ಫ್ರಾಂಕ್ ಲಾಯ್ಡ್‌‌ ರೈಟ್

ಫ್ರಾಂಕ್ ಲಾಯ್ಡ್‌‌ ರೈಟ್
Born
ಫ್ರಾಂಕ್ ಲಾಯ್ಡ್‌‌ ರೈಟ್

೦೮-೦೬-೧೮೬೭
ರಿಚ್ಲೇಂಡ್ ಸೆಂಟರ್, ವಿನ್‍ಕನ್ಸಿನ್
Died೦೭೦೧೦-೧೯೫೯
ಫೀನಿಕ್ಸ್, ಅರಿಜೋನಾ
Nationalityಅಮೇರಿಕನ್
Alma materವಿನ್‍ಕನ್ಸಿನ್ ವಿಶ್ವವಿದ್ಯಾನಿಲಯ, ಮ್ಯಾಡಿಸನ್

ಫ್ರಾಂಕ್ ಲಾಯ್ಡ್‌‌ ರೈಟ್ (ಜನ್ಮನಾಮ: ಫ್ರಾಂಕ್‌‌ ಲಿಂಕನ್‌‌‌ ರೈಟ್‌ , ಜೂನ್‌‌ 8, 1867 – ಏಪ್ರಿಲ್‌‌ 9, 1959) ಅಮೆರಿಕಾದ ಓರ್ವ ವಾಸ್ತುಶಿಲ್ಪಿ, ಒಳಾಂಗಣ ವಿನ್ಯಾಸಕಾರ, ಬರಹಗಾರ ಮತ್ತು ಶಿಕ್ಷಣತಜ್ಞನಾಗಿದ್ದ. 1,000ಕ್ಕೂ ಹೆಚ್ಚಿನ ಯೋಜನೆಗಳನ್ನು ಇವನು ವಿನ್ಯಾಸಗೊಳಿಸಿದ್ದು, ಅವುಗಳ ಪೈಕಿ 500ಕ್ಕೂ ಹೆಚ್ಚಿನ ಯೋಜನೆಗಳು ಸಂಪೂರ್ಣಗೊಂಡ ಕೆಲಸಗಳಲ್ಲಿ ಹೊರಹೊಮ್ಮಿದವು.[] ರೈಟ್‌ನಿಂದ ಪ್ರವರ್ತಿಸಲ್ಪಟ್ಟ ಸುಸಂಘಟಿತ ವಾಸ್ತುಶೈಲಿಯು (ಫಾಲಿಂಗ್‌ವಾಟರ್‌‌‌‌‌ನ ನಿದರ್ಶನದ ಮೂಲಕ ಇದು ನಿರೂಪಿಸಲ್ಪಟ್ಟಿದೆ), ಪ್ರೈರೀ ಪಂಥದ ವಾಸ್ತುಶೈಲಿಯ ಆಂದೋಲನದ (ರೋಬೀ ಹೌಸ್‌‌, ವೆಸ್ಕಾಟ್‌ ಹೌಸ್‌, ಮತ್ತು ಡಾರ್ವಿನ್‌ D. ಮಾರ್ಟಿನ್‌ ಹೌಸ್‌ ಇವೇ ಮೊದಲಾದ ನಿದರ್ಶನಗಳ ಇದು ಮೂಲಕ ನಿರೂಪಿಸಲ್ಪಟ್ಟಿದೆ) ಒಂದು ಅಗ್ರಗಣ್ಯನಾಗಿತ್ತು, ಮತ್ತು ಉಸೋನಿಯಾ ಶೈಲಿಯ ಮನೆಯ ಪರಿಕಲ್ಪನೆಯನ್ನು (ರೋಸೆನ್‌ಬೌಮ್‌ ಹೌಸ್‌‌‌‌ ನಿದರ್ಶನದ ಮೂಲಕ ಇದು ನಿರೂಪಿಸಲ್ಪಟ್ಟಿದೆ) ಇದು ಅಭಿವೃದ್ಧಿಪಡಿಸಿತು. ಅನೇಕ ವಿಭಿನ್ನ ಬಗೆಯ ಕಟ್ಟಡಗಳ ಮೂಲ ಮತ್ತು ಪರಿವರ್ತನಾಶೀಲ ಉದಾಹರಣೆಗಳನ್ನು ಅವನ ಕೆಲಸವು ಒಳಗೊಂಡಿದ್ದು, ಕಚೇರಿಗಳು, ಚರ್ಚುಗಳು, ಶಾಲೆಗಳು, ಗಗನಚುಂಬಿಗಳು, ಹೊಟೇಲುಗಳು, ಮತ್ತು ವಸ್ತುಸಂಗ್ರಹಾಲಯಗಳು ಅದರಲ್ಲಿ ಸೇರಿವೆ. ಪೀಠೋಪಕರಣಗಳು ಮತ್ತು ರಂಗುಹಾಕಿದ ಗಾಜಿನಂಥ, ತನ್ನ ಕಟ್ಟಡಗಳ ಅನೇಕ ಒಳಾಂಗಣ ಅಂಶಗಳನ್ನೂ ಸಹ ರೈಟ್‌ ಅನೇಕಬಾರಿ ವಿನ್ಯಾಸಗೊಳಿಸಿದ. 20 ಪುಸ್ತಕಗಳು ಮತ್ತು ಅನೇಕ ಲೇಖನಗಳನ್ನು ರೈಟ್‌ ಬರೆದಿದ್ದೇ ಅಲ್ಲದೇ, ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮತ್ತು ಯುರೋಪ್‌‌‌ನಲ್ಲಿ ಅವನೊಬ್ಬ ಜನಪ್ರಿಯ ಉಪನ್ಯಾಸಕನಾಗಿದ್ದ. ಅವನ ವರ್ಣರಂಜಿತ ವೈಯಕ್ತಿಕ ಜೀವನವು ಅನೇಕವೇಳೆ ಸುದ್ಧಿಗೆ ಗ್ರಾಸವನ್ನೊದಗಿಸಿತು; ಅದರಲ್ಲೂ, ಅವನ ಟ್ಯಾಲೀಸಿನ್‌‌ ಸ್ಟುಡಿಯೊದಲ್ಲಿ 1914ರಲ್ಲಿ ಸಂಭವಿಸಿದ ಬೆಂಕಿ ದುರಂತ ಹಾಗೂ ಕೊಲೆಗಳು ಈ ಪೈಕಿ ಅತ್ಯಂತ ಗಮನಾರ್ಹವಾಗಿದ್ದವು. ತನ್ನ ಜೀವಿತಾವಧಿಯಲ್ಲಾಗಲೇ ಸುಪರಿಚಿತನಾಗಿದ್ದ ರೈಟ್‌, 1991ರಲ್ಲಿ ಅಮೆರಿಕನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಕಿಟೆಕ್ಟ್ಸ್‌ ಸಂಸ್ಥೆಯಿಂದ "ಅಮೆರಿಕಾದ ಮಹೋನ್ನತ ಸಾರ್ವಕಾಲಿಕ ವಾಸ್ತುಶಿಲ್ಪಿ" ಎಂದು ಗುರುತಿಸಲ್ಪಟ್ಟ.[]

ಆರಂಭಿಕ ವರ್ಷಗಳು

ಅಮೆರಿಕಾ ಸಂಯುಕ್ತ ಸಂಸ್ಥಾನಗಳ ವಿಸ್ಕಾನ್ಸಿನ್‌‌ನ ರಿಚ್‌ಲ್ಯಾಂಡ್‌ ಸೆಂಟರ್‌ ಎಂಬ ಕೃಷಿ ಪಟ್ಟಣದಲ್ಲಿ 1867ರಲ್ಲಿ ಫ್ರಾಂಕ್ ಲಾಯ್ಡ್‌‌ ರೈಟ್ ಹುಟ್ಟಿದ. ಫ್ರಾಂಕ್‌‌ ಲಿಂಕನ್‌‌‌ ರೈಟ್ ಎಂಬುದು ಅವನ ಮೂಲ ಹೆಸರಾಗಿತ್ತಾದರೂ, ತನ್ನ ಹೆತ್ತವರ ವಿಚ್ಛೇದನದ ನಂತರ ತನ್ನ ಹೆಸರನ್ನು ಬದಲಿಸಿಕೊಂಡ; ತನ್ನ ತಾಯಿಯ ವೆಲ್ಷ್‌‌ ಕುಟುಂಬವಾದ 'ಲಾಯ್ಡ್‌‌ ಜೋನೆಸೆಸ್‌'ಗೆ ಗೌರವ ಸೂಚಿಸುವ ಕ್ರಮ ಇದಾಗಿತ್ತು. ಅವನ ತಂದೆಯಾದ ವಿಲಿಯಂ ಕ್ಯಾರೆ ರೈಟ್‌ (1825–1904), ಸ್ಥಳೀಯವಾಗಿ ಮೆಚ್ಚುಗೆ ಪಡೆದಿದ್ದ ಓರ್ವ ಭಾಷಣಕಾರ, ಸಂಗೀತ ಶಿಕ್ಷಕ, ಸಾಂದರ್ಭಿಕ ವಕೀಲ ಮತ್ತು ಸಂಚಾರೀ ಮಂತ್ರಿಯಾಗಿದ್ದ. ಜಿಲ್ಲಾ ಶಾಲೆಯ ಓರ್ವ ಶಿಕ್ಷಕಿಯಾಗಿದ್ದ ಆನ್ನಾ ಲಾಯ್ಡ್‌‌ ಜೋನ್ಸ್‌ಳನ್ನು (1838/39 – 1923) ವಿಲಿಯಂ ರೈಟ್‌ ಭೇಟಿಯಾಗಿ ಮದುವೆಯಾಗಿದ್ದ; ರಿಚ್‌ಲ್ಯಾಂಡ್‌ ಜಿಲ್ಲೆಗೆ ಸಂಬಂಧಿಸಿದ ಶಾಲೆಗಳ ಅಧೀಕ್ಷಕನಾಗಿ ಹಿಂದಿನ ವರ್ಷ ಅವನು ನೇಮಕಗೊಂಡಿದ್ದಾಗ ಇದು ನಡೆದಿತ್ತು. ಮೂಲತಃ ಮ್ಯಾಸಚೂಸೆಟ್ಸ್‌‌‌‌ಗೆ ಸೇರಿದವನಾಗಿದ್ದ ವಿಲಿಯಂ ರೈಟ್‌ ಓರ್ವ ಬ್ಯಾಪ್ಟಿಸ್ಟ್‌ ಮೇಲಧಿಕಾರಿಯಾಗಿದ್ದರೂ ಸಹ, ಏಕಮೂರ್ತಿವಾದದ ಪಂಥದಲ್ಲಿ ನಂಬಿಕೆಯಿಟ್ಟಿದ್ದ ತನ್ನ ಹೆಂಡತಿಯ ಕುಟುಂಬವನ್ನು ನಂತರದಲ್ಲಿ ಸೇರಿಕೊಂಡ. ಆನ್ನಾಳು, ಏಕಮೂರ್ತಿವಾದಿಗಳ ಕುಟುಂಬವೆನಿಸಿಕೊಂಡಿದ್ದ ದೊಡ್ಡ, ಶ್ರೀಮಂತ ಮತ್ತು ಸುಪರಿಚಿತ ಲಾಯ್ಡ್‌‌ ಜೋನ್ಸ್‌ ಕುಟುಂಬದ ಓರ್ವ ಸದಸ್ಯಳಾಗಿದ್ದಳು; ಈ ಕುಟುಂಬವು ವೇಲ್ಸ್‌‌‌‌‌ನಿಂದ ವಿಸ್ಕಾನ್ಸಿನ್‌‌ನ ಸ್ಪ್ರಿಂಗ್‌ ಗ್ರೀನ್‌‌ಗೆ ವಲಸೆ ಬಂದಿತ್ತು. ರೈಟ್‌ನ ತಂದೆ-ತಾಯಿಗಳಿಬ್ಬರೂ ಸಹ ಪ್ರಬಲವಾದ ಇಚ್ಛಾಶಕ್ತಿಯುಳ್ಳ ವ್ಯಕ್ತಿಗಳಾಗಿದ್ದು, ವಿಲಕ್ಷಣ ರೀತಿಯ ಹಿತಾಸಕ್ತಿಗಳನ್ನು ಹೊಂದಿದ್ದರು; ಈ ಹಿತಾಸಕ್ತಿಗಳೇ ರೈಟ್‌ಗೂ ವರ್ಗಾವಣೆಯಾದವು. ಅವನ ಜೀವನಚರಿತ್ರೆಯಲ್ಲಿ ಅವನ ತಾಯಿಯು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಆಕೆಯು ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾಗ, ಆ ಮಗುವು ಬೆಳೆದು ದೊಡ್ಡದಾಗಿ ಸುಂದರವಾದ ಕಟ್ಟಡಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾಗಿ ತಿಳಿಸಿದಳು. ಶಿಶುವಿನ ಮಹತ್ವಾಕಾಂಕ್ಷೆಯನ್ನು ಉತ್ತೇಜಿಸುವ ಸಲುವಾಗಿ, ನಿಯತಕಾಲಿಕವೊಂದರಿಂದ ಹರಿದು ತಂದ ಇಂಗ್ಲಿಷ್‌ ಪ್ರಧಾನ ಚರ್ಚುಗಳ ನಕಾಸೆ-ಚಿತ್ರಣಗಳಿಂದ ಅವನ ಕೂಸುಕೋಣೆಯನ್ನು ಅವಳು ಅಲಂಕರಿಸಿದಳು. ಒಂದು ಸಣ್ಣ ಸಮುದಾಯಕ್ಕೆ ವಿಲಿಯಂ ನೆರವಾಗುವುದಕ್ಕೆ ಅನುವಾಗುವಂತೆ, ಈ ಕುಟುಂಬವು 1870ರಲ್ಲಿ ಮ್ಯಾಸಚೂಸೆಟ್ಸ್‌ನ ವೇಮೌತ್ ಎಂಬಲ್ಲಿಗೆ ತೆರಳಿತು. 1876ರಲ್ಲಿ, ಫಿಲಡೆಲ್ಫಿಯಾದಲ್ಲಿ ನಡೆದ ಶತಮಾನೋತ್ಸವದ ವಸ್ತುಪ್ರದರ್ಶನಕ್ಕೆ ಆನ್ನಾ ಭೇಟಿನೀಡಿದಳು; ಅಲ್ಲಿ ಫ್ರೆಡ್ರಿಕ್‌‌ ವಿಲ್ಹೆಲ್ಮ್‌‌ ಆಗಸ್ಟ್‌ ಫ್ರೋಬೆಲ್‌‌‌ನಿಂದ ಸೃಷ್ಟಿಸಲ್ಪಟ್ಟ ಶೈಕ್ಷಣಿಕ ಆಟಿಕೆಯ ಅಚ್ಚುಗಳ ಪ್ರದರ್ಶನವೊಂದನ್ನು ಅವಳು ಕಂಡಳು. ಫ್ರೋಬೆಲ್‌‌ ಗಿಫ್ಟ್ಸ್‌ ಎಂದು ಕರೆಯಲ್ಪಡುತ್ತಿದ್ದ ಈ ಆಟಿಕೆಯ ಅಚ್ಚುಗಳು, ಅವನ ಪರಿವರ್ತನಾಶೀಲ ಶಿಶುವಿಹಾರದ ಪಠ್ಯಕ್ರಮಕ್ಕೆ ಬುನಾದಿಯಾಗಿದ್ದವು. ಓರ್ವ ತರಬೇತು ಪಡೆದ ಶಿಕ್ಷಕಿಯಾಗಿದ್ದ ಆನ್ನಾ, ಅದರ ಕಾರ್ಯಸೂಚಿಯಿಂದ ಉತ್ತೇಜಿಸಲ್ಪಟ್ಟಳು ಮತ್ತು ತನ್ನ ಕುಟುಂಬಕ್ಕಾಗಿ ಆಟಿಕೆಯ ಅಚ್ಚುಗಳ ಒಂದು ಸಂಚಯವನ್ನು ಖರೀದಿಸಿದಳು. ಪುಟ್ಟ ಮಗುವಾದ ರೈಟ್‌ ತನ್ನ ಬಹುಪಾಲು ಸಮಯವನ್ನು ಸದರಿ ಆಟಿಕೆಯ ಅಚ್ಚುಗಳೊಂದಿಗೆ ಆಟವಾಡುತ್ತಲೇ ಕಳೆಯುತ್ತಿದ್ದ. ಈ ಅಚ್ಚುಗಳು ಜ್ಯಾಮಿತೀಯವಾದ-ಆಕಾರವನ್ನು ಹೊಂದಿದ್ದವು ಹಾಗೂ ಅವನ್ನು ಹಲವಾರು ಸಂಯೋಜನೆಗಳಲ್ಲಿ ಜೋಡಿಸಿ, ಮೂರು-ಆಯಾಮದ ಜೋಡಣೆಗಳನ್ನು ರೂಪಿಸುವುದು ಸಾಧ್ಯವಿತ್ತು. ವಿನ್ಯಾಸದೆಡೆಗಿನ ತನ್ನ ವಿಧಾನದ ಮೇಲೆ ಈ ಪರಿಪಾಠಗಳು ಬೀರಿದ ಪ್ರಭಾವದ ಕುರಿತು ರೈಟ್‌ ತನ್ನ ಆತ್ಮಕಥೆಯಲ್ಲಿ ದಾಖಲಿಸಿದ್ದಾನೆ. ಅವನು ನಿರ್ಮಿಸಿದ ಅನೇಕ ಕಟ್ಟಡಗಳು ತಾವು ಪ್ರದರ್ಶಿಸುವ ಜ್ಯಾಮಿತೀಯ ಸ್ಪಷ್ಟತೆಗೆ ಸಂಬಂಧಿಸಿದಂತೆ ಗಮನಾರ್ಹವಾಗಿವೆ. ವೇಮೌತ್‌‌ನಲ್ಲಿರುವಾಗ, ಆರ್ಥಿಕ ನೆಲೆಗಟ್ಟಿನಲ್ಲಿ ಬಹಳಷ್ಟು ಹೆಣಗಾಡಿದ ರೈಟ್‌ ಕುಟುಂಬವು ವಿಸ್ಕಾನ್ಸಿನ್‌‌ನ ಸ್ಪ್ರಿಂಗ್‌ ಗ್ರೀನ್‌‌‌‌‌ಗೆ ಹಿಂದಿರುಗಿತು; ಅಲ್ಲಿ ಅವರ ಬೆಂಬಲಕ್ಕೆ ನಿಂತ ಲಾಯ್ಡ್‌‌ ಜೋನ್ಸ್‌ ಕುಟುಂಬವು ಉದ್ಯೋಗವೊಂದನ್ನು ಹುಡುಕುವಲ್ಲಿ ವಿಲಿಯಂಗೆ ನೆರವಾಯಿತು. ಅವರು ಮ್ಯಾಡಿಸನ್‌‌‌‌‌‌ನಲ್ಲಿ ನೆಲೆಗೊಂಡರು; ಅಲ್ಲಿಯೇ ವಿಲಿಯಂ ಸಂಗೀತ ಪಾಠಗಳನ್ನು ಕಲಿಸಿದ ಮತ್ತು ಹೊಸದಾಗಿ ರೂಪುಗೊಂಡಿದ್ದ ಏಕಮೂರ್ತಿವಾದಿಗಳ ಸಮಾಜಕ್ಕೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ. ಓರ್ವ ಅಪ್ಪನಾಗಿ ವಿಲಿಯಂ ಮಕ್ಕಳೊಂದಿಗೆ ಅಷ್ಟೊಂದು ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗದಿದ್ದರೂ, ಸಂಗೀತದೆಡೆಗೆ ತಾನು ಹೊಂದಿದ್ದ ಪ್ರೀತಿಯನ್ನು, ಅದರಲ್ಲೂ ವಿಶೇಷವಾಗಿ ಜೊಹಾನ್‌‌ ಸೆಬಾಸ್ಟಿಯನ್‌‌ ಬ್ಯಾಕ್‌‌‌ನ ಕೃತಿಗಳನ್ನು ತನ್ನ ಮಕ್ಕಳೊಂದಿಗೆ ಹಂಚಿಕೊಂಡ. ರೈಟ್‌ಗೆ 14 ವರ್ಷಗಳಾಗುತ್ತಿದ್ದಂತೆಯೇ ಅವನ ಹೆತ್ತವರು ಬೇರ್ಪಟ್ಟರು. ತನ್ನ ಕುಟುಂಬವನ್ನು ನೋಡಿಕೊಳ್ಳಲು ಅಸಮರ್ಥನಾಗಿದ್ದ ವಿಲಿಯಂನಿಂದಾಗಿ ಆನ್ನಾ ಕೆಲವು ಸಮಯದವರೆಗೆ ಅಸಂತುಷ್ಟಳಾಗಿದ್ದಳು ಮತ್ತು ಪರಸ್ಪರ ದೂರವಾಗುವುದರ ಕುರಿತು ಅವನಲ್ಲಿ ಕೇಳಿಕೊಂಡಿದ್ದಳು. ಶಾರೀರಿಕ ಮಮಕಾರದ ಕೊರತೆಗೆ ಸಂಬಂಧಿಸಿದಂತೆ ಆನ್ನಾಳ ವಿರುದ್ಧ ವಿಲಿಯಂ ದಾವೆ ಹೂಡಿದ ನಂತರ, 1885ರಲ್ಲಿ ಅವರ ವಿಚ್ಛೇದನದ ಫೈಸಲಾತಿಯಾಯಿತು. ವಿಚ್ಛೇದನದ ನಂತರ ವಿಸ್ಕಾನ್ಸಿನ್‌‌ನ್ನು ವಿಲಿಯಂ ತೊರೆದ; ಮತ್ತು ತನ್ನ ತಂದೆಯನ್ನು ತಾನು ಮತ್ತೆಂದೂ ನೋಡಲಿಲ್ಲ ಎಂಬುದಾಗಿ ರೈಟ್‌ ಸಮರ್ಥಿಸಿದ.[] ಈ ಸಮಯದಲ್ಲಿಯೇ ರೈಟ್‌ನ ಮಧ್ಯದ ಹೆಸರು ಲಿಂಕನ್‌‌‌ನಿಂದ ಲಾಯ್ಡ್‌‌ಗೆ ಬದಲಾವಣೆಗೊಂಡಿತು. ಕುಟುಂಬದಲ್ಲಿ ಉಳಿದ ಏಕೈಕ ಪುರುಷ ಎನಿಸಿಕೊಂಡ ರೈಟ್‌ನ ಹೆಗಲ ಮೇಲೆ, ಅವನ ತಾಯಿ ಮತ್ತು ಇಬ್ಬರು ಸೋದರಿಯರಿಗೆ ಸಂಬಂಧಿಸಿದ ಹಣಕಾಸಿನ ಹೊಣೆಗಾರಿಕೆ ಬಿದ್ದಿತು.

ಶಿಕ್ಷಣ ಮತ್ತು ಸಿಲ್ಸ್‌‌ಬೀಗೆ ಸಂಬಂಧಿಸಿದ ಕೆಲಸ (1885-1888)

ಮ್ಯಾಡಿಸನ್‌‌ನಲ್ಲಿನ ಪ್ರೌಢಶಾಲೆಯೊಂದಕ್ಕೆ ರೈಟ್‌ ಸೇರಿಕೊಂಡನಾದರೂ, ಆತ ಅಧ್ಯಯನ ಮುಗಿಸಿದ್ದರ ಕುರಿತಾಗಿ ಯಾವುದೇ ಪುರಾವೆಯಿಲ್ಲ.[] 1886ರಲ್ಲಿ ಮ್ಯಾಡಿಸನ್‌‌ನಲ್ಲಿನ ವಿಸ್ಕಾನ್ಸಿನ್‌‌ ವಿಶ್ವವಿದ್ಯಾಲಯಕ್ಕೆ ಓರ್ವ ವಿಶೇಷ ವಿದ್ಯಾರ್ಥಿಯಾಗಿ ಅವನು ಸೇರಿಸಲ್ಪಟ್ಟ. ಅಲ್ಲಿ ಫೈ ಡೆಲ್ಟಾ ಥೀಟಾ ಬಳಗವನ್ನು[] ಸೇರಿಕೊಂಡ ಆತ, ಎರಡು ಅರ್ಧವಾರ್ಷಿಕ ವ್ಯಾಸಂಗಾವಧಿಗಳಿಗಾಗಿ ಅರೆಕಾಲಿಕ ತರಗತಿಗಳನ್ನು ತೆಗೆದುಕೊಂಡ, ಮತ್ತು ಅಲನ್‌‌ D. ಕೊನೊವರ್‌‌ ಎಂಬ ಓರ್ವ ಸಿವಿಲ್‌ ಎಂಜಿನಿಯರಿಂಗ್‌‌ ವಿಷಯದ ಪ್ರಾಧ್ಯಾಪಕನೊಂದಿಗೆ ಕೆಲಸ ಮಾಡಿದ.[] 1887ರಲ್ಲಿ, ಪದವಿಯೊಂದನ್ನು ಪಡೆಯದೆಯೇ ರೈಟ್‌ ಶಾಲೆಯನ್ನು ಬಿಟ್ಟ (ಆದರೂ ಸಹ, ವಿಶ್ವವಿದ್ಯಾಲಯದ ವತಿಯಿಂದ 1955ರಲ್ಲಿ, ಲಲಿತಕಲೆಗಳ ವಿಷಯದಲ್ಲಿ ಅವನಿಗೊಂದು ಗೌರವಾರ್ಥ ಡಾಕ್ಟರೇಟ್‌ ಪದವಿಯನ್ನು ನೀಡಲಾಯಿತು). 1887ರಲ್ಲಿ, ಉದ್ಯೋಗವನ್ನು ಅರಸಿಕೊಂಡು ರೈಟ್‌ ಚಿಕಾಗೊದಲ್ಲಿ ಬಂದಿಳಿದ. ಚಿಕಾಗೊದ 1871ರ ಮಹಾನ್‌ ಅಗ್ನಿದುರಂತದ ವಿಧ್ವಂಸಕ ಸ್ವರೂಪದಿಂದ ಮತ್ತು ಈಚಿನ ಜನಸಂಖ್ಯೆಯ ಉತ್ಕರ್ಷದ ಕಾರಣದಿಂದಾಗಿ, ನಗರದಲ್ಲಿ ಹೊಸ ಅಭಿವೃದ್ಧಿಯು ಸಮೃದ್ಧವಾಗಿತ್ತು. ನಂತರ ಅವನು ನೆನಪಿಸಿಕೊಂಡಂತೆ, ಮಲಿನವಾಗಿರುವ ನೆರೆಹೊರೆಗಳು, ಜನದಟ್ಟಣೆಯ ಬೀದಿಗಳು ಮತ್ತು ನಿರಾಶೆಗೊಳಿಸುವ ವಾಸ್ತುಶೈಲಿ- ಇವು ಚಿಕಾಗೊದ ಕುರಿತಾಗಿ ಅವನು ಮೊದಲು ಹೊಂದಿದ್ದ ಎಣಿಕೆಗಳಾಗಿದ್ದವು; ಇಷ್ಟಾಗಿಯೂ ಸಹ ಕೆಲಸವೊಂದನ್ನು ಹುಡುಕುವಲ್ಲಿ ಅವನು ದೃಢಸಂಕಲ್ಪವನ್ನು ಹೊಂದಿದ್ದ. ಕೆಲವೇ ದಿನಗಳಲ್ಲಿ, ಮತ್ತು ಹಲವಾರು ಪ್ರಸಿದ್ಧ ಸಂಸ್ಥೆಗಳೊಂದಿಗೆ ನಡೆದ ಸಂದರ್ಶನಗಳ ನಂತರ, ಜೋಸೆಫ್‌‌ ಲೈಮನ್‌‌ ಸಿಲ್ಸ್‌‌ಬೀಯ ವಾಸ್ತುಶಿಲ್ಪೀಯ ಸಂಸ್ಥೆಯಲ್ಲಿ ಅವನು ಓರ್ವ ನಕಾಸೆಗಾರನಾಗಿ ನೇಮಕಗೊಂಡ.[] ನಕಾಸೆಗಾರ ಮತ್ತು ನಿರ್ಮಾಣ ಮೇಲ್ವಿಚಾರಕನಾಗಿ ಅಧಿಕೃತ ಮನ್ನಣೆಪಡೆದಿದ್ದ ಸಿಲ್ಸ್‌‌ಬೀ ಜೊತೆಯಲ್ಲಿ ರೈಟ್‌ ಹಿಂದೊಮ್ಮೆ ಒಟ್ಟಾಗಿ ಕೆಲಸಮಾಡಿದ್ದ; ವಿಸ್ಕಾನ್ಸಿನ್‌‌ನ ಸ್ಪ್ರಿಂಗ್‌ ಗ್ರೀನ್‌‌‌‌ನಲ್ಲಿನ ರೈಟ್‌ನ ಕುಟುಂಬಕ್ಕೆ ಸಂಬಂಧಿಸಿದಂತೆ, 1886ರ ಯೂನಿಟಿ ಚಾಪೆಲ್‌‌ ಕುರಿತಾಗಿ ಈ ಸಹಯೋಗ ನಡೆದಿತ್ತು.[] ಸದರಿ ಸಂಸ್ಥೆಯೊಂದಿಗೆ ಕೆಲಸ ಮಾಡುವ ಸಂದರ್ಭದಲ್ಲೇ, ಕುಟುಂಬದ ಇತರ ಎರಡು ಯೋಜನೆಗಳ ಕುರಿತಾಗಿಯೂ ಅವನು ಕೆಲಸ ಮಾಡಿದ: ತನ್ನ ಚಿಕ್ಕಪ್ಪ ಜೆಂಕಿನ್‌‌ ಲಾಯ್ಡ್‌‌ ಜೋನ್ಸ್‌ ಎಂಬಾತನಿಗೆ ಸಂಬಂಧಿಸಿದ, ಚಿಕಾಗೊದಲ್ಲಿನ ಆಲ್‌ ಸೌಲ್ಸ್‌‌ ಚರ್ಚು ಮತ್ತು ತನ್ನ ಇಬ್ಬರು ಚಿಕ್ಕಮ್ಮಂದಿರಿಗೆ ಸಂಬಂಧಿಸಿದ, ಸ್ಪ್ರಿಂಗ್‌ ಗ್ರೀನ್‌ನಲ್ಲಿನ ಹಿಲ್‌ಸೈಡ್‌ ಹೋಮ್‌‌ ಸ್ಕೂಲ್‌‌ I ಇವೇ ಆ ಎರಡು ಯೋಜನೆಗಳಾಗಿದ್ದವು.[] ಸಿಲ್ಸ್‌‌ಬೀಗಾಗಿ 1887ರಲ್ಲಿ ಕೆಲಸ ಮಾಡಿದ ಇತರ ನಕಾಸೆಗಾರರಲ್ಲಿ ಭವಿಷ್ಯದ ವಾಸ್ತುಶಿಲ್ಪಿಗಳಾದ ಸೆಸಿಲ್‌ ಕಾರ್ವಿನ್‌‌, ಜಾರ್ಜ್‌ W. ಮಾಹೆರ್‌‌, ಮತ್ತು ಜಾರ್ಜ್‌ G. ಎಲ್ಮ್‌ಸ್ಲೀ ಸೇರಿದ್ದರು. ಕೆಲವೇ ದಿನಗಳಲ್ಲಿ, ರೈಟ್‌ ಕಾರ್ವಿನ್‌‌ನ ಗೆಳೆತನ ಮಾಡಿಕೊಂಡ ಮತ್ತು ತಾನೊಂದು ಕಾಯಂ ಮನೆಯನ್ನು ಕಂಡುಕೊಳ್ಳುವವರೆಗೂ ಅವನೊಂದಿಗೇ ವಾಸಿಸಿದ್ದ. ಚಿಕಾಗೊದ ಮತ್ತೊಂದು ವಾಸ್ತುಕಲೆಯ ಕಚೇರಿಯಲ್ಲಿ, ನಿಗದಿಪಡಿಸಲಾದ ಅಲ್ಪಪ್ರಮಾಣದ ಕೆಲಸವೊಂದನ್ನು ತಾನು ಹೊಂದಿದ್ದಾಗಿಯೂ ರೈಟ್‌ ತನ್ನ ಆತ್ಮಕಥೆಯಲ್ಲಿ ವಿವರಿಸಿದ್ದಾನೆ. ಸಿಲ್ಸ್‌‌ಬೀಗಾಗಿ ತಾನು ಮಾಡುತ್ತಿರುವ ಕೆಲಸದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ತನಗೆ ಕಡಿಮೆ ಸಂಬಳ ನೀಡಲಾಗುತ್ತಿದೆ (ವಾರವೊಂದಕ್ಕೆ 8.00$ನಷ್ಟು) ಎಂಬ ಭಾವನೆ ಅವನಲ್ಲಿ ಮೂಡಿದ್ದರಿಂದಾಗಿ, ಈ ಯುವ ನಕಾಸೆಗಾರ ಅಲ್ಲಿನ ಕೆಲಸವನ್ನು ಬಿಟ್ಟ ಮತ್ತು ಬೀರ್ಸ್‌‌, ಕ್ಲೇ, ಹಾಗೂ ಡಟ್ಟಾನ್‌‌ರ ಸಂಸ್ಥೆಯಲ್ಲಿ ಓರ್ವ ವಿನ್ಯಾಸಕಾರನಾಗಿ ಕೆಲಸವನ್ನು ಕಂಡುಕೊಂಡ. ಆದಾಗ್ಯೂ, ಕಟ್ಟಡ ವಿನ್ಯಾಸವನ್ನು ಸ್ವತಃ ನಿರ್ವಹಿಸಲು ತಾನಿನ್ನೂ ಸಿದ್ಧನಾಗಿಲ್ಲ ಎಂಬುದನ್ನು ರೈಟ್‌ ಕೆಲವೇ ದಿನಗಳಲ್ಲಿ ಅರಿತುಕೊಂಡ; ಹೀಗಾಗಿ ತನ್ನ ಹೊಸ ಕೆಲಸವನ್ನು ಬಿಟ್ಟು ಅವನು ಜೋಸೆಫ್‌‌ ಸಿಲ್ಸ್‌‌ಬೀಯ ತೆಕ್ಕೆಗೆ ಹಿಂದಿರುಗಿದ- ಈ ಬಾರಿ ಅವನ ವೇತನದಲ್ಲಿ ಒಂದು ಹೆಚ್ಚಳವಾಗಿತ್ತು ಎಂಬುದು ಗಮನಾರ್ಹ ಅಂಶ.[] ಮುಖ್ಯವಾಗಿ ವಿಕ್ಟೋರಿಯಾ ಕಾಲದ ಮತ್ತು ಪುನರುಜ್ಜೀವಕ ವಾಸ್ತುಶೈಲಿಗೆ ಸಿಲ್ಸ್‌‌ಬೀ ಪಟ್ಟಾಗಿ ಅಂಟಿಕೊಂಡಿದ್ದನಾದರೂ, ಆ ಅವಧಿಯ ಇತರ "ಒರಟು ವಿನ್ಯಾಸಗಳಿಗಿಂತ" ಹೆಚ್ಚು "ಆಕರ್ಷಕವಾಗಿ ಚಿತ್ರಸದೃಶ"ವಾಗಿರುವ ರೀತಿಯಲ್ಲಿ ರೈಟ್‌ ತನ್ನ ಕೆಲಸವನ್ನು ಕಂಡುಕೊಂಡ.[೧೦] ಇಷ್ಟಾದರೂ, ಹೆಚ್ಚು ಪ್ರಗತಿಶೀಲವಾಗಿರುವ ಕೆಲಸಕ್ಕಾಗಿ ರೈಟ್‌ ಹಂಬಲಿಸಿದ. ಸಿಲ್ಸ್‌‌ಬೀಯ ಕಚೇರಿಯಲ್ಲಿ ಒಂದು ವರ್ಷಕ್ಕೂ ಕಡಿಮೆಯಿರುವ ಅವಧಿಯನ್ನು ಕಳೆದ ನಂತರ, ಚಿಕಾಗೊದಲ್ಲಿನ ಆಲ್ಡರ್‌‌ & ಸಲಿವನ್‌‌ ಎಂಬ ಅಗ್ರಗಾಮಿ ಸಂಸ್ಥೆಯು "ಸಭಾಂಗಣ [ಕಟ್ಟಡ]ದ ಒಳಾಂಗಣಕ್ಕೆ ಸಂಬಂಧಿಸಿದಂತೆ ಸಮಾಪ್ತಿಯ ನಕಾಶೆಗಳನ್ನು ರೂಪಿಸಬಲ್ಲ ಓರ್ವ ಸಮರ್ಥನಿಗಾಗಿ ಅರಸುತ್ತಿದೆ ಎಂಬುದನ್ನು ರೈಟ್‌ ಅರಿತುಕೊಂಡ."[೧೧] ತಾನು ಲೂಯಿಸ್‌ ಸಲಿವನ್‌‌‌‌‌ನ ಅಲಂಕಾರಿಕ ವಿನ್ಯಾಸಗಳ ಓರ್ವ ಸಮರ್ಥ ಚಿತ್ತಪ್ರಭಾವ ನಿರೂಪಣಾವಾದಿ ಎಂಬುದನ್ನು ರೈಟ್‌ ನಿರೂಪಿಸಿದ ಮತ್ತು ಎರಡು ಕಿರು ಸಂದರ್ಶನಗಳ ನಂತರ, ಆ ಸಂಸ್ಥೆಯಲ್ಲಿ ಓರ್ವ ಅಧಿಕೃತ ಹೊಸಗಸುಬಿಯಾಗಿ (ಅಪ್ರೆಂಟಿಸ್‌‌) ಅವನು ನೇಮಕಗೊಂಡ.[೧೨]

ಆಲ್ಡರ್‌‌ & ಸಲಿವನ್‌‌ (1888-1893)

ಸಲಿವನ್‌‌ನ ಇತರ ನಕಾಸೆಗಾರರೊಂದಿಗೆ ರೈಟ್‌ ಒಳ್ಳೆಯ ರೀತಿಯಲ್ಲಿ ಮುಂದುವರಿಯಲು ಆಗಲಿಲ್ಲ; ತನ್ನ ಶಿಷ್ಯವೃತ್ತಿಯ ಮೊದಲ ವರ್ಷಗಳ ಅವಧಿಯಲ್ಲಿ ತಮ್ಮ ನಡುವೆ ಹಲವಾರು ತೀವ್ರವಾದ ವಾಗ್ವಾದಗಳು ಸಂಭವಿಸಿದವು ಎಂಬುದಾಗಿ ಅವನು ಬರೆದುಕೊಂಡಿದ್ದಾನೆ. ಈ ಕಾರಣಕ್ಕಾಗಿಯೇ, ಸಲಿವನ್‌‌ ತನ್ನ ನೌಕರರಿಗೂ ಅಷ್ಟೊಂದು ಗೌರವವನ್ನು ನೀಡುತ್ತಿರಲಿಲ್ಲ.[೧೩] ಈ ಘಟನೆಯ ಹೊರತಾಗಿಯೂ, "ರೈಟ್‌ನನ್ನು ತನ್ನ ತೆಕ್ಕೆಗೆ ಸೆಳೆದುಕೊಂಡ ಸಲಿವನ್‌‌, ಅವನಿಗೆ ಮಹತ್ತರವಾದ ವಿನ್ಯಾಸದ ಹೊಣೆಗಾರಿಕೆಯನ್ನು ನೀಡಿದ." ತಾನು ತೋರಿಸುವ ಗೌರವದ ಒಂದು ಪ್ರತೀಕವಾಗಿ, ರೈಟ್‌ ನಂತರದಲ್ಲಿ ಸಲಿವನ್‌ ಕುರಿತಾಗಿ ಲೈಬರ್‌‌ ಮೀಸ್ಟರ್‌‌ (ಜರ್ಮನ್‌ ಭಾಷೆಯಲ್ಲಿ "ಪ್ರೀತಿಯ ಯಜಮಾನ" ಎಂದು ಇದರರ್ಥ) ಎಂದು ಉಲ್ಲೇಖಿಸಿದ.[೧೪] ಪಾಲ್‌‌ ಮ್ಯುಯೆಲ್ಲರ್‌‌ ಎಂಬ ಕಚೇರಿ ಕರ್ಮಚಾರಿಯೊಂದಿಗೂ ಸಹ ರೈಟ್‌ ಒಂದು ಬಾಂಧವ್ಯವನ್ನು ರೂಪಿಸಿಕೊಂಡ. ನಂತರ 1903 ಮತ್ತು 1923ರ ನಡುವೆ, ತನ್ನ ವ್ಯಾಪ್ತಿಗೆ ಬಂದ ಹಲವಾರು ಸಾರ್ವಜನಿಕ ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವಲ್ಲಿ ಮ್ಯುಯೆಲ್ಲರ್‌ನನ್ನು ರೈಟ್‌ ತೊಡಗಿಸಿದ.[೧೫]

ಇಲಿನಾಯ್ಸ್‌‌ನ ಓಕ್‌ ಪಾರ್ಕ್‌ನಲ್ಲಿರುವ ರೈಟ್‌ನ ಮನೆ

ಅವನ ಮೊದಲ ಹೆಂಡತಿಯೆನಿಸಿಕೊಂಡ ಕ್ಯಾಥರೀನ್‌‌ ಲೀ "ಕಿಟ್ಟಿ" ಟೋಬಿನ್‌‌ (1871–1959) ಜೊತೆಯಲ್ಲಿ 1889ರ ಜೂನ್‌‌ 1ರಂದು ರೈಟ್‌ಗೆ ಮದುವೆಯಾಯಿತು. ಆಲ್‌ ಸೌಲ್ಸ್‌‌ ಚರ್ಚಿನಲ್ಲಿನ ಚಟುವಟಿಕೆಗಳ ಸಂದರ್ಭದಲ್ಲಿ, ಸುಮಾರು ಒಂದು ವರ್ಷ ಮುಂಚೆ ಅವರಿಬ್ಬರೂ ಭೇಟಿಯಾಗಿದ್ದರು. ರೈಟ್‌ ಜೊತೆಯಲ್ಲಿ ಐದು ವರ್ಷ ಅವಧಿಯ ಉದ್ಯೋಗದ ಕರಾರು-ಒಪ್ಪಂದವೊಂದನ್ನು ಮಾಡಿಕೊಳ್ಳುವ ಮೂಲಕ, ಈ ಯುವ ಜೋಡಿಯ ಹಣಕಾಸಿನ ಸುಭದ್ರತೆಗೆ ಸಲಿವನ್‌‌ ತನ್ನದೇ ಆದ ಕೊಡುಗೆಯನ್ನು ನೀಡಿದ. ರೈಟ್‌ ಮತ್ತೊಂದು ಮನವಿಯನ್ನು ಮಾಡಿಕೊಂಡ: "ಶ್ರೀಮಾನ್‌ ಸಲಿವನ್‌‌, ಐದು ವರ್ಷಗಳಷ್ಟು ಸುದೀರ್ಘ ಅವಧಿಗೆ ನಿನ್ನೊಂದಿಗೆ ನಾನು ಕೆಲಸ ಮಾಡಬೇಕು ಎಂಬುದಾಗಿ ನೀನು ಬಯಸುವುದೇ ಆದಲ್ಲಿ, ಒಂದು ಪುಟ್ಟ ಮನೆಯನ್ನು ನಿರ್ಮಿಸಲು ಬೇಕಾಗುವಷ್ಟು ಹಣವನ್ನು ನನಗೆ ನೀನು ಸಾಲನೀಡಲಾರೆಯಾ‌‌?"[೧೬] ಸಲಿವನ್‌‌ ನೀಡಿದ 5000 $ನಷ್ಟು ಮೊತ್ತದ ಸಾಲದೊಂದಿಗೆ, ಚಿಕಾಗೊದ ಮೂಲೆಯಲ್ಲಿರುವ ಜಮೀನೊಂದನ್ನು ಮತ್ತು ಓಕ್‌ ಪಾರ್ಕ್‌‌‌‌ ಉಪನಗರದಲ್ಲಿನ ಫಾರೆಸ್ಟ್‌ ಅವೆನ್ಯೂಸ್‌ನ್ನು ರೈಟ್‌ ಖರೀದಿಸಿದ. ಅಸ್ತಿತ್ವದಲ್ಲಿರುವ ಗಾತಿಕ್‌ ರಿವೈವಲ್‌‌ ಮನೆಯನ್ನು ಅವನ ತಾಯಿಗೆ ನೀಡಲಾದರೆ, ಇದರ ಜೊತೆಜೊತೆಗೆ ರೈಟ್‌ ಮತ್ತು ಕ್ಯಾಥರೀನ್‌‌ಗಾಗಿ ಒಂದು ಅಡಕನಾದ, ಗೋಪುರದಂಥ ಶೈಲಿಯ ಮನೆಯನ್ನು ನಿರ್ಮಿಸಲಾಯಿತು‌.[೧೭] ಸಂಸ್ಥೆಯ ಸಭಾಂಗಣ ಕಟ್ಟಡದ ತುದಿಯಲ್ಲಿರುವ, 17ನೇ ಮಹಡಿಯ ಹೊಸ ಸ್ಥಳಾವಕಾಶದಲ್ಲಿರುವ 1890ರ ರೇಖಾಚಿತ್ರವೊಂದರ ಅನುಸಾರ, ಸಲಿವನ್‌ನ ಖಾಸಗಿ ಕಚೇರಿಯ ಪಕ್ಕದಲ್ಲಿಯೇ ಖಾಸಗಿ ಕಚೇರಿಯೊಂದನ್ನು ರೈಟ್‌ ಕೆಲವೇ ದಿನಗಳಲ್ಲಿ ಪಡೆದುಕೊಂಡ.[೧೫] ಆದಾಗ್ಯೂ, ವಾಸ್ತವವಾಗಿ ಆ ಕಚೇರಿಯನ್ನು ತನ್ನ ಸ್ನೇಹಿತ ಮತ್ತು ನಕಾಸೆಗಾರ ಜಾರ್ಜ್‌ ಎಲ್ಮ್‌ಸ್ಲೀ ಜೊತೆಯಲ್ಲಿ ರೈಟ್‌ ಹಂಚಿಕೊಂಡ; ರೈಟ್‌ನ ಮನವಿಯ ಅನುಸಾರ ಇವನನ್ನು ಸಲಿವನ್‌ ನೇಮಿಸಿಕೊಂಡಿದ್ದ.[೧೮] ಮುಖ್ಯ ನಕಾಸೆಗಾರನ ಸ್ಥಾನಕ್ಕೆ ರೈಟ್‌ ಏರಿದ್ದ ಮತ್ತು ಕಚೇರಿಯಲ್ಲಿನ ಎಲ್ಲಾ ವಾಸಯೋಗ್ಯ ನಿವಾಸಗಳ ವಿನ್ಯಾಸ ಕೆಲಸವನ್ನು ನಿರ್ವಹಿಸಿದ. ಒಂದು ಸಾರ್ವತ್ರಿಕ ನಿಯಮವಾಗಿ, ಆಲ್ಡರ್‌‌ & ಸಲಿವನ್‌‌ ಸಂಸ್ಥೆಯು ಮನೆಗಳನ್ನು ವಿನ್ಯಾಸಗೊಳಿಸಲಿಲ್ಲ ಅಥವಾ ನಿರ್ಮಿಸಲಿಲ್ಲವಾದರೂ, ತಮ್ಮ ಪ್ರಮುಖ ವಾಣಿಜ್ಯ ಯೋಜನೆಗಳ ಗ್ರಾಹಕರು ಈ ಬಗೆಗೆ ಕೇಳಲು ಶುರುಮಾಡಿದಾಗ, ಅದಕ್ಕೆ ಕಟ್ಟುಬಿದ್ದು ಈ ವಲಯಕ್ಕೂ ಕಾಲಿಡಬೇಕಾಗಿ ಬಂತು. ಕಚೇರಿ ಅವಧಿಗಳ ಸಮಯದಲ್ಲಿ ಸಂಸ್ಥೆಯ ಪ್ರಮುಖ ನಿಯೋಜನೆಗಳಲ್ಲಿ ರೈಟ್‌ ಬಿಡುವಿಲ್ಲದಂತೆ ತೊಡಗಿಸಿಕೊಂಡಿದ್ದ; ಹೀಗಾಗಿ, ಅವನ ಮನೆ ಸ್ಟುಡಿಯೊದಲ್ಲಿ ಸಾಯಂಕಾಲ ಮತ್ತು ವಾರಾಂತ್ಯದ ಅಧಿಕಾವಧಿಯ ಸಮಯಗಳಲ್ಲಿ ನೆರವೇರಿಸಿಕೊಳ್ಳಲೆಂದು ಮನೆ ವಿನ್ಯಾಸಕಾರ್ಯಗಳು ವರ್ಗಾಯಿಸಲ್ಪಟ್ಟವು. ನಂತರದಲ್ಲಿ, ಈ ಮನೆಗಳ ವಿನ್ಯಾಸಕ್ಕೆ ಸಂಬಂಧಿಸಿದ ಒಟ್ಟು ಹೊಣೆಗಾರಿಕೆಯು ತನ್ನದಾಗಿತ್ತೆಂದು ಅವನು ಪ್ರತಿಪಾದಿಸಿದನಾದರೂ, ಅವುಗಳ ವಾಸ್ತುಶಿಲ್ಪೀಯ ಶೈಲಿಯ ಜಾಗರೂಕ ಅವಲೋಕನ ಮತ್ತು ಇತಿಹಾಸಕಾರ ರಾಬರ್ಟ್‌ ಟ್ವಾಂಬ್ಲಿ ವತಿಯಿಂದ ಬಂದಿರುವ ಸಮರ್ಥನೆಗಳು ಸೂಚಿಸುವ ಪ್ರಕಾರ, ಸದರಿ ವಾಸಯೋಗ್ಯ ಮನೆಗಳ ಕೆಲಸಗಳ ಒಟ್ಟಾರೆ ಸ್ವರೂಪ ಮತ್ತು ವಿಶಿಷ್ಟ ಲಕ್ಷಣಗಳನ್ನು ಸಲಿವನ್‌‌ ನಿದೇರ್ಶಿಸಿದ ಎಂದು ತಿಳಿದುಬರುತ್ತದೆ; ಸಲಿವನ್‌‌ನ ರೇಖಾಚಿತ್ರಗಳಿಂದ ಯೋಜನೆಗಳನ್ನು ವಿವರಿಸುವ ಮಟ್ಟಕ್ಕೆ ರೈಟ್‌ನ ವಿನ್ಯಾಸ ಕರ್ತವ್ಯಗಳು ಅನೇಕವೇಳೆ ಇಳಿಸಲ್ಪಟ್ಟವು.[೧೮] ಈ ಅವಧಿಯಲ್ಲಿ, ಮಿಸ್ಸಿಸ್ಸಿಪ್ಪಿಯ ಓಷನ್‌ ಸ್ಪ್ರಿಂಗ್ಸ್‌‌‌ನಲ್ಲಿನ ಸಲಿವನ್‌‌ನ ಬಂಗಲೆ (1890) ಮತ್ತು ಜೇಮ್ಸ್‌‌ A. ಚಾರ್ನ್ಲೆಯ ಬಂಗಲೆಗಳಿಗೆ (1890) ಸಂಬಂಧಿಸಿದಂತೆ ರೈಟ್‌ ಕೆಲಸ ಮಾಡಿದ; ಅಷ್ಟೇ ಅಲ್ಲ, ಚಿಕಾಗೊದಲ್ಲಿನ ಬೆರ್ರಿ-ಮ್ಯಾಕ್‌ಹಾರ್ಗ್‌ ಹೌಸ್‌‌ (1891) ಮತ್ತು ಸಲಿವನ್‌‌ನ ತಾರಸಿಮನೆ‌‌ (1892), ಹಾಗೂ ಚಿಕಾಗೊದಲ್ಲಿನ ಅತ್ಯಂತ ಗಮನಾರ್ಹ ಮನೆಯಾದ, 1891ರಲ್ಲಿ ನಿರ್ಮಾಣಗೊಂಡ ಜೇಮ್ಸ್‌‌ A. ಚಾರ್ನ್ಲೆ ಹೌಸ್‌‌‌‌ಗೂ ಸಹ ರೈಟ್‌ ಕೆಲಸ ಮಾಡಿದ. ಐದು ಸಹಯೋಗಗಳ ಪೈಕಿ, ಚಾರ್ನ್ಲೆ ಕುಟುಂಬಕ್ಕೆ ಸಂಬಂಧಿಸಿದ ಕೇವಲ ಎರಡು ನಿಯೋಜನೆಗಳು ಈಗಲೂ ಉಳಿದುಕೊಂಡಿವೆ.[೧೯][೨೦]

ವಾಲ್ಟರ್‌ ಗೇಲ್‌‌ ಹೌಸ್‌‌ (1893) ಶೈಲಿಯಲ್ಲಿ ಕ್ವೀನ್‌ ಆನ್ನೆಯಂತಿದ್ದರೂ, ಕಿಟಕಿಯ ಪಟ್ಟಿಗಳು ಮತ್ತು ಒಂದು ಚಾಚಿಕೊಂಡಿರುವ ಮುಖಮಂಟಪ ಛಾವಣಿಯನ್ನು ಒಳಗೊಂಡಿದ್ದು, ಅದು ರೈಟ್‌ನ ಅಭಿವೃದ್ಧಿಶೀಲ ಸೌಂದರ್ಯಪ್ರಜ್ಞೆಯ ಕುರಿತು ಸೂಚನೆಗಳನ್ನು ನೀಡುತ್ತದೆ.

ಸಲಿವನ್‌‌ ನೀಡಿದ್ದ ಸಾಲ ಮತ್ತು ಅಧಿಕಾವಧಿ ವೇತನದ ಹೊರತಾಗಿಯೂ, ಹಣಕಾಸಿನ ಸಮಸ್ಯೆಯು ರೈಟ್‌ನನ್ನು ಒಂದೇಸಮನೆ ಕಾಡುತ್ತಿತ್ತು. ಉಡುಗೆ-ತೊಡುಗೆಗಳ ಸಂಗ್ರಹ ಮತ್ತು ವಾಹನಗಳಿಗೆ ಸಂಬಂಧಿಸಿದಂತೆ ತಾನು ಹೊಂದಿದ್ದ ದುಬಾರಿ ಅಭಿರುಚಿಗಳು, ಹಾಗೂ ತನ್ನ ಮನೆಯೊಳಗೆ ವಿನ್ಯಾಸಗೊಳಿಸಿಕೊಂಡಿದ್ದ ಹೆಚ್ಚುವರಿ ಐಷಾರಾಮಗಳ ಕಾರಣದಿಂದಾಗಿಯೇ ತನ್ನ ಹಣಕಾಸಿನ ಪರಿಸ್ಥಿತಿಗಳು ಕಳಪೆಮಟ್ಟದಲ್ಲಿದ್ದವು ಎಂದು ರೈಟ್‌ ಒಪ್ಪಿಕೊಂಡಿದ್ದ. ಈ ಸಮಸ್ಯೆಯನ್ನು ಜಟಿಲಗೊಳಿಸಲೋ ಎಂಬಂತೆ ರೈಟ್‌ನ ಮಕ್ಕಳೂ ಸಹ ಅತ್ಯುತ್ಕೃಷ್ಟ ಸಾಮಗ್ರಿಗಳಿಗೆ ಸಂಬಂಧಿಸಿದ ಇದೇ ರೀತಿಯ ಅಭಿರುಚಿಗಳನ್ನು ಹೊಂದಿದವರಾಗಿದ್ದರು; ಮೊದಲು ಹುಟ್ಟಿದ ಲಾಯ್ಡ್‌‌ (ಜನನ: 1890) ಮತ್ತು ಜಾನ್‌‌ (ಜನನ: 1892) ಸಮಸ್ಯೆಯ ಸಂಕೀರ್ಣತೆಗೆ ತಮ್ಮದೇ ಕೊಡುಗೆಯನ್ನು ನೀಡಿದ್ದರು.[೧೬][೨೧] ತನ್ನ ಆದಾಯಕ್ಕೆ ಪೂರಕವಾಗಿರಲೆಂದು ಹಾಗೂ ತನ್ನ ಋಣಭಾರಗಳ ಮರುಪಾವತಿಗೆ ಅನುವಾಗಲೆಂದು, ಕನಿಷ್ಟಪಕ್ಷ ಒಂಬತ್ತು ಮನೆಗಳಿಗೆ ಸಂಬಂಧಿಸಿದ ಸ್ವತಂತ್ರ ಕಾರ್ಯ-ನಿಯೋಜನೆಗಳನ್ನು ರೈಟ್‌ ಸ್ವೀಕರಿಸಿದ. ಅವನೇ ನಂತರದಲ್ಲಿ ಕರೆದುಕೊಂಡಂತೆ, ಈ "ಕಳ್ಳವ್ಯವಹಾರದ" ಮನೆಗಳು ಸಂಪ್ರದಾಯಾನುಸಾರಿಯಾದ ಕ್ವೀನ್‌ ಆನ್ನೆ ಮತ್ತು ಕಲೋನಿಯಲ್‌ ರಿವೈವಲ್‌‌ ಶೈಲಿಗಳ ಮಾರ್ಪಾಡುಗಳ ರೂಪದಲ್ಲಿ, ಹಿಡಿತವಾಗಿ ಅಥವಾ ಅತಿರೇಕಕ್ಕೆ ಹೋಗದಂತೆ ವಿನ್ಯಾಸಗೊಳಿಸಲ್ಪಟ್ಟಿದ್ದವು. ಅದೇನೇ ಇದ್ದರೂ, ಆ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವಾಸ್ತುಶೈಲಿಗಿಂತ ಭಿನ್ನವಾಗಿ, ಪ್ರತಿ ಮನೆಯೂ ಸರಳ ಜ್ಯಾಮಿತೀಯ ಒಟ್ಟುಗೂಡಿಸುವಿಕೆಗೆ ಒತ್ತುನೀಡಿತು; ಅಷ್ಟೇ ಅಲ್ಲ, ಸಮತಲವಾಗಿರುವ ಕಿಟಕಿಗಳ ಪಟ್ಟಿಗಳು, ಅಲ್ಲಲ್ಲಿ ಬರುವ ಚಾಚುತೊಲೆಗಳು, ಹಾಗೂ ಅವನ ನಂತರದ ಕಾರ್ಯವೈಖರಿಯ ವೈಶಿಷ್ಟ್ಯಪೂರ್ಣ ಚಿಹ್ನೆಗಳಾಗಿ ಪರಿಣಮಿಸಿದ ತೆರೆದ ಮಹಡಿಯ ರೂಪರೇಷೆಗಳನ್ನು ಈ ಮನೆಗಳು ಒಳಗೊಂಡಿದ್ದವು. ಈ ಆರಂಭಿಕ ಮನೆಗಳ ಪೈಕಿ ಇಂದು ಎಂಟು ಮನೆಗಳು ಉಳಿದುಕೊಂಡಿದ್ದು, ಥಾಮಸ್‌‌ ಗೇಲ್‌‌, ಪಾರ್ಕರ್‌‌, ಬ್ಲಾಸಮ್‌‌, ಮತ್ತು ವಾಲ್ಟರ್‌ ಗೇಲ್‌‌ ಮನೆಗಳು ಅವುಗಳಲ್ಲಿ ಸೇರಿವೆ.[೨೨] ಆಲ್ಡರ್‌‌ & ಸಲಿವನ್‌‌ ಸಂಸ್ಥೆಗಾಗಿ ವಾಸಯೋಗ್ಯ ಮನೆಗಳ ಯೋಜನೆಗಳನ್ನು ವಿನ್ಯಾಸಗೊಳಿಸಿದಂತೆ, ತನ್ನದೇ ಆದ ಸಮಯದಲ್ಲಿ ಅವನ 'ಕಳ್ಳವ್ಯವಹಾರದ' ಮನೆಗಳನ್ನು ರೈಟ್‌ ವಿನ್ಯಾಸಗೊಳಿಸಿದ. ಸದರಿ ಸ್ವತಂತ್ರ ಕೆಲಸಗಳ ಕುರಿತು ಸಲಿವನ್‌‌ಗೆ 1893ರವರೆಗೂ ಗೊತ್ತಿರಲಿಲ್ಲ; ಈ ಕಾಲವು ಬಂದಾಗ, ಮನೆಗಳ ಪೈಕಿ ಒಂದು ಸಂದೇಹಾಸ್ಪದವಲ್ಲದಂತೆ ಫ್ರಾಂಕ್ ಲಾಯ್ಡ್‌‌ ರೈಟ್ ವಿನ್ಯಾಸವೊಂದನ್ನು ಹೊಂದಿರುವುದನ್ನು ಅವನು ಗುರುತಿಸಿದ. ಆಲಿಸನ್‌‌ ಹಾರ್ಲಾನ್‌‌‌ಗಾಗಿ ನಿರ್ಮಿಸಲಾಗಿದ್ದ ಈ ನಿರ್ದಿಷ್ಟ ಮನೆಯು, ಕೆನ್‌ವುಡ್‌‌‌‌ನ ಚಿಕಾಗೊ ಸಮುದಾಯದಲ್ಲಿದ್ದ ಸಲಿವನ್‌‌ನ ತಾರಸಿಮನೆಯಿಂದ ಕೆಲವೇ ಮೊಹಲ್ಲಾಗಳಷ್ಟು ಆಚೆಗಿತ್ತು. ತಾಣವನ್ನು ಹೊರತುಪಡಿಸಿ, ಚಾರ್ನ್ಲೆ ಹೌಸ್‌‌ನದೇ ಶೈಲಿಯಲ್ಲಿದ್ದ ಜೋಡಣೆ ಮತ್ತು ಉಪ್ಪರಿಗೆಯ ಜಾಲರ ವಿನ್ಯಾಸದ ಜ್ಯಾಮಿತೀಯ ಅಪ್ಪಟತನವು, ಸದರಿ ಯೋಜನೆಯಲ್ಲಿ ರೈಟ್‌ನ ಒಳಗೊಳ್ಳುವಿಕೆಯು ಇರುವುದನ್ನು ಎತ್ತಿತೋರಿಸಿತ್ತು. ರೈಟ್‌ನ ಐದು ವರ್ಷ ಅವಧಿಯ ಕರಾರು-ಒಪ್ಪಂದವು ಯಾವುದೇ ಹೊರಗಿನ ಕೆಲಸವನ್ನು ನಿಷೇಧಿಸಿದ್ದರಿಂದಾಗಿ, ಸಲಿವನ್‌‌ನ ಸಂಸ್ಥೆಯಿಂದ ಅವನು ನಿರ್ಗಮಿಸುವುದಕ್ಕೆ ಸದರಿ ಘಟನೆಯು ಕಾರಣವಾಯಿತು.[೨೦] ಸಲಿವನ್‌‌ ಮತ್ತು ರೈಟ್‌ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿದ್ದುದನ್ನು ವಿವರವಾಗಿ ಹೇಳುವ ವೈವಿಧ್ಯಮಯ ಕಥೆಗಳು ಚಾಲ್ತಿಯಲ್ಲಿವೆ; ಅಷ್ಟೇ ಏಕೆ, ಸ್ವತಃ ರೈಟ್‌ ಕೂಡಾ ನಂತರದಲ್ಲಿ ಸದರಿ ಘಟನೆಯ ಕುರಿತಾದ ಎರಡು ವಿಭಿನ್ನ ರೂಪಾಂತರಗಳನ್ನು ಹೇಳಿದ್ದ. ಆನ್‌ ಆಟೋಬಯಾಗ್ರಫಿ ಕೃತಿಯಲ್ಲಿ ರೈಟ್‌ ಈ ಕುರಿತು ಸಮರ್ಥಿಸುತ್ತಾ, ತನ್ನ ಉಪ-ಉದ್ಯೋಗಗಳು ತನ್ನ ಕರಾರು-ಒಪ್ಪಂದಕ್ಕೆ ಒಂದು ಉಲ್ಲಂಘನೆಯಾಗಿ ಪರಿಣಮಿಸುತ್ತವೆ ಎಂಬುದು ತನಗೆ ಅರಿವಿರಲಿಲ್ಲ ಎಂದು ಹೇಳಿಕೊಂಡ. ಅವುಗಳ ಕುರಿತು ಸಲಿವನ್‌‌ ಅರಿತುಕೊಂಡಾಗ, ಅವನು ಕೋಪಗೊಂಡ ಮತ್ತು ಮನನೊಂದುಕೊಂಡ; ಮತ್ತಾವುದೇ ಹೊರಗಿನ ನಿಯೋಜನೆಗಳನ್ನು ನಿಷೇಧಿಸಿದ ಅವನು, ಕರಾರಿನ ಅನುಸಾರ ರೈಟ್‌ನ ಸೇವಾವಧಿಯ ಐದು ವರ್ಷಗಳು ಸಂಪೂರ್ಣಗೊಳ್ಳುವವರೆಗೂ, ಅವನಿಗೆ ಅವನ ಓಕ್‌ ಪಾರ್ಕ್‌ ಮನೆಯ ಕಾನೂನುಬದ್ಧ ಪತ್ರವನ್ನು ನೀಡಲು ನಿರಾಕರಿಸಿದ. ಅವುಗಳ ಕುರಿತು ಸಲಿವನ್‌‌ ಅರಿತುಕೊಂಡಾಗ, ಅವನು ಕೋಪಗೊಂಡ ಮತ್ತು ಮನನೊಂದುಕೊಂಡ; ಮತ್ತಾವುದೇ ಹೊರಗಿನ ನಿಯೋಜನೆಗಳನ್ನು ನಿಷೇಧಿಸಿದ ಅವನು, ಕರಾರಿನ ಅನುಸಾರ ರೈಟ್‌ನ ಸೇವಾವಧಿಯ ಐದು ವರ್ಷಗಳು ಸಂಪೂರ್ಣಗೊಳ್ಳುವವರೆಗೂ, ಅವನಿಗೆ ಅವನ ಓಕ್‌ ಪಾರ್ಕ್‌ ಮನೆಯ ಕಾನೂನುಬದ್ಧ ಪತ್ರವನ್ನು ನೀಡಲು ನಿರಾಕರಿಸಿದ. ತನ್ನ ಯಜಮಾನನಿಂದ ವ್ಯಕ್ತವಾದ ಹೊಸ ಹಗೆತನವನ್ನು ಸಹಿಸಲು ಸಿದ್ಧನಿಲ್ಲದ ರೈಟ್‌, ಸದರಿ ಸನ್ನಿವೇಶವು ನ್ಯಾಯಯುತವಲ್ಲದ್ದು ಎಂದು ಭಾವಿಸಿದ. "ಅವನ ಸೀಸದಕಡ್ಡಿಯನ್ನು ಬಿಸುಟ ರೈಟ್‌, ಮತ್ತೆಂದೂ ಹಿಂದಿರುಗದ ರೀತಿಯಲ್ಲಿ ಆಲ್ಡರ್‌‌ ಅಂಡ್‌ ಸಲಿವನ್‌‌ ಕಚೇರಿಯಿಂದ ಹೊರನಡೆದ." ರೈಟ್‌ನ ಕ್ರಮಗಳ ಕುರಿತಾಗಿ ಅತೀವವಾದ ಸಹಾನುಭೂತಿಯನ್ನು ಹೊಂದಿದ್ದ ಡಾಂಕ್ಮರ್‌ ಆಲ್ಡರ್‌‌, ನಂತರದಲ್ಲಿ ಅವನಿಗೆ ಕಾನೂನುಬದ್ಧ ಪತ್ರವನ್ನು ಕಳಿಸಿಕೊಟ್ಟ.[೨೩] ಮತ್ತೊಂದೆಡೆ, ರೈಟ್‌ ತನ್ನ ಟ್ಯಾಲೀಸಿನ್‌‌ ಹೊಸಗಸುಬಿಗಳೊಂದಿಗೆ ಮಾತನಾಡುತ್ತಾ (ಎಡ್ಗರ್‌‌ ಟಫೆಲ್‌ನಿಂದ ದಾಖಲಿಸಲ್ಪಟ್ಟಂತೆ), ಹಾರ್ಲಾನ್‌‌ ಹೌಸ್‌‌ ಕುರಿತಾಗಿ ಸಲಿವನ್‌‌ಗೆ ಗೊತ್ತಾಗುತ್ತಿದ್ದಂತೆಯೇ ಅವನು ರೈಟ್‌ನನ್ನು ಸ್ಥಳದಲ್ಲೇ ತೆಗೆದುಹಾಕಿದ. ಹಲವಾರು ಕಳ್ಳ ವ್ಯವಹಾರದ ಕೆಲಸಗಳಿಗೆ ಸೆಸಿಲ್‌ ಕಾರ್ವಿನ್‌ನಿಂದ ರೈಟ್‌ ಸಹಿ ಪಡೆದಿದ್ದ ಎಂದೂ ಸಹ ದಾಖಲಿಸಿದ ಟಫೆಲ್‌, ಅವರ ಕಾನೂನುಬಾಹಿರ ಸ್ವರೂಪದ ಕುರಿತು ರೈಟ್‌ಗೆ ಅರಿವಿತ್ತು ಎಂಬುದನ್ನು ತನ್ಮೂಲಕ ಸೂಚಿಸಿದ.[೨೦][೨೪] ಘಟನೆಗಳ ಸರಿಯಾದ ಸರಣಿಯ ಕುರಿತು ಲೆಕ್ಕಿಸದ ರೈಟ್‌ ಮತ್ತು ಸಲಿವನ್‌‌, ಹನ್ನೆರಡು ವರ್ಷಗಳವರೆಗೆ ಭೇಟಿಯಾಗಲಿಲ್ಲ ಅಥವಾ ಮಾತನಾಡಲಿಲ್ಲ. ಘಟನೆಗಳ ಸರಿಯಾದ ಸರಣಿಯ ಕುರಿತು ಲೆಕ್ಕಿಸದ ರೈಟ್‌ ಮತ್ತು ಸಲಿವನ್‌‌, ಹನ್ನೆರಡು ವರ್ಷಗಳವರೆಗೆ ಭೇಟಿಯಾಗಲಿಲ್ಲ ಅಥವಾ ಮಾತನಾಡಲಿಲ್ಲ. .</ref> ಲೂಯಿಸ್‌ ಸಲಿವನ್‌ನ ಕಲೆಗಳು ಮತ್ತು ಕರಕೌಶಲಗಳ ಆಂದೋಲನ ಹಾಗೂ ತತ್ತ್ವಗಳಿಂದ ಪ್ರಭಾವಿತರಾಗಿದ್ದ ಈ ಯುವ ವಾಸ್ತುಶಿಲ್ಪಿಗಳು, ಪ್ರೈರೀ ಪಂಥ ಎಂದು ಮುಂದೆ ಹೆಸರಾದ ವಾಸ್ತುಕಲೆಯ ಅಸ್ತಿತ್ವವೊಂದನ್ನು ರೂಪಿಸಿದರು.[೨೫] ಮೇರಿಯನ್‌‌‌ ಮಹೋನಿ ಎಂಬ ಪರ್ಕಿನ್ಸ್‌‌ ಹೊಸಗಸುಬಿಯು ಅವರನ್ನು ಸೇರಿಕೊಂಡಳು; ಈಕೆ 1895ರಲ್ಲಿ ರೈಟ್‌ನ ಕರಡು ತಯಾರಕರ ತಂಡಕ್ಕೆ ವರ್ಗಾಯಿಸಲ್ಪಟ್ಟಳು ಮತ್ತು ಅವನ ಪ್ರಸ್ತುತಿಯ ನಕಾಶೆಗಳು ಹಾಗೂ ಜಲವರ್ಣ ಚಿತ್ರಣಗಳ ತಯಾರಿಕೆಯ ಮೇಲ್ವಿಚಾರಣೆಯನ್ನು ವಹಿಸಿಕೊಂಡಳು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಪರವಾನಗಿ ಪಡೆದ ಮೊದಲ ಸ್ತ್ರೀ ವಾಸ್ತುಶಿಲ್ಪಿಯಾಗಿದ್ದ ಮಹೋನಿಯು, ಇತರ ಕಾರ್ಯವೈಶಿಷ್ಟ್ಯಗಳ ಮಧ್ಯದಲ್ಲಿಯೇ ರೈಟ್ ವಿನ್ಯಾಸದ ಮನೆಗಳಿಗಾಗಿ ಪೀಠೋಪಕರಣಗಳು, ಸೀಸಯುಕ್ತ ಗಾಜಿನ ಕಿಟಕಿಗಳು, ಮತ್ತು ದೀಪದ ಅಳವಡಿಕೆಗಳನ್ನೂ ಸಹ ವಿನ್ಯಾಸಗೊಳಿಸಿದಳು.[೨೬][೨೭] 1894 ಮತ್ತು 1910ರ ದಶಕದ ಆರಂಭಿಕ ಅವಧಿಯ ನಡುವೆ, ಪ್ರೈರೀ ಪಂಥಕ್ಕೆ ಸೇರಿದ ಇತರ ಅಗ್ರಗಣ್ಯ ವಾಸ್ತುಶಿಲ್ಪಿಗಳು ಹಾಗೂ ರೈಟ್‌ನ ಭವಿಷ್ಯದ ನೌಕರರ ಪೈಕಿ ಅನೇಕರು, ಸ್ಟೀನ್‌ವೇ ಹಾಲ್‌‌ನ ಕಚೇರಿಗಳಲ್ಲಿ ತಮ್ಮ ವೃತ್ತಿಜೀವನಗಳನ್ನು ಪ್ರಾರಂಭಿಸಿದರು.

ಇಲಿನಾಯ್ಸ್‌‌ನ ರಿವರ್‌ ಫಾರೆಸ್ಟ್‌ನಲ್ಲಿರುವ ವಿಲಿಯಂ H. ವಿನ್‌‌ಸ್ಲೋ ಹೌಸ್‌‌ (1893).

ಈ ಅವಧಿಯ ಸಂದರ್ಭದಲ್ಲಿ ಸಾದರಪಡಿಸಲ್ಪಟ್ಟ ರೈಟ್‌ನ ಯೋಜನೆಗಳು ಎರಡು ಮೂಲಮಾದರಿಗಳನ್ನು ಅನುಸರಿಸಿದವು. ಒಂದೆಡೆ, ಅವನ ಮೊದಲ ಸ್ವತಂತ್ರ ಕಾರ್ಯ-ನಿಯೋಜನೆಯಾದ ವಿನ್‌‌ಸ್ಲೋ ಹೌಸ್‌‌ ಇತ್ತು; ಇದು ರೈಟ್‌ ವಿನ್ಯಾಸದ ಮನೆಗಳಲ್ಲಿ ವಿಶಿಷ್ಟವಾಗಿರುವ ಸರಳ ಜ್ಯಾಮಿತಿ ಮತ್ತು ಸಮತಲವಾಗಿರುವ ರೇಖೆಗಳ ಪ್ರಾಮುಖ್ಯತೆಯೊಂದಿಗೆ ಸಂಯೋಜಿಸಲಾಗಿದ್ದ ಸಲಿವನ್‌‌ ಶೈಲಿಯ ಅಲಂಕರಣವನ್ನು ಹೊಂದಿತ್ತು. ಫ್ರಾನ್ಸಿಸ್‌ ಅಪಾರ್ಟ್‌‌ಮೆಂಟ್ಸ್‌ (1895, ಇದನ್ನು 1971ರಲ್ಲಿ ಕೆಡವಲಾಯಿತು) ಹೆಲ್ಲರ್‌‌ ಹೌಸ್‌‌ (1896), ರೋಲಿನ್‌‌ ಫರ್ಬೆಕ್‌‌ ಹೌಸ್‌‌ (1897), ಮತ್ತು ಹ್ಯೂಸರ್‌ ಹೌಸ್‌‌ (1899, ಇದನ್ನು 1926ರಲ್ಲಿ ಕೆಡವಲಾಯಿತು) ಇವೇ ಮೊದಲಾದವುಗಳನ್ನು ಅದೇ ವಿಧಾನದಲ್ಲಿ ವಿನ್ಯಾಸಗೊಳಿಸಲಾಯಿತು. ಹೆಚ್ಚು ಸಂಪ್ರದಾಯಶರಣ ಗ್ರಾಹಕರಿಗಾಗಿ, ಹೆಚ್ಚು ಸಾಂಪ್ರದಾಯಿಕ ನಿವಾಸಗಳನ್ನು ವಿನ್ಯಾಸಗೊಳಿಸಲು ರೈಟ್‌ ಅನುಮೋದಿಸಿದ. ಇಂಥ ಮನೆಗಳಲ್ಲಿ ಡಚ್‌ ಕಲೋನಿಯಲ್‌ ರಿವೈವಲ್‌‌ ಶೈಲಿಯ ಬ್ಯಾಗ್ಲೆ ಹೌಸ್‌‌ (1894), ಟ್ಯುಡಾರ್‌‌ ಪುನರುಜ್ಜೀವನ ಶೈಲಿಯ ಮೂರ್‌‌ ಹೌಸ್‌‌ I (1895), ಮತ್ತು ಕ್ವೀನ್‌ ಆನ್ನೆ ಶೈಲಿಯ ಚಾರ್ಲ್ಸ್‌‌ ರಾಬರ್ಟ್ಸ್‌‌ ಹೌಸ್‌‌ (1896) ಮೊದಲಾದವು ಸೇರಿದ್ದವು.[೨೮] ಓರ್ವ ಚಿಗುರುತ್ತಿರುವ ವಾಸ್ತುಶಿಲ್ಪಿಯಾಗಿ, ಅಭಿರುಚಿಯಲ್ಲಿ ಅಭಿಪ್ರಾಯಭೇದಗಳನ್ನು ಹೊಂದಿರುವ ಗ್ರಾಹಕರನ್ನು ನಿರಾಕರಿಸುವುದು ರೈಟ್‌ಗೆ ಸಾಧ್ಯವಾಗಲಿಲ್ಲ, ಆದರೆ ಅವನ ಅತ್ಯಂತ ಸಂಪ್ರದಾಯಶರಣ ವಿನ್ಯಾಸಗಳೂ ಸಹ ಸರಳೀಕೃತ ಒಟ್ಟುಗೂಡಿಸುವಿಕೆ ಮತ್ತು ಸಲಿವನ್‌‌ ಪ್ರಭಾವಿತ ಸಾಂದರ್ಭಿಕ ವಿವರಗಳನ್ನು ಉಳಿಸಿಕೊಂಡವು.[೨೯] 1894ರಲ್ಲಿ ವಿನ್‌‌ಸ್ಲೋ ಹೌಸ್‌ನ ಪರಿಸಮಾಪ್ತಿಯ ನಂತರದ ಕೆಲವೇ ದಿನಗಳಲ್ಲಿ, ಎಡ್ವರ್ಡ್‌ ವ್ಯಾಲರ್ ಎಂಬ ಹೆಸರಿನ ಓರ್ವ ಸ್ನೇಹಿತ ಮತ್ತು ಹಿಂದಿನ ಗ್ರಾಹಕ ರೈಟ್‌ಗೆ ಆಹ್ವಾನವೊಂದನ್ನು ನೀಡಿ, ಚಿಕಾಗೊದ ವಾಸ್ತುಶಿಲ್ಪಿ ಮತ್ತು ಯೋಜಕ ಡೇನಿಯಲ್‌‌ ಬರ್ನ್‌ಹ್ಯಾಮ್‌‌‌ನನ್ನು ಭೇಟಿಯಾಗುವಂತೆ ತಿಳಿಸಿದ. ರೈಟ್‌ನ ಕಾರ್ಯವೈಖರಿಯನ್ನು ಹೊರಹೊಮ್ಮಿಸಿದ್ದ ವಿನ್‌‌ಸ್ಲೋ ಹೌಸ್‌‌ ಮತ್ತು ಇತರ ನಿದರ್ಶನಗಳಿಂದ ಬರ್ನ್‌ಹ್ಯಾಮ್‌‌ ಪ್ರಭಾವಿತನಾಗಿದ್ದ; ಎಕೋಲೆ ಡೆಸ್‌ ಬ್ಯೂಕ್ಸ್‌-ಆರ್ಟ್ಸ್‌ ಶಾಲೆಯಲ್ಲಿ ನಾಲ್ಕು ವರ್ಷ ಅವಧಿಯ ಶಿಕ್ಷಣ ಪಡೆಯಲು ಮತ್ತು ರೋಮ್‌‌‌‌ನಲ್ಲಿ ಎರಡು ವರ್ಷ ಅವಧಿಯ ಶಿಕ್ಷಣವನ್ನು ಪಡೆಯಲು ಅಗತ್ಯವಿರುವ ಧನಸಹಾಯವನ್ನು ತಾನು ಮಾಡುವುದಾಗಿ ಅವನು ಪ್ರಸ್ತಾವಿಸಿದ. ಇವೆಲ್ಲಕ್ಕಿಂತ ಮೇಲಾಗಿ, ರೈಟ್‌ ಅಲ್ಲಿಂದ ಹಿಂದಿರುಗಿದ ನಂತರ ಅವನಿಗೆ ಬರ್ನ್‌ಹ್ಯಾಮ್‌‌ನ ಸಂಸ್ಥೆಯಲ್ಲಿ ಒಂದು ಸ್ಥಾನವನ್ನು ನೀಡುವುದರ ಕುರಿತೂ ಅವನಿಗೆ ಆಶ್ವಾಸನೆ ದೊರೆಯಿತು. ಖಾತರಿಯಾದ ಯಶಸ್ಸು ಮತ್ತು ಅವನ ಕುಟುಂಬಕ್ಕೆ ಆಧಾರವಾಗಿ ನಿಲ್ಲುವ ಭರವಸೆಯ ಹೊರತಾಗಿಯೂ, ಸದರಿ ಆಹ್ವಾನವನ್ನು ರೈಟ್‌ ನಿರಾಕರಿಸಿದ. ವರ್ಲ್ಡ್‌‌'ಸ್‌ ಕೊಲಂಬಿಯನ್‌ ಎಕ್ಸ್‌‌ಪೊಸಿಷನ್‌‌‌ನ ಉತ್ಕೃಷ್ಟ ವಿನ್ಯಾಸವನ್ನು ನಿರ್ದೇಶಿಸಿದ್ದ ಬರ್ನ್‌ಹ್ಯಾಮ್‌‌, ಬ್ಯೂಕ್ಸ್‌‌ ಕಲೆಗಳ ಆಂದೋಲನದ ಓರ್ವ ಪ್ರಮುಖ ಪ್ರತಿಪಾದಕನಾಗಿದ್ದ; ರೈಟ್‌ ಒಂದು ನಗೆಪಾಟಲಿನ ತಪ್ಪು ಮಾಡುತ್ತಿದ್ದಾನೆ ಎಂದು ಅವನು ಭಾವಿಸಿದ. ಆದರೆ ರೈಟ್‌ನ ದೃಷ್ಟಿಕೋನವೇ ಬೇರೆಯದಾಗಿತ್ತು. ಅವನ ಪ್ರಕಾರ ಎಕೋಲೆ ಶಾಲೆಯಲ್ಲಿನ ಉತ್ಕೃಷ್ಟ ಶಿಕ್ಷಣದಲ್ಲಿ ಸೃಜನಶೀಲತೆಯ ಕೊರತೆಯಿತ್ತು ಮತ್ತು ಅಮೆರಿಕಾದ ಆಧುನಿಕ ವಾಸ್ತುಶೈಲಿಗೆ ಸಂಬಂಧಿಸಿದಂತೆ ಅವನು ಹೊಂದಿದ್ದ ದೃಷ್ಟಿಕೋನದೊಂದಿಗೆ ಒಟ್ಟಾರೆಯಾಗಿ ಅದು ಅಸಮತೆಯನ್ನು ಹೊಂದಿತ್ತು.[೩೦][೩೧]

ಚಿಕಾಗೊ ಅವೆನ್ಯೂದಿಂದ ಕಂಡಂತೆ ರೈಟ್‌ನ ಸ್ಟುಡಿಯೊ (1898).

ತನ್ನ ವೃತ್ತಿಜೀವನ ಮತ್ತು ಕೌಟುಂಬಿಕ ಜೀವನಗಳನ್ನು ಹತ್ತಿರಕ್ಕೆ ತರುವ ದೃಷ್ಟಿಯಿಂದ, ರೈಟ್‌ 1898ರಲ್ಲಿ ತನ್ನ ವೃತ್ತಿನೆಲೆಯನ್ನು ಮನೆಗೆ ಬದಲಾಯಿಸಿದ. ಆ ಸಮಯದ ಬಹುಪಾಲು ವಾಸ್ತುಶಿಲ್ಪಿಗಳ ಯೋಜನೆಗಳು ಓಕ್‌ ಪಾರ್ಕ್‌ನಲ್ಲಿ ಅಥವಾ ನೆರೆಯ ರಿವರ್‌ ಫಾರೆಸ್ಟ್‌‌ನಲ್ಲಿ ಇದ್ದುದರಿಂದ, ಈ ಕ್ರಮವು ಮತ್ತಷ್ಟು ಅರ್ಥಪೂರ್ಣವಾಗಿತ್ತು. ಕಳೆದ ಐದು ವರ್ಷಗಳ ಅವಧಿಯಲ್ಲಿ ಮತ್ತೆ ಮೂರು ಮಕ್ಕಳ ಜನನವಾಗಿದ್ದವು- 1894ರಲ್ಲಿ ಕ್ಯಾಥರೀನ್‌‌, 1895ರಲ್ಲಿ ಡೇವಿಡ್‌, ಮತ್ತು 1898ರಲ್ಲಿ ಫ್ರಾನ್ಸೆಸ್‌‌ ಹುಟ್ಟಿದ್ದರಿಂದ, ಹೆಚ್ಚುವರಿ ಮಲಗುವ ಕೋಣೆಗಳಿಗಾಗಿ ತನ್ನ ಮನೆಯಲ್ಲಿನ ಮೂಲ ಸ್ಟುಡಿಯೊವನ್ನು ರೈಟ್‌ ತ್ಯಾಗಮಾಡಬೇಕಾಗಿ ಬಂತು. ಈ ರೀತಿಯಾಗಿ, ತನ್ನ ಕಾರ್ಯನೆಲೆಯನ್ನು ಬದಲಾವಣೆ ಮಾಡಿದ್ದರಿಂದಾಗಿ, ಮುಖ್ಯ ಮನೆಯ ಉತ್ತರ ಭಾಗದಲ್ಲಿ ಒಂದು ವಿಸ್ತರಣಸಾಧ್ಯ ಸ್ಟುಡಿಯೊ ಸೇರ್ಪಡೆಯ ವಿನ್ಯಾಸ ಮತ್ತು ನಿರ್ಮಾಣವನ್ನು ಮಾಡಬೇಕಾದುದು ಅವನಿಗೆ ಅನಿವಾರ್ಯವಾಯಿತು. ಎರಡಂತಸ್ತಿನ ಕರಡು ರಚನೆಯ ಕೋಣೆಯೊಳಗಿನ ಒಂದು ತೂಗಾಡುವ ಉಪ್ಪರಿಗೆಯನ್ನು ಒಳಗೊಂಡಿದ್ದ ಸ್ಥಳಾವಕಾಶವು, ರೈಟ್‌ನ ಪರಿವರ್ತನಾಶೀಲ ರಚನೆಯೊಂದಿಗಿನ ಮೊದಲ ಪ್ರಯೋಗಗಳ ಪೈಕಿ ಒಂದಾಗಿತ್ತು. ರೈಟ್‌ನ ಅಭಿವೃದ್ಧಿಶೀಲ ಸೌಂದರ್ಯಪ್ರಜ್ಞೆಗೆ ಸಂಬಂಧಿಸಿದಂತೆ ಈ ಸ್ಟುಡಿಯೊ ಒಂದು ಜಾಹೀರಾತಿನ ಭಿತ್ತಿಚಿತ್ರವಾಗಿತ್ತು ಮತ್ತು ಮುಂದಿನ ಹತ್ತು ವರ್ಷಗಳವರೆಗೆ ವಾಸ್ತುಶಿಲ್ಪದ ಸೃಷ್ಟಿಗಳು ಹೊರಹೊಮ್ಮುವಂತಾದ ಪ್ರಯೋಗಾಲಯವಾಗಿ ಅದು ಮಾರ್ಪಟ್ಟಿತು.[೩೨]

ಪ್ರೈರೀ ಹೌಸ್‌‌

1901ರ ವೇಳೆಗೆ, ಸುಮಾರು 50 ಯೋಜನೆಗಳನ್ನು ರೈಟ್‌ ಪೂರ್ಣಗೊಳಿಸಿದ್ದ; ಓಕ್‌ ಪಾರ್ಕ್‌ನಲ್ಲಿನ ಅನೇಕ ಮನೆಗಳು ಇದರಲ್ಲಿ ಸೇರಿದ್ದವು. ಈ ಕುರಿತು ಅವನ ಮಗ ಜಾನ್‌‌ ಲಾಯ್ಡ್‌‌ ರೈಟ್‌ ಹೀಗೆ ಬರೆದ:

"ವಿಲಿಯಂ ಯೂಜೀನ್‌ ಡ್ರಮಾಂಡ್‌, ಫ್ರಾನ್ಸಿಸ್‌ ಬ್ಯಾರಿ ಬೈರ್ನ್‌, ವಾಲ್ಟರ್‌‌‌ ಬರ್ಲಿ ಗ್ರಿಫಿನ್‌‌, ಆಲ್ಬರ್ಟ್‌ ಚೇಸ್‌‌ ಮೆಕ್‌ಅರ್ಥರ್‌‌, ಮೇರಿಯನ್‌‌‌ ಮಹೋನಿ, ಇಸಾಬೆಲ್‌ ರಾಬರ್ಟ್ಸ್‌‌ ಮತ್ತು ಜಾರ್ಜ್‌ ವಿಲ್ಲಿಸ್‌ ಇವರೆಲ್ಲಾ ನಕಾಸೆಗಾರರಾಗಿದ್ದರು. ಅವರಲ್ಲಿ ಐವರು ಪುರುಷರು, ಇಬ್ಬರು ಮಹಿಳೆಯರಿದ್ದರು. ಈ ಕ್ಷೇತ್ರಕ್ಕೆ ತಕ್ಕುದಾದ ತೂಗಾಡುವ ಟೈಗಳು, ಮತ್ತು ಸಡಿಲ ಅಂಗಿಗಳನ್ನು ಅವರು ಧರಿಸಿದ್ದರು. ಈ ಕ್ಷೇತ್ರಕ್ಕೆ ತಕ್ಕುದಾದ ತೂಗಾಡುವ ಟೈಗಳು, ಮತ್ತು ಸಡಿಲ ಅಂಗಿಗಳನ್ನು ಅವರು ಧರಿಸಿದ್ದರು. ಪುರುಷರು ತಮ್ಮ ಕೂದಲನ್ನು ಅಪ್ಪನ ರೀತಿಯಲ್ಲಿ ಒಪ್ಪಮಾಡಿಕೊಂಡಿದ್ದರು, ಆದರೆ ಆಲ್ಬರ್ಟ್‌‌ಗೆ ಸಾಕಷ್ಟು ಕೂದಲು ಇರಲಿಲ್ಲ. ಅವರು ಅಪ್ಪನನ್ನು ಪೂಜಿಸುತ್ತಿದ್ದರು! ಅಪ್ಪ ಅವರನ್ನು ಇಷ್ಟಪಡುತ್ತಿದ್ದ! ಯಾವುದಕ್ಕಾಗಿ ಇಂದು ನನ್ನ ತಂದೆಯು ಗಳಿಸಿರುವ ಸಂಪೂರ್ಣ ಹಿರಿಮೆ, ತಲೆನೋವುಗಳು ಮತ್ತು ಮಾನ್ಯತೆಯನ್ನು ಗಳಿಸಿದ್ದಾನೋ, ಅಮೆರಿಕಾದ ಆ ಆಧುನಿಕ ವಾಸ್ತುಶೈಲಿಯ ಪ್ರವರ್ತನಗೊಳಿಸುವಿಕೆಗೆ ಅವರಲ್ಲಿ ಪ್ರತಿಯೊಬ್ಬನೂ ಮೌಲ್ಯಯುತ ಕೊಡುಗೆಗಳನ್ನು ಆಗ ನೀಡುತ್ತಿದ್ದ ಎಂದು ನನಗೆ ಗೊತ್ತು!"[೩೩]

1900 ಮತ್ತು 1901ರ ನಡುವೆ, ನಾಲ್ಕು ಮನೆಗಳನ್ನು ಫ್ರಾಂಕ್ ಲಾಯ್ಡ್‌‌ ರೈಟ್ ಪೂರ್ಣಗೊಳಿಸಿದ; ಅಂದಿನಿಂದಲೂ ಇವು "ಪ್ರೈರೀ ಶೈಲಿ"ಯ ದೃಢವಾದ ಪ್ರಾರಂಭ ಎಂಬುದಾಗಿ ಪರಿಗಣಿಸಲ್ಪಟ್ಟಿವೆ. ಹಿಕಾಕ್ಸ್‌‌ ಮತ್ತು ಬ್ರಾಡ್ಲಿ ಹೌಸ್‌‌ಗಳೆರಡೂ ರೈಟ್‌ನ ಆರಂಭಿಕ ವಿನ್ಯಾಸಗಳು ಮತ್ತು ಪ್ರೈರೀ ಸೃಷ್ಟಿಗಳ ನಡುವಿನ ಕೊನೆಯ ಪರಿವರ್ತನೀಯ ಹಂತವಾಗಿದ್ದವು.[೩೪] ಈಮಧ್ಯೆ, ಥಾಮಸ್‌‌ ಹೌಸ್‌‌ ಮತ್ತು ವಿಲ್ಲಿಟಿಸ್‌ ಹೌಸ್‌‌‌‌‌ಗಳು, ಹೊಸ ಶೈಲಿಯ ಮೊದಲ ಪ್ರೌಢ ಉದಾಹರಣೆಗಳು ಎಂಬ ಮಾನ್ಯತೆಯನ್ನು ಸ್ವೀಕರಿಸಿದವು.[೩೫][೩೬] ಅದೇ ವೇಳೆಗೆ, ಲೇಡೀಸ್‌' ಹೋಮ್‌ ಜರ್ನಲ್‌‌‌‌ ನಲ್ಲಿನ ಎರಡು ಪ್ರಕಟಣೆಗಳ ಮೂಲಕ, ಅಮೆರಿಕನ್ನರ ಮನೆಯ ವ್ಯಾಪಕ ಅರಿವಿಗೆ ಸಂಬಂಧಿಸಿದಂತೆ ರೈಟ್‌ ತನ್ನ ಹೊಸ ಪರಿಕಲ್ಪನೆಗಳನ್ನು ನೀಡಿದ. ಆಧುನಿಕ ಮನೆಯ ವಿನ್ಯಾಸವನ್ನು ಸುಧಾರಿಸುವುಕ್ಕೆ ಸಂಬಂಧಿಸಿದ ಯೋಜನೆಯೊಂದರ ಭಾಗವಾಗಿ, ಕರ್ಟಿಸ್‌ ಪಬ್ಲಿಷಿಂಗ್‌‌ ಕಂಪನಿಯ ಅಧ್ಯಕ್ಷನಾದ ಎಡ್ವರ್ಡ್‌ ಬಾಕ್‌‌‌‌ನಿಂದ ಬಂದ ಆಹ್ವಾನವೊಂದಕ್ಕೆ ಈ ಲೇಖನಗಳು ಒಂದು ಉತ್ತರವಾಗಿದ್ದವು. ಸದರಿ ಆಹ್ವಾನವನ್ನು ಬಾಕ್‌ ಇತರ ವಾಸ್ತುಶಿಲ್ಪಿಗಳಿಗೂ ವಿಸ್ತರಿಸಿದನಾದರೂ, ಅವರ ಪೈಕಿ ರೈಟ್‌ ಮಾತ್ರವೇ ಪ್ರತ್ಯುತ್ತರ ಹೇಳಿದವನಾಗಿದ್ದ. "ಎ ಹೋಮ್‌ ಇನ್‌ ಎ ಪ್ರೈರೀ ಟೌನ್‌" ಮತ್ತು "ಎ ಸ್ಮಾಲ್‌ ಹೌಸ್‌‌ ವಿತ್‌ ಲಾಟ್ಸ್‌ ಆಫ್‌ ರೂಮ್‌ ಇನ್‌ ಇಟ್‌" ಎಂಬ ಶೀರ್ಷಿಕೆಗಳನ್ನುಳ್ಳ ಲೇಖನಗಳು ಕ್ರಮವಾಗಿ ನಿಯತಕಾಲಿಕದ 1901ರ ಫೆಬ್ರುವರಿ ಮತ್ತು ಜುಲೈ ಸಂಚಿಕೆಗಳಲ್ಲಿ ಕಾಣಿಸಿಕೊಂಡವು. ಕಾರ್ಯಸಾಧ್ಯ ಮನೆಯ‌ ನಕಾಶೆಗಳ ಪೈಕಿ ಯಾವೊಂದೂ ನಿರ್ಮಿಸಲ್ಪಡಲಿಲ್ಲವಾದರೂ, ನಂತರ ಬಂದ ವರ್ಷಗಳಲ್ಲಿ ಇದೇ ರೀತಿಯ ವಿನ್ಯಾಸಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯ ಮನವಿಗಳನ್ನು ರೈಟ್‌ ಸ್ವೀಕರಿಸಿದ.[೩೪] "ಪ್ರೈರೀ ಹೌಸ್‌‌ಗಳು" ರೈಟ್‌ನ ವಾಸಯೋಗ್ಯ ಮನೆಯ ವಿನ್ಯಾಸಗಳಾಗಿದ್ದವು; ಏಕೆಂದರೆ ಇದರ ವಿನ್ಯಾಸವು ಚಿಕಾಗೊದ ಸುತ್ತಮುತ್ತಲಿರುವ ಜಮೀನಿಗೆ ಪೂರಕವಾಗಿದೆ ಎಂದು ಪರಿಗಣಿಸಲ್ಪಟ್ಟಿತ್ತು. ಹೆಚ್ಚು ಆಳವಿಲ್ಲದ ಇಳಿಜಾರಿನ ಛಾವಣಿಗಳು, ಶುಭ್ರ ದಿಗಂತ, ಅಡಗಿಸಲ್ಪಟ್ಟ ಹೊಗೆ ಚಿಮಣಿಗಳು, ಪೂರ್ಣಗೊಳಿಸದ ಸಾಮಗ್ರಿಗಳನ್ನು ಬಳಸಿಕೊಂಡು ಮಾಡಿರುವ, ಮೇಲೆ ಚಾಚಿರುವ ಭಾಗಗಳು ಮತ್ತು ತಾರಸಿಗಳನ್ನು ಒಳಗೊಂಡಿರುವ, ಕೆಳಗೆ ವಿಸ್ತರಿಸಿದ ಕಟ್ಟಡಗಳನ್ನು ಈ ಮನೆಗಳು ಹೊಂದಿದ್ದವು. "ಮುಕ್ತ ನಕಾಶೆ"ಯ ಮೊದಲ ಉದಾಹರಣೆಗಳು ಎಂಬ ಕೀರ್ತಿಯನ್ನು ಈ ಮನೆಗಳು ಪಡೆದುಕೊಂಡಿವೆ. ಕಿಟಕಿಗಳು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಉದ್ದವಾಗಿವೆ ಮತ್ತು ಕೆಳಮಟ್ಟದಲ್ಲಿವೆ; ಒಳಾಂಗಣ ಮತ್ತು ಹೊರಗಿನ ಪ್ರಕೃತಿಯ ನಡುವೆ ಒಂದು ಸಂಬಂಧವೇರ್ಪಡುವಲ್ಲಿ ಇದು ಅವಕಾಶ ಕಲ್ಪಿಸಿದೆ; ಈ ಶೈಲಿಯು ಪಾಶ್ವಾತ್ಯ ವಾಸ್ತುಶೈಲಿಗೆ ಹೊಸದಾಗಿತ್ತು ಮತ್ತು ರೈಟ್‌ನ ಮೇಲಿದ್ದ ಜಪಾನೀ ವಾಸ್ತುಶೈಲಿಯ ಪ್ರಭಾವವನ್ನು ಇದು ಪ್ರತಿಬಿಂಬಿಸಿತು. ವಾಸಯೋಗ್ಯ ಮತ್ತು ಸಾರ್ವಜನಿಕ ಕಟ್ಟಡಗಳಲ್ಲಿನ ಒಳಾಂಗಣ ಸ್ಥಳಾವಕಾಶದ ಕುಶಲ ಬಳಕೆಯು ಅವನ ಶೈಲಿಯ ವಿಶಿಷ್ಟ ಚಿಹ್ನೆಗಳಾಗಿವೆ. ಪ್ರೈರೀ ಶೈಲಿಯಲ್ಲಿನ ವಾಣಿಜ್ಯ ಕಟ್ಟಡಗಳಲ್ಲಿ ಯೂನಿಟಿ ಟೆಂಪಲ್‌‌ ಸೇರಿದೆ; ಇದು ಓಕ್‌ ಪಾರ್ಕ್‌‌ನಲ್ಲಿನ ಏಕಮೂರ್ತಿವಾದಿಗಳ ಸರ್ವಮುಕ್ತಿವಾದಿ ಸಮುದಾಯದ ಮನೆಯಾಗಿದೆ. ಓರ್ವ ಆಜೀವ ಏಕಮೂರ್ತಿವಾದಿ ಮತ್ತು ಯೂನಿಟಿ ಟೆಂಪಲ್‌ನ ಸದಸ್ಯನಾಗಿದ್ದ ರೈಟ್‌, ಸಮುದಾಯದ ಚರ್ಚು 1904ರಲ್ಲಿ ಸುಟ್ಟುಹೋದ ನಂತರ, ತನ್ನ ಸೇವೆಗಳನ್ನು ಸಮುದಾಯಕ್ಕೆ ಸಲ್ಲಿಸಿದ. ಅವನನ್ನು ನೇಮಿಸಿಕೊಳ್ಳಲು ಸಮುದಾಯವು ಸಮ್ಮತಿಸಿತು ಮತ್ತು 1905ರಿಂದ 1908ರವರೆಗೆ ಕಟ್ಟಡವನ್ನು ಕುರಿತ ಕೆಲಸದಲ್ಲಿ ಅವನು ತನ್ನನ್ನು ತೊಡಗಿಸಿಕೊಂಡ. ರೈಟ್‌ ನಂತರದಲ್ಲಿ ಈ ಕುರಿತು ಮಾತನಾಡುತ್ತಾ, ಯೂನಿಟಿ ಟೆಂಪಲ್‌ ಎಂಬುದು ಒಂದು ಸೌಧವಾಗಿದ್ದು, ಕಟ್ಟಡದ ಓರ್ವ ವಾಸ್ತುಶಿಲ್ಪಿಯಾಗಿ ಅದರಲ್ಲಿ ವಿಶ್ರಮಿಸಲು, ಹಾಗೂ ಸ್ಥಳಾವಕಾಶದ ಓರ್ವ ವಾಸ್ತುಶಿಲ್ಪಿಯಾಗಲು ಬಯಸುವುದಾಗಿ ತಿಳಿಸಿದ. ಅನೇಕ ವಾಸ್ತುಶಿಲ್ಪಿಗಳು ಇದನ್ನು ಪ್ರಪಂಚದ ಮೊದಲ ಆಧುನಿಕ ಕಟ್ಟಡವಾಗಿ ಪರಿಗಣಿಸುತ್ತಾರೆ; ಏಕೆಂದರೆ, ಬಲವರ್ಧಿತ ಕಾಂಕ್ರೀಟಿನಂಥ ಕೇವಲ ಒಂದೇ ಸಾಮಗ್ರಿಯಿಂದ ಆದ ಅನನ್ಯ ನಿರ್ಮಾಣ ಇದಾಗಿದೆ. ಇದು ರೈಟ್‌ನನ್ನು ಅನುಸರಿಸಿದ ಮೈಸ್‌ ವಾನ್‌ ಡೆರ್‌ ರೋಹೆಯಂಥ ಆಧುನಿಕತಾವಾದಿಗಳ, ಮತ್ತು ಅಷ್ಟೇ ಏಕೆ, ಫ್ರಾಂಕ್‌‌ ಗೆಹ್ರಿಯಂಥ ಕೆಲವೊಂದು ನವ್ಯೋತ್ತರ ಪಂಥದವರ ಒಂದು ವಿಶಿಷ್ಟಚಿಹ್ನೆಯಾಗಿದೆ.

ನ್ಯೂಯಾರ್ಕ್‌ನ ಬಫೆಲೊನಲ್ಲಿರುವ ಡಾರ್ವಿನ್‌ D. ಮಾರ್ಟಿನ್‌ ಹೌಸ್.
ಹಿಲ್‌ಸೈಡ್‌ ಹೋಮ್‌‌ ಶಾಲೆ, 1902, ಟ್ಯಾಲೀಸಿನ್‌, ಸ್ಪ್ರಿಂಗ್‌ ಗ್ರೀನ್‌‌, ವಿಸ್ಕಾನ್ಸಿನ್‌‌.

ಲಾರ್ಕಿನ್‌‌ ಸೋಪ್‌‌ ಕಂಪನಿಯ ಓರ್ವ ಕಾರ್ಯನಿರ್ವಹಣಾಧಿಕಾರಿಯಾದ ಡಾರ್ವಿನ್‌‌ D. ಮಾರ್ಟಿನ್‌‌ ಹಾಗೂ ರೈಟ್‌ ನಡುವಿನ ಸ್ನೇಹದ ಫಲವಾಗಿ, ಈ ಕೆಲಸದ ಅನೇಕ ಉದಾಹರಣೆಗಳು ನ್ಯೂಯಾರ್ಕ್‌ನ ಬಫೆಲೊನಲ್ಲಿವೆ. 1902ರಲ್ಲಿ, ಒಂದು ಹೊಸ ಆಡಳಿತ ಕಟ್ಟಡವನ್ನು ನಿರ್ಮಿಸಲು ಲಾರ್ಕಿನ್‌‌ ಕಂಪನಿಯು ನಿರ್ಧರಿಸಿತು. ಬಫೆಲೊಗೆ ಬಂದ ರೈಟ್‌, ಕೇವಲ ಲಾರ್ಕಿನ್‌‌ ಆಡಳಿತ ಕಟ್ಟಡವನ್ನು (ಇದು 1904ರಲ್ಲಿ ಸಂಪೂರ್ಣಗೊಂಡಿತು, 1950ರಲ್ಲಿ ಕೆಡವಲಾಯಿತು) ಮಾತ್ರವೇ ಅಲ್ಲದೇ, ಡಾರ್ವಿನ್‌ D. ಮಾರ್ಟಿನ್‌ ಹೌಸ್‌‌ನ್ನು ಒಳಗೊಂಡಂತಿರುವ ಕಂಪನಿಯ ಮೂವರು ಕಾರ್ಯನಿರ್ವಹಣಾಧಿಕಾರಿಗಳಿಗಾಗಿಯೂ ಮನೆಗಳನ್ನು 1904ರಲ್ಲಿ ವಿನ್ಯಾಸಗೊಳಿಸಿದ. ಪ್ರೈರೀ ಅವಧಿಯ (1907–1909) ಅಂತ್ಯಭಾಗದ ಮೇರುಕೃತಿಗಳು ಎಂಬುದಾಗಿ ಪರಿಗಣಿಸಲ್ಪಟ್ಟಿರುವ ರೈಟ್‌ನ ಇತರ ಮನೆಗಳೆಂದರೆ, ಚಿಕಾಗೊದಲ್ಲಿರುವ ಫ್ರೆಡೆರಿಕ್‌‌ ರೋಬೀ ಹೌಸ್‌‌ ಮತ್ತು ಇಲಿನಾಯ್ಸ್‌‌ನ ರಿವರ್‌‌ಸೈಡ್‌‌‌ನಲ್ಲಿರುವ ಎವರಿ ಅಂಡ್‌ ಕ್ವೀನೆ ಕೂನ್ಲೆ ಹೌಸ್‌‌. 110-ಅಡಿ-ಉದ್ದದ (34 ಮೀ) ಒಂದು ಉಕ್ಕಿನ ವಾಹಿನಿಯಿಂದ ಆಧಾರವನ್ನು ಪಡೆದಿರುವ, ಮೇಲಕ್ಕೇರುವ, ಚಾಚಿಕೊಂಡಿರುವ ಛಾವಣಿ ರೇಖೆಗಳನ್ನು ಒಳಗೊಂಡಿರುವ ರೋಬೀ ಹೌಸ್ ಅತ್ಯಂತ ಎದ್ದುಕಾಣುವಂಥ ರಚನೆಯಾಗಿದೆ. ಇದರ ವಾಸದ ಮತ್ತು ಊಟದ ಪ್ರದೇಶಗಳು ಒಂದು ಅನಿರ್ಬಂಧಿತ ಸ್ಥಳಾವಕಾಶವನ್ನು ಕಾರ್ಯತಃ ರೂಪಿಸುತ್ತವೆ. Iನೇ ಜಾಗತಿಕ ಸಮರದ ನಂತರದ ಯುವ ಐರೋಪ್ಯ ವಾಸ್ತುಶಿಲ್ಪಿಗಳ ಮೇಲೆ ಈ ಕಟ್ಟಡವು ಒಂದು ವ್ಯಾಪಕ ಪ್ರಭಾವವನ್ನು ಹೊಂದಿತ್ತು ಮತ್ತು ಕೆಲವೊಮ್ಮೆ ಇದನ್ನು "ಆಧುನಿಕತೆಯ ಮೂಲೆಗಲ್ಲು" ಎಂದು ಕರೆಯಲಾಗುತ್ತದೆ. ಆದಾಗ್ಯೂ, ವ್ಯಾಸ್ಮತ್‌‌ ಪೋರ್ಟ್‌ಫೋಲಿಯೋದ ಪ್ರಕಟಣೆಯಾಗುವವರೆಗೂ ರೈಟ್‌ನ ಕಾರ್ಯವೈಖರಿಯ ಕುರಿತಾಗಿ ಐರೋಪ್ಯ ವಾಸ್ತುಶಿಲ್ಪಿಗಳಿಗೆ ಗೊತ್ತಿರಲಿಲ್ಲ.

ಜೀವನದ ಮಧ್ಯಭಾಗದ ವಿವಾದ ಮತ್ತು ವಾಸ್ತುಶೈಲಿ

ಕುಟುಂಬ ಪರಿತ್ಯಾಗ

ವಿಸ್ಕಾನ್ಸಿನ್‌‌ನ ಸ್ಪ್ರಿಂಗ್‌ ಗ್ರೀನ್‌‌ನಲ್ಲಿನ ಟ್ಯಾಲೀಸಿನ್‌‌ನ ವೈಮಾನಿಕ ಛಾಯಾಚಿತ್ರ.

ಸ್ಥಳೀಯ ಗಾಳಿಸುದ್ದಿಗಳು ರೈಟ್‌ನ ಹುಸಿ ಪ್ರೇಮಪ್ರಸಂಗಗಳನ್ನು ಗಮನಿಸಿದವು, ಮತ್ತು ಪಟ್ಟಣದ ಓರ್ವ ಸೊಗಸುಗಾರನ ರೀತಿಯ ಪ್ರತಿಷ್ಠೆಯೊಂದನ್ನು ಅವನು ಬೆಳೆಸಿಕೊಂಡ. ಅವನ ಕುಟುಂಬವು ಆರು ಮಕ್ಕಳಿಗೆ ಬೆಳೆದಿತ್ತು, ಮತ್ತು ಮಕ್ಕಳುಮರಿಗೆ ಕ್ಯಾಥರೀನ್‌‌ಳ ಕಡೆಯಿಂದ ಬಹುಪಾಲು ನಿಗಾವಣೆಯ ಅಗತ್ಯವಿತ್ತು. ಓಕ್‌ ಪಾರ್ಕ್‌‌ನಲ್ಲಿ ಓರ್ವ ನೆರೆಹೊರೆಯವನಾಗಿದ್ದ ಎಡ್ವಿನ್‌‌ ಚೆನೆಗಾಗಿ 1903ರಲ್ಲಿ ಮನೆಯೊಂದನ್ನು ರೈಟ್‌ ವಿನ್ಯಾಸಗೊಳಿಸಿದ, ಮತ್ತು ಚೆನೆಯ ಹೆಂಡತಿಯಾದ ಮಮಾಹ್‌‌ ಬೋರ್ತ್‌ವಿಕ್‌‌ ಚೆನೆಯೆಡೆಗೆ ತಕ್ಷಣವೇ ಒಲವನ್ನು ಬೆಳೆಸಿಕೊಂಡ. ಓರ್ವ ಆಧುನಿಕ ಮಹಿಳೆಯಾಗಿದ್ದ ಮಮಾಹ್‌‌ ಚೆನೆಗೆ ಮನೆಯ ಹೊರಗಿನ ಹಿತಾಸಕ್ತಿಗಳೆಡೆಗೆ ಆಕರ್ಷಣೆಯಿತ್ತು. ಆರಂಭಿಕವಾಗಿ ಅವಳು ಓರ್ವ ಸ್ತ್ರೀಸಮಾನತಾವಾದಿಯಾಗಿದ್ದಳು ಮತ್ತು ಬೌದ್ಧಿಕವಾಗಿ ಅವಳು ತನಗೆ ಸಮಾನಳಾಗಿದ್ದಾಳೆ ಎಂದು ರೈಟ್‌ ಪರಿಗಣಿಸಿದ. ಅಷ್ಟುಹೊತ್ತಿಗಾಗಲೇ ರೈಟ್‌ಗೆ ಮದುವೆಯಾಗಿ ಹೆಚ್ಚೂಕಮ್ಮಿ 20 ವರ್ಷಗಳು ಸಂದಿದ್ದವಾದರೂ, ಈ ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಅವರಿಬ್ಬರೂ ರೈಟ್‌ನ ವಾಹನದಲ್ಲಿ ಓಕ್‌ ಪಾರ್ಕ್‌‌ನ ಉದ್ದಗಲಕ್ಕೂ ಸವಾರಿಮಾಡುವುದನ್ನು ಅನೇಕವೇಳೆ ನೋಡಲು ಸಾಧ್ಯವಿತ್ತು, ಮತ್ತು ಅವರ ಓಡಾಟ-ಒಡನಾಟಗಳು ಪಟ್ಟಣದಲ್ಲಿ ಮನೆಮಾತಾಗಿ ಹೋದವು. ಇತರರಿಗೆ ಆದಂತೆ ಈ ಮಮತೆಯು ಮಸುಕಾಗುತ್ತದೆ ಎಂಬ ಖಾತ್ರಿಯನ್ನು ಹೊಂದಿದ್ದ ರೈಟ್‌ನ ಹೆಂಡತಿ ಕಿಟ್ಟಿ, ಅವನಿಗೆ ವಿಚ್ಛೇದನವನ್ನು ನೀಡಲು ನಿರಾಕರಿಸಿದಳು. ಇದೇ ರೀತಿಯಲ್ಲಿ ಮಮಾಹ್‌‌ಗೆ ವಿಚ್ಛೇದನವನ್ನು ನೀಡಲು ಎಡ್ವಿನ್‌‌ ಚೆನೆ ಸಿದ್ಧನಿರಲಿಲ್ಲ. 1909ರಲ್ಲಿ, ರೋಬೀ ಹೌಸ್‌‌ ಸಂಪೂರ್ಣಗೊಳ್ಳುವುದಕ್ಕೆ ಮುಂಚೆಯೇ, ತಂತಮ್ಮ ಜೀವನ ಸಂಗಾತಿಗಳು ಹಾಗೂ ಮಕ್ಕಳನ್ನು ಅಲ್ಲಿಯೇ ಬಿಟ್ಟು, ರೈಟ್‌ ಮತ್ತು ಮಮಾಹ್‌‌ ಚೆನೆ ಯುರೋಪ್‌ಗೆ ಪಲಾಯನ ಮಾಡಿದರು. ಕಾರ್ಯತಃ ಸ್ಫೋಟಿಸಿದ ಹಗರಣವು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ವಾಸ್ತುಕಲೆಯ ವೃತ್ತಿಯನ್ನು ನಿರ್ವಹಿಸಿಕೊಂಡು ಹೋಗುವ ರೈಟ್‌ನ ಸಾಮರ್ಥ್ಯವನ್ನು ನಾಶಮಾಡಿತು. ವಿದ್ವಾಂಸರು ವಾದಮಾಡುವ ಪ್ರಕಾರ, ಪ್ರೈರೀ ಶೈಲಿಯನ್ನು ಬಳಸಿಕೊಂಡು ತಾನು ಏನೆಲ್ಲಾ ಮಾಡಬಹುದೋ, ಅದರಲ್ಲೂ ನಿರ್ದಿಷ್ಟವಾಗಿ, ಏಕ ಕುಟುಂಬದ ಮನೆಯ ದೃಷ್ಟಿಕೋನದಿಂದ ನೋಡಿದಾಗ ಏನೆಲ್ಲಾ ಸಾಧಿಸಬಹುದೋ ಅವೆಲ್ಲವನ್ನೂ ಮಾಡಿಮುಗಿಸಿರುವ ಭಾವವು 1907ರ ವೇಳೆಗೆ ಅವನಲ್ಲಿ ಮೂಡಿತ್ತು. ವಾಣಿಜ್ಯ ಕಟ್ಟಡಗಳು ಅಥವಾ ಸಾರ್ವಜನಿಕ ಕಟ್ಟಡಗಳಿಗೆ ಸಂಬಂಧಿಸಿದ ಭಾರೀ ಕಾರ್ಯ-ನಿಯೋಜನೆಗಳು ರೈಟ್‌ನನ್ನು ಹುಡುಕಿಕೊಂಡು ಬರುತ್ತಿರಲಿಲ್ಲವಾದ್ದರಿಂದ, ಆ ನಿಟ್ಟಿನಲ್ಲಿಯೂ ಅವನು ನಿರಾಶೆಗೊಂಡಿದ್ದ. ಅರ್ನ್‌ಸ್ಟ್‌ ವ್ಯಾಸ್ಮತ್‌‌ ಜೊತೆಯಲ್ಲಿ ತಾನು ಕೈಗೊಂಡಿದ್ದ ಕೆಲಸದ ಒಂದು ಕೃತಿಯ-ಮಾದರಿಯನ್ನು ಪ್ರಕಟಿಸುವ ಅವಕಾಶ ಸಿಕ್ಕಿದ್ದು ಅವನು ಯುರೋಪ್‌‌ಗೆ ತೆರಳಲು ಹಿಂದಿದ್ದ ಕಾರಣವಾಗಿತ್ತು; ಅರ್ನ್‌ಸ್ಟ್‌ ವ್ಯಾಸ್ಮತ್‌‌ ತನ್ನ ಕೆಲಸವನ್ನು ಅಲ್ಲಿ ಪ್ರಕಟಿಸಲು 1909ರಲ್ಲಿ ಸಮ್ಮತಿಸಿದ್ದ.[೩೭] ಮಮಾಹ್‌‌ ಚೆನೆ ಜೊತೆಗಿನ ತನ್ನ ಸಂಬಂಧವನ್ನು ಗಾಢವಾಗಿಸಲೂ ಸಹ ಈ ಅವಕಾಶವು ಅನುವುಮಾಡಿಕೊಟ್ಟಿತು. 1910ರಲ್ಲಿ ಪ್ರತ್ಯೇಕವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ಬಿಟ್ಟ ರೈಟ್‌ ಮತ್ತು ಚೆನೆ, ಬರ್ಲಿನ್‌‌‌ನಲ್ಲಿ ಭೇಟಿಯಾದರು. ಅಲ್ಲಿ ವ್ಯಾಸ್ಮತ್‌ನ ಕಚೇರಿಗಳು ನೆಲೆಗೊಂಡಿದ್ದವು. ಸ್ಟಡೀಸ್‌ ಅಂಡ್‌ ಎಕ್ಸಿಕ್ಯೂಟೆಡ್‌ ಬಿಲ್ಡಿಂಗ್ಸ್‌ ಆಫ್‌ ಫ್ರಾಂಕ್ ಲಾಯ್ಡ್‌‌ ರೈಟ್ ಎಂಬ ಶೀರ್ಷಿಕೆಯನ್ನು ಹೊಂದಿದ ಎರಡು ಸಂಪುಟಗಳು 1910 ಮತ್ತು 1911ರಲ್ಲಿ ಎರಡು ಆವೃತ್ತಿಗಳಲ್ಲಿ ಪ್ರಕಟಗೊಂಡವು; ರೈಟ್‌ನ ಕೆಲಸವು ಯುರೋಪ್‌‌ನಲ್ಲಿ ಈ ರೀತಿಯಾಗಿ ಮೊದಲು ಬೆಳಕಿಗೆ ಬಂತು. ಈ ಕೃತಿಯು 100ಕ್ಕಿಂತಲೂ ಹೆಚ್ಚು ಸಂಖ್ಯೆಯ, ರೈಟ್‌ನ ವಿನ್ಯಾಸಗಳ ಶಿಲಾಮುದ್ರಣಗಳನ್ನು ಒಳಗೊಂಡಿದ್ದವು ಮತ್ತು ವ್ಯಾಸ್ಮತ್‌‌ ಪೋರ್ಟ್‌ಫೋಲಿಯೋ ಎಂದು ಸಾಮಾನ್ಯವಾಗಿ ಅದು ಕರೆಯಲ್ಪಡುತ್ತಿತ್ತು. ಒಂದು ವರ್ಷದವರೆಗೆ ಯುರೋಪ್‌‌ನಲ್ಲಿ ರೈಟ್‌ ಉಳಿದುಕೊಂಡ (ಆದರೂ ಮಮಾಹ್‌‌ ಚೆನೆ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಒಂದಷ್ಟು ಬಾರಿ ಹಿಂದಿರುಗಿದಳು) ಮತ್ತು ಇಟಲಿಯ ಫೈಸೋಲ್‌‌‌ ಎಂಬಲ್ಲಿ ಒಂದು ಮನೆಯನ್ನು ಕಟ್ಟಿಕೊಂಡ. ಈ ಅವಧಿಯಲ್ಲಿ, ಎಡ್ವಿನ್‌‌ ಚೆನೆ ಅವಳಿಗೆ ವಿಚ್ಛೇದನವನ್ನು ನೀಡಿದನಾದರೂ, ಕಿಟ್ಟಿಯು ತನ್ನ ಪತಿಗೆ ವಿಚ್ಛೇದನವನ್ನು ನೀಡಲು ನಿರಾಕರಿಸಿದಳು. 1910ರ ಅಂತ್ಯದ ವೇಳೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ರೈಟ್‌ ಹಿಂದಿರುಗಿದ ನಂತರ, ವಿಸ್ಕಾನ್ಸಿನ್‌‌ನ ಸ್ಪ್ರಿಂಗ್‌ ಗ್ರೀನ್‌‌‌‌ನಲ್ಲಿ ತನಗೊಂದು ಜಮೀನನ್ನು ಖರೀದಿಸುವಂತೆ ರೈಟ್‌ ತನ್ನ ತಾಯಿಯ ಮನವೊಲಿಸಿದ. 1911ರ ಏಪ್ರಿಲ್‌‌ 10ರಂದು ಖರೀದಿಸಲ್ಪಟ್ಟ ಈ ಜಮೀನು, ಅವನ ತಾಯಿಯ ಕುಟುಂಬವಾದ ಲಾಯ್ಡ್‌‌-ಜೋನೆಸೆಸ್ ಕುಟುಂಬದ ವಶದಲ್ಲಿದ್ದ ಜಮೀನಿನ ಪಕ್ಕದಲ್ಲಿತ್ತು. 1911ರ ಮೇ ತಿಂಗಳ ವೇಳೆಗೆ, ಅಲ್ಲಿ ತನಗಾಗಿ ಒಂದು ಹೊಸ ಮನೆಯನ್ನು ನಿರ್ಮಿಸಲು ರೈಟ್‌ ಶುರುಮಾಡಿದ; ಅದನ್ನು ಅವನು ಟ್ಯಾಲೀಸಿನ್‌‌ ಎಂದು ಕರೆದ. ಟ್ಯಾಲೀಸಿನ್‌‌ನ ಮರುಕಳಿಸುವ ವಿಷಯವೂ ಸಹ ಅವನ ತಾಯಿಯ ಕಡೆಯಿಂದಲೇ ಬಂದಿತು: ವೆಲ್ಷ್‌‌ ಪುರಾಣದಲ್ಲಿ ಬರುವ ಟ್ಯಾಲೀಸಿನ್‌‌ ಓರ್ವ ಕವಿ, ಜಾದೂಗಾರ, ಮತ್ತು ಪಾದ್ರಿಯಾಗಿದ್ದ. ವೈ ಗ್ವಿರ್‌ ಯಿನ್‌ ಎರ್ಬಿನ್‌ ವೈ ಬೈಡ್‌ ಎಂಬುದು ಆ ಕುಟುಂಬದ ಧ್ಯೇಯವಾಕ್ಯವಾಗಿದ್ದು, "ಪ್ರಪಂಚದ ವಿರುದ್ಧವಾಗಿರುವ ಸತ್ಯ" ಎಂಬುದು ಆ ಧ್ಯೇಯವಾಕ್ಯದ ಅರ್ಥವಾಗಿತ್ತು; ಇದನ್ನು ಸೃಷ್ಟಿಸಿದ್ದ ಇಯೊಲೊ ಮೊರ್ಗಾಂಗ್‌ ಎಂಬಾತನೂ ಸಹ ಟ್ಯಾಲೀಸಿನ್ ಎಂಬ ಹೆಸರಿನ ಮಗನನ್ನು ಹೊಂದಿದ್ದ, ಮತ್ತು ಸದರಿ ಧ್ಯೇಯವಾಕ್ಯವು ಈಗಲೂ ಸಹ ವೇಲ್ಸ್‌‌‌ನಲ್ಲಿನ ಐಸ್ಟೆಡ್‌ಫಾಡ್‌‌ನ ಪುರೋಹಿತರು ಮತ್ತು ಮುಖ್ಯ ಪುರಾಣಿಕನ ಕೂಗಿನ ರೀತಿಯಲ್ಲಿ ಬಳಸಲ್ಪಡುತ್ತಿದೆ.[೩೮]

ಹೆಚ್ಚಿನ ವೈಯಕ್ತಿಕ ಸಂಕ್ಷೋಭೆ

1914ರ ಆಗಸ್ಟ್‌ 15ರಂದು, ಚಿಕಾಗೊದಲ್ಲಿ ರೈಟ್‌ ಕೆಲಸ ಮಾಡುತ್ತಿರುವಾಗ, ಬಾರ್ಬಡಾಸ್‌‌‌ನವನಾಗಿದ್ದು ಹಲವಾರು ತಿಂಗಳುಗಳು ಮುಂಚೆ ನೇಮಿಸಲ್ಪಟ್ಟಿದ್ದ ಜೂಲಿಯನ್‌ ಕಾರ್ಲ್‌‌ಟನ್‌ ಎಂಬ ಓರ್ವ ಸೇವಕ, ಟ್ಯಾಲೀಸಿನ್‌‌ನ ವಾಸದ ನಿವಾಸಗಳಿಗೆ ಬೆಂಕಿಹಚ್ಚಿದ ಮತ್ತು ಬೆಂಕಿಯು ಸುಡುತ್ತಿರುವಂತೆ ಏಳು ಜನರನ್ನು ಕೊಡಲಿಯೊಂದರಿಂದ ಕೊಲೆಮಾಡಿದ.[೩೯] ಹೀಗೆ ಸತ್ತವರಲ್ಲಿ ಮಮಾಹ್‌‌; ಅವಳ ಇಬ್ಬರು ಮಕ್ಕಳಾದ, ಜಾನ್‌‌ ಮತ್ತು ಮಾರ್ಥಾ; ಓರ್ವ ಮಾಲಿ; ಓರ್ವ ನಕಾಸೆಗಾರ; ಓರ್ವ ಕೆಲಸಗಾರ; ಮತ್ತು ಮತ್ತೊಬ್ಬ ಕೆಲಸಗಾರನ ಮಗ ಸೇರಿದ್ದರು. ಈ ದುರ್ಘಟನೆಯಲ್ಲಿ ಇಬ್ಬರು ಬದುಕುಳಿದರು; ಅವರ ಪೈಕಿ ಒಬ್ಬ, ಮನೆಯ ವಾಸಯೋಗ್ಯ ಭಾಗವನ್ನು ಬಹುಪಾಲು ಸಂಪೂರ್ಣವಾಗಿ ಸ್ವಾಹಾಮಾಡಿದ ಬೆಂಕಿಯನ್ನು ನಂದಿಸುವಲ್ಲಿ ನೆರವಾದ. ದಾಳಿಯನ್ನು ಅನುಸರಿಸಿ, ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನವೊಂದರಲ್ಲಿ ಕಾರ್ಲ್‌‌ಟನ್‌ ತಕ್ಷಣವೇ ಆಮ್ಲವನ್ನು ಸೇವಿಸಿದ.[೩೯] ಆತ ಸ್ಥಳದಲ್ಲಿಯೇ ಹೆಚ್ಚೂಕಮ್ಮಿ ಸತ್ತುಹೋಗಿದ್ದ, ಆದರೂ ಅವನನ್ನು ಡಾಡ್ಜ್‌ವಿಲ್ಲೆ ಸೆರೆಮನೆಗೆ ಕರೆದೊಯ್ಯಲಾಯಿತು.[೩೯] ದಾಳಿಯ ಏಳು ವಾರಗಳ ನಂತರ, ವೈದ್ಯಕೀಯ ನಿಗಾವಣೆಯ ಹೊರತಾಗಿಯೂ, ಬಳಲಿಕೆಯಿಂದ ಕಾರ್ಲ್‌‌ಟನ್‌ ಮರಣಹೊಂದಿದ.[೩೯] 1922ರಲ್ಲಿ, ರೈಟ್‌ನ ಮೊದಲ ಹೆಂಡತಿಯಾದ ಕಿಟ್ಟಿ ಅವನಿಗೆ ವಿಚ್ಛೇದನವನ್ನು ನೀಡಿದಳು. ಮರುಮದುವೆಗಾಗಿ ರೈಟ್‌ ಒಂದು ವರ್ಷದವರೆಗೂ ಕಾಯವೇಕಾಗಿ ಬಂತು; ಒಂದು ವರ್ಷದ ನಂತರ ಅವನು ತನ್ನ ಅಂದಿನ-ಪಾಲುದಾರಳಾದ ಮೌಡ್‌ "ಮಿರಿಯಾಮ್‌‌" ನೋಯೆಲ್‌ಳನ್ನು ಮದುವೆಯಾದ. 1923ರಲ್ಲಿ, ರೈಟ್‌ನ ತಾಯಿಯಾದ ಆನ್ನಾ (ಲಾಯ್ಡ್‌‌ ಜೋನ್ಸ್‌) ರೈಟ್‌ ಮರಣಹೊಂದಿದಳು. 1923ರ ನವೆಂಬರ್‌ನಲ್ಲಿ ಮಿರಿಯಾಮ್‌‌ ನೋಯೆಲ್‌ಳನ್ನು ರೈಟ್‌ ವರಿಸಿದನಾದರೂ, ಅವಳು ಹೊಂದಿದ್ದ ಮಾರ್ಫೀನ್‌‌ ಮಾದಕವಸ್ತುವಿನ ವ್ಯಸನವು ಕೇವಲ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿಯೇ ಅವರ ಮದುವೆಯು ಮುರಿದುಬೀಳುವುದಕ್ಕೆ ಕಾರಣವಾಯಿತು. 1924ರಲ್ಲಿ, ಬೇರ್ಪಟ್ಟ ನಂತರ, ಆದರೆ ಇನ್ನೂ ಮದುವೆಯಾದವ ಎನಿಸಿಕೊಂಡಿರುವಾಗಲೇ, ಚಿಕಾಗೊದಲ್ಲಿನ ಪೆಟ್ರೋಗ್ರಾಡ್‌ ನೃತ್ಯರೂಪಕದ ಪ್ರದರ್ಶನವೊಂದರಲ್ಲಿ ಓಲ್ಗಾ (ಓಲ್ಜಿವಾನ್ನಾ) ಲಾಜೋವಿಚ್‌‌ ಹಿಂಜೆನ್‌ಬರ್ಗ್‌‌‌‌ಳನ್ನು ರೈಟ್‌ ಭೇಟಿಯಾದ. 1925ರಲ್ಲಿ ಅವರಿಬ್ಬರೂ ಒಟ್ಟಾಗಿ ಟ್ಯಾಲೀಸಿನ್‌‌ನಲ್ಲಿ ಒಡನಾಟವನ್ನು ನಡೆಸಿದರು ಮತ್ತು ಕೆಲವೇ ದಿನಗಳಲ್ಲಿ ಗರ್ಭಿಣಿಯಾದ ಓಲ್ಜಿವಾನ್ನಾ, ನಂತರದಲ್ಲಿ ಲೊವಾನ್ನಾ ಎಂಬ ಮಗಳಿಗೆ ಜನ್ಮವಿತ್ತಳು. 1925ರ ಡಿಸೆಂಬರ್‌‌‌ 2ರಂದು ಲೊವಾನ್ನಾ ಹುಟ್ಟಿದಳು. ಹಲವು ವರ್ಷಗಳ ನಂತರ ಅವಳು ರೈಟ್‌'ನ ಸಹವರ್ತಿಯಾದ ಅರ್ಥರ್‌‌ ಪೀಪರ್‌‌ ಎಂಬಾತನನ್ನು ಮದುವೆಯಾದಳು ಮತ್ತು ನಂತರದಲ್ಲಿ ಅವನನ್ನು ವಿಚ್ಛೇದಿಸಿದಳು. 1925ರ ಏಪ್ರಿಲ್‌‌ 20ರಂದು ಸಂಭವಿಸಿದ ಮತ್ತೊಂದು ಅಗ್ನಿದುರಂತವು ಟ್ಯಾಲೀಸಿನ್‌‌ನಲ್ಲಿನ ಬಂಗಲೆಯನ್ನು ನಾಶಮಾಡಿತು. ಹೊಸದಾಗಿ ಅಳವಡಿಸಲಾಗಿದ್ದ ದೂರವಾಣಿ ವ್ಯವಸ್ಥೆಯೊಂದರಿಂದ ಬಂದಿದ್ದ ಅಡ್ಡಹಾಯ್ದ ತಂತಿಗಳು ಸದರಿ ಅಗ್ನಿದುರಂತಕ್ಕೆ ಕಾರಣವಾಗಿದ್ದವು; ಇದರಿಂದಾಗಿ ಅಮೂಲ್ಯವೆಂಬುದಾಗಿ ರೈಟ್‌ನಿಂದ ಘೋಷಿಸಲ್ಪಟ್ಟಿದ್ದ ಜಪಾನೀ ಮುದ್ರಣಗಳ ಒಂದು ಸಂಗ್ರಹವು ನಾಶವಾಗಿಹೋಯಿತು. 250,000 $ನಿಂದ 500,000 $ನಷ್ಟು ಮೊತ್ತದವರೆಗಿನ ನಷ್ಟವು ಸಂಭವಿಸಿದೆ ಎಂಬುದಾಗಿ ರೈಟ್‌ ಅಂದಾಜಿಸಿದ.[೪೦] ವಾಸದ ನಿವಾಸಗಳನ್ನು ಮರುನಿರ್ಮಿಸಿದ ರೈಟ್‌, ಆ ಮನೆಗೆ "ಟ್ಯಾಲೀಸಿನ್‌‌ III" ಎಂದು ಹೆಸರಿಸಿದ. 1926ರಲ್ಲಿ, ಓಲ್ಗಾಳ ಮಾಜಿ-ಪತಿಯಾದ ವ್ಲಾದೆಮಾರ್‌‌ ಹಿಂಜೆನ್‌ಬರ್ಗ್‌, ತನ್ನ ಮಗಳಾದ ಸ್ವೆಟ್ಲಾನಾಳ ಆಶ್ರಯವನ್ನು ಬಯಸಿಬಂದ. 1926ರ ಅಕ್ಟೋಬರ್‌‌ನಲ್ಲಿ, ಮಾನ್‌ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲ್ಪಟ್ಟ ರೈಟ್‌ ಮತ್ತು ಓಲ್ಜಿವಾನ್ನಾರನ್ನು, ಮಿನ್ನೆಸೊಟಾದ ಮಿನ್ನೆಟೊಂಕಾದಲ್ಲಿ ಬಂಧಿಸಲಾಯಿತು. ಸದರಿ ಆರೋಪಗಳನ್ನು ನಂತರದಲ್ಲಿ ಕೈಬಿಡಲಾಯಿತು. ರೈಟ್‌ ಮತ್ತು ಮಿರಿಯಾಮ್‌‌ ನೋಯೆಲ್‌ರ ವಿಚ್ಛೇದನವು 1927ರಲ್ಲಿ ಇತ್ಯರ್ಥವಾಯಿತು, ಹಾಗೂ ಮತ್ತೊಮ್ಮೆ ಮದುವೆಯಾಗಲು ರೈಟ್‌ ಮತ್ತೊಂದು ವರ್ಷದವರೆಗೆ ಕಾಯಬೇಕಾಗಿ ಬಂತು. 1928ರಲ್ಲಿ ರೈಟ್‌ ಮತ್ತು ಓಲ್ಜಿವಾನ್ನಾ ಮದುವೆಯಾದರು.

ಕ್ಯಾಲಿಫೋರ್ನಿಯಾ ಮತ್ತು ನೆಯ್ಗೆ ಅಚ್ಚಿನ ಮನೆಗಳು

ಲಾಸ್‌ ಏಂಜಲೀಸ್‌ ಪ್ರದೇಶದಲ್ಲಿ ಹಲವಾರು ಮನೆಗಳನ್ನೂ ಸಹ ರೈಟ್‌ ನಿರ್ಮಿಸಿದ. ಪ್ರಸಕ್ತವಾಗಿ ಸಾರ್ವಜನಿಕರಿಗೆ ಮುಕ್ತವಾಗಿರುವ ಮನೆಗಳಲ್ಲಿ, ಹಾಲಿವುಡ್‌‌‌ನಲ್ಲಿರುವ ಹಾಲಿಹಾಕ್‌‌ ಹೌಸ್‌‌ (ಅಲೀನ್‌‌ ಬಾರ್ನ್ಸ್‌‌ಡಾಲ್‌‌ ನಿವಾಸ) ಮತ್ತು ಬೆವರ್ಲಿ ಹಿಲ್ಸ್‌‌‌ನಲ್ಲಿರುವ ಆಂಡರ್ಟನ್‌‌ ಕೋರ್ಟ್‌ ಷಾಪ್ಸ್‌‌ ಸೇರಿವೆ. ಹಾಲಿಹಾಕ್‌‌ ಹೌಸ್‌‌ನ್ನು ಅನುಸರಿಸಿಕೊಂಡು, 1923 ಮತ್ತು 1924ರಲ್ಲಿ ಒಂದು ಪರಿವರ್ತನಾಶೀಲ ನಿರ್ಮಾಣ ಪ್ರಕ್ರಿಯೆಯನ್ನು ರೈಟ್‌ ಬಳಸಿಕೊಂಡ ಮತ್ತು ಅದಕ್ಕೆ ಅವನು ನೆಯ್ಗೆ ಅಚ್ಚಿನ ವ್ಯವಸ್ಥೆ [೪೧] ಎಂದು ಹೆಸರಿಟ್ಟ; ಈ ಪ್ರಕ್ರಿಯೆಯಲ್ಲಿ ಕಟ್ಟಡಗಳನ್ನು ಪೂರ್ವಭಾವಿಯಾಗಿ ಸಿದ್ಧಪಡಿಸಲಾದ ಕಾಂಕ್ರೀಟು ಅಚ್ಚುಗಳಿಂದ ನಿರ್ಮಿಸಲಾಗುತ್ತಿತ್ತು ಹಾಗೂ ಈ ಅಚ್ಚುಗಳು ಒಂದು ಚಿತ್ತಾರದ, ಚಚ್ಚೌಕದ ಹೊರಾಂಗಣ ಮೇಲ್ಮೈಯನ್ನು ಹೊಂದಿರುತ್ತಿದ್ದವು: ಲಾಸ್‌ ಏಂಜಲೀಸ್‌ನ ಗ್ರಿಫಿತ್‌‌ ಪಾರ್ಕ್‌ ಪ್ರದೇಶದಲ್ಲಿನ ಅಲೀಸ್‌ ಮಿಲಾರ್ಡ್‌ ಹೌಸ್‌‌ (ಪಸಡೆನಾ), ಜಾನ್‌‌ ಸ್ಟೋರರ್‌‌ ಹೌಸ್‌‌ (ಪಶ್ಚಿಮ ಹಾಲಿವುಡ್‌), ಸ್ಯಾಮುಯೆಲ್‌‌ ಫ್ರೀಮನ್‌ ಹೌಸ್‌‌ (ಹಾಲಿವುಡ್‌) ಮತ್ತು ಎನ್ನಿಸ್‌ ಹೌಸ್‌‌ ಮೊದಲಾದವು ಈ ಶೈಲಿಯ ಮನೆಗಳಿಗೆ ನಿದರ್ಶನಗಳಾಗಿದ್ದವು. ಕಳೆದ ಎರಡು ದಶಕಗಳ ಅವಧಿಯಲ್ಲಿ ಎನ್ನಿಸ್‌ ಹೌಸ್‌‌ ಜನಪ್ರಿಯವೆನಿಸಿಕೊಂಡಿದೆ; ಹಾಲಿವುಡ್‌ನ ದೂರದರ್ಶನ ಮತ್ತು ಚಲನಚಿತ್ರ ನಿರ್ಮಾತೃಗಳಿಗೆ ಒಂದು ವಿಲಕ್ಷಣವಾಗಿ ಆಕರ್ಷಕವಾಗಿರುವ, ಸನಿಹದ ಚಿತ್ರೀಕರಣ ತಾಣವಾಗಿ ಇದು ಕಂಡಿದೆ. ಅಲೀನ್‌‌ ಬಾರ್ನ್ಸ್‌‌ಡಾಲ್‌ಗಾಗಿ, ಸಮುದಾಯ ಆಟದಗೃಹ‌ಕ್ಕೆ ("ಲಿಟ್ಲ್‌ ಡಿಪ್ಪರ್‌") ಸಂಬಂಧಿಸಿದಂತೆ ನೆಯ್ಗೆ ಅಚ್ಚಿನ ಐದನೇ ಮನೆಯೊಂದನ್ನೂ ಅವನು ವಿನ್ಯಾಸಗೊಳಿಸಿದ; ಆದರೆ ಅದು ಎಂದಿಗೂ ನಿರ್ಮಾಣಗೊಳ್ಳಲಿಲ್ಲ. ಸ್ಟೋರರ್‌‌, ಫ್ರೀಮನ್‌ ಮತ್ತು ಎನ್ನಿಸ್‌ ಹೌಸ್‌‌ಗಳಿಗೆ ಸಂಬಂಧಿಸಿದಂತೆ ರೈಟ್‌ನ ಮಗನಾದ ಲಾಯ್ಡ್‌‌ ರೈಟ್‌ ನಿರ್ಮಾಣದ ಮೇಲ್ವಿಚಾರಣೆ ವಹಿಸಿದ. ಇವುಗಳ ಪೈಕಿಯ ಬಹುತೇಕ ಮನೆಗಳು ಖಾಸಗಿ ನಿವಾಸಗಳಾಗಿದ್ದು, ನವೀಕರಣದ ಕಾರಣದಿಂದಾಗಿ ಇವಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ; ಜಾರ್ಜ್‌ ಸ್ಟರ್ಜಸ್‌ ಹೌಸ್‌‌ (ಬ್ರೆಂಟ್‌‌ವುಡ್‌) ಮತ್ತು ಆರ್ಚ್‌ ಒಬೊಲರ್‌ ಗೇಟ್‌ಹೌಸ್‌‌ & ಸ್ಟುಡಿಯೊ (ಮಾಲಿಬು) ಇವಕ್ಕೆ ನಿದರ್ಶನಗಳಾಗಿವೆ.

ಪ್ರೌಢ ಸುಸಂಘಟಿತ ಶೈಲಿ

1920ರ ದಶಕದ ಅಂತ್ಯಭಾಗ ಮತ್ತು 1930ರ ದಶಕದ ಅವಧಿಯಲ್ಲಿ, ಫಾಲಿಂಗ್‌ವಾಟರ್‌‌ ಮತ್ತು ಟ್ಯಾಲೀಸಿನ್‌‌ ವೆಸ್ಟ್‌‌ ಮನೆಗಳ ವಿನ್ಯಾಸದೊಂದಿಗೆ ರೈಟ್‌ನ ಸುಸಂಘಟಿತ ಶೈಲಿಯು ಸಂಪೂರ್ಣವಾಗಿ ಪ್ರೌಢವಾಗಿತ್ತು.

ಫಾಲಿಂಗ್‌ವಾಟರ್‌‌, ಬಿಯರ್‌ ರನ್‌, ಪೆನ್ಸಿಲ್ವೇನಿಯಾ (1937)

ರೈಟ್‌‌ನ ಅತ್ಯಂತ ಪ್ರಸಿದ್ಧ ಖಾಸಗಿ ನಿವಾಸಗಳ ಪೈಕಿ ಒಂದಾದ ಫಾಲಿಂಗ್‌ವಾಟರ್‌‌ ನಿವಾಸವು 1934ರಿಂದ 1937ರ ಅವಧಿಯಲ್ಲಿ ನಿರ್ಮಿಸಲ್ಪಟ್ಟಿತು. ಪಿಟ್ಸ್‌‌ಬರ್ಗ್‌‌‌ಗೆ ಸಮೀಪದವಿರುವ ಬಿಯರ್‌ ರನ್‌ ಪೆನ್ಸಿಲ್ವೇನಿಯಾದಲ್ಲಿ ಶ್ರೀಮಾನ್‌ ಮತ್ತು ಶ್ರೀಮತಿ ಎಡ್ಗರ್‌‌ J. ಕೌಫ್‌ಮನ್‌ ಸೀನಿಯರ್‌‌ ಎಂಬುವವರಿಗಾಗಿ ಸದರಿ ನಿವಾಸವು ನಿರ್ಮಿಸಲ್ಪಟ್ಟಿತು. ರೈಟ್‌ನ ಬಯಕೆಯ ಅನುಸಾರ ಇದು ವಿನ್ಯಾಸಗೊಳಿಸಲ್ಪಟ್ಟಿತು; ಮನೆಯ ನಿವಾಸಿಗಳನ್ನು ಸುತ್ತುಮುತ್ತಲ ಸ್ವಾಭಾವಿಕ ಪರಿಸರಗಳಿಗೆ ಅತ್ಯಂತ ಸನಿಹದಲ್ಲಿ ಇರಿಸುವುದು, ಕಟ್ಟಡದ ತಳಭಾಗದಿಂದ ಒಂದು ಝರಿ ಮತ್ತು ಜಲಪಾತ ಓಡುವ ರೀತಿಯಲ್ಲಿ ಮನೆಯನ್ನು ವಿನ್ಯಾಸಗೊಳಿಸುವುದು ಅವನ ಬಯಕೆಯಾಗಿತ್ತು. ಸದರಿ ನಿರ್ಮಾಣವು ಚಾಚಿಕೊಂಡಿರುವ ಉಪ್ಪರಿಗೆಗಳು ಮತ್ತು ತಾರಸಿಗಳ ಒಂದು ಸರಣಿಯಾಗಿದ್ದು, ಇದರಲ್ಲಿನ ಎಲ್ಲಾ ಲಂಬತಲಗಳಿಗಾಗಿ ಸುಣ್ಣದ ಕಲ್ಲನ್ನೂ ಮತ್ತು ಸಮತಲಗಳಿಗಾಗಿ ಕಾಂಕ್ರೀಟನ್ನೂ ಬಳಸಲಾಗಿದೆ. ವಾಸ್ತುಶಿಲ್ಪಿಯ ಶುಲ್ಕವಾದ 8,000 $ನಷ್ಟು ಮೊತ್ತವನ್ನು ಒಳಗೊಂಡಂತೆ, ಸದರಿ ನಿವಾಸಕ್ಕೆ 155,000 $ನಷ್ಟು ಹಣವು ವೆಚ್ಚವಾಗಿದೆ. ಸದರಿ ವಿನ್ಯಾಸವು ಅಷ್ಟೇನೂ ಅಮೋಘವಾಗಿಲ್ಲ ಎಂಬುದಾಗಿ ಕೌಫ್‌ಮನ್‌ನ ಬಳಗದ ಎಂಜಿನಿಯರುಗಳೇ ವಾದಮಾಡಿದರು. ಅವರ ವಾದವನ್ನು ರೈಟ್ ತಳ್ಳಿಹಾಕಿದನಾದರೂ, ಗುತ್ತಿಗೆದಾರನು ಸಮತಲವಾಗಿರುವ ಕಾಂಕ್ರೀಟು ಘಟಕಗಳಿಗೆ ಹೆಚ್ಚುವರಿ ಉಕ್ಕನ್ನು ರಹಸ್ಯವಾಗಿ ಸೇರಿಸಿದ. 1994ರಲ್ಲಿ, ಸದರಿ ಕಟ್ಟಡವನ್ನು ಪರಿಶೀಲಿಸಿದ ರಾಬರ್ಟ್‌ ಸಿಲ್‌ಮನ್‌‌ ಅಂಡ್‌ ಅಸೋಸಿಯೇಟ್ಸ್‌ ಸಂಸ್ಥೆಯು, ಸದರಿ ರಚನೆಯನ್ನು ಪೂರ್ವಸ್ಥಿತಿಗೆ ತರಲು ನಕಾಶೆಯೊಂದನ್ನು ಅಭಿವೃದ್ಧಿಪಡಿಸಿತು. 1990ರ ದಶಕದ ಅಂತ್ಯದಲ್ಲಿ, ಒಂದು ವಿವರವಾದ ರಾಚನಿಕ ವಿಶ್ಲೇಷಣೆಯು ನೆರವೇರುವವರೆಗೂ ಇರಲೆಂದು ಅತ್ಯಂತ ಕೆಳಗಿನ ಚಾಚುತೊಲೆಯ ಅಡಿಯಲ್ಲಿ ಉಕ್ಕಿನ ಆಧಾರಗಳನ್ನು ಸೇರ್ಪಡೆಮಾಡಲಾಯಿತು. 2002ರ ಮಾರ್ಚ್‌ನಲ್ಲಿ, ಅತ್ಯಂತ ಕೆಳಗಿನ ತಾರಸಿಯ ಕರ್ಷಣಕ್ಕೊಳಪಡಿಸಿದ-ನಂತರದ ಕಾರ್ಯವು ಸಂಪೂರ್ಣಗೊಂಡಿತು.

ಸ್ಕಾಟ್ಸ್‌‌ಡೇಲ್‌‌, AZನಲ್ಲಿನ ರೈಟ್‌ನ ಚಳಿಗಾಲದ ಮನೆ ಮತ್ತು ಸ್ಟುಡಿಯೊ ಸಂಕೀರ್ಣವಾಗಿದ್ದ ಟ್ಯಾಲೀಸಿನ್‌‌ ವೆಸ್ಟ್, 1937ರಿಂದ ಮೊದಲ್ಗೊಂಡು 1959ರಲ್ಲಿ ರೈಟ್‌ನ ಸಾವು ಸಂಭವಿಸುವವರೆಗೂ ರೈಟ್‌ಗೆ ಸಂಬಂಧಿಸಿದ ಒಂದು ಪ್ರಯೋಗಾಲಯವಾಗಿತ್ತು. ಈಗ ಫ್ರಾಂಕ್ ಲಾಯ್ಡ್‌‌ ರೈಟ್ ಫೌಂಡೇಷನ್‌ನ ಮನೆ ಹಾಗೂ ದಾಖಲೆ ಪತ್ರಾಗಾರವಾಗಿರುವ ಈ ನೆಲೆಯು, ಫ್ರಾಂಕ್ ಲಾಯ್ಡ್‌‌ ರೈಟ್ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌‌ನ ತಾಣವಾಗಿ ಇಂದಿಗೂ ಮುಂದುವರಿಯುತ್ತಿದೆ. ಬ್ರಾಡ್‌ಕೇರ್‌ ಸಿಟಿ ಎಂಬ ಪರಿಭಾಷೆಯ ಅಡಿಯಲ್ಲಿ ಒಗ್ಗೂಡಿದ ಉಪನಗರದ ಅಭಿವೃದ್ಧಿಯ ಪರಿಕಲ್ಪನೆಗಳ ಒಂದು ಸರಣಿಗೆ ರೈಟ್‌ ಹೊಣೆಗಾರನಾಗಿದ್ದಾನೆ. 1932ರಲ್ಲಿ ಬಂದ ದಿ ಡಿಸ್‌ಅಪಿಯರಿಂಗ್‌ ಸಿಟಿ ಎಂಬ ತನ್ನ ಪುಸ್ತಕದಲ್ಲಿ ಈ ಪರಿಕಲ್ಪನೆಯನ್ನು ಅವನು ಪ್ರಸ್ತಾವಿಸಿದ, ಮತ್ತು ಭವಿಷ್ಯದದ ಈ ಸಮುದಾಯದ ಒಂದು 12-square-foot (1.1 m2) ಮಾದರಿಯನ್ನು ಅನಾವರಣಗೊಳಿಸಿದ; ಹಾಗೂ ನಂತರ ಬಂದ ವರ್ಷಗಳಲ್ಲಿ ಹಲವಾರು ತಾಣಗಳಲ್ಲಿ ಇದನ್ನು ತೋರಿಸುತ್ತಾ ಬಂದ. ತನ್ನ ಸಾವಿನವರೆಗೂ ಆತ ಸದರಿ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸುತ್ತಾ ಹೋದ.

ಉಸೋನಿಯಾ ಶೈಲಿಯ ಮನೆಗಳು

ಉಸೋನಿಯಾ ಎಂಬುದಾಗಿಯೂ ಉಲ್ಲೇಖಿಸಲ್ಪಡುವ ಬ್ರಾಡ್‌ಕೇರ್‌ ಸಿಟಿಯ ಅಭಿವೃದ್ಧಿಯೊಂದಿಗೆ ಏಕಕಾಲೀನವಾಗಿ, ಹೊಸ ಬಗೆಯ ನಿವಾಸವೊಂದನ್ನು ರೈಟ್‌ ಕಲ್ಪಿಸಿಕೊಂಡ ಮತ್ತು ಅದು ಉಸೋನಿಯನ್‌ ಹೌಸ್‌ (ಉಸೋನಿಯಾ ಶೈಲಿಯ ಮನೆ) ಎಂದು ಕರೆಯಲ್ಪಟ್ಟಿತು. ಮಿನ್ನಿಯಾಪೊಲಿಸ್‌ನಲ್ಲಿರುವ ಮ್ಯಾಲ್ಕಮ್‌‌ ವಿಲ್ಲಿ ಹೌಸ್‌‌ನಲ್ಲಿ (1934) ಈ ಸ್ವರೂಪದ ಆರಂಭಿಕ ಆವೃತ್ತಿಯೊಂದನ್ನು ಕಾಣಬಹುದು; ಆದರೆ, ವಿಸ್ಕಾನ್ಸಿನ್‌‌ನ ಮ್ಯಾಡಿಸನ್‌‌ನಲ್ಲಿರುವ ಹರ್ಬರ್ಟ್‌ ಮತ್ತು ಕ್ಯಾಥರೀನ್‌‌ ಜಾಕೋಬ್ಸ್‌‌ ಫಸ್ಟ್‌ ಹೌಸ್‌‌‌‌‌ನಲ್ಲಿ (1937) ಉಸೋನಿಯಾದ ಆದರ್ಶವು ಅತ್ಯಂತ ಪರಿಪೂರ್ಣವಾಗಿ ಹೊರಹೊಮ್ಮಿತು. ಮನೆಯ ವಿಕಿರಣಶೀಲ ತಾಪಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಜಾಲರಿಯುಳ್ಳ ಕಾಂಕ್ರೀಟು ಚಪ್ಪಡಿಯೊಂದರ ಮೇಲೆ ವಿನ್ಯಾಸಗೊಂಡಿರುವ ಈ ಮನೆಯು, ನಿರ್ಮಾಣಕ್ಕೆ ಸಂಬಂಧಿಸಿದ ಹೊಸ ವಿಧಾನಗಳನ್ನು ಒಳಗೊಂಡಿತ್ತು; ಮರದ ಹೊದಿಕೆ ಪದಾರ್ಥ, ಪ್ಲೈವುಡ್‌ ತಿರುಳುಗಳು ಮತ್ತು ನಿರ್ಮಾಣ ಕಾಗದದ ಪದರಗಳನ್ನು ಇದರ ಸ್ಯಾಂಡ್‌ವಿಚ್‌‌ ಗೋಡೆಗಳು ಹೊಂದಿದ್ದು, ವಿಶಿಷ್ಟವಾಗಿ ರೂಪಿಸಲಾದ ಗೋಡೆಗಳಿಗಿಂತ ಅವು ಹೊರಳುದಾರಿಯನ್ನು ತುಳಿದಿದ್ದವು. ಉಸೋನಿಯಾ ಶೈಲಿಯ ಮನೆಗಳು ಮಟ್ಟಸವಾದ ಛಾವಣಿಗಳನ್ನು ಅತ್ಯಂತ ಸಾಮಾನ್ಯವಾಗಿ ಒಳಗೊಂಡಿದ್ದವು ಮತ್ತು ತಳಮನೆಗಳಿಲ್ಲದೆಯೇ ಬಹುಪಾಲು ನಿರ್ಮಿಸಲ್ಪಟ್ಟಿದ್ದವು; ಮನೆಗಳಿಂದ ಮೇಲಟ್ಟಗಳು ಮತ್ತು ತಳಮನೆಗಳನ್ನು ತೆಗೆದುಹಾಕುವ ಪರಿಪಾಠವನ್ನು ಈ ವಿನ್ಯಾಸವು ಪೂರ್ಣಗೊಳಿಸಿತು ಮತ್ತು ಇದು 20ನೇ ಶತಮಾನದ ಆರಂಭದಿಂದಲೂ ರೈಟ್‌ ಕೈವಶ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ಒಂದು ಕುಶಲತೆಯಾಗಿತ್ತು. ಮಧ್ಯಮ-ವರ್ಗದ ಗ್ರಾಹಕರಿಗಾಗಿ ಸಾಕಷ್ಟು ಕಾರ್ಯಸಾಧ್ಯವಾಗಿರುವಂತಿರಬೇಕು ಎಂದು ಆಶಿಸಲ್ಪಟ್ಟ, ಮತ್ತು ಸೇವಕರ ನೆರವಿಲ್ಲದೆಯೇ ನಡೆಸುವಂತಿರಲೆಂದು ವಿನ್ಯಾಸಗೊಳಿಸಲ್ಪಟ್ಟ ಉಸೋನಿಯಾ ಶೈಲಿಯ ಮನೆಗಳು, "ಕಾರ್ಯನೆಲೆಗಳು" ಎಂಬುದಾಗಿ ರೈಟ್‌ನಿಂದ ಕರೆಯಲ್ಪಡುತ್ತಿದ್ದ ಹಾಗೂ ಊಟದ ಸ್ಥಳಾವಕಾಶಗಳಿಗೆ ಹೊಂದಿಕೊಂಡಂತಿದ್ದ ಸಣ್ಣ ಅಡುಗೆಮನೆಗಳನ್ನು ಒಳಗೊಂಡಿದ್ದವು. ಈ ಸ್ಥಳಾವಕಾಶಗಳು ಮುಂದುವರಿದು ಮುಖ್ಯ ವಾಸದ ಪ್ರದೇಶಗಳಿಗೆ ಚಾಚಿಕೊಂಡಿರುತ್ತಿದ್ದವು; ವಿಶಿಷ್ಟ ಲಕ್ಷಣವೆಂಬಂತೆ ಸದರಿ ವಾಸದ ಪ್ರದೇಶಗಳೂ ಸಹ ಒಳ-ನಿರ್ಮಿತ ಕುಳಿತುಕೊಳ್ಳುವ ವ್ಯವಸ್ಥೆ ಮತ್ತು ಮೇಜುಗಳೊಂದಿಗೆ ಸಜ್ಜುಗೊಳಿಸಲ್ಪಟ್ಟಿದ್ದವು. ಪ್ರೈರೀ ಶೈಲಿಯ ಮನೆ‌ಗಳಲ್ಲಿದ್ದಂತೆ, ಉಸೋನಿಯಾ ಶೈಲಿಯ ವಾಸದ ಪ್ರದೇಶಗಳು ಬೆಂಕಿಗೂಡಿನ ಮೇಲೆ ಗಮನಹರಿಸಿದವು. ಮಲಗುವ ಕೋಣೆಗಳು ವಿಶಿಷ್ಟವಾಗಿ ಪ್ರತ್ಯೇಕಿಸಲ್ಪಟ್ಟಿದ್ದವು ಮತ್ತು ತುಲನಾತ್ಮಕವಾಗಿ ಸಣ್ಣಗಾತ್ರದಲ್ಲಿದ್ದವು; ಮುಖ್ಯ ವಾಸದ ಪ್ರದೇಶಗಳಲ್ಲಿ ಕುಟುಂಬದ ಸದಸ್ಯರು ಒಟ್ಟುಗೂಡುವಂತೆ ಉತ್ತೇಜಿಸುವ ಪ್ರಯತ್ನ ಇದಾಗಿತ್ತು. ಕೋಣೆಗಳ ಬದಲಿಗೆ ಸ್ಥಳಾವಕಾಶಗಳನ್ನು ವ್ಯವಸ್ಥೆಗೊಳಿಸುವ ಪರಿಕಲ್ಪನೆಯು ಪ್ರೈರೀ ಆದರ್ಶದ ಒಂದು ಅಭಿವೃದ್ಧಿಯಾಗಿತ್ತು; ರೈಟ್‌ನ ಆರಂಭಿಕ ಕೆಲಸಗಳು ಬೆಳೆದುಬಂದುದಕ್ಕೆ ಕಾರಣವಾದ ಕಲೆಗಳು ಮತ್ತು ಕರಕೌಶಲಗಳ ತತ್ತ್ವಗಳಿಗೆ ಒಳ-ನಿರ್ಮಿತ ಪೀಠೋಪಕರಣಗಳು ಸಂಬಂಧಿಸಿದ್ದು ಇದಕ್ಕೆ ಪುಷ್ಟಿನೀಡುವಂತಿತ್ತು. ಪ್ರದೇಶದ ದೃಷ್ಟಿಯಿಂದ ಮತ್ತು ಅವುಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಉಸೋನಿಯಾ ಶೈಲಿಯ ಮನೆಗಳು ಸ್ವತಂತ್ರ ವಾಸಕ್ಕಾಗಿರುವ ಒಂದು ಹೊಸ ಮಾದರಿಯನ್ನು ಪ್ರತಿನಿಧಿಸಿದವು, ಮತ್ತು ರೈಟ್‌ನಿಂದ ವಿನ್ಯಾಸಗೊಳಿಸಲ್ಪಟ್ಟ, ತುಲನಾತ್ಮಕವಾಗಿ ಕಡಿಮೆ ವೆಚ್ಚದ ಮನೆಯೊಂದರಲ್ಲಿ ವಾಸಿಸುವುದಕ್ಕೆ ಡಜನ್‌ಗಟ್ಟಲೆ ಗ್ರಾಹಕರಿಗೆ ಅವಕಾಶನೀಡಿದವು. ಉಸೋನಿಯಾ ಶೈಲಿಯ ಮನೆಗಳ ಆದರ್ಶದ ವೈವಿಧ್ಯತೆಯನ್ನು, ಮಿಚಿಗನ್‌‌ನ ಬ್ಲೂಮ್‌ಫೀಲ್ಡ್‌‌ ಹಿಲ್ಸ್‌‌‌ನಲ್ಲಿರುವ ಗ್ರೆಗರ್‌‌ S. ಮತ್ತು ಎಲಿಜಬೆತ್‌ B. ಆಫ್ಲೆಕ್‌‌ ಹೌಸ್‌‌‌‌‌‌ನಂಥ (1941) ಮನೆಗಳಲ್ಲಿ ಕಾಣಬಹುದಾಗಿದ್ದು, ಇದು ಕಮರಿಯೊಂದರ ಮೇಲೆ ಚಾಚಿಕೊಂಡಿದೆ; ಅಷ್ಟೇ ಅಲ್ಲ, ಪಾಲೊ ಆಲ್ಟೊದಲ್ಲಿರುವ ಹಾನ್ನಾ-ಹನಿಕೂಂಬ್‌‌ ಹೌಸ್‌‌ (1937) ಕೂಡಾ ಇದಕ್ಕೊಂದು ನಿದರ್ಶನವಾಗಿದ್ದು, ಇದು ಒಂದು ಜೇನುಗೂಡಿನಂಥ ಯೋಜನಾ ಜಾಲರಿಯನ್ನು ಒಳಗೊಳ್ಳುತ್ತದೆ. 1963ರಲ್ಲಿ ಸಂಪೂರ್ಣಗೊಂಡ ‌‌ಗೋರ್ಡಾನ್ ಹೌಸ್‌‌, ಉಸೋನಿಯಾ ಶೈಲಿಗೆ ಸಂಬಂಧಿಸಿದಂತೆ ರೈಟ್‌ನ ಕೊನೆಯ ವಿನ್ಯಾಸವಾಗಿತ್ತು. ಲೆಕ್ಕವಿಲ್ಲದಷ್ಟು ಅಭಿವರ್ಧಕರ ಒಂದು ಲಕ್ಷಣವಾಗಿದ್ದ ಉಪನಗರದ ವಿನ್ಯಾಸಕ್ಕಾಗಿರುವ ಅವನ ಉಸೋನಿಯಾ ಶೈಲಿಯ ಮನೆಗಳು, ಒಂದು ಹೊಸ ಶೈಲಿಯನ್ನು ಹುಟ್ಟುಹಾಕಿದವು. ಅಮೆರಿಕಾದ ಆಧುನಿಕ ಮನೆಗಳ ಅನೇಕ ಲಕ್ಷಣಗಳು ರೈಟ್‌ ವಿನ್ಯಾಸದಲ್ಲಿ ತಮ್ಮ ಮೂಲವನ್ನು ಹೊಂದಿವೆ; ತೆರೆದ ನಕಾಶೆಗಳು, ದರ್ಜೆಯನ್ನಾಧರಿಸಿದ-ಚಪ್ಪಡಿಯ ಬುನಾದಿಗಳು, ನಿರ್ಮಾಣದಲ್ಲಿ ಹೆಚ್ಚು ಯಂತ್ರೀಕರಣ ಮತ್ತು ದಕ್ಷತೆ ಅವಕಾಶನೀಡಿದ ಸರಳೀಕೃತ ನಿರ್ಮಾಣ ಕೌಶಲಗಳು ಇವೆಲ್ಲವೂ ಅದರಲ್ಲಿ ಸೇರಿವೆ.

ನಂತರದ ಗಮನಾರ್ಹ ಕೆಲಸಗಳು

ಸಾಲೋಮನ್‌‌ R. ಗಗೆನ್‌ಹೀಮ್‌‌ ಮ್ಯೂಸಿಯಂ, ನ್ಯೂಯಾರ್ಕ್‌ ನಗರ, ನ್ಯೂಯಾರ್ಕ್‌ (1959)

ನ್ಯೂಯಾರ್ಕ್‌ ನಗರದಲ್ಲಿರುವ ಸಾಲೋಮನ್‌‌ R. ಗಗೆನ್‌ಹೀಮ್‌‌ ಮ್ಯೂಸಿಯಂ ರೈಟ್‌ನ ಕಾರ್ಯಾವಧಿಯ ಪೈಕಿ 16 ವರ್ಷಗಳನ್ನು (1943–1959)[೪೨] ಬಳಸಿಕೊಂಡಿತು ಮತ್ತು ಪ್ರಾಯಶಃ ಇದು ಅವನ ಅತ್ಯಂತ ಗುರುತಿಸಲ್ಪಟ್ಟ ಮೇರುಕೃತಿಯಾಗಿದೆ. ಈ ಕಟ್ಟಡವು ಫಿಫ್ತ್‌‌ ಅವೆನ್ಯೂದಲ್ಲಿನ ತನ್ನ ತಾಣದಿಂದ ನಸುಹಳದಿ ಮಿಶ್ರಿತ ಕಂದುಬಣ್ಣದ ಒಂದು ಆಕರ್ಷಕ ಸುರುಳಿಯಾಗಿ ಮೇಲೆದ್ದಿದ್ದು, ಇದರ ಒಳಾಂಗಣವು ಒಂದು ಕಪ್ಪೆ ಚಿಪ್ಪಿನ ಒಳಭಾಗವನ್ನು ಹೋಲುವ ರೀತಿಯಲ್ಲಿದೆ. ಗಗೆನ್‌ಹೀಮ್‌‌ನ ಅನುದ್ದೇಶಿತ ಜ್ಯಾಮಿತೀಯ ವರ್ಣಚಿತ್ರಗಳ ಸಂಗ್ರಹದ ಅನುಭವವನ್ನು ಸಂದರ್ಶಕರು ಸುಲಭವಾಗಿ ದಕ್ಕಿಸಿಕೊಳ್ಳಲು ಅನುವಾಗಲೆಂದು ಇದರ ಅನನ್ಯವಾದ ಮಧ್ಯದ ಜ್ಯಾಮಿತಿಯನ್ನು ವ್ಯವಸ್ಥೆಗೊಳಿಸಲಾಗಿತ್ತು; ಎತ್ತುಗವೊಂದರ ನೆರವಿನಿಂದ ಸಂದರ್ಶಕರನ್ನು ಮೇಲಿನ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಮತ್ತು ನಿಧಾನವಾಗಿ ಇಳಿಯುವ, ಮಧ್ಯದ ಸುರುಳಿ ಇಳಿಜಾರಿನ ಮೂಲಕ ಸಂದರ್ಶಕರು ನಡೆದುಕೊಂಡು ಹೋಗುವ ಮೂಲಕ ಕಲಾಕೃತಿಗಳನ್ನು ವೀಕ್ಷಿಸುವಂತಾಗುವ ಅವಕಾಶ ಅಲ್ಲಿತ್ತು. ಸದರಿ ಮಧ್ಯದ ಸುರುಳಿ ಇಳಿಜಾರು ಒಂದು ಅಂತಸ್ತನ್ನು ಒಳಗೊಂಡಿದ್ದು, ಅದರಲ್ಲಿ ವೃತ್ತಾಕಾರದ ಆಕಾರಗಳು ಮತ್ತು ತ್ರಿಕೋನಾಕಾರದ ದೀಪದ ಅಳವಡಿಕೆಗಳು ಹುದುಗಿಸಲ್ಪಟ್ಟಿದ್ದವು; ರಚನೆಯ ಜ್ಯಾಮಿತೀಯ ಸ್ವರೂಪಕ್ಕೆ ಪೂರಕವಾಗಿರಲೆಂದು ಈ ವ್ಯವಸ್ಥೆಯನ್ನು ಮಾಡಲಾಗಿತ್ತು. ಸದರಿ ವಸ್ತುಸಂಗ್ರಹಾಲಯ ಪೂರ್ಣಗೊಂಡಾಗ, ದುರದೃಷ್ಟವಶಾತ್‌‌ ರೈಟ್‌ನ ವಿನ್ಯಾಸದ ಅನೇಕ ಮುಖ್ಯ ವಿವರಗಳು ಉಪೇಕ್ಷಿಸಲ್ಪಟ್ಟವು; ಅದರ ಒಳಾಂಗಣಕ್ಕೆ ಮಾಸಲು-ಬಿಳುಪು ಬಣ್ಣವನ್ನು ಲೇಪಿಸಬೇಕೆಂಬ ಅವನ ಬಯಕೆಯೂ ಅದರಲ್ಲಿ ಸೇರಿತ್ತು. ಮೇಲಾಗಿ, ಮೇಲಿನ ಮಟ್ಟದಿಂದ ಕೆಳಗಿಳಿದು ಬರುವುದಕ್ಕಿಂತ ಹೆಚ್ಚಾಗಿ, ತಿರುವುಳ್ಳ ನಡೆದಾರಿಯ ಮೇಲೆ ಹತ್ತಿಕೊಂಡು ಪ್ರದರ್ಶನಗಳನ್ನು ನೋಡುವ ರೀತಿಯಲ್ಲಿ ವಸ್ತುಸಂಗ್ರಹಾಲಯವು ಸದ್ಯಕ್ಕೆ ಪ್ರದರ್ಶನಗಳನ್ನು ವಿನ್ಯಾಸಗೊಳಿಸುತ್ತದೆ.

ಓಕ್ಲಹಾಮಾದ ಬಾರ್ಟಲ್ಸ್‌ವಿಲ್ಲೆಯಲ್ಲಿರುವ ರೈಟ್‌ನ ಪ್ರೈಸ್‌ ಟವರ್‌.

ರೈಟ್‌ನಿಂದ ವಿನ್ಯಾಸಗೊಳಿಸಲ್ಪಟ್ಟು ಕೈಗೂಡುವಂತಾದ ಏಕೈಕ ಗಗನಚುಂಬಿಯೆಂದರೆ ಪ್ರೈಸ್‌ ಟವರ್‌‌; ಇದು ಓಕ್ಲಹಾಮಾದ ಬಾರ್ಟಲ್ಸ್‌ವಿಲ್ಲೆಯಲ್ಲಿರುವ ಒಂದು 19-ಮಹಡಿಯ ಗೋಪುರವಾಗಿದೆ. ರೈಟ್‌ನಿಂದ ವಿನ್ಯಾಸಗೊಳಿಸಲ್ಪಟ್ಟಿದ್ದು ಈಗ ಅಸ್ತಿತ್ವದಲ್ಲಿರುವ ಲಂಬವಾಗಿ-ತಿರುಗಿಸಲಾದ ಎರಡು ರಚನೆಗಳ ಪೈಕಿ ಇದೂ ಸಹ ಒಂದಾಗಿದೆ (ವಿಸ್ಕಾನ್ಸಿನ್‌‌‌ನ ರೆಸೀನ್‌‌‌ನಲ್ಲಿರುವ S.C. ಜಾನ್ಸನ್‌‌ ವ್ಯಾಕ್ಸ್‌ ರಿಸರ್ಚ್‌ ಟವರ್‌‌ ಇಂಥ ಮತ್ತೊಂದು ರಚನೆಯಾಗಿದೆ). H. C. ಪ್ರೈಸ್‌‌ ಕಂಪನಿ ಎಂಬ ಒಂದು ಸ್ಥಳೀಯ ತೈಲ ಕೊಳವೆಮಾರ್ಗ ಮತ್ತು ರಾಸಾಯನಿಕ ಸಂಸ್ಥೆಯ ಹೆರಾಲ್ಡ್‌‌ C. ಪ್ರೈಸ್‌‌ ಎಂಬಾತನಿಂದ ಪ್ರೈಸ್‌ ಟವರ್‌‌ ಯೋಜನೆಯು ನಿರ್ವಹಿಸಲ್ಪಟ್ಟಿತು. 1956ರ ಫೆಬ್ರುವರಿಯಲ್ಲಿ ಸಾರ್ವಜನಿಕರಿಗೆ ಇದು ಪ್ರವೇಶ ಕಲ್ಪಿಸಿತು. 2007ರ ಮಾರ್ಚ್‌ 29ರಂದು, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಗೃಹವ್ಯವಹಾರದ ಇಲಾಖೆಯು ಪ್ರೈಸ್‌ ಟವರ್‌‌ನ್ನು ರಾಷ್ಟ್ರೀಯ ಐತಿಹಾಸಿಕ ಹೆಗ್ಗುರುತು ಎಂಬುದಾಗಿ ಹೆಸರಿಸಿತು; ಇದು ಓಕ್ಲಹಾಮಾ ಸಂಸ್ಥಾನದಲ್ಲಿನ ಇಂಥ ಕೇವಲ 20 ಸ್ವತ್ತುಗಳ ಪೈಕಿ ಒಂದೆನಿಸಿಕೊಂಡಿದೆ.[೪೩]

ಇತರ ಯೋಜನೆಗಳು

400ಕ್ಕೂ ಹೆಚ್ಚಿನ ರಚನೆಗಳನ್ನು[೪೪] ರೈಟ್‌ ವಿನ್ಯಾಸಗೊಳಿಸಿದ್ದು, 2005ರ ವೇಳೆಗೆ ಇದ್ದಂತೆ ಅವುಗಳ ಪೈಕಿ ಸುಮಾರು 300 ಉಳಿದುಕೊಂಡಿವೆ. ಪ್ರಕೃತಿಯ ಬಲಗಳ ಕಾರಣದಿಂದಾಗಿ ನಾಲ್ಕು ರಚನೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ: W. L. ಫುಲ್ಲರ್‌ಗಾಗಿ ವಿನ್ಯಾಸಗೊಳಿಸಲಾದ ಮಿಸ್ಸಿಸ್ಸಿಪ್ಪಿಯ ಪಾಸ್‌‌ ಕ್ರಿಶ್ಚಿಯನ್‌‌‌ನಲ್ಲಿನ ಜಲಾಭಿಮುಖ ಮನೆಯು 1969ರ ಆಗಸ್ಟ್‌ನಲ್ಲಿ ಕ್ಯಾಮಿಲ್ಲೆ ಚಂಡಮಾರುತದಿಂದ ನಾಶವಾಯಿತು; ಮಿಸ್ಸಿಸ್ಸಿಪ್ಪಿಯ ಓಷನ್‌ ಸ್ಪ್ರಿಂಗ್ಸ್‌‌‌ನ ಲೂಯಿಸ್‌ ಸಲಿವನ್‌‌ ಬಂಗಲೆಯು 2005ರಲ್ಲಿ ಕಟ್ರೀನಾ ಚಂಡಮಾರುತದಿಂದ ನಾಶವಾಯಿತು; ಮತ್ತು ಜಪಾನ್‌‌ನ ಹಕೋನ್‌‌‌ನಲ್ಲಿರುವ ಅರಿನೊಬು ಫುಕುಹಾರಾ ಹೌಸ್‌‌ (1918) 1923ರ ಗ್ರೇಟ್‌ ಕ್ಯಾಂಟೋ ಭೂಕಂಪದಲ್ಲಿ ನಾಶವಾಯಿತು. ಭೂಕಂಪ ಮತ್ತು ಮಳೆ-ಪ್ರೇರಿತ ನೆಲದ ಚಲನೆಯಿಂದಾಗಿ ಕ್ಯಾಲಿಫೋರ್ನಿಯಾದಲ್ಲಿನ ಎನ್ನಿಸ್‌ ಹೌಸ್‌‌ ಹಾನಿಗೊಳಿಸಲ್ಪಟ್ಟಿತು. ಇಂಡಿಯಾನಾದ ಗ್ಯಾರಿಯಲ್ಲಿರುವ ವಿಲ್ಬರ್‌‌ ವೈನಂಟ್‌ ಹೌಸ್‌‌ 2006ರ ಜನವರಿಯಲ್ಲಿ ಬೆಂಕಿಯಿಂದ ನಾಶವಾಯಿತು.[೪೫]

ಇಂಪೀರಿಯಲ್‌ ಹೊಟೇಲು, ಟೋಕಿಯೋ (1923)

ಇದರ ಜೊತೆಗೆ, ರೈಟ್‌ನ ಜೀವಿತಾವಧಿಯ ಸಮಯದಲ್ಲಿ ಮತ್ತು ನಂತರದಲ್ಲಿ ಇತರ ಕಟ್ಟಡಗಳನ್ನು ಉದ್ದೇಶಪೂರ್ವಕವಾಗಿ ಕೆಡವಲಾಯಿತು. ಅವುಗಳ ವಿವರ ಹೀಗಿದೆ: ಮಿಡ್‌ವೇ ಗಾರ್ಡನ್ಸ್‌‌ (1913, ಚಿಕಾಗೊ, ಇಲಿನಾಯ್ಸ್‌‌) ಮತ್ತು ಲಾರ್ಕಿನ್‌‌ ಆಡಳಿತ ಕಟ್ಟಡ (1903, ಬಫೆಲೊ, ನ್ಯೂಯಾರ್ಕ್‌) ಇವುಗಳನ್ನು ಕ್ರಮವಾಗಿ 1929 ಮತ್ತು 1950ರಲ್ಲಿ ನಾಶಮಾಡಲಾಯಿತು; ಫ್ರಾನ್ಸಿಸ್‌ ಅಪಾರ್ಟ್‌‌ಮೆಂಟ್ಸ್‌ ಮತ್ತು ಫ್ರಾನ್ಸಿಸ್ಕೊ ಟೆರೇಸ್‌ ಅಪಾರ್ಟ್‌ಮೆಂಟ್ಸ್‌ (ಈ ಎರಡೂ ಸಹ ಚಿಕಾಗೊದಲ್ಲಿ ನೆಲೆಗೊಂಡಿದ್ದವು ಮತ್ತು 1895ರಲ್ಲಿ ಇವನ್ನು ವಿನ್ಯಾಸಗೊಳಿಸಲಾಗಿತ್ತು) ಇವುಗಳನ್ನು ಕ್ರಮವಾಗಿ 1971 ಮತ್ತು 1974ರಲ್ಲಿ ನಾಶಗೊಳಿಸಲಾಯಿತು; ವಿಸ್ಕಾನ್ಸಿನ್‌‌ನ ಲೇಕ್‌ ಜಿನಿವಾದಲ್ಲಿರುವ ಜಿನಿವಾ ಇನ್‌‌ (1911) ಇದನ್ನು 1970ರಲ್ಲಿ ನಾಶಮಾಡಲಾಯಿತು; ಮತ್ತು ಕೆನಡಾದ ಆಲ್ಬರ್ಟಾದಲ್ಲಿರುವ ಬಾನ್ಫ್‌ ನ್ಯಾಷನಲ್‌ ಪಾರ್ಕ್‌ ಪೆವಿಲಿಯನ್‌ (1911) ಇದನ್ನು 1939ರಲ್ಲಿ ನಾಶಮಾಡಲಾಯಿತು. ಟೋಕಿಯೋದಲ್ಲಿರುವ ಇಂಪೀರಿಯಲ್‌ ಹೊಟೇಲು (1913) ಗ್ರೇಟ್‌ ಕ್ಯಾಂಟೋ ಭೂಕಂಪದಲ್ಲಿ ಉಳಿದುಕೊಂಡಿತ್ತಾದರೂ, ನಗರ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದ ಒತ್ತಡಗಳ ಕಾರಣದಿಂದಾಗಿ ಇದನ್ನು 1968ರಲ್ಲಿ ಕೆಡವಲಾಯಿತು.[೪೬] ಅವನ ಯೋಜನೆಗಳಲ್ಲೊಂದಾದ ಮೊನೊನಾ ಟೆರೇಸ್‌ ಯೋಜನೆಯು, ವಿಸ್ಕಾನ್ಸಿನ್‌‌ನ ಮ್ಯಾಡಿಸನ್‌ಗೆ ಸಂಬಂಧಿಸಿದ ಪುರಸಭಾ ಕಚೇರಿಗಳಾಗಿ 1937ರಲ್ಲಿ ಮೂಲತಃ ವಿನ್ಯಾಸಗೊಳಿಸಲ್ಪಟ್ಟಿದ್ದು, ಇದು ಮೂಲ ತಾಣದಲ್ಲಿ 1997ರಲ್ಲಿ ಪೂರ್ಣಗೊಳಿಸಲ್ಪಟ್ಟಿತು; ಹೊರಾಂಗಣಕ್ಕೆ ಸಂಬಂಧಿಸಿದಂತೆ ರೈಟ್‌ನ ಅಂತಿಮ ವಿನ್ಯಾಸಕ್ಕೆ ಮಾಡಲ್ಪಟ್ಟ ಒಂದು ಬದಲಾವಣೆ ಹಾಗೂ ಒಳಾಂಗಣವನ್ನು ಒಂದು ಸಮ್ಮೇಳನ ಕೇಂದ್ರವನ್ನಾಗಿಸುವ ಅದರ ಹೊಸ ಉದ್ದೇಶದಿಂದ ಮಾರ್ಪಡಿಸಲಾದ ಒಳಾಂಗಣ ವಿನ್ಯಾಸದೊಂದಿಗೆ ಈ ಕಾರ್ಯವನ್ನು ನೆರವೇರಿಸಲಾಯಿತು. "ಯೋಜನೆಯನುಸಾರ-ರೂಪಿಸಿದ" ವಿನ್ಯಾಸವನ್ನು ರೈಟ್‌ನ ಹೊಸಗಸುಬಿಯಾದ ಟೋನಿ ಪುಟ್ನಾಮ್‌‌ ಎಂಬಾತ ನಿರ್ವಹಿಸಿದ. ಮೂಲ ವಿನ್ಯಾಸ ಮತ್ತು ರಚನೆಯ ಸಂಪೂರ್ಣಗೊಳ್ಳುವಿಕೆಯ ನಡುವಿನ 60 ವರ್ಷಗಳ ಉದ್ದಕ್ಕೂ ಮೊನೊನಾ ಟೆರೇಸ್‌ ಜೊತೆಯಲ್ಲಿ ವಿವಾದವು ಸಾಗಿಬಂತು.[೪೭] ಫ್ಲೋರಿಡಾದ ಲೇಕ್‌ಲ್ಯಾಂಡ್‌‌‌ನಲ್ಲಿ ನೆಲೆಗೊಂಡಿರುವ ಫ್ಲೋರಿಡಾ ಸದರ್ನ್‌ ಕಾಲೇಜ್‌ ಫ್ರಾಂಕ್ ಲಾಯ್ಡ್‌‌ ರೈಟ್‌ನ (ಯೋಜಿತ 18 ಕಟ್ಟಡಗಳ ಪೈಕಿ) 12 ಕಟ್ಟಡಗಳನ್ನು ನಿರ್ಮಿಸಿತು; ಚೈಲ್ಡ್‌ ಆಫ್‌ ದಿ ಸನ್‌‌‌ ಯೋಜನೆಯ ಭಾಗವಾಗಿ 1941 ಮತ್ತು 1958ರ ನಡುವೆ ಇದು ನಿರ್ಮಿಸಲ್ಪಟ್ಟಿತು. ಇದು ಫ್ರಾಂಕ್ ಲಾಯ್ಡ್‌‌ ರೈಟ್ ವಾಸ್ತುಶೈಲಿಗೆ ಸೇರಿದ ಪ್ರಪಂಚದ ಅತ್ಯಂತ ದೊಡ್ಡ ಏಕ-ತಾಣದಲ್ಲಿನ ಸಂಗ್ರಹವಾಗಿದೆ. ಲೇಕ್‌ ಟಾಹೋದಲ್ಲಿನ ಎಮರಾಲ್ಡ್‌ ಬೇ ಎಂಬುದಕ್ಕೆ ಸಂಬಂಧಿಸಿದ ರೈಟ್‌ನ ನಕಾಶೆಯು ಎಂದಿಗೂ ಕೈಗೂಡದ, ಅಷ್ಟೇನು ಸುಪರಿಚಿತವಲ್ಲದ ಒಂದು ಯೋಜನೆ ಎನಿಸಿಕೊಂಡಿತು.[೪೮] ಟಾಹೋದ ಕೆಲವೇ ಸ್ಥಳೀಯರು ತಮ್ಮ ಸ್ವಾಭಾವಿಕ ಸಂಪತ್ತಿಗೆ ಸಂಬಂಧಿಸಿದಂತೆ ಅಮೆರಿಕಾದ ಸಾಂಪ್ರದಾಯಿಕ ವಾಸ್ತುಶಿಲ್ಪಿಯು ರೂಪಿಸಿರುವ ನಕಾಶೆಯ ಕುರಿತು ಅರಿತಿದ್ದಾರೆ. ಟೆಕ್ಸಾಸ್‌‌ನ ಡಲ್ಲಾಸ್‌‌‌ನಲ್ಲಿರುವ ಕ್ಯಾಲಿಟಾ ಹಂಫ್ರೇಸ್‌ ಥಿಯೇಟರ್‌‌ ರೈಟ್‌ನ ಸಾವಿಗೆ ಮುಂಚಿನ ಅವನ ಕೊನೆಯ ಯೋಜನೆಯಾಗಿತ್ತು.

ರೈಟ್‌ನ ಕೊನೆಯ ವಿನ್ಯಾಸ ಮತ್ತು ಮೊದಲ ಐರೋಪ್ಯ ಯೋಜನೆ

1959ರಲ್ಲಿ ರೈಟ್‌ನ ಸಾವು ಸಂಭವಿಸುವುದಕ್ಕೆ ಕೆಲವೇ ದಿನ ಮುಂಚಿತವಾಗಿ ಅವನು ಸಂಪೂರ್ಣಗೊಳಿಸಿದ ಒಂದು ವಿನ್ಯಾಸವು, ಪ್ರಾಯಶಃ ಅವನ ಕೊನೆಯ ಸಂಪೂರ್ಣಗೊಂಡ ವಿನ್ಯಾಸವಾಗಿತ್ತು ಮತ್ತು ಇದು ಐರ್ಲೆಂಡ್‌ ಗಣರಾಜ್ಯದಲ್ಲಿ 2007ರ ಅಂತ್ಯದ ವೇಳೆಗೆ ಕೈಗೂಡಿತು.[೪೯] ರೈಟ್‌ ಶೈಲಿಯ ವಿದ್ವಾಂಸ ಮತ್ತು ಅದಕ್ಕೆ ಸಮರ್ಪಿಸಿಕೊಂಡಿದ್ದ ಮಾರ್ಕ್‌ ಕೋಲ್‌ಮನ್‌‌ ಎಂಬಾತ, ಫ್ರಾಂಕ್ ಲಾಯ್ಡ್‌‌ ರೈಟ್ ಫೌಂಡೇಷನ್‌‌ ಜೊತೆಯಲ್ಲಿ ನಿಕಟವಾಗಿ ಕೆಲಸ ಮಾಡಿದ ಹಾಗೂ ರೈಟ್ ಅಡಿಯಲ್ಲಿ ತರಬೇತು ಪಡೆದ ಪ್ರತಿಷ್ಠಾನದ ಉಳಿದಿರುವ ಕೊನೆಯ ವಾಸ್ತುಶಿಲ್ಪಿಯಾದ E. ಥಾಮಸ್‌‌ ಕೇಸಿಯೊಂದಿಗೆ ಅವನು ವ್ಯವಹರಿಸಿದ. ಸದರಿ ಪ್ರತಿಷ್ಠಾನದೊಂದಿಗೆ ಕೆಲಸಮಾಡುತ್ತಾ, ಒಂದು ನಿರ್ಮಾಣಗೊಳ್ಳದ ವಿನ್ಯಾಸವನ್ನು ಕೋಲ್‌ಮನ್‌‌ ಆಯ್ದಕೊಂಡ; ಇದು ಮೂಲತಃ ಶ್ರೀಮಾನ್‌ ಮತ್ತು ಶ್ರೀಮತಿ ಗಿಲ್ಬರ್ಟ್‌ ವೀಲ್ಯಾಂಡ್‌‌ ಎಂಬುವವರಿಗಾಗಿ ನಿಯೋಜಿಸಲ್ಪಟ್ಟಿದ್ದ ಯೋಜನೆಯಾಗಿದ್ದು, USAಯ ಮೆರಿಲ್ಯಾಂಡ್‌‌ನಲ್ಲಿ ಅದು ನಿರ್ಮಾಣಗೊಳ್ಳಬೇಕಿತ್ತು. ಆದರೆ ವೀಲ್ಯಾಂಡ್‌‌ ದಂಪತಿಗಳು ತರುವಾಯದಲ್ಲಿ ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದ್ದರಿಂದ, ಸದರಿ ವಿನ್ಯಾಸವನ್ನು ಕೈಬಿಡಲಾಯಿತು. ತನ್ನ ದಾಖಲೆ ಪತ್ರಾಗಾರದಲ್ಲಿ ಜಮಾವಣೆಗೊಂಡಿದ್ದ ನಿರ್ಮಾಣಗೊಳ್ಳದ 380 ವಿನ್ಯಾಸಗಳನ್ನು ಜಾಲಾಡಿದ ಪ್ರತಿಷ್ಠಾನವು ಅವುಗಳ ಪೈಕಿ 4ನ್ನು ಕೋಲ್‌ಮನ್‌‌ಗಾಗಿ ಆಯ್ದುಕೊಂಡಿತು; ಇವು ಅವನ ತಾಣಕ್ಕೆ ಅತ್ಯಂತ ನಿಕಟವಾಗಿ ಹೊಂದಾವಣೆಯಾಗುವಂತಿದ್ದವು. ಕೊನೆಗೆ, ಅವನು ವೀಲ್ಯಾಂಡ್‌‌ ಹೌಸ್‌‌ನ್ನು ಆಯ್ದುಕೊಂಡ; ಇದಕ್ಕೆ ಕಾರಣವೇನೆಂದರೆ, ಅವನ ತಾಣದ ಸ್ಥಳದ ಸ್ವರೂಪವು ಸದರಿ ಕಟ್ಟಡವು ಮೂಲತಃ ವಿನ್ಯಾಸಗೊಳಿಸಲ್ಪಟ್ಟಿದ್ದ ತಾಣಕ್ಕೆ ಕಾರ್ಯತಃ ತದ್ರೂಪವಾಗಿತ್ತು. ಕೇವಲ ನಾಲ್ಕನೇ ದೇಶದಲ್ಲಿನ, ರೈಟ್‌ನ ವಿನ್ಯಾಸವು ಕೈಗೂಡುವಂತಾದ ಸಂಪೂರ್ಣಗೊಂಡ ಮನೆಯು[೫೦], ಅಂತರರಾಷ್ಟ್ರೀಯ ವಾಸ್ತುಕಲಾ ಸಮುದಾಯಕ್ಕೆ ಸೇರಿದ ವಿಸ್ತೃತ ಹಿತಾಸಕ್ತಿಗಳನ್ನು ಆಕರ್ಷಿಸುತ್ತಿದೆ. ವಿಕ್ಲೋ ಜಿಲ್ಲೆಯಲ್ಲಿನ ತಾಣಕ್ಕೆ ಕೇಸಿಯು ಭೇಟಿನೀಡಿದನಾದರೂ, ನಿರ್ಮಾಣವು ಪ್ರಾರಂಭವಾಗುವುದಕ್ಕೆ ಮುಂಚೆಯೇ ಅವನು ಮರಣಹೊಂದಿದ.

ಸಮುದಾಯ ಯೋಜನೆ

ಫ್ರಾಂಕ್ ಲಾಯ್ಡ್‌‌ ರೈಟ್ ತನ್ನ ವೃತ್ತಿಜೀವನದುದ್ದಕ್ಕೂ ತಾಣದ ಮತ್ತು ಸಮುದಾಯ ಯೋಜನೆಯಲ್ಲಿ ಆಸಕ್ತಿಯನ್ನು ಹೊಂದಿದ್ದ. ನಗರ ಪ್ರದೇಶದ ವಿನ್ಯಾಸದ ಕುರಿತಾದ ಅವನ ನಿಯೋಜನೆಗಳು ಮತ್ತು ಸಿದ್ಧಾಂತಗಳು 1900ರಷ್ಟು ಮುಂಚೆಯೇ ಪ್ರಾರಂಭವಾದವು ಮತ್ತು ಅವನ ಸಾವಿನವರೆಗೂ ಮುಂದುವರಿವು. ಸಮುದಾಯ ಯೋಜನೆ ಅಥವಾ ನಗರ ಪ್ರದೇಶದ ವಿನ್ಯಾಸ ಪ್ರಮಾಣದ ಕುರಿತಾಗಿ ಅವನು 41 ಕಾರ್ಯ-ನಿಯೋಜನೆಗಳನ್ನು ಹೊಂದಿದ್ದ.[೫೧] ಉಪನಗರದ ವಿನ್ಯಾಸದ ಕುರಿತಾದ ಅವನ ಆಲೋಚನೆಗಳು 1900ರಲ್ಲಿ ಆರಂಭವಾದವು; "ಕ್ವಾಡ್ರುಪಲ್‌‌ ಬ್ಲಾಕ್‌ ಪ್ಲಾನ್‌‌" ಎಂಬ ಶೀರ್ಷಿಕೆಯನ್ನು ಹೊಂದಿದ್ದ, ಚಾರ್ಲ್ಸ್‌‌ E. ರಾಬರ್ಟ್ಸ್‌‌‌ಗೆ ಸಂಬಂಧಿಸಿದ್ದ ಒಂದು ಪ್ರಸ್ತಾವಿತ ಉಪವಿಭಾಗದ ಬಡಾವಣೆಯೊಂದಿಗೆ ಇದು ಶುರುವಾಯಿತೆನ್ನಬಹುದು. ಸಾಂಪ್ರದಾಯಿಕವಾದ ಉಪನಗರದ ಜಮೀನು ವಿನ್ಯಾಸದ ರಚನೆಗಳಿಂದ ಈ ವಿನ್ಯಾಸವು ಹೊರಳುದಾರಿಯನ್ನು ತುಳಿಯಿತು ಮತ್ತು ನಾಲ್ಕು ಸಮಾನ-ಗಾತ್ರದ ಜಾಗಗಳ ಸಣ್ಣ ಚೌಕದ ಅಚ್ಚುಗಳ ಮೇಲೆ ಮನೆಗಳನ್ನು ಸಜ್ಜುಗೊಳಿಸಿತು; ಸಮಾನಾಂತರ ಬೀದಿಗಳಲ್ಲಿನ ಮನೆಗಳ ನೇರವಾದ ಸಾಲುಗಳಿಗೆ ಬದಲಾಗಿ ಎಲ್ಲ ಕಡೆಗಳಿಂದಲೂ ರಸ್ತೆಗಳು ಅವನ್ನು ಸುತ್ತುವರೆದಿದ್ದವು. ಲೇಡೀಸ್‌' ಹೋಮ್‌ ಜರ್ನಲ್‌‌ ನಿಯತಕಾಲಿಕದ "ಎ ಹೋಮ್‌ ಇನ್‌ ಎ ಪ್ರೈರೀ ಟೌನ್‌" ಎಂಬ ಲೇಖನದಲ್ಲಿ ಪ್ರಕಟಗೊಂಡ ರೀತಿಯ ವಿನ್ಯಾಸವನ್ನೇ ಬಳಸಿಕೊಂಡಿದ್ದ ಈ ಮನೆಗಳು, ಪ್ರಾಂಗಣ ಸ್ಥಳಾವಕಾಶವನ್ನು ಗರಿಷ್ಟಗೊಳಿಸಲೆಂದು ಮೊಹಲ್ಲಾದ ಮಧ್ಯಭಾಗದೆಡೆಗೆ ಸಜ್ಜುಗೊಳಿಸಲ್ಪಟ್ಟಿದ್ದವು ಮತ್ತು ಮಧ್ಯಭಾಗದಲ್ಲಿ ಖಾಸಗಿ ಸ್ಥಳಾವಕಾಶವನ್ನು ಒಳಗೊಂಡಿದ್ದವು. ಪ್ರತಿ ಮನೆಯಿಂದಲೂ ಹೆಚ್ಚು ಆಸಕ್ತಿಕರ ನೋಟಗಳು ಲಭ್ಯವಾಗುವುದಕ್ಕೂ ಇವು ಅವಕಾಶನೀಡಿದವು. ಈ ಯೋಜನೆಯು ಎಂದಿಗೂ ಕೈಗೂಡಲಿಲ್ಲವಾದರೂ, 1910ರಲ್ಲಿ ವ್ಯಾಸ್ಮತ್‌‌ ಪೋರ್ಟ್‌ಫೋಲಿಯೋದಲ್ಲಿ ಈ ವಿನ್ಯಾಸವನ್ನು ರೈಟ್‌ ಪ್ರಕಟಿಸಿದ.[೫೨] 1913ರಲ್ಲಿನ ನಡೆದ ಸಿಟಿ ಕ್ಲಬ್‌ ಆಫ್‌ ಚಿಕಾಗೊದ ಜಮೀನು ಅಭಿವೃದ್ಧಿ ಸ್ಪರ್ಧೆಯಲ್ಲಿ ಅವನು ಮಾಡಿದ ಪ್ರವೇಶದಿಂದ, ಸಂಪೂರ್ಣ ಸಮುದಾಯಗಳ ಹೆಚ್ಚು ಮಹತ್ವಾಕಾಂಕ್ಷೆಯ ವಿನ್ಯಾಸಗಳು ನಿದರ್ಶನದ ಮೂಲಕ ನಿರೂಪಿಸಲ್ಪಟ್ಟವು. ಈ ಸ್ಪರ್ಧೆಯು ಉಪನಗರದ ಕೇರಿ ವಿಭಾಗವೊಂದರ ಅಭಿವೃದ್ಧಿಗೆ ಸಂಬಂಧಿಸಿದಂತಿತ್ತು. ಕ್ವಾಡ್ರುಪಲ್‌‌ ಬ್ಲಾಕ್‌ ಪ್ಲಾನ್‌‌ನ್ನು ಈ ವಿನ್ಯಾಸವು ವಿಸ್ತರಿಸಿತು ಮತ್ತು ಹಲವಾರು ಸಾಮಾಜಿಕ ಮಟ್ಟಗಳನ್ನು ಅದು ಒಳಗೊಂಡಿತು. ಅತ್ಯಂತ ಅಪೇಕ್ಷಣೀಯ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಮನೆಗಳ ಇರಿಸುವಿಕೆಯನ್ನಷ್ಟೇ ಅಲ್ಲದೇ, ಉದ್ಯಾನವನಗಳು ಮತ್ತು ಸಾಮಾನ್ಯ ಸ್ಥಳಾವಕಾಶಗಳಿಂದ ಕಾರ್ಮಿಕರ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳು ಪ್ರತ್ಯೇಕಿಸಲ್ಪಟ್ಟಿರುವುದನ್ನು ಈ ವಿನ್ಯಾಸವು ತೋರಿಸುತ್ತದೆ. ಸಣ್ಣ ನಗರವೊಂದರಲ್ಲಿರುವ ಶಾಲೆಗಳು, ವಸ್ತುಸಂಗ್ರಹಾಲಯಗಳು, ಮಾರುಕಟ್ಟೆಗಳು ಇತ್ಯಾದಿಯಾದ ಎಲ್ಲ ಸೌಕರ್ಯಗಳನ್ನೂ ಸಹ ವಿನ್ಯಾಸವು ಒಳಗೊಂಡಿತ್ತು.[೫೩] ವಿಕೇಂದ್ರೀಕರಣದ ಈ ದೃಷ್ಟಿಕೋನಕ್ಕೆ ಸೈದ್ಧಾಂತಿಕ ಬ್ರಾಡ್‌ಕೇರ್‌ ಸಿಟಿ ವಿನ್ಯಾಸವು ನಂತರದಲ್ಲಿ ಬಲವರ್ಧನೆಯನ್ನು ನೀಡಿತು. ವಿಕೇಂದ್ರೀಕರಣವು ಅವನ ಸಮುದಾಯ ಯೋಜನೆಯ ಹಿಂದಿದ್ದ ತತ್ತ್ವವಾಗಿತ್ತು. ಹೊಸ ಅಭಿವೃದ್ಧಿಯು ನಗರಗಳಿಂದ ದೂರವಿರಬೇಕಿದ್ದುದು ಅಗತ್ಯವಾಗಿತ್ತು. ಈ ವಿಕೇಂದ್ರೀಕರಿಸಲ್ಪಟ್ಟ ಅಮೆರಿಕಾದಲ್ಲಿ, ಎಲ್ಲಾ ಸೇವೆಗಳು ಮತ್ತು ಸೌಕರ್ಯಗಳು ಜೊತೆಜೊತೆಯಾಗಿರಲು ಸಾಧ್ಯವಿದೆ, "ತೋಟ ಮತ್ತು ಮನೆಗೆ ಪಕ್ಕಪಕ್ಕದಲ್ಲಿ ಕಾರ್ಖಾನೆಗಳಿರಲು ಸಾಧ್ಯವಿದೆ.”[೫೪] ಸಮುದಾಯ ಯೋಜನೆಯ ಗಮನಾರ್ಹ ವಿನ್ಯಾಸಗಳಲ್ಲಿ ಇವು ಸೇರಿವೆ:

1900–1903 – ಕ್ವಾಡ್ರುಪಲ್‌‌ ಬ್ಲಾಕ್‌ ಪ್ಲಾನ್‌‌ – ILನ ಓಕ್‌ ಪಾರ್ಕ್‌ನಲ್ಲಿರುವ 24 ಮನೆಗಳು (ನಿರ್ಮಾಣಗೊಳ್ಳಲಿಲ್ಲ)
1909 – ಕೋಮೋ ಆರ್ಚರ್ಡ್‌ ಸಮ್ಮರ್‌ ಕಾಲೊನಿ – MTಯ ಬಿಟ್ಟರ್‌‌ರೂಟ್‌ ವ್ಯಾಲಿಯಲ್ಲಿನ ಹೊಸ ಪಟ್ಟಣಕ್ಕೆ ಸಂಬಂಧಿಸಿರುವ ಪಟ್ಟಣ ತಾಣದ ಅಭಿವೃದ್ಧಿ
1913 – ಚಿಕಾಗೊ ಜಮೀನು ಅಭಿವೃದ್ಧಿ ಸ್ಪರ್ಧೆ – ಉಪನಗರದ ಚಿಕಾಗೊ ಕೇರಿ ವಿಭಾಗ
1934–1959 – ಬ್ರಾಡ್‌ಕೇರ್‌ ಸಿಟಿ – ಸೈದ್ಧಾಂತಿಕವಾದ ವಿಕೇಂದ್ರೀಕರಿಸಲ್ಪಟ್ಟ ನಗರ ನಕಾಶೆ – ದೊಡ್ಡ ಪ್ರಮಾಣ ಮಾದರಿಯ ಪ್ರದರ್ಶನಗಳು
1938 – ಸನ್‌ಟಾಪ್‌ ಹೋಮ್ಸ್‌‌; ಇದಕ್ಕೆ ಕ್ಲೋವ್‌ಲೀಫ್‌ ಕ್ವಾಡ್ರಪಲ್‌ ಹೌಸಿಂಗ್‌ ಪ್ರಾಜೆಕ್ಟ್‌ ಎಂದೂ ಹೆಸರಿತ್ತು– ಡಿಫೆನ್ಸ್‌ ಹೌಸಿಂಗ್‌ ವಿಭಾಗವಾದ ಫೆಡರಲ್‌ ವರ್ಕ್ಸ್‌ ಏಜೆನ್ಸಿಯಿಂದ ಆದ ಕಾರ್ಯ-ನಿಯೋಜನೆ – ಉಪನಗರದ ಅಭಿವೃದ್ಧಿಗೆ ಸಂಬಂಧಿಸಿದ, ಕಡಿಮೆ ವೆಚ್ಚದ ಬಹುಕುಟುಂಬ ಗೃಹನಿರ್ಮಾಣದ ಪರ್ಯಾಯ ವ್ಯವಸ್ಥೆ
1945 – ಉಸೋನಿಯಾ ಹೋಮ್ಸ್‌‌ – ನ್ಯೂಯಾರ್ಕ್‌‌ನ ಪ್ಲೆಸೆಂಟ್‌ವಿಲ್ಲೆಯಲ್ಲಿರುವ 47 ಮನೆಗಳು (ಇವುಗಳ ಪೈಕಿ 3ನ್ನು ಸ್ವತಃ ರೈಟ್‌ ವಿನ್ಯಾಸಗೊಳಿಸಿದ)
1949 – ಗೇಲ್ಸ್‌‌ಬರ್ಗ್‌ ಕಂಟ್ರಿ ಹೋಮ್ಸ್ ಎಂದೂ ಹೆಸರಾಗಿದ್ದ ದಿ ಏಕರ್ಸ್‌‌ - ಮಿಚಿಗನ್‌‌ನ ಚಾರ್ಲ್ಸ್‌‌ಟನ್‌‌ ಉಪಜಿಲ್ಲೆಯಲ್ಲಿರುವ 5 ಮನೆಗಳು (ಇವುಗಳ ಪೈಕಿ 4ನ್ನು ಸ್ವತಃ ರೈಟ್‌ ವಿನ್ಯಾಸಗೊಳಿಸಿದ)

