ಜನವರಿ

ಜನವರಿ ಆಧುನಿಕ ತಾರೀಖು ಪಟ್ಟಿಯ (ಕ್ರೈಸ್ತವರ್ಷದ) ಮೊದಲನೆಯ ತಿಂಗಳು. 31 ದಿವಸಗಳಿವೆ. ಜನವರಿಯ ಮೊದಲನೆಯ ದಿವಸ ನೂತನ ವರ್ಷಾರಂಭವಾಗುತ್ತದೆ. ಕ್ರಿ.ಪೂ. ಸು. 153ರ ಜನವರಿ ವರ್ಷದ ಹನ್ನೊಂದನೆಯ ತಿಂಗಳೆಂದು ಪರಿಗಣಿತವಾಗಿತ್ತು. ಗ್ರೆಗೋರಿಯನ್ ತಾರೀಖುಪಟ್ಟಿಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಾರ್ವತ್ರಿಕ ಮನ್ನಣೆ ದೊರೆತ ಬಳಿಕ (1752) ಜನವರಿಯೇ ವರ್ಷದ ಪ್ರಾರಂಭ ತಿಂಗಳು ಎಂಬುದು ರೂಢಿಗೆ ಬಂತು. ಭಾರತೀಯ ಪಂಚಾಂಗದ ರೀತ್ಯ ಮಾರ್ಗಶಿರ-ಪುಷ್ಯಮಾಸಗಳು ಜನವರಿಯಲ್ಲಿ ಕಾಣಬರುತ್ತವೆ.
ಜನವರಿ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಮೊದಲನೇ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ರೋಮ್ನ ಪುರಾಣದಲ್ಲಿ ದ್ವಾರಗಳ ದೇವತೆಯಾದ ಜಾನಸ್ನಿಂದ ಈ ತಿಂಗಳ ಹೆಸರನ್ನು ಪಡೆಯಲಾಗಿದೆ - ಜನವರಿ ತಿಂಗಳು ಹೊಸ ವರ್ಷಕ್ಕೆ ದ್ವಾರದಂತೆ ಎಂಬುದು ಈ ಹೆಸರಿಗೆ ಪ್ರೇರಣೆ.
ಪ್ರಮುಖ ದಿನಗಳು
- ಜನವರಿ ೧: ವಿಶ್ವದಾದ್ಯಂತ 'ಹೊಸ ವರ್ಷದ ದಿನ', ಜಾಗತಿಕ ಕುಟುಂಬ ದಿನ, ಸತ್ಯೇಂದ್ರನಾಥ ಬೋಸ್ ೧೮೯೪ರಲ್ಲಿ ಜನನ, ಮಹಾದೇವ ದೇಸಾಯಿ ಜನನ, ಶಾಂತಿ ಸ್ವರೂಪ್ ಭಟ್ನಾಗರ್ ೧೯೫೫ರಲ್ಲಿ ಮರಣ
- ಜನವರಿ ೧: [ಶ್ರೀ_ಸಿದ್ದೇಶ್ವರ ಸ್ವಾಮಿಗಳ ಪುಣ್ಯತಿಥಿ, ೨೦೨೩ರಲ್ಲಿ ಮರಣ
- ಜನವರಿ ೧೦: ಶಿರಸಂಗಿ ಲಿಂಗರಾಜ ದೇಸಾಯಿ ೧೮೬೧ ರಲ್ಲಿ ಜನನ, ಸುತ್ತೂರು ಶಿವರಾತ್ರೀಶ್ವರ ಸ್ವಾಮೀಜಿ ಜಯಂತಿ
- ಜನವರಿ ೧೧: ಭಾರತದ ಎರಡನೆಯ ಪ್ರಧಾನಮಂತ್ರಿ ಲಾಲ್ ಬಹಾದುರ್ ಶಾಸ್ತ್ರಿ ಪುಣ್ಯತಿಥಿ, ತಾಷ್ಕೆಂಟ್ ನಲ್ಲಿ ೧೯೬೬ರಲ್ಲಿ ಸಾವು.
- ಜನವರಿ ೧೨: ಸ್ವಾಮಿ ವಿವೇಕಾನಂದರ ಜನ್ಮ ದಿನ ೧೮೬೧ರಲ್ಲಿ ಜನನ
- ಜನವರಿ ೧೪: ಸಿದ್ಧರಾಮ ಜಯಂತಿ
- ಜನವರಿ ೧೪ ಅಥವಾ ೧೫ ರಂದು ಮಕರ ಸಂಕ್ರಾಂತಿ ಹಬ್ಬವಾಗಿ ಆಚರಿಸಲಾಗುತ್ತದೆ. ಇದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನ.
- ಜನವರಿ ೧೫: ಭೂಸೇನಾ ದಿನಾಚರಣೆ
ಜನವರಿ ೧೯: ಯೋಗಿ ವೇಮನ ಜಯಂತಿ ಜನವರಿ ೨೧: ಅಂಬಿಗರ ಚೌಡಯ್ಯ ಜಯಂತಿ, ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಪುಣ್ಯತಿಥಿ, ೨೦೧೯ರಲ್ಲಿ ಲಿಂಗೈಕ್ಯರಾದರು.
- ಜನವರಿ ೨೬: ಭಾರತದ ಗಣರಾಜ್ಯೋತ್ಸವ ದಿನ.ಭಾರತವು ೧೯೫೦ನೇ ಇಸವಿಯಲ್ಲಿ ಈ ದಿನದಂದು ಗಣರಾಜ್ಯವಾಗಿ ಘೋಷಿಸಲ್ಪಟ್ಟಿತು.
- ಜನವರಿ ೩೦: ಭಾರತದ ರಾಷ್ತ್ರಪಿತ ಮಹಾತ್ಮ ಗಾಂಧೀಜಿಯವರು ಮರಣ ಹೊಂದಿದ ದಿನ. ಈ ದಿನವನ್ನು ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ.
- ಜನವರಿ ೨೩ : ನೇತಾಜಿ ಸುಭಾಷ್ ಚಂದ್ರ ಬೋಸ್ ೧೮೯೭ ಕಟಕ್ ನಲ್ಲಿ ಜನನ
- ಜನವರಿ ೨೪: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ, ಕುಮಾರವ್ಯಾಸ ಜಯಂತಿ
- ಜನವರಿ ೨೫: ರಾಷ್ಟ್ರೀಯ ಪ್ರವಾಸೋದ್ಯಮ ದಿನ
- ಜನವರಿ ೨೬: ಪ್ರಜಾರಾಜ್ಯೋತ್ಸವ ದಿನಾಚರಣೆ, ಸಂಗೊಳ್ಳಿ ರಾಯಣ್ಣಪುಣ್ಯತಿಥಿ ೧೮೩೧ರಲ್ಲಿ ವೀರಮರಣ
- ಜನವರಿ ೨೯: ಸಿದ್ಧಗಂಗಾ ಮಠದ ಉದ್ದಾನ ಶಿವಯೋಗಿಗಳ ಲಿಂಗೈಕ್ಯ ದಿನ
- ಜನವರಿ ೩೦: ಹುತಾತ್ಮರ ದಿನಾಚರಣೆ, ಮಹಾತ್ಮ ಗಾಂಧಿ ಪುಣ್ಯತಿಥಿ ೧೯೪೮ರಲ್ಲಿ ಕೊಲೆ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |