ನಿರ್ವಾತ

ನಿರ್ವಾತ ಪಂಪು

ನಿರ್ವಾತ:ಎಂದರೆ ಯಾವುದೇ ವಸ್ತು ಇರದ ಅವಕಾಶ(space).ವಾಸ್ತವದಲ್ಲಿ ಸಂಪೂರ್ಣ ನಿರ್ವಾತ ಎಂಬುದಿಲ್ಲ. ಏಕೆಂದರೆ ಯಾವುದೇ ಅವಕಾಶದಿಂದ ವಾಯುವಿನ ಎಲ್ಲಾ ಅಣುಗಳನ್ನು ತೆಗೆಯಲು ಸಾದ್ಯವಾಗಿಲ್ಲ.ಆದುದರಿಂದ ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗೆ ವಾತಾವರಣದ ಒತ್ತಡದಿಂದ ಕಡಿಮೆ ಒತ್ತಡದ ಮುಚ್ಚಿದ ಅವಕಾಶ(enclosed space)ಗಳನ್ನು ನಿರ್ವಾತ ಪ್ರದೇಶ ಎನ್ನಬಹುದು.