ಜಪಾನೀ ಕಲೆ

ಓರ್ವ ವಾಸ್ತುಶಿಲ್ಪಿಯಾಗಿ ರೈಟ್‌ ಅತ್ಯಂತ ಪ್ರಸಿದ್ಧನಾಗಿದ್ದರೂ, ಜಪಾನೀ ಕಲಾಕೃತಿಯ, ಅದರಲ್ಲೂ ಪ್ರಧಾನವಾಗಿ ಉಕಿಯೋ-ಇ ಮರದ ಪಡಿಯಚ್ಚಿನ ಮುದ್ರಿತ ಚಿತ್ರಗಳ ಓರ್ವ ಸಕ್ರಿಯ ವ್ಯಾಪಾರಿಯಾಗಿದ್ದ. ಅದೇ ಗ್ರಾಹಕರಿಗೆ ಆತ ವಾಸ್ತುಶಿಲ್ಪಿಯಾಗಿಯೂ ಮತ್ತು ಕಲಾ ವ್ಯಾಪಾರಿಯಾಗಿಯೂ ಆಗಿಂದಾಗ್ಗೆ ಸೇವೆ ಸಲ್ಲಿಸಿದ; "ಮನೆಯೊಂದನ್ನು ವಿನ್ಯಾಸಗೊಳಿಸುತ್ತಿದ್ದ ಆತ, ನಂತರ ಅದನ್ನು ಅಲಂಕರಿಸಲೆಂದು ಕಲಾಕೃತಿಯನ್ನು ಒದಗಿಸುತ್ತಿದ್ದ".[೫೫] ಕೆಲವೊಮ್ಮೆಯಂತೂ, ಓರ್ವ ವಾಸ್ತುಶಿಲ್ಪಿಯಾಗಿ ಸಂಪಾದಿಸಿದ್ದಕ್ಕಿಂತ ರೈಟ್‌ ಕಲಾಕೃತಿಗಳನ್ನು ಮಾರಾಟಮಾಡಿ ಹೆಚ್ಚು ಗಳಿಸುತ್ತಿದ್ದ. 1905ರಲ್ಲಿ ಮೊದಲ ಬಾರಿಗೆ ಜಪಾನ್‌‌ಗೆ ಪ್ರಯಾಣ ಮಾಡಿದ ರೈಟ್‌, ಅಲ್ಲಿ ನೂರಾರು ಮುದ್ರಿತ ಚಿತ್ರಗಳನ್ನು ಖರೀದಿಸಿದ. ಅದರ ಮುಂದಿನ ವರ್ಷದಲ್ಲಿ, ಹಿರೋಷಿಗೆಯಿಂದ ರಚಿಸಲ್ಪಟ್ಟ ಕೃತಿಗಳ, ಪ್ರಪಂಚದ ಮೊದಲ ಸಿಂಹಾವಲೋಕನದ ರೂಪದ ಪ್ರದರ್ಶನವನ್ನು ಸಂಘಟಿಸುವಲ್ಲಿ ಅವನು ನೆರವಾದ; ಇದು ಆರ್ಟ್‌ ಇನ್‌‌ಸ್ಟಿಟ್ಯೂಟ್‌ ಆಫ್‌ ಚಿಕಾಗೊದಲ್ಲಿ ಆಯೋಜಿಸಲ್ಪಟ್ಟಿತ್ತು.[೫೫] ಅನೇಕ ವರ್ಷಗಳವರೆಗೆ, ಜಪಾನೀ ಕಲಾಪ್ರಪಂಚದಲ್ಲಿ ಅವನದೊಂದು ಪ್ರಮುಖ ಹಾಜರಿಯಾಗಿದ್ದು, ಬಾಸ್ಟನ್‌‌ನ[೫೫] ಜಾನ್‌‌ ಸ್ಪೌಲ್ಡಿಂಗ್‌‌‌‌‌ನಂಥ ಪ್ರಸಿದ್ಧ ಸಂಗ್ರಾಹಕರಿಗೆ, ಮತ್ತು ನ್ಯೂಯಾರ್ಕ್‌ನಲ್ಲಿನ ಮೆಟ್ರೋಪಾಲಿಟನ್‌ ಮ್ಯೂಸಿಯಂ ಆಫ್‌ ಆರ್ಟ್‌‌‌‌ನಂಥ ಪ್ರಸಿದ್ಧ ವಸ್ತುಸಂಗ್ರಹಾಲಯಗಳಿಗೆ ಮಹತ್ತರವಾದ ಸಂಖ್ಯೆಯಲ್ಲಿ ಕಲಾಕೃತಿಗಳನ್ನು ಮಾರಾಟಮಾಡುವಲ್ಲಿ ಅವನು ತನ್ನನ್ನು ತೊಡಗಿಸಿಕೊಂಡಿದ್ದ.[೫೬] ಜಪಾನೀ ಕಲೆಯ ಕುರಿತಾಗಿ 1912ರಲ್ಲಿ ಅವನು ಪುಸ್ತಕವೊಂದನ್ನು ಬರೆದ.[೫೬] ಆದಾಗ್ಯೂ, ತಿದ್ದಿ ಮಾರ್ಪಡಿಸಿದ ಮುದ್ರಿತ ಚಿತ್ರಗಳನ್ನು ರೈಟ್‌ ಮಾರಾಟಮಾಡುತ್ತಿದ್ದಾನೆ ಎಂಬುದಾಗಿ ಪ್ರತಿಸ್ಪರ್ಧಿ ಕಲಾ ವ್ಯಾಪಾರಿಗಳು 1920ರಲ್ಲಿ ಗಾಳಿಸುದ್ದಿಗಳನ್ನು ಹಬ್ಬಿಸಲು ಶುರುಮಾಡಿದರು; ತನಗೆ ಬರುತ್ತಿದ್ದ ಆದಾಯಕ್ಕಿಂತ ಹೆಚ್ಚು ಖರ್ಚುಮಾಡುವ ರೈಟ್‌ನ ಪ್ರವೃತ್ತಿ, ಮತ್ತು ಇತರ ಅಂಶಗಳೊಂದಿಗೆ ಈ ಗಾಳಿಸುದ್ದಿಯೂ ಸೇರಿಕೊಂಡಿದ್ದರಿಂದಾಗಿ, ಅವನು ಮಹತ್ತರವಾದ ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗಿ ಬಂತು. ತಿದ್ದಿ ಮಾರ್ಪಡಿಸಲಾಗಿದೆ ಎಂಬುದಾಗಿ ಯಾರ ಕುರಿತಾಗಿ ತಾನು ಆರೋಪಿಸಲ್ಪಟ್ಟಿದ್ದನೋ ಅಂಥ ಗ್ರಾಹಕರಿಗೆ ಅಪ್ಪಟ ಮುದ್ರಿತ ಚಿತ್ರಗಳನ್ನು ಬದಲಿ ವ್ಯವಸ್ಥೆಗಳಾಗಿ ಅವನು ಒದಗಿಸಿದನಾದರೂ, ಓರ್ವ ಕಲಾಕೃತಿ ವ್ಯಾಪಾರಿಯಾಗಿ ಅವನ ವೃತ್ತಿಜೀವನವು ಕೊನೆಗೊಳ್ಳುವಲ್ಲಿ ಇದು ಮಹತ್ತರ ಪಾತ್ರವನ್ನು ವಹಿಸಿತು.[೫೬] ಬಾಕಿಯಿರುವ ಋಣಭಾರಗಳನ್ನು ಚುಕ್ತಾ ಮಾಡುವುದಕ್ಕಾಗಿ, 1927ರಲ್ಲಿ ಅವನು ಬಲವಂತವಾಗಿ ತನ್ನ ಕಲಾಕೃತಿಯ ಸಂಗ್ರಹದ ಬಹುಭಾಗವನ್ನು ಬೆಲೆಯಿಳಿಸಿ ಮಾರಾಟ ಮಾಡಬೇಕಾಗಿಬಂತು; ಅದರ ಮುಂದಿನ ವರ್ಷದಲ್ಲಿ ಬ್ಯಾಂಕ್‌ ಆಫ್‌ ವಿಸ್ಕಾನ್ಸಿನ್‌‌ ಅವನ ಟ್ಯಾಲೀಸಿನ್‌‌ ಮನೆಯ ಮೇಲೆ ತನ್ನ ಹಕ್ಕನ್ನು ಸಾಧಿಸಿತು, ಮತ್ತು ಪ್ರತಿ ಕೃತಿಗೆ ಕೇವಲ ಒಂದು ಡಾಲರ್‌‌ನಷ್ಟು ಬೆಲೆಯನ್ನಿಟ್ಟು ಅವನ ಸಂಗ್ರಹದಲ್ಲಿದ್ದ ಸಾವಿರಾರು ಮುದ್ರಿತ ಚಿತ್ರಗಳನ್ನು ಎಡ್ವರ್ಡ್‌ ಬರ್‌‌ ವಾನ್‌ ವ್ಲೆಕ್‌‌ ಎಂಬ ಸಂಗ್ರಾಹಕನಿಗೆ ಮಾರಾಟಮಾಡಿತು.[೫೫] 1959ರಲ್ಲಿ ಅವನ ಸಾವು ಸಂಭವಿಸುವವರೆಗೂ ಮುದ್ರಿತ ಚಿತ್ರಗಳನ್ನು ಸಂಗ್ರಹಿಸುವ ಮತ್ತು ವ್ಯಾಪಾರ ಮಾಡುವ ಪರಿಪಾಠವನ್ನು ರೈಟ್‌ ಮುಂದುವರಿಸಿದ; ಮುದ್ರಿತ ಚಿತ್ರಗಳನ್ನು ಸಾಲಗಳಿಗೆ ಮೇಲಾಧಾರವಾಗಿ ಆಗಿಂದಾಗ್ಗೆ ಬಳಸುವ, ಮತ್ತು ಆರ್ಥಿಕವಾಗಿ ಸಾಲಪಾವತಿ ಮುಕ್ತನಾಗಿ[೫೬] ಉಳಿದುಕೊಳ್ಳಲು ತನ್ನ ಕಲಾ ವ್ಯವಹಾರವನ್ನು ಆಗಿಂದಾಗ್ಗೆ ನೆಚ್ಚಿಕೊಳ್ಳುವ ಪ್ರವೃತ್ತಿ ಅಲ್ಲಿ ಕಂಡುಬಂದಿತ್ತು. ಜಪಾನೀ ಕಲಾಕೃತಿಯಲ್ಲಿ ಅವನ ವ್ಯವಹಾರಗಳ ವ್ಯಾಪ್ತಿಯು, ದಶಕಗಳವರೆಗೆ ಕಲಾ ಇತಿಹಾಸಕಾರರ ಸಮುದಾಯದಲ್ಲಿ ಬಹುತೇಕವಾಗಿ ಅಜ್ಞಾತವಾಗಿತ್ತು, ಅಥವಾ ಕೀಳಂದಾಜಿಸುವಿಕೆಗೆ ಒಳಗಾಗಿತ್ತು; ಆದರೆ 1980ರಲ್ಲಿ, ಮೆಟ್ರೋಪಾಲಿಟನ್‌ ಮ್ಯೂಸಿಯಂನಲ್ಲಿ ಜಪಾನೀ ಕಲಾಕೃತಿಯ ಸಹವರ್ತಿ ಮೇಲ್ವಿಚಾರಕಿಯಾಗಿದ್ದ ಜೂಲಿಯಾ ಮೀಚ್‌ ಎಂಬಾಕೆಯು, ವಸ್ತುಸಂಗ್ರಹಾಲಯದ ಜಪಾನೀ ಮುದ್ರಿತ ಚಿತ್ರಗಳ ಸಂಗ್ರಹದ ಇತಿಹಾಸವನ್ನು ಸಂಶೋಧಿಸಲು ಶುರುಮಾಡಿದಳು. ಈ ಸಂದರ್ಭದಲ್ಲಿ, 1918ರ ವರ್ಷಕ್ಕೆ ಸೇರಿದ "ಮೂರು-ಇಂಚು-ಆಳದ, '400 ಕಾರ್ಡುಗಳ ರಾಶಿ'ಯೊಂದನ್ನು ಅವಳು ಪತ್ತೆಹಚ್ಚಿದಳು; ಪ್ರತಿ ಕಾರ್ಡಿನಲ್ಲೂ 'F. L. ರೈಟ್‌' ಎಂಬ ಅದೇ ಮಾರಾಟಗಾರನಿಂದ ಖರೀದಿಸಲ್ಪಟ್ಟ ಒಂದು ಮುದ್ರಿತ ಚಿತ್ರದ ನಮೂದು" ಇತ್ತು. ಅಷ್ಟೇ ಅಲ್ಲ, 1918ರಿಂದ 1922ರವರೆಗಿನ ಅವಧಿಯಲ್ಲಿ ವಸ್ತುಸಂಗ್ರಹಾಲಯದ ದೂರ ಪ್ರಾಚ್ಯದ ಕಲಾವಿಭಾಗದ ಮೊದಲ ಮೇಲ್ವಿಚಾರಕನಾಗಿದ್ದ ಸಿಗಿಸ್ಬರ್ಟ್‌ C. ಬಾಷ್‌ ರೀಟ್ಜ್‌‌ ಹಾಗೂ ರೈಟ್‌ ನಡುವಣ ಹಲವಾರು ಪತ್ರಗಳು ವಿನಿಮಯವಾಗಿರುವುದೂ ಸಹ ಈ ಸಂದರ್ಭದಲ್ಲಿ ಬೆಳಕಿಗೆ ಬಂತು.[೫೬] ಈ ಆವಿಷ್ಕಾರಗಳು, ಮತ್ತು ತರುವಾಯದ ಸಂಶೋಧನೆಯಿಂದಾಗಿ, ಓರ್ವ ಕಲಾಕೃತಿಯ ವ್ಯಾಪಾರಿಯಾಗಿ ರೈಟ್‌ನ ವೃತ್ತಿಜೀವನದ ಒಂದು ನವೀಕೃತ ಗ್ರಹಿಕೆಯು ಹೊರಹೊಮ್ಮಲು ಸಾಧ್ಯವಾಯಿತು.

ಸಾವು ಮತ್ತು ಪರಂಪರೆಯ ಆಸ್ತಿ

]]

ನ್ಯೂಯಾರ್ಕ್‌ ವರ್ಲ್ಡ್‌-ಟೆಲಿಗ್ರಾಂ ಮತ್ತು ಸನ್‌‌ ಪತ್ರಿಕೆಯ ಸಿಬ್ಬಂದಿ ಛಾಯಾಗ್ರಾಹಕ ಅಲ್‌ ರ್ಯಾವೆನ್ನಾನಿಂದ 1954ರಲ್ಲಿ ತೆಗೆಯಲ್ಪಟ್ಟ ಭಾವಚಿತ್ರ.
ಚಿಕಾಗೊದ (1906) ರೋಬೀ ಹೌಸ್‌ನಲ್ಲಿರುವ ರೈಟ್‌-ವಿನ್ಯಾಸಗೊಳಿಸಿದ ಕಿಟಕಿ.

ಕರುಳಿನಲ್ಲಿನ ಅಡಚಣೆಯೊಂದನ್ನು ತೆಗೆಸಿಕೊಳ್ಳಲೆಂದು, 1959ರ ಏಪ್ರಿಲ್‌‌ 9ರಂದು ಅರಿಝೋನಾದ ಫೀನಿಕ್ಸ್‌‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವಾಗ ಸಂಭವಿಸಿದ ಅವನ ಸಾವಿನ ಅನೇಕ ವರ್ಷಗಳ ನಂತರವೂ, ಸಂಕ್ಷೋಭೆಯು ರೈಟ್‌ನನ್ನು ಬೆನ್ನತ್ತಿಕೊಂಡೇ ಬಂದಿತು.[೫೭] ಅವನ ಮೂರನೇ ಹೆಂಡತಿಯಾದ ಓಲ್ಜಿವಾನ್ನಾ, ರೈಟ್‌ನ ಸಾವಿನ ನಂತರ ಸಹಭಾಗಿತ್ವವನ್ನು ನಡೆಸಿಕೊಂಡು ಹೋದಳಾದರೂ, 1985ರಲ್ಲಿ ಅರಿಝೋನಾದ ಸ್ಕಾಟ್ಸ್‌‌ಡೇಲ್‌‌ನಲ್ಲಿ ಮೃತಪಟ್ಟಳು. ಆ ವರ್ಷ ಹೊರಬಿದ್ದ ಮಾಹಿತಿಯ ಅನುಸಾರ, ರೈಟ್‌, ಅವಳು ಮತ್ತು ಅವಳ ಮೊದಲ ಮದುವೆಯಿಂದ ಜನಿಸಿದ ಅವಳ ಮಗಳು ಎಲ್ಲರ ಶವವನ್ನೂ ದಹನಮಾಡಬೇಕು ಹಾಗೂ ಅರಿಝೋನಾದ ಸ್ಕಾಟ್ಸ್‌‌ಡೇಲ್‌‌‌ಗೆ ಜಾಗ ಬದಲಾಯಿಸಬೇಕು ಎಂಬುದು ಅವಳ ಅಂತಿಮ ಬಯಕೆಯಾಗಿತ್ತು ಎಂದು ತಿಳಿದುಬಂತು. ಅಷ್ಟುಹೊತ್ತಿಗಾಗಲೇ, ರೈಟ್‌ನ ದೇಹವನ್ನು ಲಾಯ್ಡ್‌‌-ಜೋನ್ಸ್‌ ಸ್ಮಶಾನದಲ್ಲಿ 25 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯವರೆಗೆ ಇರಿಸಲಾಗಿತ್ತು; ಇದು ವಿಸ್ಕಾನ್ಸಿನ್‌‌ನ ಸ್ಪ್ರಿಂಗ್‌ ಗ್ರೀನ್‌‌‌ನಲ್ಲಿನ ರೈಟ್‌ನ ನಂತರದ-ಜೀವನದ ಮನೆಯಾದ ಟ್ಯಾಲೀಸಿನ್‌‌ಗೆ ಸಮೀಪದಲ್ಲಿರುವ ಯೂನಿಟಿ ಚಾಪೆಲ್‌‌ಗೆ ಪಕ್ಕದಲ್ಲಿ ಇದ್ದ ಸ್ಮಶಾನವಾಗಿತ್ತು.[೫೮] ಓಲ್ಜಿವಾನ್ನಾಳ ಯೋಜನೆಯು ಒಂದು ಸ್ಮರಣಾರ್ಥ ತೋಟಕ್ಕಾಗಿ ಕರೆನೀಡಿತು; ಅಷ್ಟುಹೊತ್ತಿಗಾಗಲೇ ಪ್ರಗತಿಯಲ್ಲಿದ್ದ ಇದರ ಕೆಲಸವು ಅವರ ಅವಶೇಷಗಳನ್ನು ಇರಿಸಿಕೊಳ್ಳಲು ಸಂಪೂರ್ಣಗೊಂಡು ಸಿದ್ಧಗೊಳ್ಳಬೇಕಾಗಿ ಬಂತು. ಸದರಿ ತೋಟದ ಕಾರ್ಯವು ಸಮಾಪ್ತಿಗೊಳ್ಳುವುದು ಬಾಕಿಯಿದ್ದರೂ ಸಹ, ಅವನ ಅವಶೇಷಗಳನ್ನು ಸಿದ್ಧಪಡಿಸಿ ಸ್ಕಾಟ್ಸ್‌‌ಡೇಲ್‌ಗೆ ಅವನ್ನು ಕಳಿಸಲಾಯಿತು. ಸ್ಮರಣಾರ್ಥ ಪ್ರದೇಶದಲ್ಲಿ ಅವು ದಫನುಮಾಡುವಿಕೆಗೆ ಒಳಗಾಗುವುದಕ್ಕೆ ಮುಂಚಿತವಾಗಿ, ಅಲ್ಲಿನ ಉಗ್ರಾಣದಲ್ಲಿ ಬಹಳ ಕಾಲದವರೆಗೆ ಇರಿಸಲ್ಪಟ್ಟವು. ಇಂದು, ವಿಸ್ಕಾನ್ಸಿನ್‌‌ನಲ್ಲಿನ ಸ್ಪ್ರಿಂಗ್‌ ಗ್ರೀನ್‌ನ ದಕ್ಷಿಣಭಾಗಕ್ಕಿರುವ ಮತ್ತು ಟ್ಯಾಲೀಸಿನ್‌‌ನಿಂದ ಒಂದು ಕಲ್ಲೆಸೆಯುವಷ್ಟು ದೂರದಲ್ಲಿರುವ ಈ ಸಣ್ಣ ಸ್ಮಶಾನವು, ರೈಟ್‌ನ ಹೆಸರಿನೊಂದಿಗೆ ಗುರುತುಮಾಡಲಾಗಿರುವ ಒಂದು ಗೋರಿಕಲ್ಲನ್ನು ಒಳಗೊಂಡಿದೆಯಾದರೂ, ಅದರ ಗೋರಿಯು ಖಾಲಿಯಾಗಿದೆ.[೫೯]

ವೈಯಕ್ತಿಕ ಶೈಲಿ ಮತ್ತು ಪರಿಕಲ್ಪನೆಗಳು

ಅತ್ಯಂತ ಸಣ್ಣದಾಗಿರುವ ವಿವರಗಳವರೆಗೂ ಗಮನಹರಿಸಿದ ಸುಸಂಘಟಿತ ವಾಸ್ತುಶೈಲಿಯೊಂದಿಗಿನ ರೈಟ್‌ನ ಕಾಳಜಿಯನ್ನು ಅವನ ಸೃಷ್ಟಿಗಳು ಹೊರಗೆಡವಿದವು. ತನ್ನ ಅತ್ಯಂತ ದೊಡ್ಡ ಗಾತ್ರದ ವಾಣಿಜ್ಯ ನಿಯೋಜನೆಗಳಿಂದ ಮೊದಲ್ಗೊಂಡು ತುಲನಾತ್ಮಕವಾಗಿ ನಿರಾಡಂಬರವಾದ ಉಸೋನಿಯಾ ಶೈಲಿಯ ಮನೆಗಳವರೆಗೆ, ಪ್ರತಿಯೊಂದು ವಿವರವನ್ನೂ ರೈಟ್‌ ಕಾರ್ಯತಃ ಕಲ್ಪಿಸಿಕೊಂಡ; ಅಂದರೆ, ಬಾಹ್ಯ ವಿನ್ಯಾಸ ಮಾತ್ರವೇ ಅಲ್ಲದೇ, ರತ್ನಗಂಬಳಿಗಳು, ಕಿಟಕಿಗಳು, ಬಾಗಿಲುಗಳು, ಮೇಜುಗಳು ಮತ್ತು ಕುರ್ಚಿಗಳು, ದೀಪದ ಅಳವಡಿಕೆಗಳು ಮತ್ತು ಅಲಂಕಾರಿಕ ಅಂಶಗಳಂಥ ಆಂತರಿಕ ಅಳವಡಿಕೆಗಳ ಕಡೆಗೂ ಅವನು ಗಮನಹರಿಸಿದ. ಗ್ರಾಹಕರ ಬಯಕೆಯ ಅನುಸಾರ-ನಿರ್ಮಿತವಾದ, ಉದ್ದೇಶದ ಅನುಸಾರ-ನಿರ್ಮಿತವಾದ ಪೀಠೋಪಕರಣಗಳು ಮತ್ತು ಅಳವಡಿಕೆಗಳನ್ನು ವಿನ್ಯಾಸಗೊಳಿಸಿ ಪೂರೈಕೆ ಮಾಡುವಲ್ಲಿನ ಮೊದಲ ವಾಸ್ತುಶಿಲ್ಪಿಗಳ ಪೈಕಿ ಅವನು ಒಬ್ಬನಾಗಿದ್ದ. ಈ ಪೀಠೋಪಕರಣಗಳು ಮತ್ತು ಅಳವಡಿಕೆಗಳು ಸಮಗ್ರ ವಿನ್ಯಾಸದ ಸಂಯೋಜಿತ ಭಾಗಗಳಾಗಿ ಕಾರ್ಯನಿರ್ವಹಿಸಿದವು. ಅಷ್ಟೇ ಅಲ್ಲ, ಆಂತರಿಕ ಅಳವಡಿಕೆಗಳನ್ನು ಮರುವಿನ್ಯಾಸಗೊಳಿಸುವ ದೃಷ್ಟಿಯಿಂದ, ಆತ ಅನೇಕಬಾರಿ ಹಿಂದೆ ಕೈಗೊಂಡಿದ್ದ ಕಾರ್ಯ-ನಿಯೋಜನೆಗಳ ಮೇಲ್ಪಂಕ್ತಿಯನ್ನು ಅನುಸರಿಸುತ್ತಿದ್ದ. ಕೆಲವೊಂದು ಒಳ-ನಿರ್ಮಿತ ಪೀಠೋಪಕರಣಗಳು ಉಳಿದುಕೊಂಡಿದ್ದರೆ, ಅವನ ನಕಾಶೆಗಳನ್ನು ಬಳಸಿಕೊಂಡು ಸೃಷ್ಟಿಸಲ್ಪಟ್ಟ ಬದಲಿ ವ್ಯವಸ್ಥೆಯ ತುಣುಕುಗಳನ್ನು ಇತರ ಪರಿಷ್ಕರಣಗಳು ಒಳಗೊಂಡಿದ್ದವು. ಅವನ ಪ್ರೈರೀ ಶೈಲಿಯ ಮನೆಗಳು ವಿಷಯಾಧಾರಿತ, ಸುಸಂಘಟಿತವಾದ ವಿನ್ಯಾಸದ ಅಂಶಗಳನ್ನು (ಅನೇಕ ವೇಳೆ ಇದು ಸಸ್ಯದ ಸ್ವರೂಪಗಳನ್ನು ಆಧರಿಸಿತ್ತು) ಬಳಸಿಕೊಂಡಿದ್ದು, ಅವು ಕಿಟಕಿಗಳು, ರತ್ನಗಂಬಳಿಗಳು ಮತ್ತು ಇತರ ಅಳವಡಿಕೆಗಳಲ್ಲಿ ಪುನರಾವರ್ತನೆಯಾಗಿವೆ. ಹೊಸ ಕಟ್ಟಡ ಸಾಮಗ್ರಿಗಳ ಪರಿವರ್ತನಾಶೀಲ ಬಳಕೆಯನ್ನು ಅವನು ಮಾಡಿದ; ಅಂದರೆ ಪೂರ್ವಭಾವಿಯಾಗಿ ರೂಪಿಸಿದ ಕಾಂಕ್ರೀಟು ಅಚ್ಚುಗಳು, ಗಾಜಿನ ಇಟ್ಟಿಗೆಗಳು ಮತ್ತು ಅವನ ಸೀಸದೀಪದ ಕಿಟಕಿಗಳಿಗಾಗಿ ಸತುವಿನ ಗಾಡಿಸೀಸದ ಮೃದುದಂಡಗಳನ್ನು (ಸಾಂಪ್ರದಾಯಿಕ ಸೀಸದ ಬದಲಿಗೆ) ಅವನು ಬಳಸಿದ. ಅಷ್ಟೇ ಅಲ್ಲ, ಜಾನ್ಸನ್‌‌ ವ್ಯಾಕ್ಸ್‌ ಹೆಡ್‌ಕ್ವಾರ್ಟರ್ಸ್‌‌‌ನಲ್ಲಿನ ಒಂದು ಪ್ರಮುಖ ಘಟಕವಾಗಿ ಅವನು ಪೈರೆಕ್ಸ್‌‌ ಗಾಜು ಕೊಳವೆವ್ಯವಸ್ಥೆಯನ್ನು ಬಳಸಿದ್ದು ಅವನಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಗ್ರಾಹಕರ ಬಯಕೆಯ ಅನುಸಾರ-ನಿರ್ಮಿತವಾದ ವಿದ್ಯುತ್‌‌ ದೀಪದ ಅಳವಡಿಕೆಗಳನ್ನು ವಿನ್ಯಾಸಗೊಳಿಸಿ ಅಳವಡಿಸುವಲ್ಲಿನ ಮೊದಲ ವಾಸ್ತುಶಿಲ್ಪಿಗಳ ಪೈಕಿಯೂ ರೈಟ್‌ ಒಬ್ಬನಾಗಿದ್ದ. ಮೊಟ್ಟಮೊದಲ ಬಾರಿಗೆ ಬಳಸಲಾದ ಕೆಲವೊಂದು ವಿದ್ಯುತ್‌‌ ಮಹಡಿ-ದೀಪಗಳು, ಮತ್ತು ಆಗ ವಿನೂತನವೆನಿಸಿದ್ದ ಗೋಳಾಕಾರದ ಗಾಜಿನ ದೀಪದ ಮುಸುಕನ್ನು (ಅನಿಲ ದೀಪದ ವ್ಯವಸ್ಥೆಯ ಭೌತಿಕ ಕಟ್ಟುಪಾಡುಗಳ ಕಾರಣದಿಂದಾಗಿ ಈ ವಿನ್ಯಾಸವು ಹಿಂದೆ ಅಸಾಧ್ಯವಾಗಿತ್ತು) ಅವನು ಬಳಸಿದ್ದು ಇದಕ್ಕೆ ನಿದರ್ಶನಗಳಾಗಿವೆ. ರೈಟ್‌ನ ವೃತ್ತಿಜೀವನವು ಪ್ರಗತಿಹೊಂದಿದಂತೆ, ಗಾಜಿನ ಉದ್ಯಮದ ಯಂತ್ರೀಕರಣವೂ ಅಭಿವೃದ್ಧಿಯಾಯಿತು. ತನ್ನ ವಿನ್ಯಾಸಗಳಲ್ಲಿ ಗಾಜನ್ನು ಸಂಪೂರ್ಣವಾಗಿ ತೆಕ್ಕೆಗೆ ತೆಗೆದುಕೊಂಡ ರೈಟ್‌, ಇದು ತನ್ನ ಸುಸಂಘಟಿತ ವಾಸ್ತುಶೈಲಿಯ ತತ್ತ್ವಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ಕಂಡುಕೊಂಡ. ಧಾತುಗಳಿಂದ ರಕ್ಷಿಸುವುದರ ಜೊತೆಜೊತೆಗೇ, ಪರಸ್ಪರ ವರ್ತನೆಗೆ ಮತ್ತು ಹೊರಾಂಗಣಗಳನ್ನು ವೀಕ್ಷಿಸುವುದಕ್ಕೆ ಸಂಬಂಧಿಸಿದಂತೆ ಗಾಜು ಅವಕಾಶನೀಡಿತು. 1928ರಲ್ಲಿ, ಗಾಜಿನ ಕುರಿತಾಗಿ ಪ್ರಬಂಧವೊಂದನ್ನು ಬರೆದ ರೈಟ್‌, ಅದರಲ್ಲಿ ಗಾಜನ್ನು ಪ್ರಕೃತಿಯ ಕನ್ನಡಿಗಳಿಗೆ ಹೋಲಿಸಿದ; ಹೀಗೆ ಹೋಲಿಸುವಾಗ ಸರೋವರಗಳು, ನದಿಗಳು ಮತ್ತು ಕೊಳಗಳು ಅವನ ಮನಸ್ಸಿನಲ್ಲಿದ್ದವು ಎಂಬುದು ಗಮನಾರ್ಹ ಅಂಶ. ಘನವಾದ ಗೋಡೆಗಳನ್ನು ಒಟ್ಟಾಗಿ ಜೋಡಿಸಲೆಂದು ಹಗುರವಾದ ತೆರೆಗಳನ್ನು ಸೃಷ್ಟಿಸುವ ಒಂದು ಪ್ರಯತ್ನದಲ್ಲಿ, ಸಂಪೂರ್ಣ ಗೋಡೆಗಳ ಉದ್ದಕ್ಕೂ ಗಾಜಿನ ಫಲಕಗಳನ್ನು ತಂತಿಯಿಂದ ಬಿಗಿಯಲಾಗುತ್ತಿದ್ದ ಪರಿಪಾಠಗಳು, ರೈಟ್‌ನ ಕೆಲಸಗಳಲ್ಲಿನ ಗಾಜಿನ ಅತ್ಯಂತ ಆರಂಭಿಕ ಬಳಕೆಗಳಲ್ಲಿ ಒಂದೆನಿಸಿತ್ತು. ಈ ದೊಡ್ಡ ಪ್ರಮಾಣದ ಗಾಜನ್ನು ಬಳಸಿಕೊಳ್ಳುವ ಮೂಲಕ, ಗಾಜಿನ ಹಗುರತೆ ಮತ್ತು ಕೋಮಲತೆ ಹಾಗೂ ಘನವಾದ, ಗಡುಸಾದ ಗೋಡೆಗಳ ನಡುವೆ ಒಂದು ಸಮತೋಲನವನ್ನು ಸಾಧಿಸಲು ರೈಟ್‌ ಆಶಿಸಿದ. ವಾದಯೋಗ್ಯವಾಗಿ ಹೇಳುವುದಾದರೆ, ರೈಟ್‌ನ ಸುಪರಿಚಿತ ಕಲಾತ್ಮಕ ಗಾಜೆಂಬುದು ಪ್ರೈರೀ ಶೈಲಿಯಲ್ಲಿ ಕಂಡುಬರುತ್ತದೆ. ವಿಪುಲವಾಗಿ ಅಲಂಕರಿಸಿದ ಮತ್ತು ಸಂಕೀರ್ಣವಾದ ಕಿಟಕಿಗಳನ್ನು ನೀಡುವ ಸರಳ ಜ್ಯಾಮಿತೀಯ ಆಕಾರಗಳು, ಅವನ ವೃತ್ತಿಜೀವನದ ಅತ್ಯಂತ ಅವಿಭಾಜ್ಯ ಅಲಂಕರಣದ ಪೈಕಿ ಕೆಲವನ್ನು ಪ್ರತಿನಿಧಿಸುತ್ತವೆ.[೬೦] ಸೇವಕರ ಪ್ರಾಮುಖ್ಯತೆಯು ಕಡಿಮೆ ಎನಿಸಿದ ಅಥವಾ ಬಹುಪಾಲು ಅಮೆರಿಕನ್ನರ ಕುಟುಂಬಗಳಿಂದ ಅವರು ಸಂಪೂರ್ಣವಾಗಿ ಕಾಣೆಯಾದ ಸಂದರ್ಭವಾದ, 20ನೇ ಶತಮಾನದ ತಿರುವಿನ ಭಾಗದಲ್ಲಿ ಸಂಭವಿಸಿದ ಸ್ವದೇಶಿ ಜೀವನದ ರೂಪಾಂತರಕ್ಕೆ, ಹಂತಹಂತವಾಗಿ ಹೆಚ್ಚು ಮುಕ್ತವಾಗಿರುವ ನಕಾಶೆಗಳನ್ನು ಒಳಗೊಂಡಿರುವ ಮನೆಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ರೈಟ್‌ ಪ್ರತಿಕ್ರಿಯಿಸಿದ. ಅನೇಕವೇಳೆ ಅವನಿಂದ 'ಕಾರ್ಯನೆಲೆ' ಎಂಬುದಾಗಿ ಕರೆಯಲ್ಪಡುತ್ತಿದ್ದ ಅಡುಗೆಮನೆಯಲ್ಲಿ ಮನೆಯ ಮಹಿಳೆಯು ಕೆಲಸ ಮಾಡಿಕೊಳ್ಳುವಲ್ಲಿ ಇದು ಅವಕಾಶನೀಡಿತು; ಅಷ್ಟೇ ಅಲ್ಲ, ಕೆಲಸ ಮಾಡಿಕೊಳ್ಳುತ್ತಲೇ ಊಟದ ಕೋಣೆಯಲ್ಲಿನ ಮಕ್ಕಳು ಮತ್ತು/ಅಥವಾ ಅತಿಥಿಗಳಿಗಾಗಿ ಲಭ್ಯವಾಗುವ ಮತ್ತು ಅವರಕಡೆ ಗಮನಹರಿಸುವ ಅವಕಾಶವೂ ಮನೆಯ ಮಹಿಳೆಗೆ ಇದರಿಂದ ಪ್ರಾಪ್ತವಾಯಿತು. ಮೈಸ್‌ ವಾನ್‌ ಡೆರ್‌ ರೋಹೆಯ ಆರಂಭಿಕ ಕೆಲಸವನ್ನು ಒಳಗೊಂಡಂತೆ, ಆಧುನಿಕ ವಾಸ್ತುಶೈಲಿಯ ಬಹುಭಾಗದ ಮೂಲವನ್ನು ರೈಟ್‌ನ ಪರಿವರ್ತನಾಶೀಲ ಕೆಲಸದಲ್ಲಿ ಕಾಣಬಹುದು. ತನ್ನ ಸ್ವಂತದ ಉಡುಪುಗಳಲ್ಲಿ ಕೆಲವನ್ನು ರೈಟ್‌ ವಿನ್ಯಾಸಗೊಳಿಸಿದ. ಅವನ ಫ್ಯಾಷನ್‌‌ ಪ್ರಜ್ಞೆಯು ಅನನ್ಯವಾಗಿತ್ತು, ಮತ್ತು ದುಬಾರಿ ಸೂಟುಗಳು, ತೂಗಾಡುವ ಕಂಠಬಂಧಗಳು, ಮತ್ತು ತೋಳಿಲ್ಲದ ಮೇಲಂಗಿಗಳನ್ನು ಅವನು ಸಾಮಾನ್ಯವಾಗಿ ಧರಿಸಿದ. ಪ್ರೈರೀ ವರ್ಷಗಳಲ್ಲಿ, ವಾಡಿಕೆಯ ಒಂದು ಹಳದಿ 'ರೇಸ್‌ಎಬೌಟ್‌' ಕಾರನ್ನು ರೈಟ್‌ ಚಾಲನೆ ಮಾಡುತ್ತಿದ್ದ, 1930ರ ದಶಕದಲ್ಲಿ ಒಂದು ಪರಿವರ್ತನೀಯ ಕೆಂಪು ಕಾರ್ಡ್‌ ವಾಹನವನ್ನೂ, ಮತ್ತು ಗಿರಾಕಿಯ ಬಯಕೆಯ ಅನುಸಾರ ತಯಾರಿಸಿದ 1940 ಲಿಂಕನ್‌‌‌ ಕಾರನ್ನು ಅನೇಕ ವರ್ಷಗಳವರೆಗೆ ಚಾಲನೆ ಮಾಡುತ್ತಿದ್ದ. ತನ್ನ ಪ್ರತಿಯೊಂದು ವಾಹನದಲ್ಲಿಯೂ ಅವನು ಅನೇಕ ವೇಗದ ಟಿಕೆಟ್ಟುಗಳನ್ನು ಗಳಿಸಿದ. [ಸೂಕ್ತ ಉಲ್ಲೇಖನ ಬೇಕು]

ಸಹೋದ್ಯೋಗಿಗಳು ಮತ್ತು ಪ್ರಭಾವಗಳು

ತನ್ನ ವಿನ್ಯಾಸಗಳ ಮೇಲೆ ಯಾವುದೇ ಪ್ರಭಾವಗಳಿರುವುದರ ಕುರಿತು ರೈಟ್‌ ಹೇಳಿಕೊಂಡಿದ್ದು ಅಪರೂಪವಾದರೂ, ಅವನು ಐದು ಪ್ರಮುಖ ಪ್ರಭಾವಗಳನ್ನು ಹೊಂದಿದ್ದ ಎಂಬುದಕ್ಕೆ ಬಹುತೇಕ ವಾಸ್ತುಶಿಲ್ಪಿಗಳು, ಇತಿಹಾಸಕಾರರು ಮತ್ತು ವಿದ್ವಾಂಸರು ಸಮ್ಮತಿಸುತ್ತಾರೆ:

  1. ಲೂಯಿಸ್‌ ಸಲಿವನ್‌‌: ಇವನನ್ನು ರೈಟ್‌ ತನ್ನ 'ಲೈಬರ್‌‌ ಮೀಸ್ಟರ್‌‌' (ಪ್ರೀತಿಯ ಯಜಮಾನ) ಎಂಬುದಾಗಿ ಪರಿಗಣಿಸುತ್ತಿದ್ದ,
  2. ಪ್ರಕೃತಿ: ನಿರ್ದಿಷ್ಟವಾಗಿ ಹೇಳುವುದಾದರೆ ಸಸ್ಯ ಜೀವನದ ಆಕಾರಗಳು/ಸ್ವರೂಪಗಳು ಮತ್ತು ಬಣ್ಣಗಳು/ಮಾದರಿಗಳು,
  3. ಸಂಗೀತ (ಲುಡ್ವಿಗ್‌‌ ವಾನ್‌ ಬೀಥೊವೆನ್‌‌ ಅವನ ಅಚ್ಚುಮೆಚ್ಚಿನ ಸಂಯೋಜಕನಾಗಿದ್ದ),
  4. ಜಪಾನೀ ಕಲೆ, ಮುದ್ರಣಗಳು ಮತ್ತು ಕಟ್ಟಡಗಳು,
  5. ಫ್ರೋಬೆಲ್‌‌ ಗಿಫ್ಟ್ಸ್‌ [ಸೂಕ್ತ ಉಲ್ಲೇಖನ ಬೇಕು]

ಅವನ ನೌಕರರಾಗಿದ್ದ ವಾಸ್ತುಶಿಲ್ಪಿಗಳು ಮತ್ತು ವಾಸ್ತುಶಿಲ್ಪೀಯ ವಿನ್ಯಾಸಕಾರರು ತನ್ನ ಸ್ವಂತದ ವಿನ್ಯಾಸದಂತೆ ಕೆಲಸಮಾಡುತ್ತಾರೆ ಎಂದೂ ಸಹ ಅವನು ವಾಡಿಕೆಯಂತೆ ಸಮರ್ಥಿಸಿದ ಮತ್ತು ಪ್ರೈರೀ ಪಂಥದ ಉಳಿದ ವಾಸ್ತುಶಿಲ್ಪಿಗಳು ಕೇವಲ ತನ್ನ ಅನುಯಾಯಿಗಳು, ಅನುಕರಣಕಾರರು ಮತ್ತು ಅಧೀನದ ಕೆಲಸಗಾರರು ಎಂಬುದಾಗಿ ಅವನು ಪ್ರತಿಪಾದಿಸಿದ.[೬೧] ಆದರೆ, ಯಾವುದೇ ವಾಸ್ತುಶಿಲ್ಪಿಯ ರೀತಿಯಲ್ಲಿ, ಒಂದು ಜತೆಗೂಡಿ ಕೆಲಸಮಾಡುವ ಪ್ರಕ್ರಿಯೆಯಲ್ಲಿ ರೈಟ್‌ ಕೆಲಸ ಮಾಡಿದ ಮತ್ತು ಇತರರ ಕೆಲಸದಿಂದ ತನ್ನ ಪರಿಕಲ್ಪನೆಗಳಿಗೆ ಪ್ರೇರಣೆಯನ್ನು ಪಡೆದ. ಅವನ ಮುಂಚಿನ ದಿನಗಳಲ್ಲಿ, ಸಲಿವನ್ ಸೇರಿದಂತೆ ಚಿಕಾಗೊ ಪಂಥದ ಕೆಲವೊಂದು ಅಗ್ರಗಣ್ಯ ವಾಸ್ತುಶಿಲ್ಪಿಗಳ ಜೊತೆಯಲ್ಲಿ ರೈಟ್‌ ಕೆಲಸ ಮಾಡಿದ. ಅವನ ಪ್ರೈರೀ ಪಂಥದ ದಿನಗಳಲ್ಲಿ, ಅನೇಕ ಪ್ರತಿಭಾವಂತ ವಾಸ್ತುಶಿಲ್ಪಿಗಳಿಂದ ರೈಟ್‌ನ ಕಚೇರಿಯು ತುಂಬಿಕೊಂಡಿರುತ್ತಿತ್ತು. ಅವರೆಂದರೆ: ವಿಲಿಯಂ ಯೂಜೀನ್‌ ಡ್ರಮಾಂಡ್‌, ಜಾನ್‌‌ ವಾನ್‌ ಬರ್ಗೆನ್‌‌, ಇಸಾಬೆಲ್‌ ರಾಬರ್ಟ್ಸ್‌‌, ಫ್ರಾನ್ಸಿಸ್‌ ಬ್ಯಾರಿ ಬೈರ್ನ್‌, ಆಲ್ಬರ್ಟ್‌ ಮೆಕ್‌ಅರ್ಥರ್‌‌, ಮೇರಿಯನ್‌‌‌ ಮಹೋನಿ ಗ್ರಿಫಿನ್‌‌ ಮತ್ತು ವಾಲ್ಟರ್‌‌‌ ಬರ್ಲಿ ಗ್ರಿಫಿನ್‌‌. ಜಪಾನ್‌ನಲ್ಲಿ ಆಧುನಿಕ ವಾಸ್ತುಶೈಲಿಯ ಜನಕ ಎಂಬುದಾಗಿ ಗುರುತಿಸಲ್ಪಟ್ಟ ಆಂಟೋನಿಯನ್‌‌ ರೇಮಾಂಡ್‌ ಎಂಬ ಝೆಕ್‌‌-ಸಂಜಾತ ವಾಸ್ತುಶಿಲ್ಪಿಯು, ಟ್ಯಾಲೀಸಿನ್‌‌ನಲ್ಲಿ ರೈಟ್‌ಗಾಗಿ ಕೆಲಸ ಮಾಡಿದ ಮತ್ತು ಟೋಕಿಯೋದಲ್ಲಿನ ಇಂಪೀರಿಯಲ್‌ ಹೊಟೇಲಿನ ನಿರ್ಮಾಣದ ನೇತೃತ್ವವನ್ನು ವಹಿಸಿದ. ತರುವಾಯದಲ್ಲಿ ಅವನು ಜಪಾನ್‌‌ನಲ್ಲಿ ಉಳಿದುಕೊಂಡ ಮತ್ತು ತನ್ನದೇ ಆದ ವೃತ್ತಿಗಾರಿಕೆಯನ್ನು ಅಲ್ಲಿ ಪ್ರಾರಂಭಿಸಿದ. ಇಂಪೀರಿಯಲ್‌ ಹೊಟೇಲಿನ ನಿರ್ಮಾಣಕ್ಕೆ ಸಂಬಂಧಿಸಿದಂತೆ ‌‌ರುಡಾಲ್ಫ್ ಷಿಂಡ್ಲರ್‌‌ ಕೂಡಾ ರೈಟ್‌ಗಾಗಿ ಕೆಲಸ ಮಾಡಿದ. ಅವನದೇ ಸ್ವಂತ ಕೆಲಸವು ರೈಟ್‌ನ ಉಸೋನಿಯಾ ಶೈಲಿಯ ಮನೆಗಳ ಮೇಲೆ ಪ್ರಭಾವ ಬೀರಿತು ಎಂದು ಅನೇಕವೇಳೆ ಹೇಳಲಾಗುತ್ತದೆ. ಷಿಂಡ್ಲರ್‌‌ನ ಸ್ನೇಹಿತನಾದ ರಿಚರ್ಡ್‌ ನ್ಯೂಟ್ರಾ ಕೂಡಾ ಸಂಕ್ಷಿಪ್ತ ಅವಧಿಗೆ ರೈಟ್‌ಗಾಗಿ ಕೆಲಸ ಮಾಡಿದ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಓರ್ವ ಯಶಸ್ವೀ ವಾಸ್ತುಶಿಲ್ಪಿ ಎನಿಸಿಕೊಂಡ. ನಂತರದ ಟ್ಯಾಲೀಸಿನ್‌‌ ದಿನಗಳಲ್ಲಿ, ಮುಂದೆ ಗಮನಾರ್ಹರೆನಿಸಿಕೊಂಡ ಅನೇಕ ವಾಸ್ತುಶಿಲ್ಪಿಗಳು ಮತ್ತು ಕಲಾವಿದರನ್ನು ರೈಟ್‌ ನೇಮಕ ಮಾಡಿಕೊಂಡ. ಅವರೆಂದರೆ: ವಾಸ್ತುಕಲೆಯಲ್ಲಿ ತೊಡಗಿಸಿಕೊಂಡಿದ್ದ ಆರನ್‌‌ ಗ್ರೀನ್‌‌, ಜಾನ್‌‌ ಲೌಟ್ನರ್‌, E. ಫೇ ಜೋನ್ಸ್‌, ಹೆನ್ರಿ ಕ್ಲಂಬ್‌ ಮತ್ತು ಪಾವೊಲೊ ಸೊಲೆರಿ ಮತ್ತು ಕಲಾವಲಯದಲ್ಲಿ ತೊಡಗಿಸಿಕೊಂಡಿದ್ದ ಸ್ಯಾಂಟಿಯಾಗೊ ಮಾರ್ಟಿನೆಜ್‌‌ ಡೆಲ್ಗಾಡೊ. ನಟ ಆಂಥೊನಿ ಕ್ವಿನ್‌‌ ಓರ್ವ ಯುವಕನಾಗಿದ್ದಾಗ, ಟ್ಯಾಲೀಸಿನ್‌ನಲ್ಲಿ ರೈಟ್‌ ಜೊತೆಯಲ್ಲಿ ಅಧ್ಯಯನ ಮಾಡಲು ಅರ್ಜಿ ಸಲ್ಲಿಸಿದ. ಆದರೆ, ಅವನಿಗಿದ್ದ ಮಾತಿನ ತೊದಲಿನ ಸಮಸ್ಯೆಯನ್ನು ಜಯಿಸಲು ನೆರವಾಗುವಲ್ಲಿ ಮೊದಲು ಧ್ವನಿ ಪಾಠಗಳನ್ನು ತೆಗೆದುಕೊಳ್ಳುವಂತೆ ರೈಟ್‌ ಅವನಿಗೆ ಸೂಚಿಸಿದ. ಬ್ರೂಸ್‌ ಗಾಫ್‌‌ ರೈಟ್‌ಗಾಗಿ ಎಂದಿಗೂ ಕೆಲಸ ಮಾಡಲಿಲ್ಲವಾದರೂ, ಅವನೊಂದಿಗೆ ಪತ್ರವ್ಯವಹಾರವನ್ನು ಇಟ್ಟುಕೊಂಡಿದ್ದ. ಪರಸ್ಪರರಿಗೆ ಸಮಾನಾಂತರವಾಗಿರುವ ರೀತಿಯಲ್ಲಿ ಅವರ ಕೆಲಸಗಳನ್ನು ಕಾಣಬಹುದಾಗಿದೆ.

