌ಗೆ ಸೀಮಿತವಾಗಿರುತ್ತದೆ.
ಧ್ವನಿ ಕೊಡೆಕ್‌ಗಳು
GSM 3.1 kHz ಧ್ವನಿಯನ್ನು 5.6 ಮತ್ತು 13 kbit/ಸೆಕೆಂಡ್ ನಡುವೆ ತುರುಕಿಸಲು ಹಲವಾರು ರೀತಿಯ ಧ್ವನಿ ಕೊಡೆಕ್‌ಗಳನ್ನು ಬಳಸಿದೆ. ಮೂಲತ:, ನಿಗದಿತವಾಗಿದ್ದ ಮಾಹಿತಿ ತರಂಗಪಟ್ಟಿಗಳ ಆಧಾರದ ಮೇಲೆ ಹೆಸರಿಸಲಾದ ಎರಡು ಕೊಡೆಕ್‌ಗಳನ್ನು ಬಳಸಿ ಅರ್ಧ ಪ್ರಮಾಣ (5.6 kbit/ಸೆಕೆಂಡ್) ಮತ್ತು ಪೂರ್ಣ ಪ್ರಮಾಣ (13 kbit/ಸೆಕೆಂಡ್). ಇವು ರೇಖೀಯ ಅಂದಾಜು ಸಂಕೇತೀಕರಣ (LPC) ಆಧಾರಿತ ವ್ಯವಸ್ಥೆಯನ್ನು ಬಳಸಿದವು. ಬಿಟ್‌ರೇಟ್‌ಗಳೊಂದಿಗಿನ ದಕ್ಷತೆಯ ಜೊತೆಗೆ, ಈ ಕೊಡೆಕ್‌ಗಳು ಶ್ರಾವ್ಯದ ಬಹುಮುಖ್ಯ ಅಂಶಗಳನ್ನು ಪತ್ತೆ ಹಚ್ಚಿ, ವಾಯು ಅಂತರ್ಮುಖ ಪದರವು ಸಂಕೇತದ ಉತ್ತಮ ಭಾಗಗಳನ್ನು ಆದ್ಯತೀಕರಿಸಿ ರಕ್ಷಿಸಲು ಅನುವು ಮಾಡಿಕೊಡುತ್ತವೆ.
1997ರಲ್ಲಿ GSMನ್ನು ವರ್ಧಿತ ಪೂರ್ಣ ಪ್ರಮಾಣ (EFR) ಕೊಡೆಕ್‌ನೊಂದಿಗೆ ಇನ್ನಷ್ಟು ವರ್ಧಿಸಲಾಯಿತು.[೧೪] ಇದು ಪೂರ್ಣ ಪ್ರಮಾಣ ತರಂಗಪಟ್ಟಿಯನ್ನು ಬಳಸುವ 12.2 kbit/ಸೆಕೆಂಡ್ ಕೊಡೆಕ್. ಅಂತಿಮವಾಗಿ,UMTSನ ವಿನ್ಯಾಸದೊಂದಿಗೆ, EFRನ್ನು AMR-ನ್ಯಾರೊಬ್ಯಾಂಡ್, ಎಂಬ ಮಾರ್ಪಡಿಸಬಹುದಾದ-ಪ್ರಮಾಣ ಕೊಡೆಕ್ ಆಗಿ ಪರಿವರ್ತಿಸಲಾಯಿತು. ಇದು ಉತ್ತಮ ಗುಣಮಟ್ಟದ್ದು ಹಾಗೂ ಪೂರ್ಣ ಪ್ರಮಾಣದ ತರಂಗಪಟ್ಟಿಗಳ ಮೇಲೆ ಬಳಸಿದಾಗ ವ್ಯತಿಕರಣದ ವಿರುಧ್ಧ ದೃಢವಾಗಿರುತ್ತದೆ, ಅರ್ಧ ಪ್ರಮಾಣದ ತರಂಗಪಟ್ಟಿಗಳಲ್ಲಿ ಉತ್ತಮ ರೇಡಿಯೋ ವಾತಾವರಣದಲ್ಲಿ ಬಳಸಿದಾಗ ಕಡಿಮೆ ದೃಢವಾದರೂ ಉನ್ನತ ಗುಣಮಟ್ಟದ್ದಾಗಿಯೇ ಇರುತ್ತವೆ.
ಜಾಲದ ನಿರ್ಮಾಣ
ಗ್ರಾಹಕರ ದೃಷ್ಟಿಕೋನದಿಂದ, GSM ಹಿಂದಿನ ಜಾಲವು ಎಲ್ಲಾ ಅಗತ್ಯ ಸೇವೆಗಳನ್ನು ಒದಗಿಸಬೇಕಾದ ಕಾರಣ, ಬಹಳ ವಿಶಾಲ ಮತ್ತು ಸಂಕೀರ್ಣವಾಗಿದೆ. ಇದನ್ನು ಹಲವು ವರ್ಗಗಳಾಗಿ ಭಾಗ ಮಾಡಲಾಗಿದ್ದು, ಪ್ರತಿಯೊಂದು ಭಾಗವೂ ಪ್ರತ್ಯೇಕ ವಸ್ತುಗಳನ್ನಾಗಿ ಪರಿಗಣಿಸಲಾಗಿದೆ.
- ಮೂಲ ಕೇಂದ್ರ ಉಪವ್ಯವಸ್ಥೆ (ಮೂಲ ಕೇಂದ್ರಗಳು ಮತ್ತು ಅವುಗಳ ನಿಯಂತ್ರಕರು).
- ಜಾಲ ಮತ್ತು ಬದಲಾವಣೆಯ ಉಪವ್ಯವಸ್ಥೆ (ಸ್ಥಿರ ಜಾಲವನ್ನು ಹೋಲುವ ಜಾಲದ ಭಾಗ). ಕೆಲವೊಮ್ಮೆ ಇದನ್ನು ಗೊರಟೆ ಜಾಲವೆಂದೂ ಕರೆಯಲಾಗುತ್ತದೆ.
- GPRS ಗೊರಟೆ ಜಾಲ (ಸಣ್ಣ ಕಟ್ಟು-ಆಧಾರಿತ ಅಂತರಜಾಲ ಸಂಪರ್ಕಕ್ಕೆ ಅನುವು ಮಾಡಿಕೊಡುವ ಜಾಲದ ಭಾಗ).
- ಈ ವ್ಯವಸ್ಥೆಯಲ್ಲಿರುವ ಎಲ್ಲಾ ಅಂಶಗಳೂ ಒಗ್ಗೂಡಿ ಧ್ವನಿ ಕರೆಗಳು ಹಾಗೂ SMS ಹಲವಾರು GSM ಸೇವೆಗಳನ್ನು ಒದಗಿಸುತ್ತವೆ.
ಚಂದಾದಾರರ ಗುರುತಿನ ಘಟಕ
GSMನ ಪ್ರಮುಖ ವೈಶಿಷ್ಠ್ಯತೆಗಳಲ್ಲಿ ಒಂದಾದ ಚಂದಾದಾರರ ಗುರುತಿನ ಘಟಕವನ್ನು, SIM (ಸಿಮ್) ಕಾರ್ಡ್ ಎಂದೂ ಕರೆಯಲಾಗಿದೆ. SIM ಪ್ರತ್ಯೇಕಿಸಬಹುದಾದ ಒಂದು ಸ್ಮಾರ್ಟ್ ಕಾರ್ಡ್ ಆಗಿದ್ದು, ಬಳಕೆದಾರರ ಚಂದಾ ವಿವರಗಳು ಮತ್ತು ದೂರವಾಣಿ ಸಂಖ್ಯೆಯ ಪುಸ್ತಕವನ್ನು ಹೊಂದಿರುತ್ತದೆ.ಇದು ಬಳಕೆದಾರನಿಗೆ/ಳಿಗೆ ದೂರವಾಣಿ ಉಪಕರಣವನ್ನು ಬದಲಾಯಿಸಿದ ನಂತರ ತನ್ನ ಮಾಹಿತಿಯನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.ಪರ್ಯಾಯವಾಗಿ, ಬಳಕೆದಾರರು ತಮ್ಮ ದೂರವಾಣಿಯನ್ನು ಉಳಿಸಿಕೊಂಡು SIMಬದಲಾಯಿಸುವುದರ ಮೂಲಕ ತಮ್ಮ ನಿರ್ವಾಹಕರನ್ನು ಬದಲಾಯಿಸಬಹುದಾಗಿದೆ. ಕೆಲವು ನಿರ್ವಾಹಕರು ದೂರವಾಣಿ ಒಂದೇ SIMಹೊಂದುವಂತೆ, ಅಥವಾ ಅವರು ವಿತರಿಸಿದ SIMಮಾತ್ರ ಚಾಲನೆಯಲ್ಲಿರುವಂತೆ ಮಾಡಿ ಬದಲಾವಣೆಯನ್ನು ತಡೆಗಟ್ಟುತ್ತಾರೆ. ಈ ಪದ್ಧತಿಗೆ SIM ಲಾಕಿಂಗ್ ಎನ್ನಲಾಗಿ, ಕೆಲವು ದೇಶಗಳಲ್ಲಿ ಇದನ್ನು ನ್ಯಾಯಬದ್ಧವಲ್ಲ ಎಂದು ಪರಿಗಣಿಸಲಾಗಿದೆ.
ಆಸ್ಟ್ರೇಲಿಯಾ, ಉತ್ತರ ಅಮೆರಿಕಾ ಮತ್ತು ಯುರೋಪ್‌ಗಳಲ್ಲಿ ಹಲವು ನಿರ್ವಾಹಕರು ತಾವು ಮಾರಾಟ ಮಾಡುವ ಸಂಚಾರಿ ದೂರವಾಣಿಗಳನ್ನು ಲಾಕ್ ಮಾಡುತ್ತಾರೆ.ಹೀಗೇಕೆಂದರೆ ಚಂದಾಗಳಿಂದ ಬರುವ ಆದಾಯಗಳ ಕಾರಣ ಅವರು ವಿತರಿಸುವ ಸಂಚಾರಿ ದೂರವಾಣಿಗಳು ಕಡಿಮೆ ಬೆಲೆಯಲ್ಲಿರುತ್ತವೆ. ಹಾಗಾಗಿ ಪ್ರತಿಸ್ಪರ್ಧಿಗಳು ಸಂಚಾರಿ ದೂರವಾಣಿಗಳಿಗೆ ಸಬ್ಸಿಡಿ ನೀಡುವುದನ್ನು ತಪ್ಪಿಸಲು ನಿರ್ವಾಹಕರು ಹೀಗೆ ಮಾಡುತ್ತಾರೆ.ಚಂದಾದಾರರು ಸಾಮಾನ್ಯವಾಗಿ ನಿರ್ವಾಹಕರನ್ನು ಸಂಪರ್ಕಿಸಿ ಶುಲ್ಕವನ್ನು ಪಾವತಿಸಿ ಲಾಕ್‌ನ್ನು ತೆಗೆಸಬಹುದು; ಖಾಸಗಿ ಸೇವೆಗಳ ಮೂಲಕವೂ ಲಾಕ್‌ನ್ನು ತೆಗೆಯಿಸಬಹುದು; ಅಥವಾ ಅಂತರಜಾಲದಲ್ಲಿ ಲಭ್ಯವಿರುವ ತರಹೇವಾರಿ ಸಾಫ್ಟ್‌ವೇರ್‌ಗಳನ್ನು ಬಳಸಿ ಸಂಚಾರಿ ದೂರವಾಣಿಗಳ ಲಾಕ್‌ನ್ನು ತಾವೇ ತೆಗೆಯಿಸಬಹುದಾಗಿದೆ.ಕೆಲವು ಅಂತರಜಾಲ ತಾಣಗಳು ಉಚಿತವಾಗಿ ಅನ್‌ಲಾಕ್ ಮಾಡಿಕೊಡಬಹುದಾದರೆ, ಇನ್ನು ಕೆಲವು ಶುಲ್ಕ ಪಾವತಿ ಮಾಡಿದ ನಂತರ ಈ ಸೇವೆಯನ್ನೊದಗಿಸುತ್ತವೆ.ಲಾಕಿಂಗ್ ವ್ಯವಸ್ಥೆಯು ಈ ಸಂಚಾರಿ ದೂರವಾಣಿಗೆ ಅನ್ವಯಿಸುತ್ತದೆ; ಇದರ ಅಂತಾರಾಷ್ಟ್ರೀಯ ಸಂಚಾರಿ ದೂರವಾಣಿ ಗುರುತು (IMEI) ಸಂಖ್ಯೆ, (SIM ಕಾರ್ಡ್ ಗುರುತಿಸುವ) ಖಾತೆಗಲ್ಲ.
ಬಾಂಗ್ಲಾದೇಶ, ಬೆಲ್ಜಿಯಂ, ಕಾಸ್ಟಾ ರೀಕಾ, ಇಂಡೊನೇಷ್ಯಾ, ಮಲೇಷ್ಯಾ, ಹಾಂಗ್ ಕಾಂಗ್ ಮತ್ತು ಪಾಕಿಸ್ತಾನದಂತಹ ದೇಶಗಳಲ್ಲಿ ಎಲ್ಲಾ ಸಂಚಾರಿ ದೂರವಾಣಿಗಳೂ ಅನ್ಲಾಕ್ ಸ್ಥಿತಿಯಲ್ಲಿಯೇ ಮಾರಾಟವಾಗುತ್ತವೆ.ಆದಾಗ್ಯೂ, ಬೆಲ್ಜಿಯಂನಲ್ಲಿ ನಿರ್ವಾಹಕರು ಸಂಚಾರಿ ದೂರವಾಣಿಗಳ ಮೇಲೆ ಸಬ್ಸಿಡಿ ನೀಡುವುದು ಕಾನೂನು ಬಾಹಿರ. ಫಿನ್ಲೆಂಡ್‌ನಲ್ಲಿ 1 ಏಪ್ರಿಲ್ 2006ರ ವರೆಗೆ ಇದೇ ವಿವಾದವಾಗಿತ್ತು. ಅಂದಿನಿಂದ ಖಾತೆಗಳು ಮತ್ತು ಸಬ್ಸಿಡಿ ದೂರವಾಣಿಗಳನ್ನು ಒಟ್ಟಿಗೆ ಮಾರುವುದು ಕಾನೂನು ಸಮ್ಮತವಾಯಿತು, ಆದರೂ ನಿರ್ವಾಹಕರು ಅವಧಿಯ (ಸುಮಾರು 24 ತಿಂಗಳುಗಳ) ನಂತರ ದೂರವಾಣಿಗಳನ್ನು ಉಚಿತವಾಗಿ ಅನ್ಲಾಕ್ ಮಾಡಬೇಕಾಗಿದೆ.
GSM ಭದ್ರತೆ
ಮಧ್ಯಮ ಮಟ್ಟದ ಭದ್ರತೆಯನ್ನೊಳಗೊಂಡು GSM ರಚಿಸಲಾಗಿತ್ತು. ಪ್ರಿ-ಷೇರ್ಡ್ ಕೀ ಮತ್ತು ಸವಾಲು-ಪ್ರತಿಕ್ರಿಯೆಗಳನ್ನು ಬಳಸುವ ಚಂದಾದಾರರ ದೃಢೀಕರಣಕ್ಕಾಗಿ ಈ ವ್ಯವಸ್ಥೆಯ ವಿನ್ಯಾಸ ಮಾಡಲಾಗಿದೆ. ಇದರಲ್ಲಿ ಚಂದಾದಾರರು ಮತ್ತು ಮೂಲ ಕೇಂದ್ರಗಳ ನಡುವಿನ ಸಂವಾದವನ್ನು ಗೂಢಗೊಳಿಸಬಹುದು.UMTSನ ಅಭಿವೃದ್ಧಿ ಐಚ್ಛಿಕ USIMನ್ನು ಪರಿಚಯಿಸಲಿದೆ, ಇದು ಇನ್ನೂ ಉದ್ದನೆಯ ದೃಢೀಕರಣದ ಸಂಕೇತವನ್ನು ಬಳಸಲಿದೆ, ಮತ್ತು ಜಾಲ ಮತ್ತು ಬಳಕೆದಾರರಿಬ್ಬರಿಗೂ ಸಹ ದೃಢೀಕರಣದ ಅನುಕೂಲವೂ ಉಂಟು - ಆದರೆ GSM ಕೇವಲ ಬಳಕೆದಾರರನ್ನು ಮಾತ್ರ ಜಾಲಕ್ಕೆ ಸಂಪರ್ಕಿಸಿಕೊಡುತ್ತದೆ (ಪ್ರತಿಕ್ರಮ ರೀತಿಯಲ್ಲಿ ಅಲ್ಲ). ಹಾಗಾಗಿ ಈ ಭದ್ರತಾ ಮಾದರಿಯು ಯಾವುದೇ ರೀತಿಯ ಗೌಪ್ಯತೆ ಮತ್ತು ದೃಢೀಕರಣವನ್ನು ನೀಡುವುದಲ್ಲಿ, ಸೀಮಿತ ದೃಢೀಕರಣದ ಕ್ಷಮತೆಯನ್ನಷ್ಟೇ ಹೊಂದಿದೆ; ಯಾವುದೇ ತಿರಸ್ಕರಿಸದಿರುವ ಕ್ರಮಗಳನ್ನಲ್ಲ. GSM ಭದ್ರತೆಗಾಗಿ ಹಲವು ಗೂಢ ಕ್ರಮಾವಳಿಗಳನ್ನು ಬಳಸಲಾಗುತ್ತದೆ.ಹವಾಮಾರ್ಗದ ಧ್ವನಿ ಗೌಪ್ಯತೆಗಾಗಿ A5/1 ಮತ್ತು A5/2 ಸಂವಹನ ಪಥ ಸಂಕೇತ ಪದಗಳನ್ನು ಬಳಸಲಾಗುತ್ತದೆ. A5/1ನ್ನು ಮೊದಲು ವಿನ್ಯಾಸ ಮಾಡಲಾಗಿತ್ತು ಮತ್ತು ಅದನ್ನು ಯುರೋಪ್ ಮತ್ತು ಅಮೆರಿಕಾ ದೇಶಗಳ್ಲಿ ಒಂದು ಸಬಲ ಕ್ರಮಾವಳಿ (ಅಲ್ಗೊರಿದಂ) ಬಳಸಲಾಗಿದೆ; A5/2 ದುರ್ಬಲವಾಗಿದೆ ಮತ್ತು ಅದನ್ನು ಇತರೆ ದೇಶಗಳಲ್ಲಿ ಬಳಸಲಾಗುತ್ತದೆ. ಎರಡೂ ಕ್ರಮಾವಳಿಗಳಲ್ಲಿ ತೀವ್ರ ನ್ಯೂನತೆಗಳು ಕಂಡುಬಂದಿವೆ; ಸಂಕೇತ ಪದಗ್ರಾಹಿ ಆಕ್ರಮಣ ಬಳಸಿ A5/2ನ್ನು ಸಹಜವಾಗಿ ಒಡೆಯಬಹುದಾಗಿದೆ. ರೇನ್‌ಬೊ ಟೆಬಲ್ ಅಟ್ಯಾಕ್ ಮೂಲಕ A5/1ನ್ನು ಒಡೆಯಬಲ್ಲ FPGAಗಳನ್ನು ವಾಣಿಜ್ಯೀಕರಣಗೊಳಿಸುವ ಯೋಜನೆ ಮತ್ತು ಸಾಮಾರ್ಥ್ಯ ತನಗಿದೆಯೆಂದು[೧೫] ಪಿಕೊ ಕಂಪ್ಯೂಟಿಂಗ್ ಇಂಕ್ ಸಂಸ್ಥೆ ಫೆಬ್ರುವರಿ 2008ರಲ್ಲಿ ತಿಳಿಸಿತು. ಈ ವ್ಯವಸ್ಥೆಯು ಹಲವು ಕ್ರಮಾವಳಿಗಳನ್ನು ಬೆಂಬಲಿಸುತ್ತದೆ, ಹಾಗಾಗಿ ನಿರ್ವಾಹಕರು ಪ್ರಸ್ತುತ ಸೈಫರ್‌ನ್ನು ಬದಲಾಯಿಸಿ ಸದೃಢ ಸೈಫರ್ ಅಳವಡಿಸಬಹುದು.
ಮಾನಕಗಳ ಮಾಹಿತಿ
ETSI ರೂಪಿಸಿರುವ ಮಾನಕಗಳಲ್ಲಿ GSM ವ್ಯವಸ್ಥೆಗಳು ಮತ್ತು ಸೇವೆಗಳನ್ನು ವಿವರಿಸಲಾಗಿದೆ, ಅಲ್ಲಿ ಸಂಪೂರ್ಣ ಪಟ್ಟಿಯನ್ನು ಉಳಿಸಿಕೊಂಡು ಬರಲಾಗುತ್ತಿದೆ.
ಮಾದರಿ ವಿವರಣೆಗಳು
- GSM ಸಂಚಾರಿ ದೂರವಾಣಿ ಉಪಕರಣಗಳಿಗೆ ರೂಪಿಸಿರುವ GSM 07.07 ಆದೇಶ ಗಣಗಳು(ME), " ಸರಣಿ ಅಂತರ್ವರ್ತಕಗಳ ಮೂಲಕ ದೂರವಾಣಿಯ GSM ಉಪವ್ಯವಸ್ಥೆಯ ಜೊತೆಗೆ ಮುಖ್ಯ AT ಆದೇಶಗಳು ಸಂಪರ್ಕ ಕಲ್ಪಿಸುವುದನ್ನು ವಿವರಿಸಲಾಗಿದೆ.[೧೬] ಹೆಚ್ಚಿನ ವಿವರಗಳಿಗೆ ಹೇಯ್ಸ್ ನ ಆದೇಶ ಗಣಗಳನ್ನು ನೋಡಿರಿ.
- 3GPP TS 27.007 - AT ಆದೇಶ ಗಣಗಳು ಬಳಕೆದಾರರ ಉಪಕರಣಗಳಿಗೆ (UE).[೧೭]
- ಇದರ ಜೊತೆಗೆ GSM 07.05 AT ಆದೇಶಗಳು ಸಂದೇಶ ರವಾನೆ ಮತ್ತು CBSಗೆ ಬಳಕೆಯಾಗಲ್ಪಡುತ್ತವೆ.[೧೮][೧೯]
'
ಇದನ್ನು ನೋಡಿರಿ
- ಒಪನ್ BTS
- ನಿಸ್ತಂತು ವಿದ್ಯುನ್ಮಾನ ಸಾಧನಗಳು ಮತ್ತು ಆರೋಗ್ಯ
- ಸಂಚಾರಿ ಜಾಲ ನಿರ್ವಾಹಕ
- ಅಂತರರಾಷ್ಟ್ರೀಯ ಸಂಚಾರಿ ದೂರವಾಣಿ ಚಂದಾದಾರ ಗುರುತು (IMSI)
- ಅಂತರರಾಷ್ಟ್ರೀಯ ಸಂಚಾರಿ ದೂರವಾಣಿ ಚಂದಾದಾರ ISDN ಸಂಖ್ಯೆ (MSISDN)
- ಹ್ಯಾಂಡಾಫ್
- ಸಂದರ್ಶಕ ಸ್ಥಳ ದಾಖಲಾತಿ (VLR)
- Um ಅಂತರ್ವರ್ತನ
- GSM ತರಂಗಾಂತರ ವ್ಯಾಪ್ತಿ
- GSM-R (GSM-ರೈಲ್ವೆ)
- GSM ಸೇವೆಗಳು
- GSM ಸ್ಥಳೀಕರಣ
- ಬಹು ಮಾಧ್ಯಮ ಸಂದೇಶ ಸೇವೆ (MMS)
- ನಿಸ್ತಂತು ಅನ್ವಯಿಕ ಪ್ರೊಟೊಕಾಲ್ (WAP)
- ಸಂಚಾರಿ ದೂರವಾಣಿ ಪ್ರಸರಣೆ
- ಜಾಲ ಸ್ವರೂಪ ಮತ್ತು ಕಾಲಮಾನ (NITZ)
- ಮಾನಕಗಳು
- ಸಂಚಾರಿ ದೂರವಾಣಿ ಮಾನಕಗಳ ಹೋಲಿಕೆ
- GEO-ಸಂಚಾರಿ ದೂರವಾಣಿ ರೇಡಿಯೋ ಸಂಪರ್ಕ ಕೊಂಡಿ
- ಸಮರ್ಥ ಜಾಲ
- ಪಾರ್ಲೆ
- RTP ದ್ವನಿ ಚಿತ್ರ ಸ್ವರೂಪ
ಆಕರಗಳು
- ↑ "GSM World statistics". GSM Association. 2007. Retrieved 2009-01-10.
- ↑ "About GSM Association". GSM Association. Retrieved 2007-01-08.
- ↑ "Two Billion GSM Customers Worldwide". 3G Americas. June 13, 2006. Retrieved 2007-01-08.
{cite web}
: Check date values in:|date=
(help) - ↑ "Texas Instruments Executive Meets with India Government Official to outline Benefits of Open Standards to drive mobile phone penetration". Texas Instruments. July 12, 2006. Archived from the original on 2006-10-21. Retrieved 2007-01-08.
{cite web}
: Check date values in:|date=
(help) - ↑ [9] ^ ಅಸ್ಟ್ರೆಲಿಯಾ ಸಂಪರ್ಕ ಮತ್ತು ಮಾಧ್ಯಮ ಪ್ರಾಧಿಕಾರ(ACMA) Archived 2010-01-01 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Brief History of GSM & GSMA". GSM World. Retrieved 2007-01-08.
- ↑ "Happy 20th birthday, GSM". ZDNet. 2007-09-07. Archived from the original on 2008-10-20. Retrieved 2007-09-07.
- ↑ "Global Mobile Communications is 20 years old" (Press release). GSM Association. 2007-09-06. Retrieved 2007-09-07.
- ↑ "Inventor of the GSM system". Gemini. Archived from the original on 2009-03-26. Retrieved 2008-10-31.
- ↑ "Nokia delivers first phase GPRS core network solution to Radiolinja, Finland". Nokia. January 24, 2000. Archived from the original on 2006-03-21. Retrieved 2006-01-08.
{cite web}
: Check date values in:|date=
(help) - ↑ "History and Timeline of GSM". Emory University. Retrieved 2006-01-09.
- ↑ [24] ^ ಮೊಟೊರೊಲದವರು ದೂರ ವ್ಯಾಪ್ತಿ GSM ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ- ಹೊಸ ವಿಸ್ತರಿತ ಸೆಲ್ ಜೊತೆಗೆ 300 % ಅಧಿಕ ಪ್ರಸಾರವ್ಯಾಪ್ತಿ ..
- ↑ "Managing Noise in Cell-Phone Handsets". Maxim Integrated Products. 2001-01-24. Archived from the original on 2009-10-31. Retrieved 2009-04-22.
- ↑ "GSM 06.51 version 4.0.1" (ZIP). ETSI. December 1997. Retrieved 2007-09-05.
- ↑ http://blog.washingtonpost.com/securityfix/2008/02/research_may_spell_end_of_mobi.html
- ↑ "TS 100 916 - V07.04.00 - ಡಿಜಿಟಲ್ ಕೋಶೀಯ ದೂರಸಂಪರ್ಕ ವ್ಯವಸ್ಥೆಗಳು (ಹಂತ 2+); AT ಆದೇಶ ಗಣಗಳು GSM ಬಳಕೆದಾರ ಉಪಕರಣಗಳಿಗೆ (ME) (GSM 07.07 version 7.4.0 Release 1998)" (PDF). Archived from the original (PDF) on 2009-04-19. Retrieved 2009-08-19.
- ↑ 3GPP ಸ್ಪೆಸಿಫಿಕೇಶನ್: 27.007
- ↑ [35] ^ GTS 07.05 - Version 5.5.0 - ಡಿಜಿಟಲ್ ಕೋಶೀಯ ದೂರಸಂಪರ್ಕ ವ್ಯವಸ್ಥೆಗಳು (2+ನೇ ಹಂತ); ದತ್ತ ಸಾಧನಗಳ ಬಳಕೆ- ದತ್ತ ಮಂಡಲ ಅಂತ್ಯಗೊಳಿಸುವಿಕೆ; ಸಾಧನಗಳು (DTE - DCE) ಸಂಕ್ಷಿಪ್ತ ಸಂದೇಶ ಸೇವೆಯ ಬಳಕೆಗೆ ಅಂತರ್ವರ್ತನಗಳು ... Archived 2009-06-11 ವೇಬ್ಯಾಕ್ ಮೆಷಿನ್ ನಲ್ಲಿ.
- ↑ [36] ^ ಸಂಕ್ಷಿಪ್ತ ಸಂದೇಶ ಸೇವೆ/ SMS ಶಿಕ್ಷಣ
- ಸಿಗ್ಮಂಡ್ M. ರೆಡ್ಲ್, ಮ್ಯಾಥಿಯಸ್ K. ವೆಬರ್, ಮಾಲ್ಕಮ್ W.ಒಲಿಪಂತ್ (ಮಾರ್ಚ್ 1995): "ಆನ್ ಇಂಟ್ರೊಡಕ್ಷನ್ ಟು GSM", ಅರ್ಟೆಕ್ ಹೌಸ್, ISBN 978-0-89006-785-7
- ಸಿಗ್ಮಂಡ್ M. ರೆಡ್ಲ್, ಮ್ಯಾಥಿಯಸ್ K. ವೆಬರ್, ಮಾಲ್ಕಮ್ W. ಒಲಿಪಂತ್ (ಮೇ 1998): "GSM ಅಂಡ್ ಪರ್ಸನಲ್ ಕಮ್ಯೂನಿಕೇಶನ್ಸ್ ಹ್ಯಾಂಡ್ ಬುಕ್", ಅರ್ಟೆಕ್ ಹೌಸ್, ISBN 978-0-89006-957-8
- ಫ್ರಿದೆಲ್ಮ್ ಹಿಲ್ಲೆಬ್ರಂಡ್, ed. (2002): "GSM ಆಂಡ್ UMTS, ದಿ ಕ್ರಿಯೇಶನ್ ಆಫ್ ಗ್ಲೋಬಲ್ ಮೊಬೈಲ್ ಕಮ್ಯೂನಿಕೇಶನ್ಸ್", ಜಾನ್ ವಿಲ್ಲೆ ಅಂಡ್ ಸನ್ಸ್ ISBN 0470 84322 5
- ಮೈಕೆಲ್ ಮೌಲಿ, ಮರಿಯ-ಬರ್ನರ್ಡಿಟ್ಟೆ ಪೌಟೆಟ್ (ಜೂನ್ 1992): "ದಿ GSM ಸಿಸ್ಟಮ್ ಫಾರ್ ಮೊಬೈಲ್ ಕಮ್ಯೂನಿಕೇಶನ್ಸ್", ISBN 0-945592-15-9.
ಹೊರಗಿನ ಕೊಂಡಿಗಳು
- GSM ಒಕ್ಕೂಟ– GSM ನಿರ್ವಹರುಗಳನ್ನೊಳಗೊಂಡ ಸಮೂಹ (ಅಫಿಶಿಯಲ್ ಸೈಟ್) – ಎಲ್ಲಾ ಸದಸ್ಯರುಗಳನ್ನೊಳಗೊಂಡ ನಿರೂಪಣೆಯಿದೆ.
- 3GPP -ಈ GSM ಮಾಪನಗಳು ಮುಕ್ತವಾಗಿ ಸಿಗುತ್ತವೆ.
- ಸ್ಪೆಕ್ಟ್ರಮ್ ತರಂಗಾಂತರ ಪಟ Archived 2009-03-27 ವೇಬ್ಯಾಕ್ ಮೆಷಿನ್ ನಲ್ಲಿ.
- GSM ಪೂರೈಕೆದಾರರ ಪಟ್ಟಿ Archived 2008-09-22 ವೇಬ್ಯಾಕ್ ಮೆಷಿನ್ ನಲ್ಲಿ.
- ಹ್ಯಾಕರ್ಸ್ ಚಾಯ್ಸ್ GSM ಸಾಫ್ವ್ ವೇರ್ ಪ್ರಾಜೆಕ್ಟ್ Archived 2009-08-05 ವೇಬ್ಯಾಕ್ ಮೆಷಿನ್ ನಲ್ಲಿ.
- GSM ಸಂರಚನೆ ಮತ್ತು ಕಾರ್ಯನಿರ್ವಹಣೆ Archived 2009-08-13 ವೇಬ್ಯಾಕ್ ಮೆಷಿನ್ ನಲ್ಲಿ.
- GSM ಕಲಿಕಾ-ತರಬೇತಿ