ಮನ್ನಣೆ

ಫ್ರಾಂಕ್ ಲಾಯ್ಡ್‌‌ ರೈಟ್‌ನ ಗೌರವಾರ್ಥವಾಗಿ 1966ರಲ್ಲಿ ಹೊರತಂದಿರುವ U.S. ಅಂಚೆ ಚೀಟಿ.

ನಂತರದ ತನ್ನ ಜೀವನದಲ್ಲಿ ಮತ್ತು 1959ರಲ್ಲಿ ಸಂಭವಿಸಿದ ಅವನ ಸಾವಿನ ನಂತರವೂ, ತನ್ನ ಜೀವಿತಾವಧಿಯ ಸಾಧನೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಗೌರವಾರ್ಥ ಮಾನ್ಯತೆಯನ್ನು ರೈಟ್‌ ಸ್ವೀಕರಿಸಿದ. 1941ರಲ್ಲಿ ರಾಯಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬ್ರಿಟಿಷ್‌ ಆರ್ಕಿಟೆಕ್ಟ್ಸ್‌ ವತಿಯಿಂದ ಮತ್ತು 1949ರಲ್ಲಿ ಅಮೆರಿಕನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಕಿಟೆಕ್ಟ್ಸ್‌ (AIA) ವತಿಯಿಂದ ಅವನು ಬಂಗಾರದ ಪದಕದ ಪ್ರಶಸ್ತಿಗಳನ್ನು ಸ್ವೀಕರಿಸಿದ. 1953ರಲ್ಲಿ ಅವನಿಗೆ ಫ್ರಾಂಕ್ಲಿನ್‌ ಇನ್‌ಸ್ಟಿಟ್ಯೂಟ್‌‌‌ನ ಫ್ರಾಂಕ್‌‌ P. ಬ್ರೌನ್‌ ಪಾರಿತೋಷಕವನ್ನು ಪ್ರದಾನ ಮಾಡಲಾಯಿತು. ಹಲವಾರು ವಿಶ್ವವಿದ್ಯಾಲಯಗಳಿಂದ (ವಿಸ್ಕಾನ್ಸಿನ್‌‌ನ ವಿಶ್ವವಿದ್ಯಾಲಯದಿಂದ ದೊರೆತ ಅವನ "ಆಲ್ಮಾ ಮ್ಯಾಟರ್‌‌" ಪದವಿಯೂ ಸೇರಿದಂತೆ) ಅವನು ಗೌರವಾರ್ಥ ಪದವಿಗಳನ್ನು ಸ್ವೀಕರಿಸಿದ ಮತ್ತು ಹಲವಾರು ರಾಷ್ಟ್ರಗಳು ಕಲೆ ಮತ್ತು/ಅಥವಾ ವಾಸ್ತುಕಲೆಗೆ ಸಂಬಂಧಿಸಿದ ತಮ್ಮ ರಾಷ್ಟ್ರೀಯ ಅಕಾಡೆಮಿಗಳಿಗೆ ಅವನನ್ನು ಮಂಡಳಿಯ ಓರ್ವ ಗೌರವಾರ್ಥ ಸದಸ್ಯನನ್ನಾಗಿ ನೇಮಿಸಿದವು. 2000ನೇ ಇಸವಿಯಲ್ಲಿ, ಫಾಲಿಂಗ್‌ವಾಟರ್‌‌ ಮನೆಯನ್ನು "20ನೇ ಶತಮಾನದ ಕಟ್ಟಡ" ಎಂಬುದಾಗಿ ಹೆಸರಿಸಲಾಯಿತು; ಫಿಲಡೆಲ್ಫಿಯಾದಲ್ಲಿ ನಡೆದ AIA ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸದಸ್ಯರಿಂದ ಪಡೆಯಲಾದ ಒಂದು ಅವೈಜ್ಞಾನಿಕ "ಮೊದಲ-ಹತ್ತು" ಅಭಿಪ್ರಾಯ ಸಂಗ್ರಹದಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಆ ಪಟ್ಟಿಯಲ್ಲಿ, USAಯ ಇತರ ಅನೇಕ ಮಹೋನ್ನತ ವಾಸ್ತುಶಿಲ್ಪಿಗಳ ಜೊತೆಯಲ್ಲಿ ರೈಟ್‌ ವರ್ಗೀಕರಿಸಲ್ಪಟ್ಟ. ಅವರೆಂದರೆ: ಈರೋ ಸಾರಿನೆನ್‌‌, I.M. ಪೀ, ಲೂಯಿಸ್‌ ಕಹ್ನ್‌‌, ಫಿಲಿಪ್‌‌ ಜಾನ್ಸನ್‌‌ ಮತ್ತು ಲುಡ್ವಿಗ್‌‌ ಮೈಸ್‌ ವಾನ್‌ ಡೆರ್‌ ರೋಹೆ. ಅಷ್ಟೇ ಅಲ್ಲ, ಅವನು ಸದರಿ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಕಟ್ಟಡಗಳನ್ನು ದಾಖಲಿಸಿದ್ದ ಏಕೈಕ ವಾಸ್ತುಶಿಲ್ಪಿಯಾಗಿದ್ದ. ಗಗೆನ್‌ಹೀಮ್‌‌ ಮ್ಯೂಸಿಯಂ, ಫ್ರೆಡೆರಿಕ್‌‌ C. ರೋಬೀ ಹೌಸ್‌‌ ಮತ್ತು ಜಾನ್ಸನ್‌‌ ವ್ಯಾಕ್ಸ್‌ ಬಿಲ್ಡಿಂಗ್‌ ಇವು ಇತರ ಮೂರು ಕಟ್ಟಡಗಳಾಗಿದ್ದವು. 1992ರಲ್ಲಿ, ವಿಸ್ಕಾನ್ಸಿನ್‌‌ನ ಮ್ಯಾಡಿಸನ್‌‌‌‌ನಲ್ಲಿ ಮ್ಯಾಡಿಸನ್‌‌ ಒಪೆರಾವು ಶೈನಿಂಗ್‌ ಬ್ರೋ ಎಂಬ ಗೀತರೂಪಕವನ್ನು ನಿಯೋಜಿಸಿ ಪ್ರಥಮ ಪ್ರದರ್ಶನ ನೀಡಿತು; ರೈಟ್‌ನ ಆರಂಭಿಕ ಜೀವನದಲ್ಲಿನ ಘಟನೆಗಳನ್ನು ಆಧರಿಸಿ ಸಂಯೋಜಕ ಡ್ಯಾರನ್‌‌ ಹೇಗನ್‌‌ ಮತ್ತು ಗೀತಬಂಧಕಾರ ಪಾಲ್‌‌ ಮುಲ್ಡೂನ್‌‌ರಿಂದ ಸಾದರಪಡಿಸಲ್ಪಟ್ಟ ರೂಪಕ ಇದಾಗಿತ್ತು. ಅಲ್ಲಿಂದೀಚೆಗೆ ಸದರಿ ಕೃತಿಯು ಹಲವಾರು ಪರಿಷ್ಕರಣೆಗಳನ್ನು ಸ್ವೀಕರಿಸಿದೆ. 2000ನೇ ಇಸವಿಯಲ್ಲಿ, Work Song: Three Views of Frank Lloyd Wright ಎಂಬ ಒಂದು ನಾಟಕವು ಮಿಲ್ವೌಕಿ ರೆಪರ್ಟರಿ ಥಿಯೇಟರ್‌‌‌ನಲ್ಲಿ ಪ್ರಥಮ ಪ್ರದರ್ಶನ ಕಂಡಿತು; ರೈಟ್‌ನ ಜೀವನದ ವೈಯಕ್ತಿಕ ಮತ್ತು ಕೆಲಸದ ಮಗ್ಗುಲುಗಳ ನಡುವಿನ ಸಂಬಂಧವನ್ನು ಈ ನಾಟಕವು ಆಧರಿಸಿತ್ತು. 1966ರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಅಂಚೆ ಸೇವೆಯು ಪ್ರಸಿದ್ಧ ಅಮೆರಿಕನ್ನರ ಸರಣಿಯ ಒಂದು 2¢ ಅಂಚೆ ಚೀಟಿಯೊಂದಿಗೆ ರೈಟ್‌ನನ್ನು ಗೌರವಿಸಿತು.

ಕುಟುಂಬ

ಫ್ರಾಂಕ್ ಲಾಯ್ಡ್‌‌ ರೈಟ್ ಮೂರು ಬಾರಿ ಮದುವೆಯಾಗಿದ್ದ ಮತ್ತು ಏಳು ಮಕ್ಕಳಿಗೆ ತಂದೆಯಾದ: ಅವರಲ್ಲಿ ನಾಲ್ವರು ಗಂಡುಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳು ಸೇರಿದ್ದರು. ಅವನ ಮೂರನೇ ಹೆಂಡತಿಯಾದ ಓಲ್ಜಿವಾನ್ನಾ ಲಾಯ್ಡ್‌‌ ರೈಟ್‌‌ಳ ಮಗಳಾದ ಸ್ವೆಟ್ಲಾನಾ ಮಿಲಾನೊಫ್‌‌ಳನ್ನು ಅವನು ದತ್ತುರೂಪದಲ್ಲಿಯೂ ಸ್ವೀಕರಿಸಿದ.[೬೨] ಅವನ ಹೆಂಡತಿಯರ ವಿವರಗಳು ಹೀಗಿವೆ:

  • ಕ್ಯಾಥರೀನ್‌‌ "ಕಿಟ್ಟಿ" (ಟೋಬಿನ್‌‌) ರೈಟ್‌ (1871–1959). ಸಮಾಜ-ವರಿಷ್ಠೆ ಮತ್ತು ಸಾಮಾಜಿಕ ಕಾರ್ಯಕರ್ತೆ. 1889ರ ಜೂನ್‌‌ನಲ್ಲಿ ಮದುವೆಯಾಯಿತು; 1922ರ ನವೆಂಬರ್‌‌ನಲ್ಲಿ ಇವಳ ವಿಚ್ಛೇದನವಾಯಿತು.
  • ಮೌಡ್‌ "ಮಿರಿಯಾಮ್‌‌" (ನೋಯೆಲ್‌) ರೈಟ್‌ (1869–1930). ಕಲಾವಿದೆ. 1923ರ ನವೆಂಬರ್‌‌ನಲ್ಲಿ ಮದುವೆಯಾಯಿತು; 1927ರ ಆಗಸ್ಟ್‌ನಲ್ಲಿ ವಿಚ್ಛೇದನವಾಯಿತು.
  • ಓಲ್ಗಾ ಇವಾನೊವ್ನಾ "ಓಲ್ಜಿವಾನ್ನಾ" (ಲಾಜೋವಿಚ್‌‌ ಮಿಲಾನೊಫ್‌) ಲಾಯ್ಡ್‌‌ ರೈಟ್‌ (1897–1985). ನರ್ತಕಿ ಮತ್ತು ಬರಹಗಾರ್ತಿ. 1928ರ ಆಗಸ್ಟ್‌ನಲ್ಲಿ ಮದುವೆಯಾಯಿತು.

ರೈಟ್‌ನ ಗಂಡುಮಕ್ಕಳಲ್ಲಿ ಒಬ್ಬನಾದ ಫ್ರಾಂಕ್ ಲಾಯ್ಡ್‌‌ ರೈಟ್ ಜೂನಿಯರ್‌‌ ಲಾಯ್ಡ್‌‌ ರೈಟ್‌ ಎಂದೇ ಸುಪರಿಚಿತನಾಗಿದ್ದು, ಈತನೂ ಸಹ ಲಾಸ್‌ ಏಂಜಲೀಸ್‌ನಲ್ಲಿ ಓರ್ವ ಗಮನಾರ್ಹ ವಾಸ್ತುಶಿಲ್ಪಿಯಾಗಿದ್ದ. ಲಾಯ್ಡ್‌‌ ರೈಟ್‌ನ ಮಗನಾದ (ಮತ್ತು ರೈಟ್‌ನ ಮೊಮ್ಮಗನಾದ) ಎರಿಕ್‌‌ ಲಾಯ್ಡ್‌‌ ರೈಟ್‌, ಪ್ರಸಕ್ತವಾಗಿ ಕ್ಯಾಲಿಫೋರ್ನಿಯಾದ ಮಾಲಿಬುವಿನಲ್ಲಿ ಓರ್ವ ವಾಸ್ತುಶಿಲ್ಪಿಯಾಗಿದ್ದು, ಅಲ್ಲಿ ಆತ ಬಹುಪಾಲು ನಿವಾಸ-ಯೋಜನೆಗಳ ಹಾಗೂ ನಾಗರಿಕ ಮತ್ತು ವಾಣಿಜ್ಯ ಕಟ್ಟಡಗಳಿಗೆ ಸಂಬಂಧಿಸಿದ ಒಂದು ವೃತ್ತಿಗಾರಿಕೆಯನ್ನು ಹೊಂದಿದ್ದಾನೆ. ಮತ್ತೋರ್ವ ಮಗ ಮತ್ತು ವಾಸ್ತುಶಿಲ್ಪಿಯಾದ ಜಾನ್‌‌ ಲಾಯ್ಡ್‌‌ ರೈಟ್‌ ಎಂಬಾತ, 1918ರಲ್ಲಿ ಲಿಂಕನ್‌‌‌ ಲಾಗ್ಸ್‌‌ನ್ನು ಕಂಡುಹಿಡಿದ ಮತ್ತು ಸ್ಯಾನ್‌ ಡಿಯೆಗೊ ಪ್ರದೇಶದಲ್ಲಿ ವ್ಯಾಪಕವಾಗಿ ತನ್ನ ವೃತ್ತಿಗಾರಿಕೆಯನ್ನು ನಡೆಸಿದ. ಜಾನ್‌‌ನ ಮಗಳಾದ ಎಲಿಜಬೆತ್‌ ರೈಟ್‌ ಇನ್‌ಗ್ರಹಾಮ್‌‌ Archived 2010-11-05 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬಾಕೆಯು, ಕೊಲರೆಡೊದ ಕೊಲರೆಡೊ ಸ್ಪ್ರಿಂಗ್ಸ್‌‌‌ನಲ್ಲಿ ಓರ್ವ ವಾಸ್ತುಶಿಲ್ಪಿಯಾಗಿದ್ದಾಳೆ. ಕನೆಕ್ಟಿಕಟ್‌ನಲ್ಲಿ ಓರ್ವ ಒಳಾಂಗಣ ವಿನ್ಯಾಸಗಾರ್ತಿಯಾಗಿರುವ ಕ್ರಿಸ್ಟೀನ್‌, ಮತ್ತು ಪ್ರಾಟ್‌ ಇನ್‌‌ಸ್ಟಿಟ್ಯೂಟ್‌‌ನಲ್ಲಿ ಓರ್ವ ವಾಸ್ತುಕಲೆಯ ಪ್ರಾಧ್ಯಾಪಕಿಯಾದ ಕ್ಯಾಥರೀನ್‌ಗೆ ಅವಳು ತಾಯಿಯಾಗಿದ್ದಾಳೆ.[೬೩] ಆಸ್ಕರ್‌‌-ವಿಜೇತ ನಟಿಯಾದ ಆನ್ನೆ ಬಾಕ್ಸ್‌‌ಟರ್‌ ಎಂಬಾಕೆಯು ರೈಟ್‌ನ ಮೊಮ್ಮಗಳಾಗಿದ್ದಳು. ರೈಟ್‌ನ ಮೊದಲ ಮದುವೆಯಿಂದ ಹುಟ್ಟಿದ ಓರ್ವ ಮಗುವಾಗಿದ್ದ ಕ್ಯಾಥರೀನ್‌‌ ಬಾಕ್ಸ್‌‌ಟರ್‌ಗೆ, ನಟಿ ಬಾಕ್ಸ್‌‌ಟರ್‌ ಮಗಳಾಗಿದ್ದಳು. ಆನ್ನೆಯ ಮಗಳಾದ ಮೆಲಿಸ್ಸಾ ಗಾಲ್ಟ್‌‌ ಈಗ ಬದುಕಿದ್ದು, ಓರ್ವ ಒಳಾಂಗಣ ವಿನ್ಯಾಸಗಾರ್ತಿಯಾಗಿ ಅಟ್ಲಾಂಟಾದಲ್ಲಿ ಅವಳು ಕೆಲಸ ಮಾಡುತ್ತಿದ್ದಾಳೆ.[೬೩] ಅವನ ದತ್ತುಪುತ್ರಿಯಾದ ಸ್ವೆಟ್ಲಾನಾ (ಇವಳು ಓಲ್ಜಿವಾನ್ನಾಳ ಮಗಳು) ಹಾಗೂ ಅವಳ ಮಗನಾದ ಡೇನಿಯಲ್‌, 1946ರಲ್ಲಿ ಸಂಭವಿಸಿದ ವಾಹನ ಅಪಘಾತವೊಂದರಲ್ಲಿ ಮರಣಹೊಂದಿದರು. ಅವಳ ವಿಧುರನಾದ ವಿಲಿಯಂ ವೆಸ್ಲೆ ಪೀಟರ್ಸ್‌‌, ನಂತರದಲ್ಲಿ ಸಂಕ್ಷಿಪ್ತ ಅವಧಿಗೆ ಸ್ವೆಟ್ಲಾನಾ ಅಲ್ಲಿಯುಯೇವಾಳನ್ನು ಮದುವೆಯಾದ; ಈಕೆಯು ಜೋಸೆಫ್‌‌ ಸ್ಟಾಲಿನ್‌‌ನ ಅತ್ಯಂತ ಕಿರಿಯ ಮಗು ಮತ್ತು ಏಕೈಕ ಮಗಳಾಗಿದ್ದಳು. ತನ್ನ ತಂದೆಯ ಕೆಳಗೆ ಸೋವಿಯೆಟ್‌ ಒಕ್ಕೂಟದಲ್ಲಿ ನಡೆಸಿದ ಜೀವನದಂತಿತ್ತು ಎಂಬುದಾಗಿ ಅವಳು ಹೋಲಿಸಿದ, ರೈಟ್‌ ಸಮುದಾಯಗಳ ಸಾಮುದಾಯಿಕ ಜೀವನಶೈಲಿಗೆ ಅವಳು ಹೊಂದಿಕೊಳ್ಳದ ಕಾರಣ, ಅವರು ವಿಚ್ಛೇದನಗೊಂಡರು; ರೈಟ್‌ನ ವಿಧವೆಯ ನಿರಂತರ ಹಸ್ತಕ್ಷೇಪವೂ ಸಹ ಇದಕ್ಕೆ ಕಾರಣವಾಗಿತ್ತು. 1985ರಿಂದ 1991ರವರೆಗೆ ಫ್ರಾಂಕ್ ಲಾಯ್ಡ್‌‌ ರೈಟ್ ಫೌಂಡೇಷನ್‌‌ನ ಸಭಾಪತಿಯಾಗಿ ಪೀಟರ್ಸ್‌‌ ಸೇವೆ ಸಲ್ಲಿಸಿದ. ರೈಟ್‌ನ ಓರ್ವ ಮರಿಮಗನಾದ S. ಲಾಯ್ಡ್‌‌ ನಟಾಫ್ ಈಗ ಬದುಕಿದ್ದು, ಓರ್ವ ಪರಿಣಿತ ಮರಗೆಲಸದವನಾಗಿ ಚಿಕಾಗೊದಲ್ಲಿ ಕೆಲಸ ಮಾಡುತ್ತಿದ್ದಾನೆ. ವಾಡಿಕೆಯ ಮರದ ಪೀಠೋಪಕರಣಗಳ ವಿನ್ಯಾಸ ಮತ್ತು ಸೃಷ್ಟಿಯಲ್ಲಿ ಈತ ನೈಪುಣ್ಯ ಪಡೆದಿದ್ದಾನೆ.[೬೪]

ದಾಖಲೆಗಳು

ಛಾಯಾಚಿತ್ರಗಳು ಮತ್ತು ಇತರ ದಾಖಲೆಯ ಸಾಮಗ್ರಿಗಳನ್ನು, ಆರ್ಟ್‌ ಇನ್‌‌ಸ್ಟಿಟ್ಯೂಟ್‌ ಆಫ್‌ ಚಿಕಾಗೊದಲ್ಲಿರುವ ರೈಯೆರ್‌ಸನ್‌‌ & ಬರ್ನ್‌ಹ್ಯಾಮ್‌‌ ಲೈಬ್ರರೀಸ್‌ ತನ್ನ ವಶದಲ್ಲಿಟ್ಟುಕೊಂಡಿದೆ. ಹರ್ಬರ್ಟ್‌ ಮತ್ತು ಕ್ಯಾಥರೀನ್‌‌ ಜಾಕೋಬ್ಸ್‌‌ ನಿವಾಸ ಮತ್ತು 1924–1974ರ ಫ್ರಾಂಕ್ ಲಾಯ್ಡ್‌‌ ರೈಟ್ ರೆಕಾರ್ಡ್ಸ್ ಸಂಗ್ರಹವು, ಜಾಕೋಬ್ಸ್‌‌ಗೆ ಸಂಬಂಧಿಸಿದಂತಿರುವ ಎರಡು ಮನೆಗಳ ನಿರ್ಮಾಣವನ್ನು ದಾಖಲಿಸುವ ನಕಾಶೆಗಳು, ಪತ್ರವ್ಯವಹಾರ, ಮತ್ತು ಇತರ ಸಾಮಗ್ರಿಗಳನ್ನು ಹಾಗೂ ರೈಟ್‌ನ ಜೀವನದ ಕುರಿತಾದ ಸಂಶೋಧನೆ ಕಡತಗಳನ್ನು ಒಳಗೊಂಡಿದೆ. 1945–1988ರ ಮಿಚಿಗನ್‌‌ ಕಲೆಕ್ಷನ್‌ನಲ್ಲಿರುವ 'ದಿ ಫ್ರಾಂಕ್ ಲಾಯ್ಡ್‌‌ ರೈಟ್' ದಾಖಲೆಯು ಸಂಶೋಧನಾ ದಸ್ತಾವೇಜುಗಳನ್ನು ಒಳಗೊಂಡಿದ್ದು, ರೈಟ್‌ ಮತ್ತು ಅವನ ಗ್ರಾಹಕರ ನಡುವಿನ ಪತ್ರವ್ಯವಹಾರದ ಛಾಯಾಪ್ರತಿಗಳು ಇದರಲ್ಲಿ ಸೇರಿವೆ; "ಫ್ರಾಂಕ್ ಲಾಯ್ಡ್‌‌ ರೈಟ್ ಇನ್‌ ಮಿಚಿಗನ್‌" ಎಂಬ ಪುಸ್ತಕಕ್ಕಾಗಿ ಈ ಛಾಯಾಪ್ರತಿಗಳನ್ನು ಬಳಸಿಕೊಳ್ಳಲಾಯಿತು. ಸುಮಾರು 1897–1997ರ ಅವಧಿಗೆ ಸೇರಿದ ದಿ ರೈಟಿಯಾನಾ ಕಲೆಕ್ಷನ್‌ (ಹೆಚ್ಚುಭಾಗ 1949–1969ರ ಅವಧಿಗೆ ಸೇರಿದೆ), ರೈಟ್‌ ಮತ್ತು ಅವನ ಯೋಜನೆಗಳ ಕುರಿತಾದ ವೈವಿಧ್ಯಮಯ ಮುದ್ರಿತ ಸಾಮಗ್ರಿಗಳು ಮತ್ತು ಛಾಯಾಚಿತ್ರಗಳನ್ನು ಒಳಗೊಂಡಿದೆ. ಸುಮಾರು 1916–1925ರ ಅವಧಿಗೆ ಸೇರಿದ ದಿ ಜೋಸೆಫ್‌‌ J. ಬ್ಯಾಗ್ಲೆ ಕಾಟೇಜ್‌ ಕಲೆಕ್ಷನ್‌, 1916ರಲ್ಲಿ ಸಂಪೂರ್ಣಗೊಂಡ ಬ್ಯಾಗ್ಲೆ ನಾಡಮನೆಯನ್ನು ದಾಖಲಿಸುವ ಛಾಯಾಚಿತ್ರಗಳು ಮತ್ತು ನಕಾಶೆಗಳನ್ನು ಒಳಗೊಂಡಿದೆ. ಸದರಿ ವಾಸ್ತುಶಿಲ್ಪಿಯ ವೈಯಕ್ತಿಕ ದಾಖಲೆ ಪತ್ರಗಳು Archived 2010-01-22 ವೇಬ್ಯಾಕ್ ಮೆಷಿನ್ ನಲ್ಲಿ., ಅರಿಝೋನಾದ ಸ್ಕಾಟ್ಸ್‌‌ಡೇಲ್‌ನಲ್ಲಿರುವ ಟ್ಯಾಲೀಸಿನ್‌‌ ವೆಸ್ಟ್‌ನಲ್ಲಿ ನೆಲೆಗೊಂಡಿವೆ. ಫ್ರಾಂಕ್ ಲಾಯ್ಡ್‌‌ ರೈಟ್‌ನ ದಾಖಲೆ-ಪತ್ರಾಗಾರವು ಅವನ ನಕಾಶೆಗಳ ಛಾಯಾಚಿತ್ರಗಳು, 1880ರ ದಶಕದಲ್ಲಿ ಆರಂಭವಾದ ಮತ್ತು ರೈಟ್‌ನ ಜೀವನದುದ್ದಕ್ಕೂ ಮುಂದುವರಿದ ಅಕಾರಾದಿಯಲ್ಲಿರುವ ಪತ್ರವ್ಯವಹಾರ, ಹಾಗೂ ಇತರ ಕ್ಷಣಿಕಜೀವಿಗಳ ವಿವರವನ್ನು ಒಳಗೊಂಡಿದೆ. ಕ್ಯಾಲಿಫೋರ್ನಿಯಾದ ಲಾಸ್‌ ಏಂಜಲೀಸ್‌ನಲ್ಲಿರುವ ಗೆಟ್ಟಿ ರಿಸರ್ಚ್‌ ಸೆಂಟರ್‌ ಕೂಡಾ ತನ್ನ "ಫ್ರಾಂಕ್ ಲಾಯ್ಡ್‌‌ ರೈಟ್ ಸ್ಪೆಷಲ್‌ ಕಲೆಕ್ಷನ್‌" ಎಂಬ ಸಂಗ್ರಹದಲ್ಲಿ, ರೈಟ್‌ನ ಪತ್ರವ್ಯವಹಾರದ ಪ್ರತಿಗಳು ಹಾಗೂ ಅವನ ನಕಾಶೆಗಳ ಛಾಯಾಚಿತ್ರಗಳನ್ನು ಹೊಂದಿದೆ. ಆಂಥೊನಿ ಅಲೋಫ್ಸಿನ್‌‌ ಎಂಬ ಪ್ರಾಧ್ಯಾಪಕನಿಂದ ಸಂಪಾದಿಸಲ್ಪಟ್ಟಿರುವ ಆನ್‌ ಇಂಡೆಕ್ಸ್‌ ಟು ದಿ ಟ್ಯಾಲೀಸಿನ್‌ ಕರೆಸ್ಪಾಂಡೆನ್ಸ್‌ ಎಂಬ ಕೃತಿಯಲ್ಲಿ ರೈಟ್‌ನ ಪತ್ರವ್ಯವಹಾರವು ಅಕಾರಾದಿಯಲ್ಲಿದ್ದು, ಇದು ಬೃಹತ್‌ ಗ್ರಂಥಾಲಯಗಳಲ್ಲಿ ಲಭ್ಯವಿದೆ.

ಆಯ್ದ ಕೃತಿಗಳು

ನಾಥನ್‌ G. ಮೂರ್‌‌ ಹೌಸ್‌‌, ಓಕ್‌ ಪಾರ್ಕ್‌, ಇಲಿನಾಯ್ಸ್‌‌
ಚಿಕಾಗೊ ವಿಶ್ವವಿದ್ಯಾಲಯದ ಆವರಣದಲ್ಲಿರುವ ರೋಬೀ ಹೌಸ್‌‌.
"ಹಡಗಿನ" ಕಡೆಗೆ ನೋಡುತ್ತಿರುವ "ಮೂತಿ"ಯಿಂದ ಕಾಣುವ ಟ್ಯಾಲೀಸಿನ್‌‌ ವೆಸ್ಟ್‌‌ ದೃಶ್ಯಾವಳಿ.
ಪಾದಚಾರಿಗಳ ಅಟ್ಟಣಿಗೆಯೊಂದರಿಂದ ಕಂಡಂತೆ ಗಮ್ಮೇಜ್‌ ಸಭಾಂಗಣ.
  • ಫ್ರಾಂಕ್ ಲಾಯ್ಡ್‌‌ ರೈಟ್ ಮನೆ ಮತ್ತು ಸ್ಟುಡಿಯೊ, ಓಕ್‌ ಪಾರ್ಕ್‌, ಇಲಿನಾಯ್ಸ್‌‌, 1889–1909
  • ವಿಲಿಯಂ H. ವಿನ್‌‌ಸ್ಲೋ ಹೌಸ್‌‌, ರಿವರ್‌ ಫಾರೆಸ್ಟ್‌, ಇಲಿನಾಯ್ಸ್‌‌, 1894
  • ‌‌ವಾರ್ಡ್‌ ವಿನ್‌ಫೀಲ್ಡ್‌ ವಿಲಿಟ್ಸ್ ನಿವಾಸ, ಮತ್ತು ಗಾರ್ಡ್‌ನರ್‌‌'ಸ್‌ ಕಾಟೇಜ್‌ ಅಂಡ್‌ ಸ್ಟೇಬಲ್ಸ್‌, ಹೈಲೆಂಡ್‌ ಪಾರ್ಕ್‌, ಇಲಿನಾಯ್ಸ್‌‌, 1901
  • ಡಾನಾ-ಥಾಮಸ್‌‌ ಹೌಸ್‌‌, ಸ್ಪ್ರಿಂಗ್‌‌ಫೀಲ್ಡ್‌‌, ಇಲಿನಾಯ್ಸ್‌‌, 1902
  • ‌‌ಲಾರ್ಕಿನ್ ಆಡಳಿತ ಕಟ್ಟಡ, ಬಫೆಲೊ, ನ್ಯೂಯಾರ್ಕ್‌, 1903 (1950ರಲ್ಲಿ ಕೆಡವಲಾಯಿತು)
  • ಡಾರ್ವಿನ್‌ D. ಮಾರ್ಟಿನ್‌ ಹೌಸ್‌, ಬಫೆಲೊ, ನ್ಯೂಯಾರ್ಕ್‌, 1903–1905
  • ಯೂನಿಟಿ ಟೆಂಪಲ್‌‌, ಓಕ್‌ ಪಾರ್ಕ್‌, ಇಲಿನಾಯ್ಸ್‌‌, 1904
  • ‌‌ಫ್ರೆಡೆರಿಕ್ C. ರೋಬೀ ನಿವಾಸ, ಚಿಕಾಗೊ, ಇಲಿನಾಯ್ಸ್‌‌, 1909
  • ಟ್ಯಾಲೀಸಿನ್‌‌ I, ಸ್ಪ್ರಿಂಗ್‌ ಗ್ರೀನ್‌‌, ವಿಸ್ಕಾನ್ಸಿನ್‌‌, 1911
  • ‌‌ಮಿಡ್‌ವೇ ಗಾರ್ಡನ್ಸ್, ಚಿಕಾಗೊ, ಇಲಿನಾಯ್ಸ್‌‌, 1913 (1929ರಲ್ಲಿ ಕೆಡವಲಾಯಿತು)
  • ಇಂಪೀರಿಯಲ್‌ ಹೊಟೇಲು, ಟೋಕಿಯೋ, ಜಪಾನ್‌‌, 1923 (1968ರಲ್ಲಿ ಕೆಡವಲಾಯಿತು; ಪ್ರವೇಶ ಭವನವನ್ನು 1976ರಲ್ಲಿ ಜಪಾನ್‌‌ನ ನಗೋಯಾ ಸಮೀಪವಿರುವ ಮೆಯಿಜಿ ಮುರಾದಲ್ಲಿ ಮರುನಿರ್ಮಿಸಲಾಯಿತು
  • ಹಾಲಿಹಾಕ್‌‌ ಹೌಸ್‌‌ (ಅಲೀನ್‌‌ ಬಾರ್ನ್ಸ್‌‌ಡಾಲ್‌‌ ನಿವಾಸ), ಲಾಸ್‌ ಏಂಜಲೀಸ್‌, ಕ್ಯಾಲಿಫೋರ್ನಿಯಾ, 1919–1921
  • ‌ಎನ್ನಿಸ್ ಹೌಸ್‌‌, ಲಾಸ್‌ ಏಂಜಲೀಸ್‌, ಕ್ಯಾಲಿಫೋರ್ನಿಯಾ, 1923
  • ಟ್ಯಾಲೀಸಿನ್‌‌ III, ಸ್ಪ್ರಿಂಗ್‌ ಗ್ರೀನ್‌‌, ವಿಸ್ಕಾನ್ಸಿನ್‌‌, 1925
  • ಫಾಲಿಂಗ್‌ವಾಟರ್‌‌ (ಎಡ್ಗರ್‌‌ J. ಕೌಫ್‌ಮನ್‌ ಸೀನಿಯರ್‌‌ ನಿವಾಸ), ಬಿಯರ್‌ ರನ್‌, ಪೆನ್ಸಿಲ್ವೇನಿಯಾ, 1935–1937
  • ಫಸ್ಟ್‌‌ ಜಾಕೋಬ್ಸ್‌‌ ಹೌಸ್‌‌, 1936–1937
  • ‌‌ಜಾನ್ಸನ್ ವ್ಯಾಕ್ಸ್‌ ಹೆಡ್‌ಕ್ವಾರ್ಟರ್ಸ್‌, ರೆಸೀನ್‌, ವಿಸ್ಕಾನ್ಸಿನ್‌‌, 1936
  • ‌ಹರ್ಬರ್ಟ್ F. ಜಾನ್ಸನ್‌‌ ನಿವಾಸ ("ವಿಂಗ್‌ಸ್ಪ್ರೆಡ್‌"), ವಿಂಡ್‌ ಪಾಯಿಂಟ್‌, WI, 1937
  • ಟ್ಯಾಲೀಸಿನ್‌‌ ವೆಸ್ಟ್‌‌, ಸ್ಕಾಟ್ಸ್‌‌ಡೇಲ್‌‌, ಅರಿಝೋನಾ, 1937
  • ಉಸೋನಿಯಾ ಶೈಲಿಯ ಮನೆಗಳು, ಹಲವಾರು ತಾಣಗಳು, 1930ರ ದಶಕದಿಂದ 1950ರ ದಶಕದವರೆಗೆ
  • ‌‌‌ಚೈಲ್ಡ್‌ ಆಫ್‌ ದಿ ಸನ್, ಫ್ಲೋರಿಡಾ ಸದರ್ನ್‌ ಕಾಲೇಜ್‌, ಲೇಕ್‌ಲ್ಯಾಂಡ್‌, ಫ್ಲೋರಿಡಾ, 1941–1958
  • ‌‌ಫಸ್ಟ್‌ ಯೂನಿಟೇರಿಯನ್‌ ಸೊಸೈಟಿ ಆಫ್‌ ಮ್ಯಾಡಿಸನ್, ಷೋರ್‌ವುಡ್‌ ಹಿಲ್ಸ್‌‌, ವಿಸ್ಕಾನ್ಸಿನ್‌‌, 1947
  • V. C. ಮೋರಿಸ್‌ ಗಿಫ್ಟ್‌ ಷಾಪ್‌, ಸ್ಯಾನ್‌ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾ, 1948
  • ಪ್ರೈಸ್‌ ಟವರ್‌‌, ಬಾರ್ಟಲ್ಸ್‌ವಿಲ್ಲೆ, ಓಕ್ಲಹಾಮಾ, 1952–1956
  • ‌‌ಬೆಥ್‌ ಷೊಲೊಮ್‌ ಸೈನಗೋಗ್, ಎಲ್ಕಿನ್ಸ್‌ ಪಾರ್ಕ್‌, ಪೆನ್ಸಿಲ್ವೇನಿಯಾ, 1954
  • ‌ಅನನ್ಸಿಯೇಷನ್‌ ಗ್ರೀಕ್‌ ಆರ್ಥೊಡಾಕ್ಸ್ ಚರ್ಚು, ಮಿಲ್ವೌಕಿ, ವಿಸ್ಕಾನ್ಸಿನ್‌‌, 1956–1961
  • ಸಾಲೋಮನ್‌‌ R. ಗಗೆನ್‌ಹೀಮ್‌‌ ಮ್ಯೂಸಿಯಂ, ನ್ಯೂಯಾರ್ಕ್‌, ನ್ಯೂಯಾರ್ಕ್‌, 1956–1959
  • ‌ಕೆಂಟುಕ್‌ ನಾಬ್, ಓಹಿಯೋಪೈಲ್‌, ಪೆನ್ಸಿಲ್ವೇನಿಯಾ, 1956
  • ದಿ ಇಲಿನಾಯ್ಸ್‌‌ ಚಿಕಾಗೊದಲ್ಲಿರುವ ಮೈಲಿ-ಎತ್ತರದ ಗೋಪುರ, 1956 (ನಿರ್ಮಾಣಗೊಳ್ಳಲಿಲ್ಲ)
  • ‌‌ಮಾರ್ಷಲ್‌ ಎರ್ಡ್‌ಮನ್‌ ಪ್ರಿಫ್ಯಾಬ್ ಹೌಸಸ್‌, ಹಲವಾರು ತಾಣಗಳು, 1956–1960
  • ಅನನ್ಸಿಯೇಷನ್‌ ಗ್ರೀಕ್‌ ಆರ್ಥೊಡಾಕ್ಸ್‌ ಚರ್ಚು, ವೌವಾಟೊಸಾ, ವಿಸ್ಕಾನ್ಸಿನ್‌‌, 1956–1961
  • ಮೇರಿನ್‌‌ ಕೌಂಟಿ ಸಿವಿಕ್‌ ಸೆಂಟರ್‌‌, ಸ್ಯಾನ್‌ ರಫಾಯೆಲ್‌‌, CA, 1957–1966
  • ಗಮ್ಮೇಜ್‌ ಸಭಾಂಗಣ, ಟೆಂಪೆ, ಅರಿಝೋನಾ, 1959–1964

ಇವನ್ನೂ ಗಮನಿಸಿ

ಟೆಂಪ್ಲೇಟು:Portal

  • ಫ್ರಾಂಕ್ ಲಾಯ್ಡ್‌‌ ರೈಟ್ ಕಟ್ಟಡಗಳು
  • ವ್ಯಾಸ್ಮತ್‌‌ ಪೋರ್ಟ್‌ಫೋಲಿಯೋ
  • ರಿಚರ್ಡ್‌ ಬಾಕ್‌
  • ರೋಮನ್‌ ಇಟ್ಟಿಗೆ
  • ಜರೋಸ್ಲಾವ್‌ ಜೋಸೆಫ್‌ ಪೊಲಿವ್ಕಾ
  • ಫ್ರಾಂಕ್ ಲಾಯ್ಡ್‌‌ ರೈಟ್ ಮನೆ ಮತ್ತು ಸ್ಟುಡಿಯೊ
  • ಫ್ರಾಂಕ್ ಲಾಯ್ಡ್‌‌ ರೈಟ್ ಕಟ್ಟಡ ರಕ್ಷಕ ಮಂಡಲಿ
  • ಫ್ರಾಂಕ್ ಲಾಯ್ಡ್‌‌ ರೈಟ್-ಪ್ರೈರೀ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ ಹಿಸ್ಟಾರಿಕ್‌ ಡಿಸ್ಟ್ರಿಕ್ಟ್‌
  • ಫ್ರಾಂಕ್ ಲಾಯ್ಡ್‌‌ ರೈಟ್ ಕೆಲಸಗಳ ಪಟ್ಟಿ
  • ತಾಣದ ಆಧಾರದ ಮೇಲಿನ ಫ್ರಾಂಕ್ ಲಾಯ್ಡ್‌‌ ರೈಟ್ ಕೆಲಸಗಳ ಪಟ್ಟಿ
  • ಬ್ರಾಡ್‌ಕೇರ್‌ ಸಿಟಿ
  • ಫಾಲಿಂಗ್‌ವಾಟರ್‌‌

ಉಲ್ಲೇಖಗಳು

ಲೇಖನದಲ್ಲಿ ಉಲ್ಲೇಖಿಸಲ್ಪಟ್ಟ ಕೃತಿಗಳು

  1. ೧.೦ ೧.೧ Brewster, Mike (2004-07-28). "Frank Lloyd Wright: America's Architect". Business Week. The McGraw-Hill Companies. Retrieved 2008-01-22.
  2. ಆನ್‌ ಆಟೋಬಯಾಗ್ರಫಿ, - ಫ್ರಾಂಕ್ ಲಾಯ್ಡ್‌‌ ರೈಟ್, ಡ್ಯುಯೆಲ್‌‌, ಸ್ಲೋವನ್‌‌ ಮತ್ತು ಪಿಯರ್ಸ್‌‌, ನ್ಯೂಯಾರ್ಕ್‌ ನಗರ, 1943, ಪುಟ 51
  3. ಫ್ರಾಂಕ್ ಲಾಯ್ಡ್‌‌ ರೈಟ್: ಎ ಬಯಾಗ್ರಫಿ, - ಮೆರೈಲ್‌‌ ಸೆಕ್ರೆಸ್ಟ್‌, ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌, 1992, ಪುಟ 72
  4. ಫಿ ಡೆಲ್ಟಾ ಥೀಟಾ ಆಫ್‌ ಫೇಮಸ್‌ ಫಿಸ್‌, ಆಕ್ಸೆಸ್ಡ್‌ ಆನ್‌ ಮೇ 26. 2008
  5. ಫ್ರಾಂಕ್ ಲಾಯ್ಡ್‌‌ ರೈಟ್: ಎ ಬಯಾಗ್ರಫಿ, - ಮೆರೈಲ್‌‌ ಸೆಕ್ರೆಸ್ಟ್‌, ಪುಟ 82
  6. Wright, Frank Lloyd (2005). Frank Lloyd Wright: An Autobiography. Petaluma, CA: Pomegranate Communications. pp. 60–63. ISBN 0764932438. {cite book}: Invalid |ref=harv (help)
  7. "A brief Biography". Wright’s Life + Work. Frank Lloyd Wright Foundation. 2010. Retrieved 16 May 2010.
  8. O'Gorman, Thomas J. (2004). Frank Lloyd Wright's Chicago. San Diego: Thunder Bay Press. pp. 31–33. ISBN 1-59223-127-6.
  9. ರೈಟ್‌ 2005, ಪುಟ 69.
  10. ರೈಟ್‌ 2005, ಪುಟ 66.
  11. ರೈಟ್‌ 2005, ಪುಟ 83.
  12. ರೈಟ್‌ 2005, ಪುಟ 86.
  13. ರೈಟ್‌ 2005, ಪುಟಗಳು 89-94.
  14. Tafel, Edgar (1985). Years With Frank lloyd Wright: Apprentice to Genius. Mineola, N.Y.: Dover Publications. p. 31. ISBN 0-486-24801-1. {cite book}: Invalid |ref=harv (help)
  15. ೧೫.೦ ೧೫.೧ Saint, Andrew (May 2004). "Frank Lloyd Wright and Paul Mueller: the architect and his builder of choice" (PDF). Architectural Research Quarterly. 7 (2). Cambridge: Cambridge University Press: 157–167. Archived from the original (PDF) on 4 ಮಾರ್ಚ್ 2016. Retrieved 16 March 2010.
  16. ೧೬.೦ ೧೬.೧ ರೈಟ್‌ 2005, ಪುಟ 97.
  17. Frank Lloyd Wright Preservation Trust (2001). Zarine Weil (ed.). Building A Legacy: The Restoration of Frank Lloyd Wright’s Oak Park Home and Studio. San Francisco: Pomegranite. p. 4. ISBN 0-7649-1461-8.
  18. ೧೮.೦ ೧೮.೧ Gebhard, David (2006). Purcell & Elmslie: Prairie Progressive Architects. Salt Lake City: Gibbs Smith. p. 32. ISBN 1-4236-0005-3. {cite book}: Unknown parameter |coauthors= ignored (|author= suggested) (help)
  19. ರೈಟ್‌ 2005, ಪುಟ 100.
  20. ೨೦.೦ ೨೦.೧ ೨೦.೨ Lind, Carla (1996). Lost Wright: Frank Lloyd Wright's Vanished Masterpieces. New York: Simon & Schuster, Inc. pp. 40–43. ISBN 0-684-81306-8.
  21. ಫ್ರಾಂಕ್ ಲಾಯ್ಡ್‌‌ ರೈಟ್ ಪ್ರಿಸರ್ವೇಷನ್‌ ಟ್ರಸ್ಟ್‌‌ 2001, ಪುಟ 7.
  22. ‌ಒ'ಗೋರ್ಮಾನ್ 2004, ಪುಟಗಳು 38-54.
  23. ರೈಟ್‌ 2005, ಪುಟ 101
  24. ‌ಟಫೆಲ್ 1985, ಪುಟ 41
  25. Brooks, H. Allen (2005). "Architecture: The Prairie School". Encyclopedia of Chicago. Chicago Historical Society. Retrieved 25 May 2010.
  26. Cassidy, Victor M. (21 October 2005). "Lost Woman". Artnet Magazine. Retrieved 24 May 2010.
  27. "Marion Mahony Griffin (1871-1962)". From Louis Sullivan to SOM: Boston Grads Go to Chicago. Massachusetts Institute of Technology. 1996. Retrieved 24 May 2010.
  28. ಒ'ಗೋರ್ಮಾನ್‌ 2004, ಪುಟಗಳು 56-109.
  29. ರೈಟ್‌ 2005, ಪುಟ 116
  30. ರೈಟ್‌ 2005, ಪುಟಗಳು 114-116.
  31. Goldberger, Paul (9 march 2009). "Toddlin' Town: Daniel Burnham's great Chicago Plan turns one hundred". The Sky Line. The New Yorker. Retrieved 26 march 2009. {cite web}: Check date values in: |accessdate= and |date= (help)
  32. ಫ್ರಾಂಕ್ ಲಾಯ್ಡ್‌‌ ರೈಟ್ ಪ್ರಿಸರ್ವೇಷನ್‌ ಟ್ರಸ್ಟ್‌‌ 2001, ಪುಟಗಳು 6-9.
  33. ಮೈ ಫಾದರ್‌‌: ಫ್ರಾಂಕ್ ಲಾಯ್ಡ್‌‌ ರೈಟ್, - ಜಾನ್‌‌ ಲಾಯ್ಡ್‌‌ ರೈಟ್‌; 1992; ಪುಟ 35
  34. ೩೪.೦ ೩೪.೧ Clayton, Marie (2002). Frank Lloyd Wright Field Guide. Running Press. pp. 97–102. ISBN 0-7624-1324-7.
  35. Sommer, Robin Langley (1997). "Frank W. Thomas House". Frank Lloyd Wright: A Gatefold Portfolio. Honk Kong: Barnes & Noble Books. ISBN 0-7607-0463-5.
  36. ಒ'ಗೋರ್ಮಾನ್‌ 2004, ಪುಟ 134.
  37. ಫ್ರಾಂಕ್ ಲಾಯ್ಡ್‌‌ ರೈಟ್: ಎ ಬಯಾಗ್ರಫಿ, - ಮೆರೈಲ್‌‌ ಸೆಕ್ರೆಸ್ಟ್‌, ಆಲ್‌ಫ್ರೆಡ್‌ A. ಕ್ನೋಫ್‌, 1993, ಪುಟ 202
  38. "Home Country". Unitychapel.org. 2005-07-01. Archived from the original on 2005-12-28. Retrieved 2009-10-16.
  39. ೩೯.೦ ೩೯.೧ ೩೯.೨ ೩೯.೩ ‌BBC ನ್ಯೂಸ್ ಲೇಖನ: "ಮಿಸ್ಟರಿ ಆಫ್‌ ದಿ ಮರ್ಡರ್ಸ್‌ ಅಟ್‌ ಟ್ಯಾಲೀಸಿನ್‌‌".
  40. ಫ್ರಾಂಕ್ ಲಾಯ್ಡ್‌‌ ರೈಟ್: ಎ ಬಯಾಗ್ರಫಿ, - ಮೆರೈಲ್‌‌ ಸೆಕ್ರೆಸ್ಟ್‌, ಪುಟ 315–317. "$500,000 ಫೈರ್‌ ಇನ್‌ ಬಂಗ್ಲೋ,"ದಿ ನ್ಯೂಯಾರ್ಕ್‌ ಟೈಮ್ಸ್‌ , ಏಪ್ರಿಲ್‌‌ 22, 1925
  41. A. P. ವರ್ಗಾಸ್‌‌ & G. G. ಸ್ಕೀರ್ಲೆ, ದಿ ಟೆಕ್ಸ್‌ಟೈಲ್‌ ಬ್ಲಾಕ್‌‌ ಸಿಸ್ಟಮ್‌: ಸೆಸ್ಮಿಕ್‌ ಅನಾಲಿಸಿಸ್‌ ಅಂಡ್‌ ಅಪ್‌ಗ್ರೇಡಿಂಗ್‌, http://library.witpress.com/pages/PaperInfo.asp?PaperID=18110
  42. ‌‌ಗಗೆನ್‌ಹೀಮ್ ವಸ್ತುಸಂಗ್ರಹಾಲಯ – ಇತಿಹಾಸ Archived 2008-05-09 ವೇಬ್ಯಾಕ್ ಮೆಷಿನ್ ನಲ್ಲಿ.
  43. ನ್ಯಾಷನಲ್‌ ಪಾರ್ಕ್‌ ಸರ್ವೀಸ್ನ್ಯಾಷನಲ್‌ ಹಿಸ್ಟಾರಿಕ್‌ ಲ್ಯಾಂಡ್‌ಮಾರ್ಕ್ಸ್‌ ಡೆಸಿಗ್ನೇಟೆಡ್‌ , ಏಪ್ರಿಲ್‌‌ 13, 2007
  44. ದಿ ಆರ್ಕಿಟೆಕ್ಷರ್‌ ಆಫ್‌ ಫ್ರಾಂಕ್ ಲಾಯ್ಡ್‌‌ ರೈಟ್: ಎ ಕಂಪ್ಲೀಟ್‌ ಕೆಟಲಾಗ್‌, by ವಿಲಿಯಂ ಆಲಿನ್‌‌ ಸ್ಟೋರರ್‌‌, ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌, 1992 (ಮೂರನೇ ಆವೃತ್ತಿ)
  45. "Preservation Online: Today's News Archives: Fire Guts Rare FLW House in Indiana". Nationaltrust.org. Archived from the original on 2008-06-12. Retrieved 2009-10-16. {cite web}: Unknown parameter |deadurl= ignored (help)
  46. ‌‌ಬರ್ಸ್ಟೀನ್, ಫ್ರೆಡ್‌ A. "ನಿಯರ್‌‌ ನಗೋಯಾ, ಆರ್ಕಿಟೆಕ್ಚರ್‌ ಫ್ರಮ್‌ ವೆನ್‌ ದಿ ಈಸ್ಟ್‌ ಲುಕ್ಡ್‌ ವೆಸ್ಟ್‌," ನ್ಯೂಯಾರ್ಕ್‌ ಟೈಮ್ಸ್‌. 2006ರ ಏಪ್ರಿಲ್‌ 2.
  47. ಮೊನೊನಾ ಟೆರೇಸ್‌ ಕನ್ವೆನ್ಷನ್‌ ಸೆಂಟರ್‌, ಹಿಸ್ಟರಿ ವೆಬ್‌‌ ಪುಟ
  48. "Frank Lloyd Wright Emerald Bay, Lake Tahoe". Tahoelocals.com. 2007-01-08. Retrieved 2009-10-16.
  49. "Wright On". constructireland.ie. Archived from the original on 2009-06-24. Retrieved 2009-10-16.
  50. ರೈಟ್‌ ಆನ್‌‌ Archived 2010-08-23 ವೇಬ್ಯಾಕ್ ಮೆಷಿನ್ ನಲ್ಲಿ. – ವಿಕ್ಲೋದಲ್ಲಿ ಸಾಕಾರಗೊಂಡ 1950ರ ದಶಕದ ಫ್ರಾಂಕ್ ಲಾಯ್ಡ್‌‌ ರೈಟ್ ವಿನ್ಯಾಸ(2009ರ ನವೆಂಬರ್‌ 18ರಂದು ಮರುಸಂಪಾದಿಸಲಾಯಿತು)
  51. ರೈಟ್‌ಸ್ಕೇಪ್ಸ್‌‌: ಫ್ರಾಂಕ್ ಲಾಯ್ಡ್‌‌ ರೈಟ್'ಸ್‌ ಲ್ಯಾಂಡ್‌ಸ್ಕೇಪ್‌ ಡಿಸೈನ್ಸ್‌ , ಚಾರ್ಲ್ಸ್‌‌ E. ಮತ್ತು ಬೆರ್ಡಿಯಾನಾ ಅಗುವಾರ್‌‌, ಮೆಕ್‌ಗ್ರಾ-ಹಿಲ್‌‌, 2002, ಪುಟ 344
  52. ರೈಟ್‌ಸ್ಕೇಪ್ಸ್‌‌: ಫ್ರಾಂಕ್ ಲಾಯ್ಡ್‌‌ ರೈಟ್'ಸ್‌ ಲ್ಯಾಂಡ್‌ಸ್ಕೇಪ್‌ ಡಿಸೈನ್ಸ್‌ , ಚಾರ್ಲ್ಸ್‌‌ E. ಮತ್ತು ಬೆರ್ಡಿಯಾನಾ ಅಗುವಾರ್‌‌, ಮೆಕ್‌ಗ್ರಾ-ಹಿಲ್‌‌, 2002, ಪುಟಗಳು 51–56
  53. "ಅನ್‌ಡೂಯಿಂಗ್‌ ದಿ ಸಿಟಿ: ಫ್ರಾಂಕ್ ಲಾಯ್ಡ್‌‌ ರೈಟ್'ಸ್‌ ಪ್ಲಾನ್ಡ್‌ ಕಮ್ಯುನಿಟೀಸ್‌," ಅಮೆರಿಕನ್‌ ಕ್ವಾರ್ಟರ್ಲಿ, ಸಂಪುಟ 24, ಸಂಖ್ಯೆ 4 (ಅಕ್ಟೋಬರ್‌‌, 1972), ಪುಟ 544
  54. "ಅನ್‌ಡೂಯಿಂಗ್‌ ದಿ ಸಿಟಿ: ಫ್ರಾಂಕ್ ಲಾಯ್ಡ್‌‌ ರೈಟ್'ಸ್‌ ಪ್ಲಾನ್ಡ್‌ ಕಮ್ಯುನಿಟೀಸ್‌," ಅಮೆರಿಕನ್‌ ಕ್ವಾರ್ಟರ್ಲಿ, ಸಂಪುಟ 24, ಸಂಖ್ಯೆ 4 (ಅಕ್ಟೋಬರ್‌‌, 1972), ಪುಟ 542
  55. ೫೫.೦ ೫೫.೧ ೫೫.೨ ೫೫.೩ ‌‌ಕಾಟರ್, ಹಾಲೆಂಡ್‌. "ಸೀಕಿಂಗ್‌ ಜಪಾನ್‌'ಸ್‌ ಪ್ರಿಂಟ್ಸ್, ಔಟ್‌ ಆಫ್‌ ಲವ್‌ ಅಂಡ್‌ ನೀಡ್‌." ನ್ಯೂಯಾರ್ಕ್‌ ಟೈಮ್ಸ್ 6 ಏಪ್ರಿಲ್‌ 2002
  56. ೫೬.೦ ೫೬.೧ ೫೬.೨ ೫೬.೩ ೫೬.೪ ರೀಫ್‌‌, ರೀಟಾ. "ಫ್ರಾಂಕ್ ಲಾಯ್ಡ್‌‌ ರೈಟ್'ಸ್‌ ಲವ್‌ ಆಫ್‌ ಜಪಾನೀಸ್‌ ಪ್ರಿಂಟ್ಸ್‌ ಹೆಲ್ಪ್ಡ್‌ ಪೇ ದಿ ಬಿಲ್ಸ್‌." ನ್ಯೂಯಾರ್ಕ್‌ ಟೈಮ್ಸ್ 2001ರ ಮಾರ್ಚ್ 18.
  57. "Frank Lloyd Wright Dies; Famed Architect Was 89". nytimes.com<!. 1959-04-10. Retrieved 2010-05-21.
  58. ಜೋಸೆಫ್‌‌ ಸಿಲ್ಸ್‌‌ಬೀಯಿಂದ ವಿನ್ಯಾಸಗೊಳಿಸಲ್ಪಟ್ಟ ದಿ ಯೂನಿಟಿ ಚಾಪೆಲ್‌ ಹಾಗೂ ರೈಟ್‌ನಿಂದ ವಿನ್ಯಾಸಗೊಳಿಸಲ್ಪಟ್ಟ ಯೂನಿಟಿ ಟೆಂಪಲ್ ನಡುವೆ ಗೊಂದಲವನ್ನು ಇಟ್ಟುಕೊಳ್ಳಬಾರದು. ಇಲ್‌ನ ಓಕ್‌ ಪಾರ್ಕ್‌ನಲ್ಲಿ ಮನೆಗೊಂಡಿರುವ ಯೂನಿಟಿ ಟೆಂಪಲ್ ಸಾಕಷ್ಟು ದೊಡ್ಡದಾಗಿದೆ ಮತ್ತು ಅಗಾಧವಾಗಿ ಪ್ರಸಿದ್ಧಿಯನ್ನು ಪಡೆದಿದೆ; ಯೂನಿಟಿ ಚಾಪೆಲ್‌‌ನ ವಿನ್ಯಾಸಕ್ಕೆ ಸಂಬಂಧಿಸಿದಂತೆ ರೈಟ್‌ ನಕಾಸೆಗಾರನಾಗಿದ್ದ.
  59. ಫ್ರಾಂಕ್ ಲಾಯ್ಡ್‌‌ ರೈಟ್: ಎ ಬಯಾಗ್ರಫಿ, ಮೆರೈಲ್‌‌ ಸೆಕ್ರೆಸ್ಟ್‌, ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌, 1992.
  60. ಫ್ರಾಂಕ್ ಲಾಯ್ಡ್‌‌ ರೈಟ್'ಸ್‌ ಗ್ಲಾಸ್‌ ಡಿಸೈನ್ಸ್‌ , ಕಾರ್ಲಾ ಲಿಂಡ್‌, ಪೋಮ್‌ಗ್ರಾನೇಟ್‌ ಆರ್ಟ್‌ಬುಕ್ಸ್‌/ಆರ್ಕಿಟೈಪ್‌ ಪ್ರೆಸ್‌, 1995.
  61. "ದಿ ಮ್ಯಾಜಿಕ್‌ ಆಫ್‌ ಅಮೆರಿಕಾ, ಮೇರಿಯನ್‌‌‌ ಮಹೋನಿ ಗ್ರಿಫಿನ್‌‌
  62. ascedia.com. "Taliesin Preservation, Inc. – Frank Lloyd Wright – FAQ's". Taliesinpreservation.org. Archived from the original on 2008-06-10. Retrieved 2009-10-16. {cite web}: Unknown parameter |deadurl= ignored (help)
  63. ೬೩.೦ ೬೩.೧ Mann, Leslie (2008-02-01). "Reflecting pools: Descendants follow in Frank Lloyd Wright's footsteps". Chicago Tribune. Archived from the original on 2013-01-02. Retrieved 2008-03-28.
  64. "The Short List". Chicago Magazine. November 2006. Retrieved 2008-03-10.


ರೈಟ್‌ನ ತತ್ತ್ವದ ಕುರಿತಾದ ಆಯ್ದ ಪುಸ್ತಕಗಳು ಮತ್ತು ಲೇಖನಗಳು

  • ಆನ್‌ ಆಟೋಬಯಾಗ್ರಫಿ , -ಫ್ರಾಂಕ್ ಲಾಯ್ಡ್‌‌ ರೈಟ್ (1943, ಡ್ಯುಯೆಲ್‌‌, ಸ್ಲೋವನ್‌‌ ಮತ್ತು ಪಿಯರ್ಸ್‌‌ / 2005, ಪೋಮ್‌ಗ್ರಾನೇಟ್‌; ISBN 0-7649-3243-8)
  • ಫ್ರಾಂಕ್ ಲಾಯ್ಡ್‌‌ ರೈಟ್: ಎ ಪ್ರೀಮಿಯರ್‌ ಆನ್‌ ಆರ್ಕಿಟೆಕ್ಚರಲ್‌ ಪ್ರಿನ್ಸಿಪಲ್ಸ್‌ , -ರಾಬರ್ಟ್‌ ಮೆಕ್‌ಕಾರ್ಟರ್‌ (1991, ಪ್ರಿನ್ಸ್‌ಟನ್‌ ಆರ್ಕಿಟೆಕ್ಚರಲ್‌ ಪ್ರೆಸ್‌; ISBN 1878271261)
  • ಫ್ರಾಂಕ್ ಲಾಯ್ಡ್‌‌ ರೈಟ್’ಸ್‌ ಉಸೋನಿಯನ್‌ ಹೋಮ್ಸ್‌: ಡಿಸೈನ್ಸ್‌ ಫಾರ್‌ ಮಾಡರೇಟ್‌ ಕಾಸ್ಟ್‌ ಒನ್‌-ಫ್ಯಾಮಿಲಿ ಹೋಮ್ಸ್‌ , -ಜಾನ್‌‌ ಸಾರ್ಜೆಂಟ್‌ (1984, ವ್ಯಾಟ್ಸನ್‌‌-ಗಬ್ಟಿಲ್‌‌; ISBN 0823071782)
  • ಫ್ರಾಂಕ್ ಲಾಯ್ಡ್‌‌ ರೈಟ್’ಸ್‌ ಉಸೋನಿಯನ್‌ ಹೋಮ್ಸ್‌‌ (ರೈಟ್‌ ಅಟ್‌ ಎ ಗ್ಲಾನ್ಸ್‌ ಸೀರೀಸ್‌) , -ಕಾರ್ಲಾ ಲಿಂಡ್‌ (1994, ಪೋಮ್‌ಗ್ರಾನೇಟ್‌ ಕಮ್ಯುನಿಕೇಷನ್ಸ್‌; ISBN 1566409985)
  • "ಇನ್‌ ದಿ ಕಾಸ್‌ ಆಫ್‌ ಆರ್ಕಿಟೆಕ್ಚರ್‌‌," ಆರ್ಕಿಟೆಕ್ಚರಲ್‌ ರೆಕಾರ್ಡ್‌, ಮಾರ್ಚ್‌, 1908, -ಫ್ರಾಂಕ್ ಲಾಯ್ಡ್‌‌ ರೈಟ್. ಇದರಲ್ಲಿ ಪ್ರಕಟಿತ: ಫ್ರಾಂಕ್ ಲಾಯ್ಡ್‌‌ ರೈಟ್: ಕಲೆಕ್ಟೆಡ್‌ ರೈಟಿಂಗ್ಸ್‌, ಸಂಪುಟ. 1 (1992, ರಿಝೊಲಿ; ISBN 0-8478-1546-3)
  • ನ್ಯಾಚುರಲ್‌ ಹೌಸ್‌, ದಿ , -ಫ್ರಾಂಕ್ ಲಾಯ್ಡ್‌‌ ರೈಟ್ (1954, ಹೊರೈಜನ್‌ ಪ್ರೆಸ್‌; ISBN 0517020785)
  • ಟ್ಯಾಲೀಸಿನ್‌‌ ರಿಫ್ಲೆಕ್ಷನ್ಸ್‌: ಮೈ ಇಯರ್ಸ್‌ ಬಿಫೋರ್‌, ಡ್ಯೂರಿಂಗ್‌, ಅಂಡ್‌ ಆಫ್ಟರ್‌ ಲಿವಿಂಗ್‌ ವಿತ್‌ ಫ್ರಾಂಕ್ ಲಾಯ್ಡ್‌‌ ರೈಟ್, -ಅರ್ಲ್‌ ನಿಸ್ಬೆಟ್‌‌ (2006, ಮೆರಿಡಿಯನ್‌ ಪ್ರೆಸ್‌; ISBN 0-9778951-0-6)
  • ಟ್ರುತ್‌ ಎಗೇನ್ಸ್ಟ್‌ ದಿ ವರ್ಲ್ಡ್‌: ಫ್ರಾಂಕ್ ಲಾಯ್ಡ್‌‌ ರೈಟ್ ಸ್ಪೀಕ್ಸ್‌ ಫಾರ್‌ ಆನ್‌ ಆರ್ಗ್ಯಾನಿಕ್‌ ಆರ್ಕಿಟೆಕ್ಚರ್ , ಸಂಪಾದಕ: ಪ್ಯಾಟ್ರಿಕ್‌‌ ಮೀಹಾನ್‌‌ (1987, ವೈಲೆ; ISBN 0471845094)
  • ‌‌ಅಂಡರ್‌ಸ್ಟಾಂಡಿಂಗ್‌ ಫ್ರಾಂಕ್ ಲಾಯ್ಡ್‌‌ ರೈಟ್'ಸ್‌ ಆರ್ಕಿಟೆಕ್ಚರ್ , -ಡೊನಾಲ್ಡ್‌‌ ಹಾಫ್‌ಮನ್‌‌ (1995, ಡೋವರ್‌ ಪಬ್ಲಿಕೇಷನ್ಸ್‌‌; ISBN 048628364X)
  • ಉಸೋನಿಯಾ : ಫ್ರಾಂಕ್ ಲಾಯ್ಡ್‌‌ ರೈಟ್'ಸ್‌ ಡಿಸೈನ್‌ ಫಾರ್‌ ಅಮೆರಿಕಾ , ಆಲ್ವಿನ್‌‌ ರೋಸೆನ್‌ಬೌಮ್‌ (1993, ಪ್ರಿಸರ್ವೇಷನ್‌ ಪ್ರೆಸ್‌; ISBN 0891332014)
  • ಫ್ರಾಂಕ್ ಲಾಯ್ಡ್‌‌ ರೈಟ್, -ಡೇನಿಯಲ್‌‌ ಟ್ರೀಬರ್‌‌ (2008, ಬಿರ್ಖೌಸರ್‌ ಬಸೆಲ್‌‌, 2ನೇ, ಪರಿಷ್ಕೃತ ಆವೃತ್ತಿ; ISBN 978-3764386979)

ರೈಟ್‌ನ ಜೀವನಚರಿತ್ರೆಗಳು

  • ಫ್ರಾಂಕ್ ಲಾಯ್ಡ್‌‌ ರೈಟ್: ಆರ್ಕಿಟೆಕ್ಚರ್‌, ಮ್ಯಾನ್‌ ಇನ್‌ ಪೊಸೆಷನ್‌ ಆಫ್‌ ಹಿಸ್‌ ಅರ್ತ್‌ , -ಲೊವಾನ್ನಾ ಲಾಯ್ಡ್‌‌ ರೈಟ್‌ (1962, ಡಬಲ್‌ಡೇ; OCLC 31514669)
  • ‌‌ಮೆನಿ ಮಾಸ್ಕ್ಸ್ , - ಬ್ರೆಂಡಾನ್‌ ಗಿಲ್‌‌ (1987, ಪುಟ್ನಾಮ್‌‌; ISBN 0399132325)
  • ಫ್ರಾಂಕ್ ಲಾಯ್ಡ್‌‌ ರೈಟ್ , - ಅದಾ ಲೂಯಿಸ್‌ ಹಕ್ಸ್‌ಟಬಲ್‌ (2004, ಲಿಪ್ಪರ್‌‌/ವೈಕಿಂಗ್‌; ISBN 0670033421)
  • ಫ್ರಾಂಕ್ ಲಾಯ್ಡ್‌‌ ರೈಟ್: ಎ ಬಯಾಗ್ರಫಿ , - ಮೆರೈಲ್‌‌ ಸೆಕ್ರೆಸ್ಟ್‌ (1992, ಕ್ನೋಫ್‌; ISBN 0394564367)
  • ಫ್ರಾಂಕ್ ಲಾಯ್ಡ್‌‌ ರೈಟ್: ಹಿಸ್‌ ಲೈಫ್‌ ಅಂಡ್‌ ಆರ್ಕಿಟೆಕ್ಚರ್‌‌ , - ರಾಬರ್ಟ್‌ ಟ್ವಾಂಬ್ಲಿ (1979, ವೈಲೆ; ISBN 0471034002)
  • ಫ್ರಾಂಕ್ ಲಾಯ್ಡ್‌‌ ರೈಟ್: ಬೈ ವಕಾರೊ, ಟೋನಿ, (2002, ಕುಲ್ಟರ್‌‌-ಅನ್‌ಟರ್ಮ್‌-ಸ್ಕಿರ್ಮ್‌)
  • ದಿ ಫೆಲೋಷಿಪ್‌: ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ಫ್ರಾಂಕ್ ಲಾಯ್ಡ್‌‌ ರೈಟ್ ಅಂಡ್‌ ದಿ ಟ್ಯಾಲೀಸಿನ್‌‌ ಫೆಲೋಷಿಪ್‌ , - ರೋಜರ್‌‌ ಫ್ರೀಡ್‌ಲ್ಯಾಂಡ್‌ ಮತ್ತು ಹೆರಾಲ್ಡ್‌‌ ಝೆಲ್‌ಮನ್‌‌ (2006, Regan ಪುಸ್ತಕಗಳು; ISBN 0060393882)
  • ‌‌ಲವಿಂಗ್‌‌ ಫ್ರಾಂಕ್ , - ನ್ಯಾನ್ಸಿ ಹೊರಾನ್‌‌, (2008, ರ್ಯಾಂಡಮ್‌ ಹೌಸ್‌‌, ಇಂಕ್‌‌; ISBN 0345494997)

ರೈಟ್‌ನ ಕೆಲಸದ ಕುರಿತಾದ ಆಯ್ದ ಸಮೀಕ್ಷಾ ಪುಸ್ತಕಗಳು

  • ಆರ್ಕಿಟೆಕ್ಚರ್‌ ಆಫ್‌ ಫ್ರಾಂಕ್ ಲಾಯ್ಡ್‌‌ ರೈಟ್, ದಿ , - ನೀಲ್‌‌ ಲೆವೈನ್‌‌ (1996, ಪ್ರಿನ್ಸ್‌ಟನ್‌ ಯೂನಿವರ್ಸಿಟಿ ಪ್ರೆಸ್‌; ISBN 0691033714)
  • ಆರ್ಕಿಟೆಕ್ಚರ್‌ ಆಫ್‌ ಫ್ರಾಂಕ್ ಲಾಯ್ಡ್‌‌ ರೈಟ್: ಎ ಕಂಪ್ಲೀಟ್‌ ಕೆಟಲಾಗ್‌, ದಿ , - ವಿಲಿಯಂ ಆಲಿನ್‌‌ ಸ್ಟೋರರ್‌‌ (2007 ಪರಿಷ್ಕೃತ 3ನೇ ಆವೃತ್ತಿ, ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌; ISBN 0-226-77620-4)
  • ಫ್ರಾಂಕ್ ಲಾಯ್ಡ್‌‌ ರೈಟ್ , - ರಾಬರ್ಟ್‌ ಮೆಕ್‌ಕಾರ್ಟರ್‌ (1997, ಫೈಡಾನ್‌, ಲಂಡನ್‌‌; ISBN 0 7148 31484 (ಗಡುಸಾದ ರಕ್ಷಾಪುಟ), ISBN 0714838543 (ಕಾಗದದ ರಕ್ಷಾಪುಟ))
  • ಫ್ರಾಂಕ್ ಲಾಯ್ಡ್‌‌ ರೈಟ್: ಅಮೆರಿಕಾ’ಸ್‌ ಮಾಸ್ಟರ್‌ ಆರ್ಕಿಟೆಕ್ಟ್‌ , - ಕ್ಯಾಥ್ರಿನ್‌‌ ಸ್ಮಿತ್‌ (1998, ಅಬೆವಿಲ್ಲೆ ಪಬ್ಲಿಷಿಂಗ್‌ ಗ್ರೂಪ್‌‌ (ಅಬೆವಿಲ್ಲೆ ಪ್ರೆಸ್‌, ಇಂಕ್‌‌.); ISBN 0789202875)
  • ಫ್ರಾಂಕ್ ಲಾಯ್ಡ್‌‌ ರೈಟ್: ಆರ್ಕಿಟೆಕ್ಟ್‌‌ , - ದಿ ಮ್ಯೂಸಿಯಂ ಆಫ್‌ ಮಾಡರ್ನ್ ಆರ್ಟ್‌ (1994, ISBN 087070642X)
  • ಫ್ರಾಂಕ್ ಲಾಯ್ಡ್‌‌ ರೈಟ್ ಕಂಪ್ಯಾನಿಯನ್‌, ದಿ , - ವಿಲಿಯಂ ಆಲಿನ್‌‌ ಸ್ಟೋರರ್‌‌ (2006 ಪರಿಷ್ಕೃತ ಆವೃತ್ತಿ, ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌; ISBN 0-226-77621-2)
  • ಫ್ರಾಂಕ್ ಲಾಯ್ಡ್‌‌ ರೈಟ್: ಮಾಸ್ಟರ್‌‌ವರ್ಕ್ಸ್‌‌ , - ಬ್ರೂಸ್‌ ಬ್ರೂಕ್ಸ್‌‌ ಫೈಫರ್‌ (1993, ರಿಝೊಲಿ; ISBN 0847817156)
  • ಫ್ರಾಂಕ್ ಲಾಯ್ಡ್‌‌ ರೈಟ್: ಬಿಲ್ಡಿಂಗ್‌ ಫಾರ್‌ ಡೆಮಾಕ್ರಸಿ , - ಬ್ರೂಸ್‌ ಬ್ರೂಕ್ಸ್‌‌ ಫೈಫರ್‌ (2004, ಟಾಸ್ಕೆನ್‌; ISBN 3-8228-2757-6)
  • ರೈಟ್‌ಸ್ಕೇಪ್ಸ್‌‌: ಫ್ರಾಂಕ್ ಲಾಯ್ಡ್‌‌ ರೈಟ್’ಸ್‌ ಲ್ಯಾಂಡ್‌ಸ್ಕೇಪ್‌ ಡಿಸೈನ್ಸ್‌‌ , - ಚಾರ್ಲ್ಸ್‌‌ ಮತ್ತು ಬೆರ್ಡಿಯಾನಾ ಅಗುವಾರ್‌‌ (2003, ಮೆಕ್‌ಗ್ರಾ-ಹಿಲ್‌‌; ISBN 007140953X)
  • ‌‌ರೈಟ್‌ ಸ್ಪೇಸ್‌‌: ಪ್ಯಾಟರ್ನ್‌ ಅಂಡ್‌ ಮೀನಿಂಗ್‌ ಇನ್‌ ಫ್ರಾಂಕ್ ಲಾಯ್ಡ್‌‌ ರೈಟ್'ಸ್‌ ಹೌಸಸ್ - ಗ್ರಾಂಟ್‌ ಹಿಲ್ಡರ್‌‌ಬ್ರಾಂಡ್‌ (1991, ಯೂನಿವರ್ಸಿಟಿ ಆಫ್‌ ವಾಷಿಂಗ್ಟನ್‌ ಪ್ರೆಸ್‌; ISBN 0295970057)
  • ಫ್ರಾಂಕ್ ಲಾಯ್ಡ್‌‌ ರೈಟ್ ಫೀಲ್ಡ್‌ ಗೈಡ್‌ , - ಥಾಮಸ್‌‌ A. ಹೇನ್ಜ್‌‌ (1999, ಅಕಾಡೆಮಿ ಎಡಿಷನ್ಸ್‌‌; ISBN 0-8101-2244-8)
  • ಫ್ರಾಂಕ್ ಲಾಯ್ಡ್‌‌ ರೈಟ್'ಸ್‌ ಗ್ಲಾಸ್‌ ಡಿಸೈನ್ಸ್‌‌ , - ಕಾರ್ಲಾ ಲಿಂಡ್‌ (1995, ಪೋಮ್‌ಗ್ರಾನೇಟ್‌; ISBN 0876544685)
  • ಫ್ರಾಂಕ್ ಲಾಯ್ಡ್‌‌ ರೈಟ್ ಕಂಪ್ಲೀಟ್‌ ವರ್ಕ್ಸ್‌‌ 1943–1959 , - ಬ್ರೂಸ್‌ ಬ್ರೂಕ್ಸ್‌‌ ಫೈಫರ್‌ ಮತ್ತು ಪೀಟರ್‌‌‌ ಗೊಸ್ಸೆಲ್‌‌ (ಸಂಪಾದಕ) (2009, ಟಾಸ್ಕೆನ್‌; ISBN 978-3-8228-5770-0). ರೈಟ್‌ನ ಸಾಕಾರಗೊಂಡಿರುವ ಮತ್ತು ಸಾಕಾರಗೊಳ್ಳದಿರುವ 1,100 ವಿನ್ಯಾಸಗಳೆಲ್ಲವನ್ನೂ ಒಳಗೊಂಡಿರುವ ಮೂರು ಪ್ರಬಂಧಗಳ ಒಂದು ಸರಣಿಯಲ್ಲಿ ಮೊದಲನೆಯದು.

ರೈಟ್‌ನ ನಿರ್ದಿಷ್ಟ ಯೋಜನೆಗಳ ಕುರಿತಾದ ಆಯ್ದ ಪುಸ್ತಕಗಳು

  • ‌‌ಫಾಲಿಂಗ್‌ವಾಟರ್‌‌ ರೈಸಿಂಗ್‌: ಫ್ರಾಂಕ್ ಲಾಯ್ಡ್‌‌ ರೈಟ್, E. J. ಕೌಫ್‌ಮನ್‌, ಅಂಡ್‌ ಅಮೆರಿಕಾ'ಸ್‌ ಮೋಸ್ಟ್‌ ಎಕ್ಸ್ಟ್ರಾರ್ಡಿನರಿ ಹೌಸ್ , - ಫ್ರಾಂಕ್ಲಿನ್‌‌ ಟೋಕರ್‌‌ (2003, ಕ್ನೋಫ್‌; ISBN 1400040264)

ಬಾಹ್ಯ ಕೊಂಡಿಗಳು